ತೀರ್ಥಹಳ್ಳಿ : ರಾಜ್ಯ ಸರ್ಕಾರದ ಪಠ್ಯ ಪರಿಷ್ಕರಣೆ ಎಡವಟ್ಟುಗಳ ಬಗ್ಗೆ ರಾಜ್ಯಾದ್ಯಂತ ಪ್ರತಿಭಟನೆ ನೆಡೆಯುತ್ತಿದ್ದು ಸಾಹಿತ್ಯದ ಬಗ್ಗೆ ಸರ್ಕಾರ ತೋರಿರುವ ಅಸಡ್ಡೆಯನ್ನು ಖಂಡಿಸಿ ಜೂನ್ 15 ರ ಬುಧವಾರ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ನೆಡೆಯುವ ಕುಪ್ಪಳ್ಳಿಯ ಕವಿಶೈಲದಿಂದ ಪಾದಯಾತ್ರೆಗೆ ನಾನು ಸಹ ಬೆಂಬಲ ಕೊಡುತ್ತಿದ್ದೇನೆ ಎಂದು ತಿಳಿಸಿದರು.
ಪಟ್ಟಣದ ಬೆಟ್ಟಮಕ್ಕಿಯ ತಮ್ಮ ಮನೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು ರಾಷ್ಟ್ರಕವಿ ಎಂದೇ ಹೆಸರುವಾಸಿಯಾಗಿರುವ ಕುವೆಂಪು ಅವರ ಗೀತೆಯನ್ನು ನಾವೆಲ್ಲರೂ ನಾಡಗೀತೆಯಾಗಿ ಒಪ್ಪಿಕೊಂಡಿದ್ದೆವೆ. ಆದರೆ ಅಧಿಕೃತ ನಾಡಗೀತೆಯನ್ನು ಪಠ್ಯ ಪರಿಷ್ಕರಣೆ ಸಮಿತಿಯ ಅಧ್ಯಕ್ಷರು ಅಗೌರವ ತೋರಿದ್ದಾರೆ. ಆದರೆ ಅಂತಹ ಪಠ್ಯ ಪರಿಷ್ಕರಣೆಯನ್ನು ಸರ್ಕಾರ ಒಪ್ಪಿಕೊಂಡಿದ್ದಾರೆ. ಈಗಿನ ಪಠ್ಯವನ್ನು ಬಿಟ್ಟು ಹಳೆಯ ಪಠ್ಯ ಪುಸ್ತಕವನ್ನೇ ಮಕ್ಕಳಿಗೆ ಕೊಡಬೇಕು ಎಂದು ತಿಳಿಸಿದರು.
ಈ ಸರ್ಕಾರದವರು ಯಾವಾಗಲು ಶ್ರೀರಾಮ ಶ್ರೀರಾಮ ಎನ್ನುತ್ತಾರೆ. ಆದರೆ ರಾಮಾಯಣ ದರ್ಶನಂ ಬರೆದ ಕವಿಗಳ ಪದ್ಯಗಳನ್ನು ಈಗಿನ ಪಠ್ಯ ಪರಿಷ್ಕರಣ ಸಮಿತಿ ಅವಹೇಳನ ಮಾಡಿದೆ. ಆದರೂ ಸರ್ಕಾರ ಸುಮ್ಮನಿರುವುದು ಯಾಕೆ? ಎಂದು ಪ್ರಶ್ನಿಸಿದರು.
ರಾಷ್ಟ್ರಕವಿ ಕುವೆಂಪು ಅವರೊಬ್ಬರೇ ಅಲ್ಲದೆ ನಾರಾಯಣ ಗುರು, ಬಸವಣ್ಣ, ಡಾ. ಬಿ ಆರ್ ಅಂಬೇಡ್ಕರ್, ಶಂಕರಾಚಾರ್ಯರು ಸೇರಿ ಹಲವರಿಗೆ ಚಕ್ರತೀರ್ಥ ನೇತೃತ್ವದ ಸಮಿತಿ ಅವಮಾನ ಮಾಡಿದೆ. ಸಮಿತಿಯನ್ನು ಸರ್ಕಾರ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ. ಟಿ ಎಲ್ ಸುಂದರೇಶ್, ಸಚಿಂದ್ರ ಹೆಗ್ಡೆ, ಸಾಹಿತಿ ರಮೇಶ್ ಶೆಟ್ಟಿ, ರಾಮಚಂದ್ರ, ಹಾರೊಗೊಳಿಗೆ ಪದ್ಭಾನಾಭ್, ವೆಂಕಟೇಶ್ ಹೆಗ್ಡೆ, ಶಬನಮ್, ಸುಶೀಲ ಶೆಟ್ಟಿ, ಬಾಳೇಹಳ್ಳಿ ಪ್ರಭಾಕರ್,ಹಾಲಗದ್ದೆ ಉಮೇಶ್, ಶಿರುಪತಿ ಮಂಜುನಾಥ್ , ಕಂಡಿಲ್ ರಾಘವೇಂದ್ರ, ರೆಹಮತುಲ್ಲಾ ಅಸಾದಿ, ಕುರುವಳ್ಳಿ ನಾಗರಾಜ್ ಸೇರಿ ಹಲವರು ಉಪಸ್ಥಿತರಿದ್ದರು.
ಮಾಹಿತಿ: ಅಕ್ಷಯ್ ಕುಮಾರ್