w
Headlines
Home » RTO ಚಲನ್ ಹೆಸರಿನಲ್ಲಿ APK ಫೈಲ್ ಕಳುಹಿಸಿ ಮಹಿಳಾ ಪೊಲೀಸ್ ಅಧಿಕಾರಿಗೆ ₹6.78 ಲಕ್ಷ ವಂಚನೆ

RTO ಚಲನ್ ಹೆಸರಿನಲ್ಲಿ APK ಫೈಲ್ ಕಳುಹಿಸಿ ಮಹಿಳಾ ಪೊಲೀಸ್ ಅಧಿಕಾರಿಗೆ ₹6.78 ಲಕ್ಷ ವಂಚನೆ

GridArt 20260512

RTO ಚಲನ್ ಹೆಸರಿನಲ್ಲಿ APK ಫೈಲ್ ಕಳುಹಿಸಿ ಮಹಿಳಾ ಪೊಲೀಸ್ ಅಧಿಕಾರಿಗೆ ₹6.78 ಲಕ್ಷ ವಂಚನೆ

A woman police officer in Shikaripura lost Rs 6.78 lakh in an online fraud after opening a fake RTO challan APK file sent to her mobile phone. A case has been registered at Shivamogga CEN Police Station.

ಶಿಕಾರಿಪುರ : ಆನ್‌ಲೈನ್ ವಂಚಕರು RTO ಚಲನ್ ಹೆಸರಿನಲ್ಲಿ APK ಫೈಲ್ ಕಳುಹಿಸಿ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಹಣ ವಂಚಿಸಿರುವ ಘಟನೆ ಶಿಕಾರಿಪುರದಲ್ಲಿ ನಡೆದಿದೆ.

ಮೇ 8ರಂದು ಮಹಿಳಾ ಪೊಲೀಸ್ ಅಧಿಕಾರಿಯ ಮೊಬೈಲ್ ಸಂಖ್ಯೆಗೆ RTO ಚಲನ್ ಹೆಸರಿನಲ್ಲಿ APK ಫೈಲ್ ಬಂದಿತ್ತು. ವಾಹನಕ್ಕೆ ಸಂಬಂಧಿಸಿದ ದಂಡವಿರಬಹುದೆಂದು ಭಾವಿಸಿದ ಅವರು ಆ ಫೈಲ್ ಅನ್ನು ಓಪನ್ ಮಾಡಿದ್ದಾರೆ. ಆದರೆ, ಫೈಲ್‌ನಲ್ಲಿ ಯಾವುದೇ ಮಾಹಿತಿ ಕಾಣಿಸದ ಹಿನ್ನೆಲೆ ತಕ್ಷಣವೇ ಆ್ಯಪ್‌ನಿಂದ ಹೊರಬಂದಿದ್ದಾರೆ.

ಆದರೆ ಕೆಲವೇ ಕ್ಷಣಗಳಲ್ಲಿ ಅವರ ಮೊಬೈಲ್‌ಗೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗುತ್ತಿರುವ ಮೆಸೇಜ್‌ಗಳು ಬರತೊಡಗಿವೆ. ಹಂತ ಹಂತವಾಗಿ ಒಟ್ಟು ₹6,78,759 ಹಣ ಖಾತೆಯಿಂದ ವರ್ಗಾವಣೆಯಾಗಿರುವುದನ್ನು ಕಂಡು ಅವರು ಬೆಚ್ಚಿಬಿದ್ದಿದ್ದಾರೆ.

ತಕ್ಷಣವೇ ಎಚ್ಚೆತ್ತುಕೊಂಡ ಮಹಿಳಾ ಅಧಿಕಾರಿ, ಘಟನೆ ಕುರಿತು ಶಿವಮೊಗ್ಗದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ವಂಚಕರನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಸೈಬರ್ ವಂಚಕರು APK ಫೈಲ್, ಲಿಂಕ್ ಹಾಗೂ ನಕಲಿ ಆ್ಯಪ್‌ಗಳ ಮೂಲಕ ಜನರ ಬ್ಯಾಂಕ್ ಮಾಹಿತಿಯನ್ನು ಕಳವು ಮಾಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.