ಅರಸಾಳು ಮಾಲ್ಗುಡಿ ಮ್ಯೂಸಿಯಂಗೆ ರೈಲ್ವೆ ಪ್ರಧಾನ ವ್ಯವಸ್ಥಾಪಕ ಭೇಟಿ :

ರಿಪ್ಪನ್‌ಪೇಟೆ: ಸಮೀಪದ ಅರಸಾಳು ರೈಲ್ವೆ ನಿಲ್ದಾಣದಲ್ಲಿರುವ ಮಾಲ್ಗುಡಿ ಮ್ಯೂಸಿಯಂಗೆ ನೈರುತ್ಯ ರೈಲ್ವೆಯ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.


ಈ ಸಂದರ್ಭದಲ್ಲಿ ಅರಸಾಳು ಗ್ರಾಮ ಪಂಚಾಯತಿ ಅಧ್ಯಕ್ಷ ಉಮಾಕರ ನೇತೃತ್ವದಲ್ಲಿ ಗ್ರಾಮಸ್ಥರು, ವಿವಿಧ ಸಂಘಸಂಸ್ಥೆಗಳ  ಮುಖಂಡರು ಜಿಎಂ ರವರನ್ನು ಭೇಟಿಮಾಡಿ ಹರಿಹರ-ಬೈಂದೂರು ರಾಜ್ಯ ಹೆದ್ದಾರಿಯ ಪಕ್ಕದಲ್ಲಿರುವ ಅರಸಾಳು ರೈಲು ನಿಲ್ದಾಣಕ್ಕೆ ರೈಲು ನಿಲುಗಡೆಗಾಗಿ 4 ಕೋಟಿ ರೂ. ಅನುದಾನದಲ್ಲಿ ಪ್ಲಾಟ್‌ಫಾರಂ ಜೊತೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿದೆ. ಬ್ರಿಟೀಷರ ಕಾಲದಿಂದಲೂ ಜನನಿಬಿಡ ಪ್ರದೇಶವಾಗಿದ್ದ ನಿಲ್ದಾಣದಲ್ಲಿ ಪ್ರತಿ ರೈಲುಗಳು ನಿಲುಗಡೆಗೊಂಡು ಸಂಚರಿಸುತ್ತಿದ್ದವು. ಇತ್ತೀಚಿನ ಕೆಲವುವರ್ಷಗಳಿಂದ ಬ್ರಾಡ್‌ಗೇಜ್ ಆಗಿ ಪರಿವರ್ತನೆಗೊಂಡಿದ್ದರು ರೈಲುನಿಲುಗಡೆಗೆ ಸೂಕ್ತವ್ಯವಸ್ಥೆ ಕಲ್ಪಿಸಲಾಗಿದ್ದರೂ ಬೆಂಗಳೂರು-ಮೈಸೂರು ಎಕ್ಸಪ್ರಸ್ ರೈಲುಗಳು ನಿಲುಗಡೆಗೊಳ್ಳದೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಮುಖ್ಯ ಅಧಿಕಾರಿಗಳಾದ ತಾವುಗಳು ನಮ್ಮೂರಿನಲ್ಲಿ ರೈಲು ನಿಲುಗಡೆ ಮಾಡಿಸಬೇಕಾಗಿ ಕೋರಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಜಿಎಂ ಸಂಜೀವ್ ಕಿಶೋರ್ ಮಾತನಾಡಿ ರೈಲು ಸಂಚಾರ, ನಿಲುಗಡೆ ಅನುಮತಿ ವಿಚಾರವನ್ನು ದೆಹಲಿಯ ಕೇಂದ್ರ ರೈಲ್ವೆ ಮಂಡಳಿಯಲ್ಲಿ ನಿರ್ಧಾರವಾಗಬೇಕಾಗಿರುವುದರಿಂದ ಅವರ ಗಮನಕ್ಕೆ ತರುತ್ತೇನೆ ಎಂದರು.


ನಂತರ ಮಾಲ್ಗುಡಿ ಡೇಸ್ ನಲ್ಲಿ ಅಧಿಕಾರಿಗಳೊಂದಿಗೆ ನೈರುತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಕೆಲ ಸಮಯ ಕಳೆದು  ರೈಲ್ವೆ ನಿಲ್ದಾಣದ ಆವರಣದಲ್ಲಿ ನೆನಪಿಗಾಗಿ ಅಲಂಕಾರಿಕ ಗಿಡ ನೆಟ್ಟರು.


ಈ ಸಂದರ್ಭದಲ್ಲಿ ಡಿಆರ್‌ಎಂ ರಾಹುಲ್ ಅಗರವಾಲ್, ಹಿರಿಯ ರೈಲ್ವೆ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ, ಮುಖಂಡರಾಧ ಪಿಯೂಸ್ ರೋಢ್ರಿಗಸ್, ಗಾಯಿತ್ರಿ ವಿನಾಯಕ, ಉಂಡುಗೋಡು ನಾಗಪ್ಪ, ಗೋಪಾಲಕೃಷ್ಣ, ಗೋನ್ಸಾಲೀಸ್  ಇನ್ನಿತರರಿದ್ದರು.

ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ👇




ಕೆಂಚನಾಲದಲ್ಲಿ ರೈಲ್ವೆ ಗೇಟ್ ವ್ಯವಸ್ಥೆ ಅಳವಡಿಸುವಂತೆ ಮನವಿ :


ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಕೆಂಚನಾಲ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಉಬೇದುಲ್ಲಾ ಷರೀಫ್ ಹಾಗೂ ತಾ.ಪಂ.ಮಾಜಿ ಅಧ್ಯಕ್ಷ ವೀರೇಶ ಆಲುವಳ್ಳಿ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತ್ಯೇಕ ಮನವಿ ಸಲ್ಲಿಸಿದರು. 

ಮೊದಲು ಇದ್ದ ರೈಲ್ವೆ ಗೇಟ್ ವ್ಯವಸ್ಥೆಯನ್ನು ರದ್ದುಪಡಿಸಿ ಕೆಳಸೇತುವೆ ನಿರ್ಮಾಣಮಾಡಿರುವುದು ಅವೈಜ್ಞಾನಿಕವಾಗಿದೆ. ಮಳೆಗಾಲದಲ್ಲಿ ನೀರು ನಿಂತು ಸಂಚಾರಕ್ಕೆ ತೊಡಕಾಗುತ್ತಿದೆ ಹಾಗೂ ಭಾರಿವಾಹನಗಳ ಓಡಾಟಕ್ಕೆ ಸಾಧ್ಯವಾಗುವುದಿಲ್ಲ ಇದರಿಂದ ಹತ್ತಾರು ಗ್ರಾಮದ ಜನತೆಗೆ ತೊಂದರೆಯಾಗುತ್ತಿದೆ. ಆದ್ದರಿಂದ ಮೊದಲಿದ್ದ ರೈಲ್ವೇಗೇಟಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೇಂದು ಮನವಿ ಸಲ್ಲಿಸಿದರು. 

ಮನವಿ ಪಡೆದ ಅಧಿಕಾರಿ ಮೇಲ್ಸೇತುವೆ ನಿರ್ಮಿಸುವ ಕುರಿತು ಆಲೋಚಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. 

Leave a Reply

Your email address will not be published. Required fields are marked *