ಮರವೇರಿದ್ದ ಹೆಬ್ಬಾವನ್ನು ಸೆರೆ ಹಿಡಿದು, ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟ ಘಟನೆ ಸೊರಬ ತಾಲೂಕಿನ ಜೇಡಗೇರಿ ಸಮೀಪದಲ್ಲಿ ನಡೆದಿದೆ.
ಜೇಡಗೇರಿ-ಚೀಲನೂರು ಸಮೀಪದ ಜೋಳದ ಹೊಲದಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು, ಕೆಲ ನಿಮಿಷಗಳಲ್ಲೇ ಮರವನ್ನೇರಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಟ್ಟಣದ ಮಾರ್ಕೆಟ್ ರಸ್ತೆಯ ಸ್ನೇಕ್ ಅಯಾಝ್ ಮರವನ್ನೇರಿದ್ದ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ.
ಹೆಬ್ಬಾವು ಇರುವ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕರು ತಂಡೋಪ ತಂಡವಾಗಿ ಆಗಮಿಸಿ, ಹೆಬ್ಬಾವನ್ನು ವೀಕ್ಷಿಸಿದರು. ಉಪವಲಯ ಅರಣ್ಯಾಧಿಕಾರಿ ಪರಶುರಾಮ್ ಅವರ ಸಮ್ಮುಖದಲ್ಲಿ ಹೆಬ್ಬಾವನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಯಿತು.