Headlines

ಶಿವಮೊಗ್ಗದ ಶಾಪಿಂಗ್ ಮಾಲ್​ ನಲ್ಲಿ ವೀರ ಸಾವರ್ಕರ್ ಭಾವಚಿತ್ರ ಪ್ರದರ್ಶನ ವಿವಾದ : ಬಿಗುವಿನ ವಾತಾವರಣ

ಶಿವಮೊಗ್ಗ : ನಗರದ ಸಿಟಿ ಸೆಂಟ್ರಲ್​ ಮಾಲ್​ ವಿವಾದವೊಂದಕ್ಕೆ ಸಾಕ್ಷಿಯಾಗಿ ಹಲವು ಸನ್ನಿವೇಶಗಳನ್ನು ಕಂಡಿತು. ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಮಾಡಿದ್ದ ಅಲಂಕಾರದ ನಡುವೆ ವೀರ ಸಾರ್ವಕರ್​ ಫೋಟೋಹಾಕಿದ್ದನ್ನ ಪ್ರಶ್ನಿಸಿ ಎಸ್​ಡಿಪಿಐ ಕಾರ್ಯಕರ್ತರು ಆಕ್ರೋಶ ಹೊರಹಾಕಿ ಪ್ರತಿಭಟಿಸಿದರೆ, ಬಿಜೆಪಿ ಕಾರ್ಯಕರ್ತರು ವೀರ ಹೋರಾಟಗಾರರಿಗೆ ಎಸ್​ಡಿಪಿಐ ಅವಮಾನ ಮಾಡಿದೆ ಎಂದು ಆಕ್ರೋಶ ಹೊರಹಾಕಿ ಮಾಲ್​ನ ಎದುರಲ್ಲೆ ಪ್ರತಿಭಟನೆ ನಡೆಸಿತು. ಮನೆಮನೆಗೂ ತಿರಂಗಾ ಅಭಿಯಾನದ ನಡುವೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮದ ಅಂಗವಾಗಿ ನಗರ ಪ್ರತಿಷ್ಟಿತ ಕಟ್ಟಡಗಳು ಹಾಗೂ ಸಾರ್ವಜನಿಕ…

Read More

ಬಿಜೆಪಿಯಿಂದ ಸಾಮಾನ್ಯ ಕಾರ್ಯಕರ್ತರ ನಿರ್ಲಕ್ಷ : ಹಿರಿಯ ಕಾರ್ಯಕರ್ತ ಯೋಗೇಂದ್ರಪ್ಪ ಗೌಡ ಆರೋಪ

ರಿಪ್ಪನ್ ಪೇಟೆ: ಹೊಸನಗರ ತಾಲೂಕಿನಲ್ಲಿ ಕಳೆದ 35 ವರ್ಷಗಳಿಂದ ಪ್ರಾಮಾಣಿಕ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದ ಹಿರಿಯ ಕಾರ್ಯಕರ್ತರನ್ನು ಸಂಪೂರ್ಣ ನಿರ್ಲಕ್ಷಕ್ಕೆ ಒಳಪಡಿಸಲಾಗಿದೆ. ಸರಕಾರ ಮತ್ತು ಎಲ್ಲಾ ಅಧಿಕಾರವಿದ್ದರೂ ಹಿರಿಯ ಕಾರ್ಯಕರ್ತರು ಕಡೆಗಣಿಸಿ ನಿನ್ನೆ ಮೊನ್ನೆ ಬಂದಂತಹ ಕಾಂಗ್ರೆಸ್ ಪಕ್ಷದವರಿಗೆ ಮಣೆ ಹಾಕಿ ನಾಮನಿರ್ದೇಶನ ಮಾಡಲಾಗುತ್ತಿದೆ ಆದ್ದರಿಂದ ಆಗಸ್ಟ್ 17ರ ಬುಧವಾರ ರಿಪ್ಪನ್ ಪೇಟೆ ಬಿಜೆಪಿ ಮಹಾಶಕ್ತಿ ಕೇಂದ್ರ ಕಚೇರಿ ಎದುರು ಧರಣಿ ನಡೆಸುವುದಾಗಿ ಪಕ್ಷದ ಹಿರಿಯ ಕಾರ್ಯಕರ್ತರಾದ ಯೋಗೇಂದ್ರಪ್ಪ ಗೌಡ ರವರು ತಿಳಿಸಿದ್ದಾರೆ.  ಇಂದು ಪಟ್ಟಣದಲ್ಲಿ ಪತ್ರಿಕೆಗೋಷ್ಠಿಯಲ್ಲಿ ಮಾತನಾಡಿದ ಅವರು…

Read More

ರಿಪ್ಪನ್‌ಪೇಟೆ : ದಂಡದ ಬದಲು ಇನ್ಸೂರೆನ್ಸ್ ಮಾಡಿಸಿದ ಪೊಲೀಸರು

ರಿಪ್ಪನ್‌ಪೇಟೆ :  ಇಂದು ಪಟ್ಟಣದ ಪೊಲೀಸರು ಬೈಕ್ ಸವಾರರಿಗೆ ಅವಶ್ಯಕ ದಾಖಲೆಗಳ ಬಗ್ಗೆ ವಿನೂತನವಾಗಿ ಚುರುಕು ಮುಟ್ಟಿಸುವ ಕಾರ್ಯಾಚರಣೆ ನಡೆಸಿದ್ದಾರೆ. ರಿಪ್ಪನ್‌ಪೇಟೆ ಪಿಎಸ್ ಐ ಶಿವಾನಂದ ಕೋಳಿ ನೇತ್ರತ್ವದ ತಂಡ ಇಂದು ಪಟ್ಟಣದಲ್ಲಿ ವಾಹನಗಳನ್ನು ತಡೆ ಹಿಡಿದು ಸಾವಿರ ದಂಡ ಕಟ್ಟುವ ಬದಲು ಸಾವಿರ ರೂಪಾಯಿಯಲ್ಲೇ ಇನ್ಸೂರೆನ್ಸ್ ಮಾಡಿಸಿ ಎಂದು ಸವಾರರಿಗೆ ಬುದ್ದಿ ಹೇಳಿ ಸ್ಥಳದಲ್ಲಿಯೇ ಇನ್ಸೂರೆನ್ಸ್ ಹಾಕಿಸಿ ಕಳುಹಿಸುತ್ತಿದ್ದ ದೃಶ್ಯ ಕಂಡುಬಂದಿತ್ತು. ಪೊಲೀಸರು ವಾಹನ ಅಡ್ಡ ಹಾಕಿದ್ರೆ ಸಾಕು, ಲೈಸೆನ್ಸ್ ಎಲ್ಲಿ, ಆರ್.ಸಿ. ಕೊಡು, ಎಮಿಷನ್…

Read More

ಮಾನವೀಯತೆ ಮೆರೆದ ಶಾಸಕ ಹರತಾಳು ಹಾಲಪ್ಪ :

ರಿಪ್ಪನ್‌ಪೇಟೆ : ಇಂದು ಶಾಸಕರು ಹರ್ ಘರ್ ತಿರಂಗ ಅಭಿಯಾನ ಅಂಗವಾಗಿ ಸಾಗರದಿಂದ ರಿಪ್ಪನ್‌ಪೇಟೆ ಗೆ ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಬೈಕ್ ಅಪಘಾತದಲ್ಲಿ ತೀವ್ರ ರಕ್ತಸ್ರಾವವಾಗಿದ್ದ ಮಹಿಳೆಯೊಬ್ಬರನ್ನು ತಮ್ಮ ವಾಹನದಲ್ಲಿಯೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ನೆವಟೂರು ಸಮೀಪದ ಆನೆಕೆರೆ ಗ್ರಾಮದ ಬಳಿ, ದೀಪಾ (CRP ಆಚಾಪುರ ಕ್ಲಸ್ಟರ್, ಶಿಕ್ಷಣ ಇಲಾಖೆ) ಎಂಬುವವರು ಅಪಘಾತಗೊಂಡು, ತೀವ್ರ  ರಕ್ತಸ್ರಾವದಲ್ಲಿರುವುದನ್ನು ಗಮನಿಸಿದ ಶಾಸಕರು ಕೂಡಲೇ ತಮ್ಮ ವಾಹನ ನಿಲ್ಲಿಸಿ ಅವರನ್ನು ತಮ್ಮ ವಾಹನದಲ್ಲಿಯೇ ರಿಪ್ಪನಪೇಟೆ ಪ್ರಾ.ಆ. ಕೇಂದ್ರಕ್ಕೆ ಸಾಗಿಸಿ, ಚಿಕಿತ್ಸೆ…

Read More

ಭಾರಿ ಗಾಳಿ ಮಳೆಗೆ ನೆಲಸಮಗೊಂಡ ದನದ ಕೊಟ್ಟಿಗೆ : ಜಾನುವಾರುಗಳಿಗೆ ಗಂಭೀರ ಗಾಯ

ರಿಪ್ಪನ್ ಪೇಟೆ : ಇಲ್ಲಿನ  ಸಮೀಪದ ಬೆಳ್ಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಬ್ಬಿಗಾ ಗ್ರಾಮದಲ್ಲಿ ಭಾರಿ ಮಳೆಗೆ ಕೊಟ್ಟಿಗೆ ಕುಸಿದು ಬಿದ್ದು ಜಾನುವಾರುಗಳಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಗುಬ್ಬಿಗಾ ಗ್ರಾಮದ ಚೆಲುವಣ್ಣ ಎಂಬವರ ಮನೆಯ ಹಿಂಬದಿಯ ದನದ ಕೊಟ್ಟಿಗೆ ಇಂದು ಕುಸಿದು ಬಿದ್ದ ಪರಿಣಾಮ 1 ಜರ್ಸಿ ಹಸು, 2 ನಾಟಿ ಹಸುಗಳಿಗೆ ಗಾಯಗಳಾಗಿವೆ.1 ನಾಟಿ ಹಸುವಿನ ಸ್ಥಿತಿ ಚಿಂತಾಜನಕವಾಗಿದೆ. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಬೆಳ್ಳೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ…

Read More

ತೀರ್ಥಹಳ್ಳಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಆರಗ ಜ್ಞಾನೇಂದ್ರ ಚಾಲನೆ : ಸಾವಿರಾರು ವಿದ್ಯಾರ್ಥಿಗಳು ಬಾಗಿ

ತೀರ್ಥಹಳ್ಳಿ : 75 ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಬೇಕೆಂಬ ಕಾರಣಕ್ಕಾಗಿ ಪಟ್ಟಣದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಹರ್ ಘರ್ ತಿರಂಗಾಕ್ಕೆ ಚಾಲನೆ ನೀಡಿದರು. ಪಟ್ಟಣದ ಕುಶಾವತಿ ಪಾರ್ಕ್ ನಿಂದ ತೀರ್ಥಹಳ್ಳಿಯ ಆಗುಂಬೆ ಬಸ್ ನಿಲ್ದಾಣದವರೆಗೆ ಸಾವಿರಾರು ವಿದ್ಯಾರ್ಥಿಗಳೊಡನೆ ಸರಿ ಸುಮಾರು 2 ಕಿಮೀ ಗಳಷ್ಟು ದೂರ ಮಳೆಯಲ್ಲಿಯೇ ಹೆಜ್ಜೆ ಹಾಕಿದರು. ಪಟ್ಟಣದ ಆಗುಂಬೆ ಬಸ್ ನಿಲ್ದಾಣದ ಬಳಿ ಹರ್ ಘರ್ ತಿರಂಗಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು…

Read More

ಹುಂಚ ಸಮೀಪದಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಗಂಭೀರ ಗಾಯಗೊಂಡ ಯುವಕ : ಆಸ್ಪತ್ರೆಗೆ ದಾಖಲು

ಹುಂಚ :  ಇಲ್ಲಿನ ನಾಗರಹಳ್ಳಿ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರವೊಂದು  ಬಿದ್ದು ವ್ಯಕ್ತಿಯೋರ್ವನಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಹಾಲಂದೂರು ವಾಸಿ ಗುರುರಾಜ ನಿನ್ನೆ ರಾತ್ರಿ ಹುಂಚ-ನಾಗರಹಳ್ಳಿ ಮಾರ್ಗದಲ್ಲಿ ಸಂಚರಿಸುತ್ತಿರುವಾಗ ರಸ್ತೆ ಬದಿಯಲ್ಲಿ ಅವೈಜ್ಞಾನಿಕವಾಗಿ ನೆಟ್ಟಿರುವ ಅಕೇಶಿಯ ಮರ ಏಕಾಏಕಿ ಬಿದ್ದು ಎಡಗೈ ತುಂಡಾಗಿ ಗಂಭೀರ ಗಾಯಗೊಂಡಿದ್ದಾನೆ.ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಹತ್ತಿರದಲ್ಲಿಯೇ ಇರುವ ಆಟೋ ಚಾಲಕ ಅನಂತಭಟ್ ರವರ ಮನೆಯವರೆಗೆ ಗಾಯಾಳು ತೆವಳುತ್ತಾ ಬಂದು ಸಹಾಯಕ್ಕೆ ಕೂಗಿದ್ದಾರೆ.ಕೂಡಲೇ ಆಟೋ ಚಾಲಕ ಅನಂತ್ ಭಟ್ ರವರು ಗಾಯಾಳು ಗುರುರಾಜ್…

Read More

ಅಣೆ ಪ್ರಮಾಣದ ತಪ್ಪು ಕಾಣಿಕೆ ಸಲ್ಲಿಸಲು ಹಾಲಪ್ಪ ಧರ್ಮಸ್ಥಳಕ್ಕೆ ಭೇಟಿ : ಬೇಳೂರು ಅನುಮಾನ /// ಕೆಲವರಿಗೆ ಆಪಾದನೆ ಮಾಡುವುದೇ ಕೆಲಸ : ಹಾಲಪ್ಪ ತಿರುಗೇಟು

ಸಾಗರ: ಈಗ ಶಾಸಕ ಹಾಲಪ್ಪ ಅವರಿಗೆ ಜ್ಞಾನೋದಯ ಆಗಿದೆ. ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ್ದು ತಪ್ಪಾಗಿದೆ ಎಂಬ ಕಾರಣಕ್ಕೆ ಅವರು ತಪ್ಪುದಂಡ ಸಲ್ಲಿಸಲು ಅಲ್ಲಿಗೆ ಹೋಗಿರಬೇಕು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಶಂಕೆ ವ್ಯಕ್ತಪಡಿಸಿದರು. ಇಲ್ಲಿನ ಮಲೆನಾಡು ಸಿರಿ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ವಿಪರೀತ ಮಳೆಯಿಂದ ಮನೆಗಳು ಕುಸಿದು ಹೋಗಿದೆ. ತೋಟದ ಮಣ್ಣು ಕೊಚ್ಚಿ ಹೋಗಿದ್ದರೆ ಗದ್ದೆಗಳ ಮೇಲೆ ನೆರೆಯಿಂದ ಮಣ್ಣು ತುಂಬಿಕೊಂಡಿದೆ. ರೈತರು…

Read More

ಕಾಶ್ಮೀರಿ‌ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುತ್ತಾರೆ – ರಾಷ್ಟ್ರ ಧ್ವಜಕ್ಕೆ ಹಣ ಪಡೆಯುತ್ತಾರೆ -ಮಧು ಬಂಗಾರಪ್ಪ

ಶಿವಮೊಗ್ಗ : ಸೊರಬದಲ್ಲಿ 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ  ಪ್ರತಿ ಜಿಲ್ಲೆಯಲ್ಲಿ 75 ಕಿ ಮೀ ದೂರ ಕ್ರಮಿಸಬೇಕಿದ್ದು ನಾಳೆ ಸೊರಬ ಪಟ್ಟಣದಲ್ಲಿ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಮಧುಬಂಗಾರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ಸಂವಿಧಾನವನ್ನ ತಿದ್ದುಪಡಿ ಬಗ್ಗೆ ಬಿಜೆಪಿ ಮಾತನಾಡುತ್ತಿದ್ದಾರೆ. ಧ್ವಜದ ಬಗ್ಗೆ ಮಾತನಾಡುತ್ತಾರೆ. 150 ಕೋಟಿ ವೆಚ್ಚದಲ್ಲಿ ಧ್ವಜ ಹಂಚಲಾಗುತ್ತಿದೆ. ಧ್ವಜ ಹಂಚುವ ಶಕ್ತಿ ನೀಡಿದ್ದು ಮಹಾತ್ಮ ಗಾಂಧಿಯವರ ಕೊಡುಗೆ ಎಂದು ಗುಡುಗಿದರು. ಕಾಶ್ಮೀರಿ‌ಫೈಲ್ಸ್ ಸಿನಿಮಾಗೆ ತೆರಿಗೆ ಪಡೆಯುತ್ತಾರೆ….

Read More

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಶಾಸಕ ಹರತಾಳು ಹಾಲಪ್ಪ

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಮನೆಗೆ ಸಾಗರ ಕ್ಷೇತ್ರದ ಶಾಸಕ ಹಾಗೂ ಎಂಎಸ್ ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪ ಭೇಟಿ ನೀಡಿ ಸಾಂತ್ವಾನ ಹೇಳಿ ಆರ್ಥಿಕ ಧನಸಹಾಯ ಮಾಡಿದರು. ಪ್ರವೀಣ್ ನೆಟ್ಟಾರು ಕುಟುಂಬದ ಸದಸ್ಯರೊಂದಿಗೆ ಚರ್ಚಿಸಿದ ಅವರು ಸಾಂತ್ವನ ಹೇಳಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದ್ದು, ನ್ಯಾಯ ಸಿಗಲಿದೆ ಎಂಬ ಭರವಸೆ ನೀಡಿ ಪ್ರವೀಣ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶಾಂತಿ ಕೋರಿದರು. ಈ ಸಂಧರ್ಭದಲ್ಲಿ ಸಾಗರ-ಹೊಸನಗರ ತಾಲೂಕ್ ಬಿಲ್ಲವ ಸಮಾಜದ ಬಾಂಧವರು ಹಾಗೂ ಪಕ್ಷದ ಪ್ರಮುಖರು ಇದ್ದರು. ರಾಜ್ಯಸಭಾ…

Read More