ಕ್ರೈಂ ಸುದ್ದಿ:
ಕೋಡೂರು ಸಮೀಪದ ಕಾಡಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪುರುಷನ ಶವ ಪತ್ತೆ :
ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಸಿದ್ದಗಿರಿ ಸಮೀಪದ ಕ್ವಾರೆ ಕ್ರಾಸ್ ಗ್ರಾಮದಲ್ಲಿ ಸುಮಾರು 50 ರ ಪ್ರಾಯದ ಆಸುಪಾಸಿನ ವ್ಯಕ್ತಿಯ ಶವ ದೊರೆತಿದೆ. ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಇನ್ನೂ ಗುರುತು ಪತ್ತೆಯಾಗಿಲ್ಲ.ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಸ್ಥಳಕ್ಕೆ ರಿಪ್ಪನ್ ಪೇಟೆ ಪೊಲೀಸರು ದೌಡಾಯಿಸಿದ್ದು ತನಿಖೆ ಪ್ರಾರಂಭಿಸಿದ್ದಾರೆ. ಮೃತ ವ್ಯಕ್ತಿಯ ಬಗ್ಗೆಗಿನ ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
ತರಕಾರಿ ಸಾಗಾಣಿಕೆ ವಾಹನ ಬೈಕ್ ಗೆ ಢಿಕ್ಕಿ: ಇಬ್ಬರು ಸಾವು
ಸೊರಬ: ತರಕಾರಿ ಸಾಗಾಣಿಕೆ ವಾಹನ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕರ್ಜಿಕೊಪ್ಪ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಶಿಕಾರಿಪುರ ತಾಲೂಕಿನ ಕರ್ನಲ್ಲಿ ಗ್ರಾಮದ ರುದ್ರಗೌಡ ಮಲ್ಲೇಶಗೌಡ(50) ಹಾಗೂ ಭರಮಗೌಡ ಚಂದ್ರಪ್ಪ ( 35) ಮೃತ ದುರ್ದೈವಿಗಳು. ಶಿರಾಳಕೊಪ್ಪ ಮಾರ್ಗವಾಗಿ ಸಾಗರದೆಡೆಗೆ ತೆರಳಿತ್ತಿದ್ದ ತರಕಾರಿ ಸಾಗಾಣಿಕೆ ವಾಹನ ಎದುರಿಗೆ ಬರದುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ…
ಸಾಗರದ ಹೆಸರಾಂತ ವೈದ್ಯೆಯ ಶವ ಗಣಪತಿ ಕೆರೆಯಲ್ಲಿ ಪತ್ತೆ :
ಸೋಮವಾರ ರಾತ್ರಿ ಶಿವಮೊಗ್ಗ ಜಿಲ್ಲೆ ಸಾಗರ ನಗರದ ಗಣಪತಿ ಕೆರೆಯಲ್ಲಿ ವೈದ್ಯರ ಶವ ಪತ್ತೆಯಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಜಂಬಗಾರಿನ ನಿವಾಸಿ ಡಾ. ಶರ್ಮದಾ(36) ಮೃತಪಟ್ಟ ವೈದ್ಯೆಯಾಗಿದ್ದು, ಇವರು ಸೋಮವಾರ ರಾತ್ರಿ ತಮ್ಮ ಕ್ಲಿನಿಕ್ ಬಂದ್ ಮಾಡಿಕೊಂಡು ಬೈಕಿನಲ್ಲಿ ಹೊರಟವರು ರಾತ್ರಿಯಾದರೂ ಮನೆ ತಲುಪಿರಲಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಆಕೆಯ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಗಣಪತಿ ಕೆರೆ ಬಳಿ ಶರ್ಮದಾ ಅವರ ಬೈಕ್ ವಾಹನ ಪತ್ತೆಯಾಗಿತ್ತು. ತಕ್ಷಣ ಕೆರೆಯಲ್ಲಿ ಶೋಧಕಾರ್ಯ…
ತೀರ್ಥಹಳ್ಳಿ ಗನ್ ಶಾಟ್ ಪ್ರಕರಣ ಎಪ್ ಐ ಆರ್ ದಾಖಲು : ಘಟನೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕಾಂತರಾಜ್ ಕುಟುಂಬಸ್ಥರು
ತೀರ್ಥಹಳ್ಳಿ : ಗುಂಡೇಟಿಗೆ ಬಲಿಯಾದ ನೊಣಬೂರು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಕಾಂತರಾಜು ಅವರು ಗುಂಡೇಟು ತಗುಲಿ ಸಾವನ್ನಪ್ಪಿದ್ದಾರೆ ಪ್ರಕರಣ ದಾಖಲಾಗಿದೆ. ಎಫ್ಐಆರ್ ನಲ್ಲಿ ಕಾಂತರಾಜು ರವರ ಸಾವಿನ ಬಗ್ಗೆ ಅನುಮಾನವಿದೆ ಎಂದು ಮಾತ್ರ ದಾಖಲಾಗಿದೆ. ಕಾಂತರಾಜ್ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅವರ ದೊಡ್ಡಪ್ಪನ ಮಗ ಗಣೇಶ್ ಸೂಕ್ತ ತನಿಖೆ ನಡೆಸುವಂತೆ ಕೋರಿದ್ದಾರೆ. ನಿನ್ನೆ ಮಧ್ಯಾಹ್ನ ಶಿರಿಗಾರು ನಿವಾಸಿ ಕಾಂತರಾಜು ಮನೆಯಿಂದ ಯಾವುದೋ ಕೆಲಸದ ಮೇಲೆ ಹೊರ ಹೋಗುವಾಗ ಹೊಸಕೇರಿ, ಅತ್ತಿಗಾರಿಗೆ ಹೋಗುವ ರಸ್ತೆಯಲ್ಲಿ…
ರಿಪ್ಪನ್ ಪೇಟೆಯಲ್ಲಿ ಹಾಡಹಗಲೇ ಮಹಿಳೆಯ ಸರಗಳ್ಳತನ :
ರಿಪ್ಪನ್‌ಪೇಟೆ : ಪಟ್ಟಣದ ಶಿವಮೊಗ್ಗ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಜನನಿಬಿಡ ಪ್ರದೇಶದಲ್ಲಿಯೋ ಮಹಿಳೆಯೊಬ್ಬರ ಚಿನ್ನದ ಮಾಂಗಲ್ಯ ಸರವನ್ನು ಇಬ್ಬರು ಯುವಕರು ಕಸಿದುಕೊಂಡು ಹೋಗಿರುವ ಘಟನೆ ನಡೆದಿದೆ. ಪಟ್ಟಣದ ಶಿವಮೊಗ್ಗ ರಸ್ತೆಯ ಪೆಟ್ರೋಲ್ ಬಂಕ್ ಬಳಿ ಸಣ್ಣ ದಿನಸಿ ಅಂಗಡಿ ಇಟ್ಟುಕೊಂಡಿರುವ ಜಯಮ್ಮ ಎಂಬುವವರು ಸರ ಕಳೆದು ಕೊಂಡವರು. ನಡೆದಿದ್ದೇನು ??? ಇಂದು ಸಂಜೆ 4.30 ರ ಸಮಯ ಜಯಮ್ಮ ರವರು ತಮ್ಮ ಮೈಲಾರಲಿಂಗೇಶ್ವರ ಜನರಲ್ ಸ್ಟೋರ್ ನಲ್ಲಿ ಒಬ್ಬರೇ ಇದ್ದಾಗ ಕೆಟಿಎಂ ಡ್ಯೂಕ್ ಬೈಕ್ ನಲ್ಲಿ…
80 ಸಾವಿರ ರೂ ಸಾಲಕ್ಕೆ ಹೆದರಿ ಕ್ರಿಮಿನಾಶಕ ಸೇವಿಸಿ ರೈತ ಆತ್ಮಹತ್ಯೆ !!!
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರ ಸಮೀಪದ ಬ್ಯಾಡರ ಕೊಪ್ಪದ ರೈತ ಮರಿಯಪ್ಪ ಸಾವನ್ನಪ್ಪಿರುವ ದುರ್ದೈವಿ ರೈತ. ಶುಂಠಿಗೆ ಹೊಡೆಯುವ ಕಳೆನಾಶಕವನ್ನು ಸೇವಿಸಿದ್ದ ಮರಿಯಪ್ಪ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಎಂಬತ್ತು ಸಾವಿರ ರೂಪಾಯಿ ಸಾಲ ಮಾಡಿದ್ದರು ಎಂಬ ಮಾಹಿತಿ ತಿಳಿದುಬಂದಿದೆ. ಇವರ ಮಗ ಲಿಂಗರಾಜು ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಗುಂಡಿನ ಸದ್ದು : ನೊಣಬೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಸಾವು
ಬೇಟೆಯಾಡಲು ಹೋದವರಿಂದ ಹಾರಿದ ಗುಂಡೊಂದು ಮಾಜಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷನನ್ನ ಬಲಿಪಡೆದಿದೆ.ಈ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ತೀರ್ಥಹಳ್ಳಿಯ ನೊಣಬೂರು ಮತ್ತು ಅರಳಸುರಳಿ ಗ್ರಾಮ ಪಂಚಾಯಿತಿ ನಡುವಿನ ಅರಣ್ಯ ಪ್ರದೇಶದಲ್ಲಿ ಬೇಟೆಯಾಡಲು ಬಂದಿದ್ದವರಿಂದ ಹಾರಿದ ಗುಂಡೊಂದು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ನಿಗೆ ತಗುಲಿದೆ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾಂತರಾಜು(38) ಎಂಬುವರು ಗುಂಡಿಗೆ ಬಲಿಯಾಗಿದ್ದಾರೆ. 12 ಜನರ ಗುಂಪೊಂದು ಬೆಟೆಯಾಡಲು ಹೋಗಿ ಮಿಸ್ ಫೈರ್ ಆಗಿ ಕಾಂತರಾಜು ಸಾವಿಗೆ ಕಾರಣ ಎನ್ನಲಾಗುತ್ತಿದೆ. ಗುಂಡು ಹಾರಿಸಿದ 12 ಜನರು ಯಾರು…
ಕರ್ತವ್ಯ ನಿರತವಾಗಿದ್ದಲೇ ವಿದ್ಯುತ್ ಪ್ರವಹಿಸಿ, ಲೈನ್ ಮ್ಯಾನ್ ಸಾವು
ಶಿವಮೊಗ್ಗ: ಟ್ರಾನ್ಸ್ ಫಾರ್ಮರ್ ತೊಂದರೆಯಿಂದಾಗಿ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದಂತ ಸಂದರ್ಭದಲ್ಲಿಯೇ ವಿದ್ಯುತ್ ಪ್ರವಹಿಸಿ, ಲೈನ್ ಮ್ಯಾನ್ ಸಾವನ್ನಪ್ಪಿರೋ ಘಟನೆ, ಸೊರಬ ತಾಲೂಕಿನ ಉಳವಿ ಹತ್ತಿರದ ದೂಗೂರು ಬಳಿಯ ಭದ್ರಾಪುರದಲ್ಲಿ ನಡೆದಿದೆ. ಸೊರಬ ತಾಲೂಕಿನ ದೂಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭದ್ರಾಪುರದಲ್ಲಿ ವಿದ್ಯುತ್ ಸಮಸ್ಯೆಯಿಂದಾಗಿ ನಿನ್ನೆ ಟ್ರಾನ್ಸ್ ಫಾರ್ಮರ್ ಬಳಿಯಲ್ಲಿ ಉಳವಿ ಮೆಸ್ಕಾಂ ಶಾಖೆಯ ಲೈನ್ ಮ್ಯಾನ್, ಗದಗ ಜಿಲ್ಲೆಯ ಗಜೇಂದ್ರಗಡದ ರವಿ ಬೀರಪ್ಪ ಚವ್ಹಾಣ್ (32) ಕೆಲಸ ನಿರತರಾಗಿದ್ದರು. ಈ ವೇಳೆ 11 ಕೆವಿ ಮಾರ್ಗದ ವಿದ್ಯುತ್…
ಹಾವು ಕಚ್ಚಿ ಗೃಹಿಣಿ ಸಾವು :
ಹೊಸನಗರ ಪಟ್ಟಣದ ಸಮೀಪದ ಮೇಲಿನಬೆಸಿಗೆ ಗ್ರಾಮದ ಮಹಿಳೆಯೊಬ್ಬಳಿಗೆ ಅಡುಗೆ ಮನೆಯಲ್ಲಿ ಹಾವು ಕಚ್ಚಿದ ಪರಿಣಾಮ ಮೃತಪಟ್ಟಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ. ಮೇಲಿನಬೆಸಿಗೆ ನಿವಾಸಿ ನಾಗರಾಜ್ ಎಂಬುವವರ ಪತ್ನಿ ಸೌಮ್ಯ (24) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಸೌಮ್ಯ ಬುಧವಾರ ಮಧ್ಯಾಹ್ನ ಅಡುಗೆ ಮಾಡಲು ಅಡುಗೆ ಮನೆಗೆ ತೆರಳಿದಾಗ ಅವರ ಕಾಲಿಗೆ ಹಾವು ಕಚ್ಚಿದ್ದು ಅವರ ಗಮನಕ್ಕೆ ಬಂದಿರಲಿಲ್ಲ.ಕೆಲ ಹೊತ್ತಿನಲ್ಲಿಯೇ ಹಾವು ಕಚ್ಚಿದ ಜಾಗದಲ್ಲಿ ತೀವ್ರತರ ಬಾಧೆಯಾಗಲು ಶುರುವಾದಗ ಮನೆಯವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಮನೆಯವರು ಹಾವು ಕಚ್ಚಿರಬೇಕೆಂಬ ಶಂಕೆಯಿಂದ…
ಆನಂದಪುರ ಸಮೀಪ ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ದಂಪತಿಗಳಿಗೆ ಗಾಯ :
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಇರುವಕ್ಕಿಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಮರ ಬಿದ್ದು ಅನಾಹುತ ಸಂಭವಿಸಿದೆ. ಅಮಟೆಕೊಪ್ಪ ದಿಂದ ಹಾಲುಗುಡ್ಡೆಗೆ ಗೃಹಪ್ರವೇಶದ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಇರುವಕ್ಕಿ ಬಳಿ ಬೈಕ್ ನಲ್ಲಿ ಕೂತಿದ್ದ ಗಂಡ ಹೆಂಡತಿಯ ಮೇಲೆ ಚಲಿಸುತ್ತಿರುವಾಗಲೇ ಬೃಹತ್ ಆಕಾರದ ಮರ ಬಿದ್ದು ಬೈಕ್ ಸವಾರರಿಗೆ ತೀವ್ರ ಗಾಯವಾಗಿದೆ ತಕ್ಷಣ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗುತ್ತಿದ್ದು ಸ್ಥಳೀಯರ ಸಹಕಾರದಿಂದ ಇಬ್ಬರ ಜೀವ ಉಳಿದಂತಾಗಿದೆ. ಬೈಕ್ ಇದೀಗ ಮರದಡಿ ಅಪ್ಪಚ್ಚಿಯಾಗಿದ್ದು ತೆರವುಗೊಳಿಸುವ ಕಾರ್ಯ…