ಕ್ರೈಂ ಸುದ್ದಿ:
ಹಿಜಾಬ್ ವಿಚಾರದಲ್ಲಿ ಬಿಜೆಪಿ ಎಂಎಲ್‌ಸಿ ಅರುಣ್‌ಗೆ ಜೀವ ಬೆದರಿಕೆ ಹಾಕಿದ್ದು ಮುಸ್ಲಿಂ ಯುವಕನ ಹೆಸರಲ್ಲಿ ನಕಲಿ ಪ್ರೊಫ಼ೈಲ್ ಸೃಷ್ಟಿಸಿದ್ದ ಶ್ರೀಕಾಂತ್ : ಆರೋಪಿಯ ಬಂಧನ
ಶಿವಮೊಗ್ಗ: ಬಿಜೆಪಿ ಎಂಎಲ್ ಸಿ ಡಿ. ಎಸ್. ಅರುಣ್ ಅವರಿಗೆ ಮುಸ್ಲಿಂ ವ್ಯಕ್ತಿಯ ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬಾಗಲಕೋಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಸಿದ್ದಾರೂಢ ಶ್ರೀಕಾಂತ್(31) ಎಂದು ಗುರುತಿಸಲಾಗಿದೆ. ಇತ್ತೀಚೆಗಷ್ಟೇ ಶಿವಮೊಗ್ಗದಲ್ಲಿ ನಡೆದ ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಅರುಣ್ ಅವರು ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಫೇಸ್ ಬುಕ್ ನಲ್ಲಿ ಮುಸ್ಲಿಂ ಯುವಕ ಮುಸ್ತಾಕ ಅಲಿ ಹೆಸರಿನಲ್ಲಿ ಬೆದರಿಕೆ…
ಆನಂದಪುರ ಸಮೀಪ ಭೀಕರ ಕಾರು ಅಪಘಾತ : ಓರ್ವ ಸಾವು,ನಾಲ್ವರು ಶಿವಮೊಗ್ಗ ಮೆಗ್ಗಾನ್ ಗೆ ದಾಖಲು
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಚನ್ನಕೊಪ್ಪ ಗ್ರಾಮದಲ್ಲಿ ಮರಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಪಲ್ಟಿ ಹೊಡೆದು ಒಬ್ಬ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಶಿವಮೊಗ್ಗದಿಂದ ಸಾಗರಕ್ಕೆ ಹೊರಟಿದ್ದ ಕಾರು ಎದುರು ಭಾಗದಲ್ಲಿ ಯಾವುದೋ ಗಾಡಿ ಬಂದಿರುವ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ರಸ್ತೆಯಿಂದ ಹತ್ತು ಅಡಿ ದೂರಕ್ಕೆ ಎಸೆಯಲ್ಪಟ್ಟಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಚಾಲಕನ ಪಕ್ಕದ ಸೀಟಿನಲ್ಲಿ ಕುಳಿತಿದ್ದ 65…
ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ !!!
ಸಾಗರ ತಾಲೂಕಿನ ಬ್ರಾಹ್ಮಣ ಮಂಚಾಲೆ ಬಳಿ ಅಪರಿಚಿತ ವ್ಯಕ್ತಿಯೋರ್ವ ಶಾಲೆಗೆ ನಡೆದುಕೊಂಡು ಹೋಗುತ್ತಿದ್ದ ಶಿಕ್ಷಕಿಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಘಟನೆ ನಡೆದಿದೆ. ಬ್ರಾಹ್ಮಣ ಮಂಚಾಲೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರಭಾವತಿ ಅವರು ಬಸ್ಸಿನಿಂದ ಇಳಿದು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೋರ್ವ ಕುತ್ತಿಗೆಯಲ್ಲಿದ್ದ ಸುಮಾರು 2 ಲಕ್ಷ ರೂ. ಮೌಲ್ಯದ 35 ಗ್ರಾಂ ಬಂಗಾರದ ಮಾಂಗಲ್ಯ ಸರ ಹಾಗೂ ಒಂದು ಸರ ಕಿತ್ತುಕೊಂಡು ಶಿಕ್ಷಕಿಯನ್ನು ತಳ್ಳಿ ಪರಾರಿಯಾಗಿದ್ದಾನೆ. ಇದರಿಂದಾಗಿ ಪ್ರಭಾವತಿಯವರ ತಲೆ ಭಾಗದಲ್ಲಿ ತೀವ್ರ…
ಕೆರೆಯಲ್ಲಿ ಮುಳುಗಿ ಯುವಕ ಸಾವು :
ಕೆರೆಯಲ್ಲಿ ಎತ್ತುಗಳ ಮೈತೊಳೆಯಲು ಹೋಗಿ ಯುವಕನೊಬ್ಬ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಸೊರಬ ತಾಲೂಕಿನ ತವನಂದಿ ಗ್ರಾಮದಲ್ಲಿ ಇಂದು ನಡೆದಿದೆ. ತವನಂದಿ ಗ್ರಾಮದ ಪುಟ್ಟಪ್ಪ ಅವರ ಪುತ್ರ ಮಧುಸೂಧನ (23) ಮೃತ ದುರ್ಧೈವಿ. ಗ್ರಾಮದ ದೊಡ್ಡ ಕೆರೆಯಲ್ಲಿ ಎತ್ತುಗಳ ಮೈ ತೊಳೆಯುತ್ತಿದ್ದ ಸಂದರ್ಭದಲ್ಲಿ ಎತ್ತುಗಳು ನೀರಿಗೆ ಎಳೆದಿವೆ. ಈ ವೇಳೆ ಈಜು ಬಾರದೇ ಮಧುಸೂಧನ್ ನೀರಿನಲ್ಲಿ ಮುಳುಗಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಠಾಣೆ ಸಿಬ್ಬಂದಿ ತೆರಳಿ ಸ್ಥಳೀಯರ ಸಹಕಾರದೊಂದಿಗೆ ಸತತ ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿ…
ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲು !!!!
ತೀರ್ಥಹಳ್ಳಿ: ತೀರ್ಥಹಳ್ಳಿಯ ತುಂಗಾ ನದಿಯ ರಾಮ ಮಂಟಪದ ಬಳಿ ನಿನ್ನೆ ಮಧ್ಯಾಹ್ನ ಈಜಲು ಹೋಗಿದ್ದ ಇಬ್ಬರು ಯುವಕರು ನೀರುಪಾಲಾಗಿದ್ದು ಇಂದು ಶವ ಪತ್ತೆಯಾಗಿದೆ. ತುಂಗಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಥಮ ಬಿಎ ವಿದ್ಯಾರ್ಥಿ ಅರಳಸುರಳಿ ಸಮೀಪದ ಬಂದ್ಯಾ ಎಂಬ ಊರಿನ ವರ್ಧನ್ (19) ಹಾಗೂ ಸೊನಲೆಯ ಮಂಜು (20) ನೀರು ಪಾಲಾದವರು ಎಂದು ತಿಳಿದು ಬಂದಿದೆ. ನಿನ್ನೆ ಮಧ್ಯಾಹ್ನ ಇಬ್ಬರೂ ತುಂಗ ನದಿಯಲ್ಲಿ ಈಜಲು ಹೋಗಿದ್ದರು. ನಂತರ ಅವರ ಮೊಬೈಲ್ ಲೊಕೇಶನ್ ಮೂಲಕ ಪತ್ತೆ ಮಾಡಲಾಗಿದ್ದು ಸ್ಥಳದಲ್ಲಿ…
ಪ್ರಿಯಕರ ಉಪನ್ಯಾಸಕನ ಮದುವೆ ದಿನವೇ ಆತ್ಮಹತ್ಯೆಗೆ ಶರಣಾದ ಉಪನ್ಯಾಸಕಿ : ಮದುವೆ ಮಂಟಪದಲ್ಲೆ ವಿಷ ಕುಡಿದ ನವ ವಧು
ಶಿವಮೊಗ್ಗ: ಪ್ರಿಯಕರ ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಕ್ಕೆ ಪ್ರೇಯಸಿ ಮದುವೆ ದಿನವೇ ನೇಣಿಗೆ ಶರಣಾಗಿರುವ ಘಟನೆ ನಗರದ ಓ.ಟಿ.ರಸ್ತೆಯಲ್ಲಿ ನಡೆದಿದೆ. ರೂಪಶ್ರೀ ಮೃತ ದುರ್ದೈವಿ. ರೂಪಶ್ರೀ ಅವರು ಮುರುಳಿ ಎಂಬುವರನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಮುರುಳಿ ಬೇರೆ ಯುವತಿಯ ಜೊತೆ ಮದುವೆ ಆಗಿದ್ದರು. ಇದರಿಂದ ನೊಂದ ರೂಪಶ್ರೀ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಮುರುಳಿ ತನ್ನ ಮನೆಯವರು ನಿಶ್ಚಯಿಸಿದ್ದ ಯುವತಿಯ ಜೊತೆ ಮದುವೆ ಆಗಿದ್ದಾರೆ. ಮದುವೆ ಸಮಾರಂಭ…
ರಿಪ್ಪನ್ ಪೇಟೆ ಸಮೀಪ ಬೆನವಳ್ಳಿಯಲ್ಲಿ ಬೈಕ್ ಅಪಘಾತ : ಯುವಕ ಸಾವು
ರಿಪ್ಪನ್ ಪೇಟೆ ಸಮೀಪದ ಬೆನವಳ್ಳಿ ತಿರುವಿನಲ್ಲಿ ಬೈಕ್ ಅಪಘಾತವಾಗಿ ಆಯನೂರು ಮೂಲದ ಯುವಕನೋರ್ವ ಮೃತಪಟ್ಟಿರುವ ಘಟನೆ ಇಂದು ಸಂಜೆ ನಡೆದಿದೆ. ಆಯನೂರು ಸಮೀಪದ ಇಟ್ಟಿಗೆಹಳ್ಳಿ ನಿವಾಸಿ ಸುದರ್ಶನ್(25) ಎಂಬ ಯುವಕ ಮೃತಪಟ್ಟ ದುರ್ದೈವಿ. ರಿಪ್ಪನ್ ಪೇಟೆ ಕಡೆಯಿಂದ ಆಯನೂರು ಕಡೆಗೆ ಟಿವಿಎಸ್ ಅಪಾಚೆ ಬೈಕ್ (KA 14 EP 9884) ನಲ್ಲಿ ತೆರಳುತ್ತಿರುವಾಗ ಬೆನವಳ್ಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸ್ಕಿಡ್ ಆಗಿದೆ ಈ ಸಂಧರ್ಭದಲ್ಲಿ ಹಿಂಬದಿ ಕುಳಿತಿದ್ದ ಆಯನೂರು ಸಮೀಪದ ಇಟ್ಟಿಗೆಹಳ್ಳಿ ನಿವಾಸಿ ಸುದರ್ಶನ್ ಕೆಳಗೆ…
ಶಿವಮೊಗ್ಗದ ಎನ್ ಟಿ ರಸ್ತೆಯಲ್ಲಿ ಮಾರಾಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ : ಇಬ್ಬರು ಅರೆಸ್ಟ್
ಹಳೆ ದ್ವೇಷದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಯುವಕನೊಬ್ಬನ ಹತ್ಯೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದ ಯುವಕ ಮೃತಪಟ್ಟಿದ್ದಾನೆ. ಟಿಪ್ಪುನಗರ ನಿವಾಸಿ ಜಿಕೃಲ್ಲಾ ಖಾನ್ (28) ಮೃತ ವ್ಯಕ್ತಿ. ಎನ್.ಟಿ.ರಸ್ತೆಯ ಫಲಕ್ ಶಾದಿ ಮಹಲ್ ಬಳಿ ಶನಿವಾರ ರಾತ್ರಿ ಘಟನೆ ಸಂಭವಿಸಿದೆ. ಫಲಕ್ ಶಾದಿ ಮಹಲ್ ಬಳಿ ಜಿಕೃಲ್ಲಾ ಖಾನ್ ಮೇಲೆ ಟ್ವಿಸ್ಟ್ ಇಮ್ರಾನ್, ಗ್ಯಾಸ್ ಇಮ್ರಾನ್, ವಸೀಮ್, ಶಹಬಾಜ್, ರುಮಾನ್, ವಸೀಮ್, ಕಾಲಾ ವಸೀಮ್ ಮತ್ತು ನಬೀಲ್ ಎಂಬುವವರು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಜಿಕೃಲ್ಲಾ ಖಾನ್’ನನ್ನು ಮೆಗ್ಗಾನ್…
ಬಸ್ ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಅಪಘಾತ : ಬೈಕ್ ಸವಾರ ಸಾವು
ಸಾಗರ ತಾಲ್ಲೂಕು ಕುಗ್ವೆ ಬಳಿಯ ತಿರುವಿನಲ್ಲಿ ಬಸ್ ಮತ್ತು ದ್ವಿಚಕ್ರ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಬಸ್ ಹಾಗೂ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಸಾಗರ ಸಮೀಪದ ತಲವಾಟ ಗ್ರಾಮ ಪಂಚಾಯಿತಿ ಇಡುವಾಣಿ ಗ್ರಾಮದ ವಾಸಿಯಾದ ದ್ವಿಚಕ್ರ ವಾಹನ ಸವಾರ ಅನಿಲ್ ಎಂಬುವವನು ಮೃತಪಟ್ಟಿದ್ದು.ಮೃತ ವ್ಯಕ್ತಿಯ ತಂದೆ ಈಶ್ವರ ಎಂಬುವವರು ಗಂಭೀರ ಗಾಯಗೊಂಡಿದ್ದು ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ…
ಸಾಗರದ ಬಿಜೆಪಿ ಮುಖಂಡ ಅನುಮಾನಾಸ್ಪದವಾಗಿ ಸಾವು
ಸಾಗರ: ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷನೋರ್ವ ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಮರತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಶಿರೂರು ಆಲಳ್ಳಿ ವಾಸಿಯಾದ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷ ಅಣ್ಣಪ್ಪ ಅವರು ನಗರದ ಹೆಲಿಪ್ಯಾಡ್ ಬಳಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿನ ಹಿಂದೆ ಹತ್ತು ಹಲವಾರು ಅನುಮಾನಗಳು ಮೂಡಿದೆ. ಸಾಗರ ಉಪ ವಿಭಾಗದ ಎಎಸ್‌ಪಿ ರೋಹನ್ ಜಗದೀಶ್, ಸಾಗರ ಗ್ರಾಮಾಂತರ ಠಾಣೆಯ ಸಿಪಿಐ ಗಿರೀಶ್, ಅಪರಾಧ ವಿಭಾಗದ ಸುಜಾತ, ಶಿವಮೊಗ್ಗ…