ಕ್ರೈಂ ಸುದ್ದಿ:
ಶಾಲೆಯಿಂದ ಮನೆಗೆ ತೆರಳುತಿದ್ದ ಮಗು ಕಾರು ಡಿಕ್ಕಿಯಾಗಿ ಸಾವು : ಆನಂದಪುರ ಸಮೀಪದಲ್ಲೊಂದು ಹೃದಯವಿದ್ರಾವಕ ಘಟನೆ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಚೆನ್ನ ಕೊಪ್ಪದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಗುವಿಗೆ ಕಾರು ಡಿಕ್ಕಿಯಾಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಸಂಭವಿಸಿದೆ. ಚೆನ್ನಕೊಪ್ಪ ಗ್ರಾಮದಲ್ಲಿ ಶಾಲೆ ಮುಗಿದ ನಂತರ ವಿದ್ಯಾರ್ಥಿ ಮನೆಗೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು ಅಭಿಷೇಕ್ (6 ) ವರ್ಷ ಸಾವಿಗೀಡಾದ ಪುಟಾಣಿ ವಿದ್ಯಾರ್ಥಿಯಾಗಿದ್ದಾನೆ. ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕಾರು ವಿದ್ಯಾರ್ಥಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮಗುವಿಗೆ ಗಂಭೀರ ಗಾಯಗಳಾಗಿವೆ ಕೂಡಲೇ ಸ್ಥಳೀಯರು ವಾಹನದಲ್ಲಿ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು…
ರಿಪ್ಪನ್‌ಪೇಟೆ ಸಮೀಪದ ಸಿದ್ದಪ್ಪನಗುಡಿ ಬಳಿ ಭೀಕರ ಅಪಘಾತ : ಲಾರಿ ಅಡಿಗೆ ಸಿಲುಕಿಕೊಂಡ ಬೈಕ್ ಸವಾರ
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಸಿದ್ದಪನಗುಡಿ ಬಳಿ ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರು ಲಾರಿಯಡಿ ಸಿಲುಕಿಕೊಂಡ ಘಟನೆ ನಡೆದಿದೆ. ಆಯನೂರಿನಿಂದ ರಿಪ್ಪನ್‌ಪೇಟೆಗೆ ಬೈಕ್ ನಲ್ಲಿ ಬರುತ್ತಿದ್ದ ಇಬ್ಬರು ಯುವಕರಿಗೆ ರಿಪ್ಪನ್‌ಪೇಟೆ ಯಿಂದ ಶಿವಮೊಗ್ಗ ಕಡೆಗೆ ಸಾಗುತ್ತಿದ್ದ ಲಾರಿ ಡಿಕ್ಕಿಯಾಗಿ ಬೈಕ್ ಸಮೇತ ಇಬ್ಬರು ಯುವಕರು ಲಾರಿಯಡಿಗೆ ಸಿಲುಕಿಕೊಂಡ ಘಟನೆ ನಡೆದಿದೆ. ನಡೆದಿದ್ದೇನು…. ರಿಪ್ಪನ್‌ಪೇಟೆಗೆ ಗಾರೆ ಕೆಲಸಕ್ಕೆಂದು ಬೈಕ್ ನಲ್ಲಿ ಬರುತ್ತಿದ್ದ ಆಯನೂರಿನ ನಿವಾಸಿಗಳಾದ ಶ್ರೀನಿವಾಸ್ (29) ಮತ್ತು ಮಂಜುನಾಥ್ (28) ಹಾಗೂ…
ಜಿಂಕೆ ಮಾಂಸದೂಟ : ಅರಣ್ಯಾಧಿಕಾರಿಗಳ ದಾಳಿ ,ಇಬ್ಬರ ಬಂಧನ
ಜಿಂಕೆ ಮಾಂಸದೂಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಭದ್ರಾವತಿ ತಾಲೂಕಿನ ಉಂಬ್ಳೆಬೈಲು ವಲಯ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಭದ್ರಾವತಿ ತಾಲೂಕು ಹುಣಸೇಕಟ್ಟೆ ಗ್ರಾಮದ ವೆಂಕಟೇಶ್ ಎಂಬುವರ ಮನೆಯಲ್ಲಿ ಜಿಂಕೆಯ ಮಾಂಸವನ್ನು ಬೇಯಿಸಿ, ಊಟ ತಯಾರು ಮಾಡುವಾಗ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ, ಇವರ ಮನೆಯಲ್ಲಿ ಸುಮಾರು ಎರಡು ಕೆಜಿಯಷ್ಟು ಜಿಂಕೆ ಮಾಂಸ ದೊರಕಿದೆ. ಜೊತೆಗೆ ಮನೆ ಪರಿಶೀಲಿಸಿದಾಗ ಮಾಂಸವನ್ನು ಕತ್ತರಿಸುವ ಮರದ ತುಂಡು ಹಾಗೂ ಮಚ್ಚು ಪತ್ತೆಯಾಗಿದೆ. ವೆಂಕಟೇಶ್ ಜೊತೆ ಅವರ ಮಗ ಮಂಜುನಾಥ್ನನ್ನು ಸಹ ಬಂಧಿಸಲಾಗಿದೆ. ಆರೋಪಿಗಳ…
ಮಂಡಗದ್ದೆ ಸಮೀಪ ಭೀಕರ ಅಪಘಾತ : ಬೈಕ್ ಸವಾರ ಸ್ಥಳದಲ್ಲೇ ಸಾವು
ತೀರ್ಥಹಳ್ಳಿ : ರಾಷ್ಟ್ರೀಯ ಹೆದ್ದಾರಿ 169 ರ ಶಿವಮೊಗ್ಗ ತೀರ್ಥಹಳ್ಳಿ ನಡುವಿನ ಮಂಡಗದ್ದೆ ಸಮೀಪ ಸಿಂಗನಬಿದರೆ ಕ್ರಾಸ್ ನಲ್ಲಿ ಸ್ಕೂಟಿ ಸ್ಕಿಡ್ ಆಗಿ ಎದುರಿನಿಂದ ಬರುತ್ತಿದ್ದ ಬಸ್ ಗೆ ಡಿಕ್ಕಿ ಹೊಡೆದು ಸ್ಕೂಟಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ಸಂಜೆ ನೆಡೆದಿದೆ. ಮೃತಪಟ್ಟ ವ್ಯಕ್ತಿ ಶಿವಮೊಗ್ಗ ಸಮೀಪದ ಹೊಸಮನೆ ಗಿರೀಶ್ ಎಂದು ತಿಳಿದುಬಂದಿದೆ. ಈತ ಮಂಡಗದ್ದೆಯಲ್ಲಿ ಊಟ ಮಾಡಿ ಶಿವಮೊಗ್ಗದ ಕಡೆ ತೆರಳುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ…
ಆಗುಂಬೆ : ಟಿವಿ ನೋಡಲು ಬಂದ ಪಕ್ಕದ ಮನೆಯ ಯುವತಿಯನ್ನು ಅತ್ಯಾಚಾರಗೈದ ವಿವಾಹಿತ : ಆರೋಪಿ ಅಂದರ್
ತೀರ್ಥಹಳ್ಳಿ : ಟಿ.ವಿ.ನೋಡಲು ಬರುತ್ತಿದ್ದ ಯುವತಿಯನ್ನ ರೇಪ್ ಮಾಡಿ ಗರ್ಭಾವತಿಯನ್ನಾಗಿ ಮಾಡಿದ ಆರೋಪದ ಅಡಿಯಲ್ಲಿ ವ್ಯಕ್ತಿಯೋರ್ವನನ್ನು ಇಂದು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ತಾಲೂಕಿನ ನಾಲೂರಿನಲ್ಲಿ ಪರಿಶಿಷ್ಟ ಜಾತಿಯ ಯುವತಿಯು 2021 ರ ಡಿಸೆಂಬರ್ ನಲ್ಲಿ ಕಾಲೇಜು ಇಲ್ಲದ ಕಾರಣ ಮನೆಯಲ್ಲೇ ಇದ್ದ ಯುವತಿ ಪಕ್ಕದ ಮನೆಯ ಮುರುಳೀಧರ್ ಭಟ್ ಎಂಬುವರ ಮನೆಗೆ ಟಿವಿ ನೋಡಲು ಹೋಗುತ್ತಿದ್ದಳು.ಟಿವಿ ನೋಡುವ ವೇಳೆ ಯುವತಿಯನ್ನ ಮುರುಳೀಧರ್ ಬಲತ್ಕರಿಸಿರುವುದಾಗಿ ಯುವತಿ ಆರೋಪಿಸಿದ್ದಾಳೆ. . (ಅತ್ಯಾಚಾರದ ಆರೋಪಿ ಮುರುಳಿಧರ್ ಭಟ್) ಇದಾದ ನಂತರ ದಾರಿಯಲ್ಲಿ…
ಮಂಡಗದ್ದೆ ಸಮೀಪ ಭೀಕರ ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು
ತೀರ್ಥಹಳ್ಳಿ : ಶಿವಮೊಗ್ಗ ರಸ್ತೆಯ ಮಂಡಗದ್ದೆ ಸಮೀಪದ ಹದಿನಾರನೇ ಮೈಲಿಕಲ್ ನಲ್ಲಿ ಭೀಕರ ಅಪಘಾತವಾಗಿದ್ದು, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಫೋರ್ಡ್ ಕಾರು ಹಾಗೂ ಬೈಕ್ ನಡುವೆ ಹದಿನಾರನೇ ಮೈಲಿಕಲ್ ಬಳಿ ಡಿಕ್ಕಿಯಾಗಿದ್ದು,ಅಪಘಾತದ ಭೀಕರತೆಗೆ ಪುಟರೊಳ್ಳಿ ಗ್ರಾಮದ ಬೈಕ್ ಸವಾರ ಸತೀಶ್ ಸ್ಥಳದಲ್ಲಿ ಮತಪಟ್ಟಿದ್ದಾನೆ. ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸಾಗರ ಸಮೀಪದಲ್ಲಿ ಲಾರಿ ಹಾಗೂ ಬೈಕುಗಳ ನಡುವೆ ಭೀಕರ ಅಪಘಾತ : ಓರ್ವ ಸಾವು,ಮೂವರ ಸ್ಥಿತಿ ಗಂಭೀರ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಉಳ್ಳೂರು ಸಮೀಪದ ತಿರುವಿನಲ್ಲಿ ಲಾರಿ ಹಾಗೂ 2 ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಲಾರಿ ಹಾಗೂ ಸಾಗರದಿಂದ ಶಿವಮೊಗ್ಗಕ್ಕೆ ಹೊರಟಿದ್ದ ಬುಲೆಟ್ ಬೈಕ್ ಹಾಗೂ ಪಲ್ಸರ್ ಬೈಕ್ ಗಳ ನಡುವೆ ಅಪಘಾತ ಸಂಭವಿಸಿದೆ. ಸ್ಥಳದಲ್ಲೇ ಪಡವಗೂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರೇಮಾನಂದ ಗೌಡ ಅಸುನೀಗಿದ್ದು ಅವರ ಹೆಂಡತಿ ಹಾಗೂ ಇನ್ನೊಂದು ಬೈಕಿನಲ್ಲಿದ್ದ ಇಬ್ಬರ ಸ್ಥಿತಿ ಗಂಭೀರವಾಗಿದ್ದು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಆಂಬುಲೆನ್ಸ್ ಮೂಲಕ…
ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ :
ಖಾಸಗಿ ಬಸ್ವೊಂದು ಚಾಲಕ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಉರುಳಿ ಬಿದ್ದ ಪರಿಣಾಮ 20 ಕ್ಕೂ ಹೆಚ್ಚು ಮಂದಿಗೆ ಗಾಯವಾಗಿರುವ ಘಟನೆ ಹೊಳೆಹೊನ್ನೂರು ಸಮೀಪ ಸಿದ್ಲಿಪುರದ ಬಳಿ ನಡೆದಿದೆ. ಶಿವಮೊಗ್ಗ ದಿಂದ ಚಿತ್ರದುರ್ಗ ಕ್ಕೆ ಹೋಗುತ್ತಿದ್ದ ಬಸ್, ಹೊಳೆಹೊನ್ನೂರು ಸಮೀಪ ಸಿದ್ಲಿಪುರದ ಬಳಿ ಪಲ್ಟಿ! ಘಟನೆಯಲ್ಲಿ ಗಾಯಗೊಂಡವರಿಗೆ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮೆಗ್ಗಾನ್ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದೆ. ಹೊಳೆಹೊನ್ನೂರು ಸಮೀಪದ ಸಿದ್ಲಿಪುರದಲ್ಲಿ ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ತೆರಳುತ್ತಿದ್ದ ಬಸ್ ಪಲ್ಟಿಯಾಗಿದೆ. ಎದುರಿನಿಂದ ಬರುತ್ತಿದ್ದ ಲಾರಿಗೆ…
ತೀರ್ಥಹಳ್ಳಿ ಸಮೀಪ ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ : ಕಟ್ಟೆಹಕ್ಲು ಶಾಲೆ ಮುಖ್ಯೋಪಾಧ್ಯಾಯ ಸ್ಥಳದಲ್ಲಿಯೇ ಸಾವು
ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಲು ಸಮೀಪ ನಾಗರವಳ್ಳಿ ಗ್ರಾಮದ ಬಳಿ ಮಾರುತಿ ಓಮಿನಿ ಹಾಗೂ ಬೈಕ್ ನಡುವೆ ಭೀಕರ ಅಪಘಾತವಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕಟ್ಟೆಹಕ್ಲು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ್ ಎಂದು ಗುರುತಿಸಲಾಗಿದೆ. ವೆಂಕಟೇಶ್ ರವರು ಬೈಕ್ನಲ್ಲಿ ಬರುತ್ತಿದ್ದಾಗ ನಾಗರವಳ್ಳಿ ತಿರುವಿನಲ್ಲಿ ಮಾರುತಿ ಒಮಿನಿಗೆ ಗುದ್ದಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವೆಂಕಟೇಶ್ರವರು ಸಾವನ್ನಪ್ಪಿದ್ದಾರೆ. ಶಾಲೆಯ ಕೆಲಸದ ನಿಮಿತ್ತ ಬೈಕ್ ನಲ್ಲಿ ತೆರಳುತಿದ್ದಾಗ ತಿರುವಿನಲ್ಲಿ ವೇಗವಾಗಿ ಬರುತಿದ್ದ ಮಾರುತಿ ಒಮಿನಿಗೆ…
ಜಮೀನಿನಲ್ಲಿ ಹೂವಿನ ಗಿಡ ನೆಟ್ಟಿದ್ದಕ್ಕೆ ಅಣ್ಣನಿಂದ ತಮ್ಮನಿಗೆ ಗುಂಡೇಟು : ಎಲ್ಲಿ ಗೊತ್ತಾ??? ಈ ಸುದ್ದಿ ನೋಡಿ
ಜಮೀನಿಗೆ ಹೋಗುವ ದಾರಿಯಲ್ಲಿ ಗಿಡಗಳನ್ನು ಹಾಕಿದ್ದಕ್ಕೆ ಸಿಟ್ಟಿಗೆದ್ದ ಅಣ್ಣ ನಾಡ ಬಂದೂಕಿನಿಂದ ತಮ್ಮನಿಗೆ ಶೂಟ್ ಮಾಡಿರುವ ಘಟನೆ ಭದ್ರಾವತಿಯಲ್ಲಿ ನಡೆದಿದೆ. ಕಳೆದ ಎರಡು ದಿನದ ಹಿಂದೆ ನಡೆದ ಘಟನೆ ಇದಾಗಿದ್ದು, ಭದ್ರಾವತಿ ತಾಲೂಕಿನ ಸಿದ್ದರಮಟ್ಟಿಯಲ್ಲಿ ಮುನಿಸ್ವಾಮಿ ಎಂಬಾತ ತನ್ನ ಸಹೋದರ ಮುರುಗೇಶ್ನಿಗೆ ನಾಡ ಬಂದೂಕಿನಿಂದ ಶೂಟ್ ಮಾಡಿದ್ದಾನೆ. ಇದರಿಂದ ಮುರುಗೇಶನ ತೊಡೆ ಸೀಳಿ ಹೋಗಿದೆ. ತಕ್ಷಣ ಮುರುಗೇಶ್ನನ್ನು ಭದ್ರಾವತಿಯ ಸರ್ಕಾರಿ ಆಸ್ಪತ್ರಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ನಾರಾಯಣ ಹೃದಯಾಲಯಕ್ಕೆ ದಾಖಲಿಸಲಾಗಿದೆ. ಸಿದ್ದರಮಟ್ಟಿಯಲ್ಲಿ…