ಕ್ರೈಂ ಸುದ್ದಿ:
ಸಾಗರದ ಹೆಲಿಪ್ಯಾಡ್ ಸಮೀಪದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ :
ಶಿವಮೊಗ್ಗ ಜಿಲ್ಲೆ ಸಾಗರದ ಹೆಲಿಪ್ಯಾಡ್ ನ ಅರಣ್ಯ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಬೈಕ್ ನ್ನು ಹೆಲಿಪ್ಯಾಡ್ ನಲ್ಲಿ ಕೆಳಗೆ ಬೀಳಿಸಿ ಅಲ್ಲೆ ಪಕ್ಕದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ತಾಳಗುಪ್ಪ ಸಮೀಪದ ಶಿರೂರು ಹಳ್ಳಿಯ ನಿವಾಸಿ ಅಣ್ಣಪ್ಪ ( 33 ) ವರ್ಷ ಎಂದು ಗುರುತು ಪತ್ತೆಯಾಗಿದ್ದು ಸ್ಥಳಕ್ಕೆ ಸಾಗರ ಗ್ರಾಮಾಂತರ ಪೊಲೀಸರು ಧಾವಿಸಿ ತನಿಖೆ ಕೈಗೊಂಡಿದ್ದಾರೆ.
ಸಾಗರ ಗ್ರಾಮಾಂತರ ಪೊಲೀಸರ ಮಿಂಚಿನ ಕಾರ್ಯಾಚರಣೆ : ಲಾರಿ ಕದ್ದು ಪರಾರಿಯಾದವರು 10 ದಿನಗಳಲ್ಲೇ ಅರೆಸ್ಟ್…!
ಸಾಗರ: ಅಂದಾಜು 7.50 ಲಕ್ಷ ಮೌಲ್ಯದ ಲಾರಿಯನ್ನು ಕದ್ದು ಪರಾರಿಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಪ್ರಕರಣ ದಾಖಲಾದ ಹತ್ತೇ ದಿನಗಳಲ್ಲಿ ಪತ್ತೆ ಹಚ್ಚಲು ಯಶಸ್ವಿಯಾಗಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ನಿವಾಸಿ ಬಿ.ಕೆ.ಕರಿಬಸಪ್ಪ ಅಲಿಯಾಸ್ ಕರಿಯ(32) ಎಂಬಾತನೇ ಬಂಧಿತ ಆರೋಪಿ. ಈತನ ಬಳಿಯಿಂದ ಕದ್ದಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಘಟನೆ ವಿವರ: ಆನಂದಪುರ ದಾಸಕೊಪ್ಪ ಗ್ರಾಮದ ವಾಸಿಯೊಬ್ಬರ ಲಾರಿಯನ್ನು ಮಾರ್ಚ್ 3ರಂದು ರಾತ್ರಿ ಹೊತ್ತಲ್ಲಿ ಕಳ್ಳತನ ಮಾಡಲಾಗಿತ್ತು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸಾಗರ ಗ್ರಾಮಾಂತರ ಠಾಣೆಯ ವೇರಿ ಸ್ಮಾರ್ಟ್…
ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದ ಆರೋಪಿಯ ಬಂಧನ
ರಬ್ಬರ್ ಕಾಡಿನಲ್ಲಿರುವ ಮನೆಯೊಂದರಲ್ಲಿ ಲಕ್ಷಾಂತರ ರೂ ಮೌಲ್ಯದ ನಗದು ಮತ್ತು 134 ಗ್ರಾಂನ ಚಿನ್ನ ಆಭರಣ ಗಳನ್ನ ಕಳವು ಮಾಡಿರುವ ಆರೋಪಿಯನ್ನ ಬಂಧಿಸಿ ಕಳವು ಮಾಡಿದ ನಗದು ಮತ್ತು ಚಿನ್ನಾಭರವಣವನ್ನು ವಶಪಡಿಸಿಕೊಳ್ಳಲಾಗಿದೆ. ಜ.13 ರಂದು ಭದ್ರಾವತಿ ಬಳಿಯ ರಬ್ಬರ್ ಕಾಡಿನ ನಿವಾಸಿ ಪದ್ಮಾ ಎಂಬುವವರ ಮನೆಯಲ್ಲಿ ಮಧ್ಯಾಹ್ನ ಯಾರೂ ಇಲ್ಲದ ಸಮಯದಲ್ಲಿ 6 ಲಕ್ಷ ನಗದು ಮತ್ತು 5.66 ಲಕ್ಷ ರೂ ಮೌಲ್ಯದ 134.44 ಗ್ರಾಂ ಚಿನ್ನಾಭರಣವನ್ನ ಕಳವು ಮಾಡಲಾಗಿತ್ತು. 6 ಲಕ್ಷ ಹಣವನ್ನ ಪದ್ಮಾ ರವರು…
ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ : ಯುವಕ ಸಾವು
ರಿಪ್ಪನ್ ಪೇಟೆ : ಇಲ್ಲಿನ ಸಮೀಪದ ಅರಸಾಳು – ಬೆನವಳ್ಳಿ ನಡುವಿನ ರಸ್ತೆಯಲ್ಲಿ ನಿನ್ನೆ ರಾತ್ರಿ ಟೊಯೋಟಾ ಇಟಿಯೋಸ್ ಕಾರ್ ಹಾಗೂ ಬಜಾಜ್ ಡಿಸ್ಕವರ್ ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಅರಸಾಳು ಗ್ರಾಮದ ನಿವಾಸಿ ಹಾಗೂ ರಿಪ್ಪನ್ ಪೇಟೆ MSIL ಸಂಸ್ಥೆಯ ಉದ್ಯೋಗಿಯಾಗಿದ್ದ ನವೀನ್ (36) ಮೃತಪಟ್ಟಿದ್ದಾರೆ. ಶಿವಮೊಗ್ಗ ಕಡೆಯಿಂದ ಬರುತ್ತಿದ್ದ ಟೊಯೋಟಾ ಕಾರು ಹಾಗೂ ರಿಪ್ಪನ್ ಪೇಟೆಯಲ್ಲಿ ಕರ್ತವ್ಯ ನಿರ್ವಹಿಸಿ ಮನೆಗೆ ತೆರಳುತಿದ್ದಾಗ ಬೆನವಳ್ಳಿ ಸಮೀಪದಲ್ಲಿ ಈ ದುರ್ಘಟನೆ ನಡೆದಿದೆ. ರಿಪ್ಪನ್ ಪೇಟೆ ಪೊಲೀಸ್…
ಸಿಗಂದೂರು ದೇವಸ್ಥಾನಕೆ ಬಂದಿದ್ದ ಭಕ್ತಾಧಿಗಳ ಜೀಪ್ ಕಂದಕಕ್ಕೆ ಉರುಳಿ ಓರ್ವ ಮಹಿಳೆ ಸಾವು : ಉಳಿದ ಪ್ರಯಾಣಿಕರ ಸ್ಥಿತಿ ಗಂಭೀರ
ಸಾಗರ ತಾಲೂಕಿನ ತುಮರಿ ಬಳಿಯ ವಕ್ಕೋಡಿ ತಿರುವಿನಲ್ಲಿ ಕಂದಕಕ್ಕೆ ಟೆಂಪೋ ಟ್ರ್ಯಾಕ್ಸ್ ಉರುಳಿ ಬಿದ್ದು ಓರ್ವ ಮಹಿಳೆ ಮೃತ ಪಟ್ಟಿರುವ ಘಟನೆ ನಡೆದಿದೆ. ಸಿಗಂದೂರು ದೇವಾಲಯಕ್ಕೆ ಆಗಮಿಸುತ್ತಿದ್ದ ಕುಷ್ಟಗಿಯ ಭಕ್ತಾದಿಗಳು ಇದ್ದ ಜೀಪ್ ಕಂದಕಕ್ಕೆ ಬಿದ್ದು ಗೌರಮ್ಮ ಎನ್ನುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನುಳಿದವರಿಗೆ ತುಮರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಸಾಗರ ಆಸ್ಪತ್ರೆಗೆ ಕಳುಹಿಸಲಾಗಿದೆ. ಇವತ್ತು ದ್ವೀಪದಲ್ಲಿ ಎರಡು ಅಫಘಾತವಾದ ಕಾರಣ 108 ಮೊದಲ ಅಫಘಾತಕ್ಕೆ ಸೇವೆ ನೀಡಲು ಕುಂದಾಪುರ ಹೋದ ಕಾರಣ ಲಭ್ಯವಾಗಲಿಲ್ಲ. ಜಂಟಿ 108…
ಎರಡು ಬೈಕ್ ಗಳ ನಡುವೆ ಡಿಕ್ಕಿ : ಒಬ್ಬ ವ್ಯಕ್ತಿ ಸ್ಥಳದಲ್ಲೇ ಸಾವು, ಇಬ್ಬರು ಗಂಭೀರ
ಸಾಗರ ತಾಲೂಕಿನ ಸುರುಗುಪ್ಪೆ ಕೆರೆ ಏರಿ ಮೇಲೆ ದ್ವಿಚಕ್ರ ವಾಹನಗಳ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದೆ . ಸೊರಬ ತಾಲೂಕಿನ ಬಂದಿಗೆ ನಿವಾಸಿಗಳಾದ ನಾಗಪ್ಪ (42)ಹಾಗೂ ಅವರ ಪುತ್ರ ಲೋಹಿತ್(16) ಸಣ್ಣ ಮನೆ ಗ್ರಾಮದೇವತೆಯ ಜಾತ್ರೆಗೆ ಆಗಮಿಸುತ್ತಿರುವ ಸಂದರ್ಭದಲ್ಲಿ ಯಲಕುಂದ್ಲಿ ನಿವಾಸಿ ಕಿರಣ್(20) ಮನೆಗೆ ಹೋಗುವ ಸಂದರ್ಭದಲ್ಲಿ ಇಬ್ಬರ ದ್ವಿಚಕ್ರವಾಹನ ಮುಖಾಮುಖಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ನಾಗಪ್ಪ (42) ಸ್ಥಳದಲ್ಲೇ ಮೃತಪಟ್ಟಿದ್ದು ಲೋಹಿತ್(16) ಹಾಗೂ ಕಿರಣ್(20) ರವರ ಸ್ಥಿತಿ…
ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಲಾರಿ : ಲಾರಿ ಕ್ಲೀನರ್ ಸ್ಥಳದಲ್ಲೇ ಸಾವು…!!!
ಆನಂದಪುರ ಸಮೀಪದ ಹೊಸಗುಂದ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಭೀಕರ ಅಪಘಾತವಾಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಸಗುಂದ ಬಳಿ ಶಿವಮೊಗ್ಗದಿಂದ ಸಾಗರಕ್ಕೆ ಹೊರಟಿದ್ದ ಲಾರಿ (KA 05 AA 5068 ) ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಕಂದಕಕ್ಕೆ ಗುದ್ದಿದ ಪರಿಣಾಮ ಲಾರಿ ಕ್ಲೀನರ್ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ.ಮೃತರ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಈ ಅಪಘಾತದಲ್ಲಿ ಲಾರಿ ಡ್ರೈವರ್ ಸ್ಥಿತಿ ಚಿಂತಾಜನಕವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ….
ಕಾಡು ಹಂದಿ ಭೇಟೆ : ಮಾಂಸ ಸಹಿತ ಐವರ ಬಂಧನ
ಕಾಡುಹಂದಿ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಐವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಹೆಡದಾಳು ಗ್ರಾಮದಲ್ಲಿ ನಡೆದಿದೆ. ಹೆಡದಾಳು ಗ್ರಾಮದ ಮಧುಕುಮಾರ್, ಈರೇಶ ಜಯಪ್ಪ, ಕೃಷ್ಣ, ವಿಜಯ ಕುಮಾರ್ ಬಂಧಿತ ಆರೋಪಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಕ್ಷ್ಮೀಪುರ ಸಮೀಪದ ಲಕ್ಯಾ ಕ್ರಾಸ್ ಬಳಿ ಆಲ್ಟೋ ಕಾರನ್ನು ತಡೆದು ಶೋಧಿಸಿದಾಗ ಕಾಡು ಹಂದಿ ಮಾಂಸ ಪತ್ತೆಯಾಗಿದ್ದು, ಬಂಧಿತರಿಂದ 23 ಕೆಜಿ ಮಾಂಸ, ಬಂದೂಕು, ಸಜೀವ ಗುಂಡುಗಳು, ಕತ್ತಿ ಇತರೆ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಿಪ್ಪನ್ ಪೇಟೆ ಸಮೀಪ ಕ್ಯಾಂಟರ್ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಯುವಕ ಸಾವು
ರಿಪ್ಪನ್‌ಪೇಟೆ :ಇಲ್ಲಿನ ಸಮೀಪದ ಮೂಗುಡ್ತಿ ಗ್ರಾಮದ ಕಣಬಂದೂರು ತಿರುವಿನಲ್ಲಿ ನಡೆದ ಕ್ಯಾಂಟರ್ ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಹೆದ್ದಾರಿಪುರದ ಪುನೀತ್ (25) ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ನಡೆದಿದೆ. ರಿಪ್ಪನ್‌ಪೇಟೆಯ ದೇವಿ ಕೋಳಿ ಫಾರಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುನೀತ್ ರಾತ್ರಿ 9.30 ರ ವೇಳೆಗೆ ಹೆದ್ದಾರಿಪುರದ ಮನೆಗೆ ಹೋಗುವಾಗ ಮೂಗುಡ್ತಿಯ ಕಣಬಂದೂರು ತಿರುವಿನಲ್ಲಿ ಈ ಅವಘಡ ಸಂಭವಿಸಿದ್ದು ಸ್ಥಳದಲ್ಲೇ ಬೈಕ್ ಸವಾರ ಪುನೀತ್ ತಲೆ ಮೇಲೆ ಕ್ಯಾಂಟರ್ ಲಾರಿ ಹರಿದ ಪರಿಣಾಮ ಮೃತಪಟ್ಟಿದ್ದಾನೆ….
ಕರ್ತವ್ಯ ವೇಳೆ ಕುಸಿದು ಬಿದ್ದ ಶಿವಮೊಗ್ಗದ ಸ್ಟಾಫ್ ನರ್ಸ್ ಸಾವು : ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ
ಶಿವಮೊಗ್ಗ : ಮೆದುಳು ನಿಷ್ಕ್ರಿಯಗೊಂಡಿದ್ದ ಶಿವಮೊಗ್ಗದ ಸ್ಟಾಫ್ ನರ್ಸ್ ಟಿ.ಕೆ. ಗಾನವಿ (22) ಅವರ ಅಂಗಾಂಗಗಳನ್ನು ಪೋಷಕರು ದಾನ ಮಾಡಿದ್ದಾರೆ. ಗಾನವಿ ಅವರು ಕರ್ತವ್ಯದ ವೇಳೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಬೆಂಗಳೂರಿನ ಗ್ಯಾಸ್ಟೊ್ರೕ ಎಂಟರಾಲಜಿ ಸೈನ್ಸಸ್ ಆ್ಯಂಡ್ ಆರ್ಗನ್ ಟ್ರಾನ್ಸ್‌ಪ್ಲಾಂಟ್ ಸಂಸ್ಥೆಗೆ ಕರೆತರಲಾಯಿತು. ಈ ವೇಳೆ ವೈದ್ಯರು ಮಿದುಳು ನಿಷ್ಕ್ರಿಯವಾಗಿರುವುದಾಗಿ ತಿಳಿಸಿದರು. ಇದರಿಂದ ಪೋಷಕರು ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತಾಯಿ ಮತ್ತು ಅಕ್ಕ ಅಂಗಾಂಗ ದಾನಕ್ಕೆ ಸಹಿ ಮಾಡುವ ಮೂಲಕ ಹಲವರಿಗೆ…