ಆನಂದಪುರ ಸಮೀಪದ ಹೊಸಂತೆ ಗ್ರಾಮದಲ್ಲಿ ಇತ್ತೀಚಿಗೆ ಹಸು ಮೈ ತೊಳೆಯಲು ಹೋದಾಗ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಬಾಲಕನ ಮನೆಗೆ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರು ರವರು ಭೇಟಿ ನೀಡಿದರು.
ಇಂದು ಮೃತ ಬಾಲಕನ ಮನೆಗೆ ಭೇಟಿ ನೀಡಿ ಮೃತ ಬಾಲಕನ ಪೋಷಕರಾದ ರಮೇಶ್ ಹಾಗೂ ಸುಧಾ ದಂಪತಿಗಳಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿ ಆರ್ಥಿಕ ನೆರವು ನೀಡಿದರು.
ಈ ಸಂಧರ್ಭದಲ್ಲಿ ಪ್ರಶಾಂತ್,ಯೋಗೆಶ್ ,ರಮೇಶ್ , ದೇವೆಂದ್ರಪ್ಪ ,ಪೃಥ್ವಿ ಹಾಗೂ ಇನ್ನಿತರರಿದ್ದರು.
ಜೂನ್ 4ರಂದು ನಡೆದಿದ್ದ ಘಟನೆ :
ಹಸು ಮೈ ತೊಳೆಯಲು ಹೋದ ಬಾಲಕ ಕಾಲು ಜಾರಿ ಬಿದ್ದು ನೀರು ಪಾಲಾದ ಮನಕಲಕುವ ಘಟನೆ ಸಾಗರ ತಾಲೂಕು ಹಿರೇಬಿಲಗುಂಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಂತೆ ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿತ್ತು.
ಬಾಲಕನ ಪೋಷಕರಾದ ರಮೇಶ್ ಹಾಗೂ ಸುಧಾ ಇವರು ಬೇರೆ ಊರಿಗೆ ತೆರಳಿದ್ದರು ಆ ಸಂದರ್ಭದಲ್ಲಿ ಇವರ ಮಗ ಹಸುಗಳನ್ನು ಮೈ ತೊಳಸಿಕೊಂಡು ಬರಲು ಗ್ರಾಮದ ಬೆಲೆಸಿನಕೆರೆ ಕೆರೆಗೆ ತೆರಳಿದ್ದ. ಮೈ ತೊಳೆಯುವ ಸಂದರ್ಭದಲ್ಲಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದನು.
ಗ್ರಾಮಸ್ಥರು ಅಗ್ನಿಶಾಮಕ ದಳದವರಿಗೆ ಮಾಹಿತಿಯನ್ನು ತಿಳಿಸಿ ಅಗ್ನಿಶಾಮಕ ದಳದ ಸಹಾಯದಿಂದ ಮೃತ ಬಾಲಕನ ಶವವನ್ನು ಕೆರೆಯಿಂದ ಮೇಲಕ್ಕೆತ್ತಲಾಗಿತ್ತು.