ಜಿಲ್ಲಾ ಸುದ್ದಿ:
ಹಾದಿಗಲ್ಲು ಬಳಿ ರಸ್ತೆ ಅಪಘಾತ – ಮಾನವೀಯತೆ ಮೆರೆದ ಗೃಹಸಚಿವ ಆರಗ ಜ್ಞಾನೇಂದ್ರ
ತೀರ್ಥಹಳ್ಳಿ : ತಾಲೂಕಿನ ಹಾದಿಗಲ್ಲು ಬಳಿ ಅಪಘಾತವೊಂದು ಸಂಭವಿಸಿದ್ದು ಇದೆ ಮಾರ್ಗದಲ್ಲಿ ಬರುತ್ತಿದ್ದ ಗೃಹಸಚಿವ ಆರಗ ಜ್ಞಾನೇಂದ್ರರವರು ಮಾನವೀಯತೆ ಮೆರೆದ ಘಟನೆ ಭಾನುವಾರ ರಾತ್ರಿ ನೆಡೆದಿದೆ. ಹಾದಿಗಲ್ಲಿನ ಬಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಕರೆಂಟ್ ಕಂಬಕ್ಕೆ ಗುದ್ದಿ ಪಲ್ಟಿಯಾಗಿತ್ತು. ಅದೇ ಮಾರ್ಗದಲ್ಲಿ ಬಂದ ಗೃಹಸಚಿವರು ಈ ಸನ್ನಿವೇಶ ನೋಡಿದ ಕೂಡಲೇ ಗಾಡಿಯಿಂದ ಇಳಿದು ಅಪಘಾತಕ್ಕೀಡಾದ ಕಾರಿನ ಮೇಲೆ ಕರೆಂಟ್ ವೈರ್ ಬಿದ್ದಿರುವುದನ್ನ ಗಮನಿಸಿ ಮೊದಲು ಕಾರಿನಲ್ಲಿದ್ದವರನ್ನು ಹೊರಗಡೆ ಕರೆ ತರುವಂತೆ ತಮ್ಮ ಸಿಬ್ಬಂದಿಗೆ ಸೂಚಿಸಿದರು. ನಂತರ…
ಹೊಸನಗರ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆ : ಎಂ.ಬಿ ಲಕ್ಷ್ಮಣಗೌಡ ನೇತ್ರತ್ವದ ತಂಡಕ್ಕೆ ಭರ್ಜರಿ ಗೆಲುವು
ರಿಪ್ಪನ್ ಪೇಟೆ : ಹೊಸನಗರ ತಾಲೂಕು ಒಕ್ಕಲಿಗರ ಸಂಘದ ಪದಾಧಿಕಾರಿಗಳ ಚುನಾವಣೆಯಲ್ಲಿ ರಿಪ್ಪನ್ ಪೇಟೆಯ ಎಂ. ಬಿ ಲಕ್ಷ್ಮಣಗೌಡ ನೇತ್ರತ್ವದ ತಂಡಕ್ಕೆ ಭರ್ಜರಿ ಗೆಲುವು ದೊರೆತಿದೆ. 15 ಜನ ನಿರ್ದೇಶಕರನ್ನು ಹೊಂದಿರುವ ಹೊಸನಗರ ತಾಲೂಕು ಒಕ್ಕಲಿಗರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಗರ್ತಿಕೆರೆ, ಹೆದ್ದಾರಿಪುರ, ಗುಬ್ಬಿಗ ಮತ ಕ್ಷೇತ್ರದಿಂದ ಮೂರು ಜನ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ 12 ಸ್ಥಾನಗಳಿಗಾಗಿ 27 ಜನ ಸ್ಪರ್ಧಾ ಕಣದಲ್ಲಿ ಉಳಿದುಕೊಂಡಿದ್ದರು. ಹೊಸನಗರ ತಾಲೂಕು ಒಕ್ಕಲಿಗರ ಸಂಘಕ್ಕೆ ಇದು ಪ್ರಥಮ ಚುನಾವಣೆ : ಈ…
ಹುಂಚ : ಏಕಾಏಕಿ ಮನೆ ತೆರವು ಪ್ರಕರಣ – ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ದ ಕಿಮ್ಮನೆ ನೇತ್ರತ್ವದಲ್ಲಿ ನಾಳೆ ಪಾದಯಾತ್ರೆ ಮತ್ತು ಪ್ರತಿಭಟನೆ
ಹುಂಚ : ದಿನಾಂಕ 6-09-2022ರಂದು ಮಂಗಳವಾರ ಹುಂಚ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಅಕ್ರಮ ಒತ್ತುವರಿ ತೆರವು ನೆಪದಲ್ಲಿ ಬಡವರ ಜೀವನ ಜತೆ ಆಟವಾಡುತ್ತಿರುವ ಸರ್ಕಾರದ ವಿರುದ್ಧ ತೀರ್ಥಹಳ್ಳಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ಮತ್ತು ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಆಧಾರವಿಲ್ಲದೆ ಹುಂಚ ಗ್ರಾಪಂ ವ್ಯಾಪ್ತಿಯ ಹಡ್ಲುಬೈಲ್ ನಿವಾಸಿ ಜೀವನ್ ಅವರ ಮನೆ ನೆಲಸಮಗೊಳಿಸಿದ ಕಂದಾಯ ಅಧಿಕಾರಿಗಳ ವಿರುದ್ಧ ದಿನಾಂಕ 6-9-2022ರಂದು ಮಂಗಳವಾರ ಬೆಳಿಗ್ಗೆ 9ಗಂಟೆಗೆ ಸರಿಯಾಗಿ ಹಡ್ಲುಬೈಲ್ ಜೀವನ್ ಅವರ ಮನೆಯಿಂದ ಪಾದಯಾತ್ರೆ ಆರಂಭವಾಗಿ ಹುಂಚ…
ಶಿವಮೊಗ್ಗ ಚಾಕು ಇರಿತ ಪ್ರಕರಣದ ಆರೋಪಿಗೆ ಭಯೋತ್ಪಾದಕರ ಲಿಂಕ್ ಬಹಿರಂಗ : ಆರಗ ಜ್ಞಾನೇಂದ್ರ
ಶಿವಮೊಗ್ಗ : ಗಾಂಧಿ ಬಜಾರ್ ನಲ್ಲಿ ಪ್ರೇಮ್ ಸಿಂಗ್ ಯುವಕನಿಗೆ ಚಾಕು ಇರಿದ ಪ್ರಕರಣ ಸಂಬಂಧಿತ ಆರೋಪಿಗೆ ಜಬೀವುಲ್ಲಾ ಲಿಂಕ್ ಭಯಾನಕವಾಗಿದೆ. ಭಯೋತ್ಪಾದಕರ ಜೊತೆ ಲಿಂಕ್ ಇರೋದು ಬಹಿರಂಗವಾಗಿದೆ. ಸದ್ಯದಲ್ಲೇ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುತ್ತೇವೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ವೀರ್ ಸಾವರ್ಕರ್ ಫೋಟೋ ಹಾಕುವ ವಿಚಾರದಲ್ಲಿ ಎಸ್ಡಿಪಿಐ ಬೆಂಬಲದಲ್ಲಿ ಕೆಲವರು ಹಿಂಸಾಚಾರ ನಡೆಸಿದ್ದರು. ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿದಿದ್ದ ಪ್ರಕರಣ ನಡೆದಿತ್ತು. ಪ್ರಕರಣದ ಆರೋಪಿಗೆ ‘ಭಯೋತ್ಪಾದಕರ ಲಿಂಕ್ ಭಯಾನಕ’ವಾಗಿದೆ…
ಮನೆಗೆ ನುಗ್ಗಿದ ನೀರು – ಗೋಡೆ ಕುಸಿತದಿಂದ ನಾಲ್ವರಿಗೆ ಪೆಟ್ಟು
ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಾಮನಗದ್ದೆ ನಿವಾಸಿ ಲೋಕೇಶ್ ಎಂಬವರ ಮನೆಯ ಹೊರಭಾಗದ ಗೋಡೆ ಕುಸಿದ ಪರಿಣಾಮ ಮೂವರಿಗೆ ಗಂಭೀರ ಪೆಟ್ಟು ತಗುಲಿದೆ. ಗುರುವಾರ ಸಂಜೆ ಸುರಿದ ಭಾರಿ ಮಳೆಗೆ ಮನೆಯ ಹೊರಭಾಗದಲ್ಲಿ ಕೃಷಿ ಸಾಮಾಗ್ರಿಗಳನ್ನು ದಾಸ್ತಾನಿರಿಸಿದ ಕಡುಮಾಡಿನ ಒಳಗೆ ಪ್ರವಾಹದ ರೀತಿಯಲ್ಲಿ ಏಕಾಏಕಿ ನೀರು ನುಗ್ಗಿತ್ತು. ಕುಟುಂಬಸ್ಥರು ಸೇರಿ ಅಲ್ಲಿದ್ದ ಕೃಷಿ ಪರಿಕರಗಳನ್ನು ಒಳಗೆ ಸಾಗಿಸುತ್ತಿರುವಾಗ ನೀರಿನ ರಭಸಕ್ಕೆ ಗೋಡೆ ಸಂಪೂರ್ಣ ಕುಸಿದು ಬಿದ್ದು ಗೋಡೆಯಡಿಯಲ್ಲಿ ನಾಲ್ವರು ಸಿಲುಕಿಕೊಂಡರು….
ಶಿವಮೊಗ್ಗ ಜಿಲ್ಲೆಯಾದ್ಯಂತ ಆರೆಂಜ್ ಅಲರ್ಟ್ ಘೋಷಣೆ :
ಶಿವಮೊಗ್ಗ ಜಿಲ್ಲೆಯಾದ್ಯಂತ ಇವತ್ತು ಮಳೆ ಪುನಃ ಅಬ್ಬರಿಸುತ್ತಿದೆ. ಇವತ್ತು ಸಂಜೆಯಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಗಾಗಿ ಭಾರಿ ಮಳೆಯಾಗುವ ಸಂಭವವಿದೆ. ಇಂದು ಸಂಜೆಯಿಂದ ನಾಳೆ ಬೆಳಗ್ಗೆ 8.30ರವರೆಗೆ ORANGE ALERT ಘೋಷಿಸಲಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯಲ್ಲಿ ತಿಳಿಸಲಾಗಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಸಂದರ್ಭದಲಿ 115.6 ಮಿ.ಮೀ ನಿಂದ 204.4 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ.
ಹದಗೆಟ್ಟ ರಸ್ತೆ – ರಾಜ್ಯ ಹೆದ್ದಾರಿಯ ಮಧ್ಯೆ ಬಾಳೆಗಿಡ ನೆಟ್ಟು ಪ್ರತಿಭಟನೆ
ಸೂಡೂರು : ಶಿವಮೊಗ್ಗ-ಹೊಸನಗರ ಸಂಪರ್ಕ ಕಲ್ಪಿಸುವ ಪ್ರಮುಖ ಹೆದ್ದಾರಿಯು ಸಂಪೂರ್ಣ ಹದಗೆಟ್ಟಿದ್ದು ಹೊಂಡ ಗುಂಡಿಗಳಿಂದ ಕೂಡಿದ್ದು ಪ್ರತಿ ನಿತ್ಯ ಒಂದೆರಡು ಅಪಘಾತಗಳು ನಡೆಯುತಿದ್ದು ಈ ರಸ್ತೆಯನ್ನು ತಕ್ಷಣ ಸರಿಪಡಿಸಿ ಎಂದು ಒತ್ತಾಯಿಸಿ ಕೂರಂಬಳ್ಳಿ ಗ್ರಾಮಸ್ಥರು ರಸ್ತೆ ಮಧ್ಯದಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟನೆ ನಡೆಸಿದರು. ಐದನೇ ಮೈಲಿಕಲ್ಲು ಹಾಗೂ ಚಿನ್ನಮನೆ ಗ್ರಾಮದ ನಡುವಿನ ರಸ್ತೆಯಲ್ಲಿ ಹಲವಾರು ಗುಂಡಿಗಳು ಬಿದ್ದಿದ್ದು ಹಲವಾರು ಅಪಘಾತಗಳು ನಡೆದಿದ್ದವು ಈ ಹಿನ್ನಲೆಯಲ್ಲಿ ಕೂರಂಬಳ್ಳಿ ಗ್ರಾಮಸ್ಥರು ಇಂದು ರಸ್ತೆ ಮಧ್ಯೆ ಬಾಳೆ ಗಿಡ ನೆಟ್ಟು ವಿನೂತನವಾಗಿ…
ಬೋನಿಗೆ ಬಿದ್ದ ಚಿರತೆ – ನಿಟ್ಟುಸಿರು ಬಿಟ್ಟ ಜನತೆ
ಕಳೆದ ಎರಡು ತಿಂಗಳಿಂದ ಕಾಟ ಕೊಡುತ್ತಿದ್ದ ಚಿರತೆ ಶಿವಮೊಗ್ಗ ಗ್ರಾಮಾಂತರದ ಆಲದಹಳ್ಳಿ ಸೋಮಿನಕೊಪ್ಪದಲ್ಲಿ ಬೋನಿಗೆ ಬಿದ್ದಿದೆ.ನಂತರ ಚಿರತೆಯನ್ನು ಅರಣ್ಯ ಇಲಾಖೆಯವರು ಬೇರೆಡೆ ಸಾಗಿಸಿದ್ದಾರೆ. ದಾವಣಗೆರೆ ಜಿಲ್ಲೆ ಹೊನ್ಬಾಳಿ ತಾಲೂಕಿನ ಪಲವನಹಳ್ಳಿ ಯಲ್ಲಿ ಮಹಿಳೆಯನ್ನು ಬಲಿ ತೆಗೆದುಕೊಂಡ ಚಿರತೆ ಆಲದಹಳ್ಳಿ ಸೋಮಿನಕೊಪ್ಪದಲ್ಲಿ ಬೋನಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಸಾಕಿದ ನಾಯಿಯನ್ನು ಬೋನಿನಲ್ಲಿಟ್ಟು ಚಿರತೆಯನ್ನ ಹಿಡಿಯಲಾಗಿದೆ. ಹೊಲದಲ್ಲಿ ಸೌತೆಕಾಯಿ ಕೀಳಲು ಬಂದ ರೈತರು ಬೋನಿಗೆ ಬಿದ್ದ ಚಿರತೆಯನ್ನು ಮೊದಲು ನೋಡಿದ್ದಾರೆ. ನಂತರ ಸ್ಥಳದಲ್ಲಿ ಜನ ಜಾತ್ರೆಯೇ ನಿರ್ಮಾಣವಾಗಿದೆ. ಕಳೆದ ಮೂರು…
ಅಭಿವೃದ್ಧಿಯನ್ನು ಸಹಿಸದೆ ಪುಕ್ಕಟೆ ಪ್ರಚಾರಕ್ಕಾಗಿ ಪರಿತಪಿಸುತ್ತಿರುವ ಬೇಳೂರು : ಬಿಜೆಪಿ ಅರೋಪ
ರಿಪ್ಪನ್‌ಪೇಟೆ;-ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕಾಂಗ್ರೇಸ್ ಪಕ್ಷದ ವಕ್ತಾರ ಗೋಪಾಲಕೃಷ್ಣ ಬೇಳೂರು ಹಾಲಿ ಶಾಸಕ ಹರತಾಳು ಹಾಲಪ್ಪನವರ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೇ ಪುಕ್ಕಟೆ ಪ್ರಚಾರಕ್ಕಾಗಿ ತಮ್ಮ ಬೆಂಬಲಿಗರೊAದಿಗೆ ಸುಳ್ಳು ಹಾಗೂ ನಿರಾಧಾರ ಅರೋಪ ಮಾಡುತ್ತಿದ್ದಾರೆಂದು ಕೆರೆಹಳ್ಳಿ-ಹುಂಚಾ ಬಿಜೆಪಿ ಮಹಾಶಕ್ತಿಕೇಂದ್ರದ ಅಧ್ಯಕ್ಷ ಎಂ.ಬಿ.ಮಂಜುನಾಥ ಅರೋಪಿಸಿದರು. ರಿಪ್ಪನ್‌ಪೇಟೆ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇತ್ತೀಚೆಗೆ ಸುರಿದ ಭಾರಿಮಳೆಯಿಂದಾಗಿ ಕೆರೆಹಳ್ಳಿ ಹೋಬಳಿಯ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ-ಮಳವಳ್ಳಿ ಕನ್ನೇಹೊಂಡದ ನೀರು ನುಗ್ಗಿ ರಸ್ತೆ ಕೊಚ್ಚಿಹೋಗಿ ಸಾರ್ವಜನಿಕರು ಓಡಾಡದಂತಾಗಿರುವ ಬಗ್ಗೆ…
ರಾಜಕಾರಣಿಗಳ ನಡವಳಿಕೆ ಜನರಲ್ಲಿ ಅಸಹ್ಯವುಂಟುಮಾಡಿದೆ,ಅದು ಪರಿವರ್ತನೆಯಾಗಬೇಕು: ಕೆ ದಿವಾಕರ್
ರಿಪ್ಪನ್‌ಪೇಟೆ: ಸ್ವಾತಂತ್ರ್ಯ ನಂತರ ನಮ್ಮ ರಾಷ್ಟ, ರಾಜ್ಯದ ರಾಜಕಾರಣಿಗಳು ನಡೆದುಕೊಂಡಿರುವ ರೀತಿ ಜನರಲ್ಲಿ ಅಸಹ್ಯವುಂಟುಮಾಡಿದೆ. ಇದು ಪರಿವರ್ತನೆಯಾಗಬೇಕು ಎಂದು ಆಮ್ ಆದ್ಮಿ ಪಕ್ಷದ ಸಾಗರ ವಿಧಾನಸಭಾ ಕ್ಷೇತ್ರ ಸಂಭಾವ್ಯ ಅಭ್ಯರ್ಥಿ ಕೆ. ದಿವಾಕರ್ ಹೇಳಿದರು. ಪಟ್ಟಣದ ಸಾಗರ ರಸ್ತೆಯ ಗೌರಿಶಂಕರ ಕಾಂಪ್ಲೆಕ್ಸ್ ನಲ್ಲಿ ಆಮ್‌ಆದ್ಮಿ ಪಕ್ಷದ ನೂತನ ಕಛೇರಿ ಉದ್ಘಾಟನೆಯ ನಂತರ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿ ಇದುವರೆಗೆ ನಮ್ಮನ್ನಾಳಿದ ಶಾಸಕರುಗಳು ಉಂಡುಹೋದ ಕೊಂಡುಹೋದ ಮನಸ್ಥಿತಿಯವರಾಗಿರುವುದು ದುರಂತ. ನಮ್ಮಿಂದ ಆಯ್ಕೆಯಾದ ಕಳ್ಳರು, ಕಾಕರು, ದರೋಡೆ ಕೋರರು ಸಮಾಜವನ್ನು ಏನು…