ಫೋನ್ ಪೇ ಮೂಲಕ ಲಂಚ ಸ್ವೀಕಾರ – ಹೊಸನಗರದ ಹೆಡ್ ಕಾನ್ಸ್ ಟೇಬಲ್ ಅಮಾನತು

ಫೋನ್ ಪೇ ಮೂಲಕ ಲಂಚ ಸ್ವೀಕಾರ – ಹೊಸನಗರದ ಹೆಡ್ ಕಾನ್ಸ್ ಟೇಬಲ್ ಅಮಾನತು

ಓಸಿ, ಮಟ್ಕವನ್ನು ಎಡೆಮುರಿ ಕಟ್ಟಿ, ನಿಯಂತ್ರಿಸಬೇಕಾಗಿರುವುದು ಪೊಲೀಸರ ಕೆಲಸ. ಆದರೇ ಇಲ್ಲೊಬ್ಬ ಪೊಲೀಸಪ್ಪ ಮಾಡಿದ್ದು ಮಾತ್ರ ಪೊಲೀಸರೇ ತಲೆ ತಗ್ಗಿಸುವಂತ ಕೆಲಸ. ಅದೇನಂದ್ರೆ ಓಸಿ, ಮಟ್ಕ ದಂಧೆಕೋರರೊಂದಿಗೆ ಶಾಮೀಲಾಗಿ, ಪೋನ್ ಪೇ ಮೂಲಕವೇ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದಾನೆ.

ಹೌದು.. ಕಳೆದ ಆಗಸ್ಟ್.18ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ಠಾಣೆಯ ಪೊಲೀಸ್ ಹೆಡ್ ಕಾನ್ಸ್ ಸ್ಟೇಬಲ್ ಪ್ರಕಾಶ್.ಎನ್ ಎಂಬುವರು ತಮ್ಮ ಠಾಣಾ ವ್ಯಾಪ್ತಿಯ ಮಾರುತಿಪುರ, ಕೇಶವಪುರ ಮತ್ತು ಬಟ್ಟೆಮಲ್ಲಪ್ಪ ಭಾಗಕ್ಕೆ ರೌಂಡ್ಸ್ ಹೋಗಿದ್ದಾರೆ. ಈ ವೇಳೆಯಲ್ಲಿ ಓಸಿ, ಮಟ್ಕಾ, ಇಸ್ಪೀಟ್ ಆಡುವವರಿಂದ ಪೋನ್ ಪೇ ಮೂಲಕ ಹಣವನ್ನು ಸ್ವೀಕರಿಸಿದ್ದಾರೆ.

ಹೆಚ್.ಸಿ ಪ್ರಕಾಶ್ ಅವರು ಪೋನ್ ಪೇ ಮೂಲಕ ಓಸಿ ದಂಧೆಕೋರರಿಂದ ಲಂಚವಾಗಿ ಪೋನ್ ಪೇ ಮೂಲಕ ಹಣ ಸ್ವೀಕರಿಸಿದಂತ ಸ್ಕ್ರೀನ್ ಶಾಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸೂಕ್ತ ತನಿಖೆಗೆ ಇಲಾಖೆ ಆದೇಶಿಸಿತ್ತು.

ಹೊಸನಗರ ಠಾಣೆಯ ಪಿಎಸ್‌ಐ ಅವರು ಹೆಡ್ ಕಾನ್ಸ್ ಸ್ಟೇಬಲ್ ಪ್ರಕಾಶ್ ಎನ್ ಅವರು ಪೋನ್ ಪೇ ಮೂಲಕ ಓಸಿ, ಮಟ್ಕಾ, ಇಸ್ಪೀಟ್ ಆಡುವವರಿಂದ ವೈಯಕ್ತಿಕವಾಗಿ ಹಣ ಪಡೆದಿದ್ದರ ಬಗ್ಗೆ ತನಿಖೆ ನಡೆಸಿದಾಗ, ಅದು ಸತ್ಯವೆಂಬುದಾಗಿ ತಿಳಿದು ಬಂದಿತ್ತು. ಈ ವರದಿಯನ್ನು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಅವರಿಗೆ ಸಲ್ಲಿಸಿದ್ದರು.

ಈ ವರದಿಯನ್ನು ಆಧರಿಸಿ, ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಹೊಸನಗರ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಪ್ರಕಾಶ್ ಎನ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ. ಈ ಮೂಲಕ ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವಂತ ಕೆಲಸ ಮಾಡಿದಂತ ಹೆಚ್.ಸಿಗೆ ಬಿಸಿ ಮುಟ್ಟಿಸಿದ್ದಾರೆ.

Leave a Reply

Your email address will not be published. Required fields are marked *