ರಿಪ್ಪನ್‌ಪೇಟೆ : ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆನವಳ್ಳಿ ಸರ್ಕಾರಿ ಪಾಠಶಾಲೆಯ ಆಟದ ಮೈದಾನ ಸಮತಟ್ಟು ಕಾಮಗಾರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಹಣ ಮಂಜಾರಾಗಿದ್ದು ಕಳೆದ ಒಂದು ತಿಂಗಳಿಂದ ಕೂಲಿಗಳ ಮೂಲಕ ಕಾಮಗಾರಿ ನಿರ್ವಹಿಸಲಾಗುತ್ತಿತ್ತು.
ಆದರೆ ಸೋಮವಾರ ಮಧ್ಯರಾತ್ರಿಯಲ್ಲಿ ಏಕಾಏಕಿ ಟ್ರ್ಯಾಕ್ಟರ್ ತಂದು ನರೇಗ ಕಾಮಗಾರಿ ನಿರ್ವಹಿಸುವುದನ್ನು ಖಂಡಿಸಿ ಅಧಿಕಾರಿಗಳು ಬರುವವರೆಗೂ ಟ್ರ್ಯಾಕ್ಟರ್ ಹೊರ ಬಿಡದೇ ಪಟ್ಟು ಹಿಡಿದು ಬೆನವಳ್ಳಿಯ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಸುಮಾರು 15 ರಿಂದ 20 ಜನ ಮಹಿಳಾ ಕೂಲಿಗಳ ಮೂಲಕ ನರೇಗಾ ಕಾಮಗಾರಿಯನ್ನು ಕಳೆದ ಒಂದು ತಿಂಗಳ ಕಾಲದಿಂದಲೂ ಮಾಡಲಾಗುತಿದ್ದು ಖಾತ್ರಿ ಯೋಜನೆಯ ಇಂಜಿನಿಯರ್ ಮತ್ತು ಗ್ರಾಮ ಪಂಚಾಯ್ತಿ ಪಿಡಿಓ ಭೇಟಿ ನೀಡಿ ಪರಿಶೀಲನೆ ನಡೆಸಲಾಗುತಿತ್ತು.
ಸೋಮವಾರ ಏಕಾಏಕಿ ಟ್ಯಾಕ್ಟರ್ ತಂದು ಮಧ್ಯರಾತ್ರಿಯಲ್ಲಿ ಕಾಮಗಾರಿ ಮಾಡಲಾಗುತ್ತಿತ್ತು ಕೂಡಲೇ ನರೇಗಾ ಕೂಲಿಕಾರ್ಮಿರು ಮತ್ತು ಗ್ರಾಮಸ್ಥರು ಅನಧಿಕೃತವಾಗಿ ಉದ್ಯೋಗ ಖಾತ್ರಿ ಕಾಮಗಾರಿಯನ್ನು ಮಾಡಲು ಬಂದಂತಹ ಟ್ಯಾಕ್ಟರ್ ತಡೆದು ಪ್ರತಿಭಟಿಸಿದರು.
ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕ್ ಪಂಚಾಯ್ತಿ ಇಓ ಪ್ರವೀಣ್‌ಕುಮಾರ್ ಮತ್ತು ಖಾತ್ರಿ ಯೋಜನಾಧಿಕಾರಿಗಳು ಹಾಗೂ ಇಂಜಿನಿಯರ್ ಮಧ್ಯರಾತ್ರಿಯಲ್ಲಿ ಇಂತಹ ಕೃತ್ಯ ಎಸಗಿರುವುದು ತಪ್ಪು ಮತ್ತು ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಂತ್ರ ಬಳಕೆ ಮಾಡಬಾರದೆಂಬ ನಿಯಮವಿದೆ ಎಂದು ಪ್ರತಿಭಟನಾ ನಿರತರಿಗೆ ವಿವರಿಸಿ ಟ್ಯಾಕ್ಟರ್ ಮತ್ತು ಚಾಲಕನ ವಿರುದ್ಧ ಕೇಸ್ ದಾಖಲಿಸಿ ಕೂಲಿಗಳ ಮೂಲಕವೇ ಕಾಮಗಾರಿ ಮಾಡುವಂತೆ ಪಿಡಿಓಗೆ ಸೂಚಿಸಿ ಖಾತ್ರಿ ಯೋಜನಡೆಯಡಿ ಕಾಮಗಾರಿ ಮಾಡುತ್ತಿರುವ ಕೂಲಿಗಳ ಖಾತೆಗೆ ಹಣ ನೀಡುವಂತೆ ಅದೇಶಿಸಿದರು.
ಪ್ರತಿಭಟನೆಯಲ್ಲಿ ಆಶೋಕ ಬೆನವಳ್ಳಿ,ಪ್ರವೀಣ್,ಸೋಮಶೇಖರ ದೂನ (ರಾಜು),ನಳಿನಾ,ವಿನಯ,ಮಹೇಂದ್ರ,ಬೆನವಳ್ಳಿ ಗ್ರಾಮಸ್ಥರು ಹಾಗೂ ಇನ್ನಿತರರು ಹಾಜರಿದ್ದರು.