ಎಡೆಬಿಡದೆ ಸುರಿದ ಮಳೆಗೆ ಕೋಡಿ ಹರಿದು ಜಮೀನುಗಳು ಜಲಾವೃತ !!
ರಿಪ್ಪನ್ ಪೇಟೆ : ಇಲ್ಲಿಗೆ ಸಮೀಪದ ಚಿಕ್ಕಜೇನಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಬಪ್ಪಿಗ ಹಾಗೂ ಕಲ್ಲುಗಟ್ಟ ಸಂಪರ್ಕ ರಸ್ತೆಯ ನಾರಾಯಣಯ್ಯ ಅವರ ಮನೆ ಹತ್ತಿರ ಸತತ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಹತ್ತಿರದ ತಾವರೆಕೆರೆ ತುಂಬಿ ಕೋಡಿ ಹರಿದಿದ್ದು ಗದ್ದೆಗಳು ನೀರಿನಲ್ಲಿ ಮುಳುಗಿದ್ದು ಜನರು ಓಡಾಡುವ ಸಂಪರ್ಕ ರಸ್ತೆಯೂ ಸಹ ನೀರಿನಿಂದ ಜಲಾವೃತವಾಗಿದೆ.ಈ ಮಾರ್ಗದಲ್ಲಿ ಓಡಾಡುವ ಜನರು ಹಾಗೂ ಬೈಕ್ ಸವಾರರು ಈ ರಸ್ತೆಯಲ್ಲಿ ಬಿದ್ದು ಕೈಕಾಲು ಮುರಿದುಕೊಂಡ ಪ್ರಕರಣಗಳು ನಡೆದಿವೆ. ಈ ಸಂಪರ್ಕ ರಸ್ತೆ ಹಾಗೂ…