ಆಷಾಡ ಮಾಸದ ನಂತರ ಕುಮಾರಸ್ವಾಮಿ ರಂಗಪ್ರವೇಶ: ಸಿದ್ದವಾಗಿದೆ 150 ವಿಧಾನಸಭಾ ಕ್ಷೇತ್ರದ ನೀಲನಕ್ಷೆ
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಸದ್ದಿಲ್ಲದೆ ಸಜ್ಜಾಗುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆಷಾಢ ಮಾಸ ಕಳೆಯುತ್ತಿದ್ದಂತೆ “ರಂಗಪ್ರವೇಶ’ಕ್ಕೆ ನೀಲನಕ್ಷೆ ರೂಪಿಸುತ್ತಿದ್ದಾರೆ. ಕಳೆದ ಎರಡು ವಿಧಾನಸಭೆ ಚುನಾವಣೆಯ ಅನುಭವದ ಆಧಾರದ ಮೇಲೆ 2023ರಲ್ಲಿ 150 ಕ್ಷೇತ್ರಗಳ ಗುರಿಯೊಂದಿಗೆ ರಾಜ್ಯ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ತಮಗೆ ಜನಪ್ರಿಯತೆ ತಂದುಕೊಟ್ಟ “ಗ್ರಾಮವಾಸ್ತವ್ಯ’ ನಡೆಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಹಳೇ ಮೈಸೂರು, ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗದ ಕ್ಷೇತ್ರಗಳನ್ನು ಪಟ್ಟಿ ಮಾಡಿಕೊಂಡಿದ್ದು, ಪ್ರವಾಸದ ಅನಂತರ…