ಕ್ರೈಂ ಸುದ್ದಿ:
ಹುಂಚಾದಲ್ಲಿ ನಡೆದ ಬಾಲ್ಯ ವಿವಾಹ : ಅರ್ಚಕ,ಫೋಟೋಗ್ರಾಫರ್ ಸೇರಿದಂತೆ ಎಲ್ಲಾರ ಮೇಲೂ ದಾಖಲಾಯಿತು ಕೇಸ್
ಇತ್ತೀಚೆಗೆ ರಿಪ್ಪನ್‌ಪೇಟೆ ಸಮೀಪದ ಹುಂಚಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಆನೆಗದ್ದೆ ಗ್ರಾಮದಲ್ಲಿ ನಡೆದ ಬಾಲ್ಯವಿವಾಹದ ವಿರುದ್ಧ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದೆ. ಮದುವೆ ಗಂಡು ವಯಸ್ಕನಾಗಿದ್ದು ಮದುವೆ ಹೆಣ್ಣು ಅಪ್ರಾಪ್ತ ವಯಸ್ಸಿನವಳಾಗಿದ್ದಳು.ಈಗ ವಧುವರ, ಮದುವೆ ಮಾಡಿಸಿದ್ದ ಅರ್ಚಕ, ಆಹ್ವಾನ ಪತ್ರಿಕೆ ಮುದ್ರಿಸಿದ ವ್ಯಕ್ತಿ, ಫೋಟೋಗ್ರಾಫರ್, ವಧು ವರರ ಪೋಷಕರ ವಿರುದ್ಧ ದೂರು ದಾಖಲಾಗಿದೆ. ಆನಗದ್ದೆ ಗ್ರಾಮದ ಯಲ್ಲದೋಣೆಯ ರಮೇಶ್ ಎಂಬುವವನು ಬಳ್ಳಾರಿ ತಾಲೂಕಿನ ಕೂಡ್ಲಿಗಿ ಗ್ರಾಮದ ಅಪ್ರಾಪ್ತೆ ಬಾಲಕಿಯನ್ನ ಮಾ.28 ರಂದು ಮದುವೆಯಾಗಿರುತ್ತಾನೆ. ಈ ಬಗ್ಗೆ ಬಂದ ದೂರು…
ಹೊಸನಗರ ಸಮೀಪ ಮನೆಗೆ ನುಗ್ಗಿ ಹಲ್ಲೆ ನಡೆಸಿ ಹಣ ದೋಚಿದ ದರೋಡೆಕೋರರು!!!! : ದರೋಡೆ ಹಿಂದೆ ಇದೀಯಾ ಐಪಿಎಲ್ ಬೆಟ್ಟಿಂಗ್ ನಂಟು?????
ಹೊಸನಗರ ಸಮೀಪದ ಮಾವಿನಕೊಪ್ಪ – ಹೊಸನಗರ ರಸ್ತೆಯಲ್ಲಿ ಮೊನ್ನೆ ರಾತ್ರಿ ಮನೆಗೆ ಮೂವರು ದರೋಡೆಕೋರರು ನುಗ್ಗಿ ಯುವಕನ ಮೇಲೆ ಹಲ್ಲೆ ನಡೆಸಿ ಹಣ ದೋಚಿರುವ ಬಗ್ಗೆ ಹೊಸನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಂತ್ ಎಂಬ ಉಡುಪಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಯೊಬ್ಬ ಹೊಸನಗರದ ಮಾವಿನಕೊಪ್ಪ ಮತ್ತು ಸಾಗರ ರಸ್ತೆಯಲ್ಲಿರುವ ತಂದೆಯ ಮನೆಗೆ ಬಂದಿದ್ದಾನೆ. ಮೊನ್ನೆ ಕಾರ್ಯಕ್ರಮವೊಂದಕ್ಕೆ ಸುಮಂತ್ ನ ತಂದೆ ತಾಯಿ ಉಡುಪಿ ಜಿಲ್ಲೆಯ ಅಮಾವಾಸೆ ಬೈಲ್ ತೆರಳಿದ ವೇಳೆ ಕಳ್ಳತನದ ಘಟನೆ ನಡೆದಿದೆ ಎಂದು ಹೊಸನಗರ ಪೊಲೀಸ್…
ಬಟ್ಟೆಮಲ್ಲಪ್ಪ ಸಮೀಪದಲ್ಲಿ ಸಾಲಕ್ಕೆ ಹೆದರಿ ವಿಷ ಸೇವಿಸಿ ರೈತ ಆತ್ಮಹತ್ಯೆ :
ಹೊಸನಗರ: ತಾಲೂಕಿನ ಮಂಡ್ರಿ ಗ್ರಾಮದ ರೈತರೊಬ್ಬರು ಸಾಲಬಾಧೆಯಿಂದ ವಿಷ ಸೇವಿಸಿ ಮೃತಪಟ್ಟಿದ್ದಾರೆ. ನಾಗರಾಜ್(58) ಮೃತ ರೈತ. ಇವರು ಮನೆಯ ಸಮೀಪದ ಕಾಡಿನಲ್ಲಿ ವಿಷ ಸೇವಿಸಿದ್ದರು. ತಕ್ಷಣ ಅಸ್ವಸ್ಥಗೊಂಡ ಇವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಇಂದು ಮೃತಪಟ್ಟಿದ್ದಾರೆ. ಜಮೀನು ಅಭಿವೃದ್ಧಿಗೋಸ್ಕರ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ಸಾಲ ಮಾಡಿದ್ದರು. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಳೆಬಾಗಿಲು ಸಮೀಪ ಮೀನು ಹಿಡಿಯಲು ಹೋದ ವ್ಯಕ್ತಿ ಸಾವು :
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಹೊಳೆಬಾಗಿಲು ಸಮೀಪದ ಕಣಿಕೆ ಗ್ರಾಮದಲ್ಲಿ ತೆಪ್ಪದಲ್ಲಿ ಮೀನು ಹಿಡಿಯಲು ಹೋಗಿ ತೆಪ್ಪ ಮಗುಚಿದ ಕಾರಣ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ. ನಿನ್ನೆ ಸಂಜೆ ವೇಳೆಗೆ ಯಲ್ಲಪ್ಪ ( 55 ) ಮೀನು ಹಿಡಿಯಲು ಕಣಿಕೆ ಗ್ರಾಮದ ಶರಾವತಿ ಹಿನ್ನೀರಿಗೆ ತೆರಳಿದ್ದಾರೆ.ದುರದೃಷ್ಟವಶಾತ್ ಮೀನು ಹಿಡಿಯಲು ಹೋದಾಗ ತೆಪ್ಪ ಮಗುಚಿ ಬಿದ್ದಿದ್ದರಿಂದ ಹೊಳೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಂದು ಬೆಳಿಗ್ಗೆ ಕಣಿಕೆ ಗ್ರಾಮದ ಬಳಿ ಶವ ತೇಲಿ ಬಂದಿದೆ. ಸಾಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ…
ಸಾಗರ ತಾಲ್ಲೂಕು ಬಿಜೆಪಿ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಬೈಕ್ ಅಪಘಾತದಲ್ಲಿ ಸಾವು :
ಸಾಗರ ತಾಲೂಕಿನ ಯಳವರಸಿಯ ರೈಲ್ವೆ ಗೇಟ್ ಬಳಿ ಚಲಿಸುತ್ತಿದ್ದ ಬೈಕ್ನಿಂದ ಬಿದ್ದು ಹಿಂಬದಿ ಸವಾರ ಮೃತಪಟ್ಟ ಘಟನೆ ಗುರುವಾರ ರಾತ್ರಿ ನಡೆದಿದೆ. ತ್ಯಾಗರ್ತಿ ನಿವಾಸಿ ಹಾಗೂ ಬಿಜೆಪಿ ತಾಲ್ಲೂಕು S.C ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಪರಶುರಾಮ್ ಇಂದು ಬೈಕ್ ಅಪಘಾತದಲ್ಲಿ ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ಬೈಕ್ ಚಾಲಕ ಮಂಜುಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಗಾಯಾಳುವಿಗೆ ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಂಜು ಹಾಗೂ ಪರಾಶುರಾಮ್ ಬೈಕ್ ನಲ್ಲಿ ಸಾಗರಕ್ಕೆ ಬರುತ್ತಿದ್ದಾಗ ರೈಲ್ವೆ ಗೇಟ್ ಬಳಿ…
ಕೋಣಂದೂರು ಸಮೀಪ ರಸ್ತೆ ಅಪಘಾತ : ಚಾಲಕರ ನಡುವಿನ ಗಲಾಟೆಯಲ್ಲಿ ಮೂರನೇ ವ್ಯಕ್ತಿಯಿಂದ ಚಿನ್ನದ ಸರ ಕಳವು
ತೀರ್ಥಹಳ್ಳಿ : ಕಾರು ಹಾಗೂ ಬೈಕ್ ನಡುವಿನ ಅಪಘಾತ ನೆಡಿದಿದ್ದು ಅಪಘಾತ ನೆಡದ ಸ್ಥಳದಲ್ಲಿ ಗಲಾಟೆ ನೆಡೆದು ಆ ಸಂದರ್ಭದಲ್ಲಿ ಚಿನ್ನದ ಸರ ಕಳ್ಳತನ ನೆಡೆದಿರುವ ವಿಚಿತ್ರ ಘಟನೆ ತಾಲೂಕಿನ ಕೋಣಂದೂರು ಸಮೀಪ ನೆಡೆದಿದೆ. KA – 14 M 4592 ಸಂಖ್ಯೆಯ ಕಾರೊಂದು ಹಿರೇಬೈಲಿನಿಂದ ಹೆಗ್ಗಡಿಗೆರೆಗೆ ಹೋಗುವಾಗ ಮಲ್ಲಿಗೆಕಟ್ಟೆಯಲ್ಲಿ ಬೈಕ್ ಅಡ್ಡ ಬಂದು ಅಪಘಾತವಾಗಿದೆ. ಕಾರು ಹಾಗೂ ಬೈಕ್ ಚಾಲಕನ ಮಧ್ಯೆ ಗಲಾಟೆ ನೆಡೆಯುವಾಗ ಮೂರನೇ ವ್ಯಕ್ತಿಯೊಬ್ಬ ಬಂದು ಹಲ್ಲೆ ನೆಡೆಸಿ ಕಾರಿನ ಚಾಲಕನ ಕೊರಳಲ್ಲಿ…
ಕಾರು ಹಾಗೂ ಗೂಡ್ಸ್ ಆಟೋ ನಡುವೆ ಮುಖಾಮುಖಿ ಡಿಕ್ಕಿ : ಕಾರು ಚಾಲಕ ಸಾವು
ಸಾಗರ ಹೊಸನಗರ ಹೆದ್ದಾರಿಯ ಮಾರುತಿಪುರ ಸಮೀಪ ಕೇಶವಪುರ ಸೇತುವೆ ಬಳಿಯ ತಿರುವಿನಲ್ಲಿ ಗೂಡ್ಸ್ ಆಟೋ ಹಾಗೂ ಮಾರುತಿ ಓಮ್ನಿ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓಮ್ನಿ ಚಾಲಕ ಸತೀಶ್ ಕಾಡವಳ್ಳಿ (52) ಸಾವನ್ನಪಿದ್ದಾರೆ. class=”separator” style=”clear: both; text-align: center;”> ಅಫಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು,ಓಮಿನಿಯಲ್ಲಿ ಚಾಲಕರಾದ ಸತೀಶ್ ಕಾಡವಳ್ಳಿ ಪ್ರಯಾಣ ಮಾಡುತ್ತಿದ್ದರು ಹಾಗೂ ಗೂಡ್ಸ್ ಆಟೋದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿರುವ ವರದಿಯಾಗಿದ್ದು ,ಹೊಸನಗರದಿಂದ ಬಟ್ಟೆಮಲಪ್ಪ ಕಡೆಗೆ ಪ್ರಯಾಣಿಸುತ್ತಿದ್ದರು. ಮೃತ ಸತೀಶ್ ಕಾಡವಳ್ಳಿ ರವರು…
ಆನಂದಪುರ ಸಮೀಪ ಅಕ್ರಮ ಗೋಮಾಂಸ ಮಾರುತ್ತಿದ್ದ ವ್ಯಕ್ತಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು :
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರ ಸಮೀಪದ ಗೌತಮಪುರ ಗ್ರಾಮದಲ್ಲಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಇಂದು ಸಂಜೆ ನಡೆದಿದೆ. ಹಬೀಬ್ ( 35 ) ಶಿಕಾರಿಪುರ ಮೂಲದ ವ್ಯಕ್ತಿ ಗೋಮಾಂಸ ಮಾರುತ್ತಿದ್ದ ವ್ಯಕ್ತಿ ಎಂದು ತಿಳಿದುಬಂದಿದೆ. ಬಜಾಜ್ ಪ್ಲಾಟಿನಾ ಕೆ ಎ 15 ಈಎಪ್ 2782 ಬೈಕ್ ನ ಬ್ಯಾಗ್ ನಲ್ಲಿ ಅಂದಾಜು ಹತ್ತು ಕೆಜಿ ಯಷ್ಟು ಗೋಮಾಂಸವನ್ನು ಗೌತಮಪುರದ ಗ್ರಾಮದ ಕೆಲವು ಮನೆಗಳಿಗೆ ಅಕ್ರಮವಾಗಿ ಮಾರಾಟ…
ಶರಾವತಿ ಹಿನ್ನಿರಿನಲ್ಲಿ ಸರಾಗವಾಗಿ ಈಜುತ್ತಿದ್ದ ಯುವಕ ಸ್ವಿಮ್ಮಿಂಗ್ ಫೂಲ್ ನಲ್ಲಿ ಮುಳುಗಿ ಸಾವು :
ಶಿವಮೊಗ್ಗದ ಸಿಂಹಧಾಮದ ಬಳಿ ಇರುವ ಖಾಸಗಿ ಈಜುಕೊಳದಲ್ಲಿ ಈಜಲು ಹೋದ ಯುವಕನೊಬ್ಬ ಶವವಾಗಿ ಪತ್ತೆಯಾಗಿದ್ದಾನೆ. ಸ್ನೇಹಿತರೊಂದಿದೆ ಈಜಲು ಹೋಗಿದ್ದ ಅನಿಲ್ ಕುಮಾರ್ ಎಂಬ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಈತನ ಸಾವಿನ ಬಗ್ಗೆ ಆತನ ಕುಟುಂಬ ವರ್ಗದಿಂದ ಅನುಮಾನ ವ್ಯಕ್ತವಾಗಿದೆ. ಹೊಸನಗರದ ಶರಾವತಿ ಹಿನ್ನೀರಿನಲ್ಲಿ ಸರಾಗವಾಗಿ ಈಜುಹೊಡೆಯುವ ಅನಿಲ್ ಕುಮಾರ್ ಈಜುಕೊಳದಲ್ಲಿ ಶವವಾಗಿ ಪತ್ತೆಯಾಗಿರುವುದಕ್ಕೆ ಕುಟುಂಬ ಅನುಮಾನ ವ್ಯಕ್ತಪಡಿಸಿದೆ. ಶಿವಮೊಗ್ಗದ ಸಿಂಹಧಾಮದ ಹಿಂಭಾಗದಲ್ಲಿ ಬರುವ ಕರಣ್ ಸ್ವಿಮ್ಮಿಂಗ್ ಫೂಲ್ ನಲ್ಲಿ ಅನಿಲ್ ಕುಮಾರ್ ನಿನ್ನೆ ಸ್ವಿಮ್ಮಿಂಗ್ ಫೂಲ್ ನಲ್ಲಿ…
ವರದಕ್ಷಿಣೆ ಕಿರುಕುಳ, ವಿಷಸೇವಿಸಿ ಗೃಹಿಣಿ ಆತ್ಮಹತ್ಯೆ : ಗಂಡನ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲು
ವರದಕ್ಷಿಣೆ ಕಿರುಕುಳ ತಾಳದೇ ವಿಷಸೇವಿಸಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದಲ್ಲಿ ನಡೆದಿದೆ. ವಿಷ ಸೇವಿಸಿ ಗಾನವಿ(27) ಎಂಬ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆಂದು ಪತಿಯ ಕುಟುಂಬಸ್ಥರ ವಿರುದ್ಧ ಗಾನವಿ ಪೋಷಕರು ಆರೋಪಿಸಿದ್ದಾರೆ.ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಂದು ಯುಗಾದಿ ಹಬ್ಬ. ಹೊಸ ವರ್ಷದ ಸಂಭ್ರದಲ್ಲಿರಬೇಕಿದ್ದ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿದೆ. ಯುಗಾದಿ ದಿನದಂದೇ ವರದಕ್ಷಿಣೆ ಕಿರುಕುಳಕ್ಕೆ ನೊಂದ ನವವಿವಾಹಿತೆ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ….