ಜಿಲ್ಲಾ ಸುದ್ದಿ:
ಅವಧೂತ ವಿನಯ್ ಗುರೂಜಿ ಜನ್ಮ ದಿನೋತ್ಸವದ ಅಂಗವಾಗಿ ನಡೆದ ರಕ್ತದಾನ ಶಿಬಿರ ಯಶಸ್ವಿ :
ಅವಧೂತ ಗೌರಿಗದ್ದೆ ಮಠದ ಅವಧೂತ ಶ್ರೀ ವಿನಯ್ ಗುರೂಜಿ ಅವರ ಹುಟ್ಟು ಹಬ್ಬದ ಅಂಗವಾಗಿ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯ ಪ್ರೌಢಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಡಿವೈಎಸ್ಪಿ ಶಾಂತವೀರ ಉದ್ಘಾಟನೆ ಮಾಡಿದರು. ಮೇಗರವಳ್ಳಿ ಪ್ರೌಢಶಾಲೆಯಲ್ಲಿ ಶ್ರೀ ವಿನಯ್ ಗುರೂಜಿ ಭಕ್ತ ವೃಂದ, ಪುನೀತ್ ಬ್ರಿಗೇಡ್, ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮ ಸಂಸ್ಥೆ, ರೋಟರಿ ಬ್ಲಡ್ ಬ್ಯಾಂಕ್, ಮೆಗ್ಗಾನ್ ಆಸ್ಪತ್ರೆ ರಕ್ತ ನಿಧಿ ಸಹಯೋಗದಲ್ಲಿ ನಡೆದ ರಕ್ತದಾನ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಕೂಡ ಭಾಗವಹಿಸಿ ರಕ್ತದಾನಿಗಳಿಗೆ ಶುಭ ಕೋರಿದರು….
ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ತಾಲೂಕು ಘಟಕವು ಅಸ್ತಿತ್ವಕ್ಕೆ
ಸೊರಬ : ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸೊರಬ ತಾಲೂಕು ಘಟಕವು ಅಸ್ತಿತ್ವಕ್ಕೆ ಬಂದಿದೆ. ಸೊರಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಜಾವಾಣಿ ವರದಿಗಾರ ರಾಘವೇಂದ್ರ ಟಿ., ಉಪಾಧ್ಯಕ್ಷರಾಗಿ ಹೊಸ ದಿಗಂತ ಪತ್ರಿಕೆ ವರದಿಗಾರ ಮಹೇಶ್ ಗೋಖಲೆ, ಪ್ರಧಾನ ಕಾರ್ಯದರ್ಶಿಯಾಗಿ ಮಲೆನಾಡು ಮಿತ್ರ ಪತ್ರಿಕೆ ವರದಿಗಾರ ದಿನಕರ್ ಬಾವೆ, ಕಾರ್ಯದರ್ಶಿಯಾಗಿ ಕ್ರಾಂತಿದೀಪ ವರದಿಗಾರ ನೂಪಿ ಶಂಕರ್, ಖಜಾಂಚಿಯಾಗಿ ಕನ್ನಡಪ್ರಭ ವರದಿಗಾರ ಹೆಚ್.ಕೆ.ಬಿ. ಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿರಿಯ ಪತ್ರಕರ್ತ ಶ್ರೀಪಾದ ಬಿಚ್ಚುಗತ್ತಿ ಅವರು…
ಶಿವಮೊಗ್ಗದಲ್ಲಿ ಕೋಮುಗಲಭೆ ಸೃಷ್ಟಿಯ ಕುರಿತು ಅನಾಮಧೇಯ ಪತ್ರ ಪ್ರಕರಣಕ್ಕೆ ಟ್ವಿಸ್ಟ್ : ಆಕೆಗಾಗಿ ಲೆಟರ್ ಬರೆದವ ಈಗ ಪೊಲೀಸರ ಅತಿಥಿ
ಶಿವಮೊಗ್ಗ ನಗರದಲ್ಲಿ ಸಾವರ್ಕರ್ ಭಾವಚಿತ್ರ ತೆರವುಗೊಳಿಸಿದ ವೇಳೆ ಉಂಟಾದ ಗಲಭೆ ಪ್ರಕರಣದ ಹಿನ್ನೆಲೆಯಲ್ಲಿ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಈ ನಡುವೆ ಕಳೆದ ಶನಿವಾರ ನಗರದಲ್ಲಿ ಅನಾಮದೇಯ ಪತ್ರವೊಂದು ಪತ್ತೆಯಾಗಿ ಭಾರಿ ತಲ್ಲಣ ಸೃಷ್ಠಿಸಿತ್ತು, ಈ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಸೂಳೆಬೈಲಿನ ಅಯೂಬ್ ಎಂಬಾತನನ್ನು ಬಂಧಿಸುವ ಜೊತೆಗೆ ನಗರದಲ್ಲಿ ಕೋಮು ಗಲಭೆ ಸೃಷ್ಟಿಸುವ ಅನಾಮಧೇಯ ಪತ್ರ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದಂತಾಗಿದೆ.. ಅಂದಹಾಗೆ ಈ ಪತ್ರ ಬರೆದಿರುವುದು ಕೂಡಾ ಆತನೇ.. ಕಾರಣ ಅದೇ ಊರಿನ ಫೈಜಲ್ ಎಂಬಾತನ…
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯಿಂದ ದರ್ಪ : ಬಂಡೆ ಕಾರ್ಮಿಕರಿಗೆ ನಿರಂತರ ಕಿರುಕುಳ
ತೀರ್ಥಹಳ್ಳಿ : ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಯಿಂದ ಸ್ಥಳೀಯ ಮೇಲಿನ ಕುರುವಳ್ಳಿ ಬಂಡೆ ಕಾರ್ಮಿಕರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಮೇಲಿನ ಕುರುವಳ್ಳಿ ಗ್ರಾ.ಪಂ. ಉಪಾಧ್ಯಕ್ಷ ಹೊರಬೈಲು ಪ್ರಭಾಕರ್ ಆರೋಪಿಸಿದ್ದಾರೆ. ಪಟ್ಟಣದ ತಾಲ್ಲೂಕು ಕಛೇರಿ ಎದುರು ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಅವಿನಾಶ್ ರವರು ಕಳೆದ ಕೆಲ ದಿನಗಳಿಂದ ಮೇಲಿನ ಕುರುವಳ್ಳಿಯಲ್ಲಿನ ಕಾರ್ಮಿಕರು ಕೆಲಸ ಮಾಡುವ ಸ್ಥಳಕ್ಕೆ ಬಂದು ಕಾರ್ಮಿಕರು ಕಷ್ಟ ಪಟ್ಟು…
ಅವಧೂತ ವಿನಯ್ ಗುರೂಜಿಯವರ ಜನ್ಮ ದಿನೋತ್ಸವದ ಅಂಗವಾಗಿ ರಕ್ತದಾನ :
ಅವಧೂತ ಗೌರಿಗದ್ದೆ ಮಠದ ಅವಧೂತ ಶ್ರೀ ವಿನಯ್ ಗುರೂಜಿ ಅವರ ಹುಟ್ಟು ಹಬ್ಬದ ಅಂಗವಾಗಿ ಅಗಸ್ಟ್ 24ರಂದು ತೀರ್ಥಹಳ್ಳಿ ತಾಲ್ಲೂಕಿನ ವೇಗರವಳ್ಳಿಯ ಪ್ರೌಢಶಾಲೆಯಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜನೆ ಮಾಡಲಾಗಿದೆ. ಬೆಳಿಗ್ಗೆ 9:30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ರಕ್ತದಾನ ಶಿಬಿರ ನಡೆಯಲಿದ್ದು ತೀರ್ಥಹಳ್ಳಿ ತಾಲ್ಲೂಕಿನ ರಕ್ತದಾನಿಗಳು, ಸಮಸ್ತ ಜನತೆ ಹಾಗೂ ಶ್ರೀ ವಿನಯ್ ಗುರೂಜಿಯವರ ಭಕ್ತರು ಸಮಸ್ತ ಜನತೆ ರಕ್ತದಾನ ಮಾಡಿ ಇನ್ನೊಂದು ಜೀವ ಕಾಪಾಡಲು ಮನವಿ ಮಾಡಲಾಗಿದೆ. ಮೇಗರವಳ್ಳಿ ಪ್ರೌಢಶಾಲೆಯಲ್ಲಿ ತಾಲ್ಲೂಕು ಮಟ್ಟದ ಕ್ರೀಡಾಕೂಟ…
ಜಮೀನಿಗೆ ಹೋಗಲು ರಸ್ತೆ ಕಲ್ಪಿಸುವಂತೆ ಆಗ್ರಹಿಸಿ ಯುವ ಕೃಷಿಕನಿಂದ ತಾಲೂಕು ಕಛೇರಿ ಎದುರು ಉಪವಾಸ ಸತ್ಯಾಗ್ರಹ :
ಹೊಸನಗರ: ತಮ್ಮ ಜಮೀನಿಗೆ ತೆರಳಲು ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಯುವ ಕೃಷಿಕನೋರ್ವ ತಾಲೂಕು ಕಛೇರಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಹೊಸನಗರ ತಾಲೂಕಿನ ಎಚ್.ಮಳವಳ್ಳಿ ನಿವಾಸಿ ಕೆ.ಯು ದಿನೇಶ್ ಅವರು, ತಮ್ಮ ಜಮೀನಿಗೆ ತೆರಳಲು ರಸ್ತೆ ಬಂದ್ ಮಾಡಲಾಗಿದೆ. ಈ ಬಗ್ಗೆ ವರ್ಷಗಳ ಕಾಲ ಹೋರಾಟ ನಡೆಸಿದರೂ ಅಧಿಕಾರಿವರ್ಗ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 2019ರಲ್ಲಿಯೇ ತಹಸೀಲ್ದಾರ್, ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದೇನೆ. ನನ್ನ ಕೃಷಿ ಜಮೀನಿಗೆ ತೆರಳುವ ದಾರಿಗೆ ಅಡ್ಡಲಾಗಿ ಗ್ರಾಮದ ಇನ್ನೋರ್ವ ಕೃಷಿಕ…
ಕ್ರೀಡಾಕೂಟದಲ್ಲಿ ನಡೆದ ಜಗಳ ಹಿನ್ನಲೆಯಲ್ಲಿ ಶಿರಾಳಕೊಪ್ಪದಲ್ಲಿ ಬಿಗುವಿನ ವಾತಾವರಣ : ಅಂಗಡಿಗಳು ಸಂಪೂರ್ಣ ಬಂದ್
ಶಿರಾಳಕೊಪ್ಪ : ಕ್ರೀಡಾಕೂಟದ ವೇಳೆ ಕ್ಷುಲಕ ವಿಚಾರವಾಗಿ ಶುರುವಾದ ಗಲಾಟೆಯಿಂದಾಗಿ ಶಿರಾಳಕೊಪ್ಪ ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ದಿಢೀರ್ ಅಂಗಡಿಗಳನ್ನು ಬಂದ್ ಮಾಡಿಸಲಾಗಿದೆ. ಶಿರಾಳಕೊಪ್ಪದ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ವಲಯ ಮಟ್ಟದ ಶಾಲಾ ಕ್ರೀಡಾಕೂಟದ ವೇಳೆ ಕ್ಷುಲಕ ವಿಚಾರವಾಗಿ ಗಲಾಟೆಯಾಗಿದೆ. ಮಕ್ಕಳೊಂದಿಗೆ ಬಂದಿದ್ದ ಪೋಷಕರು ಕೂಡ ಮಾತಿಗೆ ಮಾತು ಬೆಳೆಸಿದ್ದಾರೆ. ಬಳಿಕ ಕ್ರೀಡಾಂಗಣದಿಂದ ಹೊರ ಬಂದ ವೇಳೆ ಗಲಾಟೆ ಹೆಚ್ಚಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಕ್ರೀಡಾಂಗಣದಿಂದ ಹೊರ ಬಂದ ಒಂದು ಕೋಮಿನ ಯುವಕರ ಗುಂಪು ಮತ್ತೊಂದು…
ಯಕ್ಷಗಾನ ಕಲೆಗೆ ಸಾವಿರ ವರ್ಷದ ಇತಿಹಾಸವಿದೆ : ಶ್ವೇತ ಶ್ರೀಧರ್
ಹೊಸನಗರ : ಯಕ್ಷಗಾನ ಕಲೆಗೆ ಸಾವಿರಾರು ವರ್ಷಗಳ ಇತಿಹಾಸ ವಿದೆ.ಕಲಾವಿದರು ತಮ್ಮ ಪ್ರತಿಭೆ ಯನ್ನು ಯಾವುದೇ ತಯಾರಿ ಇಲ್ಲದೆ ಕ್ಷಣ ಕ್ಷಣಕ್ಕೂ ಪ್ರದರ್ಶನ ನೀಡಿ..ಭಾಗವತರ ಪದ್ಯಕ್ಕೆ ಹೆಜ್ಜೆ ಹಾಕಿ ಅರ್ಥ ಹೇಳುವ ಸ್ಪಷ್ಟ ಕನ್ನಡ ಉಚ್ಚಾರಣೆ ಮಾಡುವ ಕಲೆ…ಸಾಂಪ್ರದಾಯಿಕ, ಸಾಂಸ್ಕೃತಿಕ, ಕಲೆ ಯಕ್ಷಗಾನವಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಬಿಜೆಪಿ ಮಹಿಳಾ ರ್ಮೋಚಾ ಕಾರ್ಯದರ್ಶಿ ಮಹಿಳಾ ಸಂಘಟನೆಯ ಮುಖ್ಯಸ್ಥೆ ಶ್ವೇತ ಶ್ರೀಧರ್ ಹೇಳಿದರು. ಶುಕ್ರವಾರ ಬೆಂಗಳೂರು ರವಿಂದ್ರ ಕಲಾ ಕ್ಷೇತ್ರದಲ್ಲಿ ಯಕ್ಷ ಮಿತ್ರ ಬಳಗ ಬೆಂಗಳೂರು ಹಾಗೂ ಕನ್ನಡ…
2023ರಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದನ್ನು ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ : ಶಾರದ ಪೂರ್ಯನಾಯ್ಕ್
ಹೊಸನಗರ : 2023ರಲ್ಲಿ ಕುಮಾರಸ್ವಾಮಿ ಈ ರಾಜ್ಯದ ಮುಖ್ಯಮಂತ್ರಿ ಆಗುವುದನ್ನು ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲವೆಂದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಪೂರ್ಯ ನಾಯ್ಕ್ ಹೇಳಿದರು. ಪಟ್ಟಣದ ಗಾಯತ್ರಿ ಮಂದಿರದಲ್ಲಿ ಹೊಸನಗರ ತಾಲ್ಲೂಕು ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು ಶಿವಮೊಗ್ಗ ಜಿಲ್ಲೆಯಲ್ಲಿ ಮೊಟ್ಟ ಮೊದಲು ಜೆಡಿಎಸ್ ಪಕ್ಷವು ಬೇರೂರಿ ಅತ್ಯಂತ ಕ್ರಿಯಾಶೀಲವಾಗಿ ಇದ್ದದ್ದು ಈ ಹೊಸನಗರ ತಾಲ್ಲೂಕಿನಲ್ಲಿ ಕೆಲ ರಾಜಕೀಯ ಸ್ಥಿತ್ಯಂತರಗಳಿಗೆ ಕಾರ್ಯಕರ್ತರು ಚದುರಿದ್ದು ಅವರನ್ನು…
ಹುಂಚದಕಟ್ಟೆಯಲ್ಲಿ ಹಳ್ಳಿ ಭೇಟಿ ಮತ್ತು ಗ್ರಾಮ ವಾಸ್ತವ್ಯ : ಅಕ್ರಮ ಮದ್ಯ ಮಾರಾಟದ ವಿರುದ್ದ ಸಿಡಿದೆದ್ದ ಮಹಿಳೆಯರು,ತಬ್ಬಿಬ್ಬಾದ ಅಬಕಾರಿ ಅಧಿಕಾರಿ
ಮನೆ-ಮನೆಗಳಲ್ಲಿ ಆಕ್ರಮ ಮಧ್ಯ ಮಾರಾಟ ಮಾಡಲಾಗುತ್ತಿದ್ದು ಯುವಜನಾಂಗ ಮತ್ತು ವಿದ್ಯಾರ್ಥಿಗಳು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ.ಶಾಲಾ ಅವರಣದ ತುಂಬ ಮಧ್ಯದ ಬಾಟಲ್ ಮತ್ತು ಪೌಚು ಪ್ಯಾಕೇಟ್‌ಗಳ ರಾಶಿಯೇ ಬಿದ್ದಿರುತ್ತದೆ ಶಾಲೆ ಅರಂಭಕ್ಕೂ ಮುನ್ನ ಮಕ್ಕಳಿದ ಅದನ್ನು ಅರಿಸುವುದೇ ಕೆಲಸವಾಗಿದೆ.ಈ ಬಗ್ಗೆ ಗ್ರಾಮ ಸಭೆ ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಅಬಕಾರಿ ಅಧಿಕಾರಿಗಳು ಅಂಗಡಿ ಮನೆಗಳ ಬಳಿ ಬಂದು ಹಪ್ತಾ ವಸೂಲಿ ಮಾಡಿಕೊಂಡು ಹೋಗುತ್ತಾರೆಯೇ ಹೊರತು ಮಧ್ಯಮಾರಾಟ ತಡೆಯುತ್ತಿಲ್ಲ ಎಂದು ಅಬಕಾರಿ ಅಧಿಕಾರಿಗಳ ಕಾರ್ಯವೈಖರಿಗೆ ಮಹಿಳೆಯರು ಗರಂ ಅಗುವ ಮೂಲಕ…