ಶಿವಮೊಗ್ಗ ನಗರದ ಹಳೆ ಸೇತುವೆಯ ಬಳಿಯಲ್ಲಿ ಯುವ ಜೋಡಿಯೊಂದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇನ್ನೂ ಈ ವೇಳೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಹಾಗೂ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ.
ಯುವ ಜೋಡಿಗಳು ಹಳೆಸೇತುವೆ ಬಳಿ ಬಂದು ಕೆಲ ಹೊತ್ತು ಮಾತನಾಡ್ತಿದ್ದ ಜೋಡಿ ಬಳಿಕ ಬ್ರಿಡ್ಜ್ನಿಂದ ನದಿಗೆ ಹಾರಲು ಮುಂದಾಗಿದ್ದನ್ನ ಅಲ್ಲಿದ್ದವರು ಗಮನಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಯುವಕ ನದಿಗೆ ಹಾರಿದ್ದಾನೆ. ಯುವತಿಯನ್ನು ಅಲ್ಲಿದ್ದವರು ಹಿಡಿದು ರಕ್ಷಿಸಿದ್ದಾರೆ.
ಇನ್ನೂ ನದಿಗೆ ಹಾರಿದ ಯುವಕ ನೇರವಾಗಿ ಹೊಳೆಯ ಬಂಡೆಯ ಮೇಲೆ ಬಿದ್ದಿದ್ದ. ಪರಿಣಾಮ ಆತನಿಗೆ ಗಂಭೀರ ಗಾಯಗಳಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲವಾದರೂ, ಸ್ಥಳೀಯರು ಪ್ರೇಮ ವೈಫಲ್ಯ ಕಾರಣ ಇರಬಹುದು ಎನ್ನುತ್ತಿದ್ದಾರೆ.
ಇನ್ನೂ ಯುವಜೋಡಿ ಯಾರು ಏನು ಎಂಬುವುದು ತಿಳಿದುಬಂದಿಲ್ಲ.