ಕ್ರೈಂ ಸುದ್ದಿ:
ಆಯನೂರು ಬಳಿ ಮರಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್ : ಹಲವರಿಗೆ ಗಂಭೀರ ಗಾಯ
ಆಯನೂರು : ಇಲ್ಲಿನ ಸಮೀಪದ ಕದಂಬ ರೆಸ್ಟೋರೆಂಟ್ ಬಳಿ ಖಾಸಗಿ ಬಸ್ ಮರಕ್ಕೆ ಗುದ್ದಿ ಹಲವರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ. ಚಾಮೇನಹಳ್ಳಿಯಿಂದ ಶಿವಮೊಗ್ಗ ಕಡೆಗೆ ತೆರಳುತಿದ್ದ ಮಂಜುನಾಥ್ ಬಸ್ ವಾಹನವೊಂದನ್ನು ಹಿಂದಿಕ್ಕಲು ಹೋಗಿ ಮರಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ಅಪಘಾತದಲ್ಲಿ ಚಾಮೇನಹಳ್ಳಿ ನಿವಾಸಿಗಳಾದ ಶಿಲ್ಪ(33) ಕೀರ್ತಿ(21) ಭೂಮಿಕಾ(21) ಮತ್ತು ಕಾವ್ಯಾ(21) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಮೂವರು ಶಿವಮೊಗ್ಗದ ಎಟಿ ಎನ್ ಸಿಸಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಕುಂಸಿ ಪೊಲೀಸ್ ಠಾಣೆ…
ಲಾರಿ ಚಕ್ರ ತಲೆಯ ಮೇಲೆ ಹರಿದು ಅಪರಿಚಿತ ವ್ಯಕ್ತಿ ಸಾವು :
ಆನಂದಪುರ : ಪಟ್ಟಣದ ಸಂತೋಷ್ ರೈಸ್ ಮಿಲ್ ಮುಂಭಾಗದಲ್ಲಿ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ವ್ಯಕ್ತಿಯ ತಲೆಯ ಮೇಲೆ ಲಾರಿ ಹರಿದು ಸಾವನ್ನಪ್ಪಿರುವ ಘಟನೆ ನಡೆದಿದ್ದು,ಮೃತಪಟ್ಟ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಆನಂದಪುರದಿಂದ ಕೊಪ್ಪಳಕ್ಕೆ ಭತ್ತದ ಹೊಟ್ಟನ್ನು ತುಂಬಿಕೊಂಡು ಹೊರಡಲು ಸಿದ್ಧವಾಗಿದ್ದ ಲಾರಿ ಅಪರಿಚಿತ ವ್ಯಕ್ತಿಯ ತಲೆ ಮೇಲೆ ಹತ್ತಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳೀಯರ ಮಾಹಿತಿಯ ಪ್ರಕಾರ ಭತ್ತದ ಹೊಟ್ಟು ತುಂಬಿಕೊಂಡು ಲಾರಿ ಹೊರಟ್ಟಿತ್ತು ಆದರೆ ಆಗ ಅಪರಿಚಿತ ವ್ಯಕ್ತಿ ಲಾರಿಯ ಕೆಳಗೆ…
ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 65 ವರ್ಷದ ವೃದ್ದನಿಗೆ ಜೀವಾವಧಿ ಶಿಕ್ಷೆ
ಶಿವಮೊಗ್ಗ : ಏಳು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ 65 ವರ್ಷದ ವೃದ್ಧರೊಬ್ಬರಿಗೆ ಇಲ್ಲಿನ ಪೋಕ್ಸೋ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿ ನಾಗಪ್ಪನಿಗೆ ರೂ. 60,000 ದಂಡವನ್ನು ಹಾಕಲಾಗಿದೆ. ಆರೋಪಿ ನಾಗಪ್ಪ 2020 ಸೆಪ್ಟೆಂಬರ್ 13 ರಂದು ಶಿವಮೊಗ್ಗ ತಾಲೂಕಿನ ಗ್ರಾಮವೊಂದರಲ್ಲಿ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿದ್ದ. ಅಪ್ರಾಪ್ತ ಬಾಲಕಿ ಕೃಷಿ ಜಮೀನಿಗೆ ಹೋದಾಗ ಅಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ಈ ಸಂಬಂಧ ಮಹಿಳಾ ಪೊಲೀಸರು ನಾಗಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮಹಿಳಾ…
ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ : ಬ್ಯಾಂಕ್ ಉದ್ಯೋಗಿ ಸಾವು
ಬೈಕ್ ಹಾಗೂ ಕಾರು ನಡುವೆ ಭೀಕರ ಅಪಘಾತವಾಗಿ ಬ್ಯಾಂಕ್ ಉದ್ಯೋಗಿ ಸಾವನ್ನಪ್ಪಿರುವ ಘಟನೆ ಸಾಗರ ತಾಲೂಕಿನ ಬ್ಯಾಕೋಡು ಗ್ರಾಮದಲ್ಲಿ ನಡೆದಿದೆ. ಬ್ಯಾಕೋಡು ಸಮೀಪದ ಸುಳ್ಳಳ್ಳಿ ಕಾರ್ಪೋರೇಶನ್ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದ ಕಿಶನ್ (34) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಸಾಗರದಿಂದ ಸುಳ್ಳಳ್ಳಿ ಬ್ಯಾಂಕ್ ಗೆ ತೆರಳುವಾಗ ಈ ಅಪಘಾತ ಬ್ಯಾಕೋಡು ಸಮೀಪ ಸಂಭವಿಸಿದೆ. ಅಪಘಾತದ ಸಂದರ್ಭದಲ್ಲಿ ಕಿಶನ್ ಗೆ ತೀವ್ರ ರಕ್ತಸ್ರಾವವಾಗಿದ್ದು ನಂತರ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕೋಡೂರು ಸಮೀಪದಲ್ಲಿ ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ : ಕಾರು ಸಮೇತ ಅಕ್ರಮ ಗಾಂಜಾ ವಶಕ್ಕೆ
ಕೋಡೂರು : ಇಲ್ಲಿನ ಸಮೀಪದ ಕೇಶವಪುರ ಗ್ರಾಮದಲ್ಲಿ ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತಿದ್ದ ಕಾರು ಮತ್ತು 60ಗ್ರಾಂ ಗಾಂಜಾ ವಶಪಡಿಸಿಕೊಂಡಿರುವ ಘಟನೆ ನಡೆದಿದೆ. ಕೇಶವಪುರ ಗ್ರಾಮದ ಶೇಕ್ ಫೈಝರ್ ಮಸೂದ್ ಗೆ ಸೇರಿದ ಕಾರಿನ ಮೇಲೆ ದಾಳಿ ಮಾಡಿ ಕಾರಿನಲ್ಲಿ ಸಾಗಣಿಕೆ ಮಾಡಲು ಹೊಂದಿದ್ದ 60 ಗ್ರಾಂ ಒಣ ಗಾಂಜಾ ಸೊಪ್ಪುನ್ನು ಮತ್ತು ಒಂದು ಕಾರನ್ನು ವಶಪಡಿಸಿಕೊಂಡು ಆರೋಪಿತನ ವಿರುದ್ಧ ಅಬಕಾರಿ ನಿರೀಕ್ಷಕರು ಹೊಸನಗರ ವಲಯ ರವರು NDPS ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದೆ. ಈ ದಾಳಿಯಲ್ಲಿ ಅಬಕಾರಿ…
ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಲಾರಿ : ಮಹಿಳೆ ಸ್ಥಳದಲ್ಲಿಯೇ ಸಾವು
ಶಿವಮೊಗ್ಗ ಬೈಪಾಸ್ ರಸ್ತೆಯ ಯಮಹಾ ಶೋರೂಂ ಬಳಿ ಲಾರಿಯೊಂದು ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ ಲಾರಿಯಿಂದ ಮುಂದೆ ಹೋಗುತ್ತಿದ್ದ ಬೈಕ್ಗೆ ಗುದ್ದಿದ ಪರಿಣಾಮ ಬೈಕ್ ಸವಾರರು ಅಲ್ಲಿಯೆ ಬಿದ್ದಿದ್ದಾರೆ. ಈ ವೇಳೆ ಲಾರಿಯ ಹಿಂಬದಿ ಚಕ್ರ ಬೈಕ್ನಲ್ಲಿ ಹಿಂಬದಿ ಕುಳಿತಿದ್ದ ಮಹಿಳೆ ಮೇಲೆ ಹರಿದಿದೆ. ಘಟನೆಯಲ್ಲಿ ಸಯ್ಯದ್ ಸೈಫುಲ್ಲಾ ಗಾಯಗೊಂಡರೆ, ಅವರ ಪತ್ನಿ ಸಾಜಿದಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಲಾರಿ ವಶಕ್ಕೆ…
ರಿಪ್ಪನ್‌ಪೇಟೆ : ಗುಡ್ ಶೆಪರ್ಡ್ ಚರ್ಚ್ ಬಳಿ ಪಾದಚಾರಿಗೆ ಇನ್ನೋವಾ ಕಾರು ಡಿಕ್ಕಿ
ರಿಪ್ಪನ್‌ಪೇಟೆ : ಬಸ್ ಇಳಿದು ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಎದುರಿನಿಂದ ಬಂದ ಕಾರು ಡಿಕ್ಕಿಯಾಗಿ ಪಾದಚಾರಿಗೆ ಗಂಭೀರ ಗಾಯವಾಗಿರುವ ಘಟನೆ ಪಟ್ಟಣದ ತೀರ್ಥಹಳ್ಳಿ ರಸ್ತೆಯ ಗುಡ್ ಶೆಪರ್ಡ್ ಚರ್ಚ್ ಎದುರು ನಡೆದಿದೆ. ಸಮೀಪದ ದೂನ ಗ್ರಾಮದ ನಿವಾಸಿ ಥೋಮಸ್ (60) ಗಂಭೀರ ಗಾಯಗೊಂಡಿರುವ ವ್ಯಕ್ತಿಯಾಗಿದ್ದಾನೆ. ನಡೆದಿದ್ದೇನು…??? ದೂನ ಗ್ರಾಮದಿಂದ ಖಾಸಗಿ ಬಸ್ ನಲ್ಲಿ ರಿಪ್ಪನ್‌ಪೇಟೆ ಗುಡ್ ಶೆಪರ್ಡ್ ಚರ್ಚ್ ಬಳಿ ಬಂದಿಳಿದ ಥೋಮಸ್ ಬಸ್ ನ ಹಿಂಬದಿಯಿಂದ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದಾಗ ತೀರ್ಥಹಳ್ಳಿಯಿಂದ ಸಾಗರಕ್ಕೆ ತೆರಳುತಿದ್ದ ಇನ್ನೋವಾ(KA…
ಬೈಕ್ ಅಪಘಾತ : ಅಪಘಾತವಾದ ಬೈಕ್ ಮೈಮೇಲೆ ಬಿದ್ದು ಸವಾರ ಸಾವು
ತೀರ್ಥಹಳ್ಳಿ : ತೂದೂರು ಸಮೀಪ ಗಬಡಿ ರೈಸ್ ಮಿಲ್ ಎದುರು ಬೈಕ್ ಅಪಘಾತವಾಗಿದ್ದು ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತೂದೂರು ಸಮೀಪ ಗಬಡಿ ರೈಸ್ ಮಿಲ್ ಎದುರು ಇಂದು ಬೆಳಗಿನ ಜಾವ ಈ ಅಪಘಾತವಾಗಿದೆ. ರಸ್ತೆ ಬದಿಯ ಹೊಂಡಕ್ಕೆ ಬೈಕ್ ಬಿದ್ದಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು 37 ವರ್ಷದ ರವಿನಾಯ್ಕ್ ಎಂದು ಗುರುತಿಸಲಾಗಿದ್ದು, ನಳೀನ್ ಕೊಪ್ಪ ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ. ರಸ್ತೆ…
ಶಿವಮೊಗ್ಗ ಚೂರಿ ಇರಿತ ಪ್ರಕರಣ : ಆರೋಪಿಗಳ ಬಂಧನ – ಒಬ್ಬನ ಕಾಲಿಗೆ ಪೊಲೀಸರ ಗುಂಡೇಟು
ಶಿವಮೊಗ್ಗದ ಕಸ್ತೂರ ಬಾ ರಸ್ತೆಯಲ್ಲಿ ಪ್ರೇಮ್ ಸಿಂಗ್ ಎಂಬ ಕಾರ್ಮಿಕನಿಗೆ ಚಾಕು ಇರಿದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕಸ್ತೂರ್ ಬಾ ರಸ್ತೆಯಲ್ಲಿರುವ ನಂದಿ ಸಿಲ್ಕ್ ನಲ್ಲಿ ಕೆಲಸ ಮಾಡುತ್ತಿದ್ದ ಶ್ರೀ ಪ್ರೇಮ್ ಸಿಂಗ್, 20 ವರ್ಷದ ಯುವಕ ಅಂಗಡಿಯ ಬಾಗಿಲು ಹಾಕಿಕೊಂಡು ಗಾಂಧಿ ಬಜಾರ್ ನ ತರಕಾರಿ ಮಾರುಕಟ್ಟೆಯ ಹತ್ತಿರ ಹೋಗುತ್ತಿದ್ದಾಗ ಯಾರೋ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದರು. ಪ್ರೇಮ್ ಸಿಂಗ್ ರವರಿಗೆ ಹಲ್ಲೆ ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಿದ ಪೊಲೀಸರು 1) ನದೀಮ್ ಬಿನ್…
ಶಿವಮೊಗ್ಗ ಗುಂಪು ಘರ್ಷಣೆ : ಓರ್ವನಿಗೆ ಚಾಕು ಇರಿತ – ಭದ್ರಾವತಿ ನಗರದಲ್ಲೂ 144 ಸೆಕ್ಷನ್ ಜಾರಿ
ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವದ ದಿನದಂದೆ ಶಿವಮೊಗ್ಗದಲ್ಲಿ ವಿಷಮ ಪರಿಸ್ಥಿತಿ ಭುಗಿಲೆದ್ದಿದೆ. ಓರ್ವನಿಗೆ ಚೂರಿ ಇರಿಯಲಾಗಿದೆ ಎನ್ನಲಾಗುತ್ತಿದೆ. ಗಾಂದಿ ಬಜಾರ್ ನಲ್ಲಿ ಪ್ರೇಮ್ ಸಿಂಗ್ ಓರ್ವನಿಗೆ ಚಾಕು ಇರಿದ ಬೆನ್ನಲ್ಲೇ ಅಶೋಕ ನಗರದಲ್ಲಿ ಮತ್ತೋರ್ವನಿಗೆ ಚಾಕುವಿನಿಂದ ಇರಿಯಲಾಗಿದೆ ಎನ್ನಲಾಗುತ್ತಿದ್ದು ಈ ಬಗ್ಗೆ ಅನೇಕ ಗೊಂದಲಗಳಿವೆ. ಇದರಿಂದ ಸ್ವಾತಂತ್ರ್ಯದ ಸಂಭ್ರಮಾಚರಣೆ ಎಲ್ಲವೂ ನೆಗೆದುಬಿದ್ದು ಹೋಗಿದೆ.ಅದರಂತೆ ಭದ್ರಾವತಿ ನಗರದಲ್ಲೂ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಕಾರ್ಮೊಡ ಕವಿದಿದೆ