Headlines

ಭದ್ರಾವತಿ ಶಾಸಕರು ನಾಮಕಾವಾಸ್ತೆ, ಮಕ್ಕಳದ್ದೇ ದರ್ಬಾರು – ಜೆಡಿಎಸ್  ನಾಯಕಿ ಶಾರದಾ ಅಪ್ಪಾಜಿಗೌಡ  ಆರೋಪ

ಭದ್ರಾವತಿ ಶಾಸಕರು ನಾಮಕಾವಾಸ್ತೆ, ಮಕ್ಕಳದ್ದೇ ದರ್ಬಾರು – ಜೆಡಿಎಸ್  ನಾಯಕಿ ಶಾರದಾ ಅಪ್ಪಾಜಿಗೌಡ  ಆರೋಪ ಶಿವಮೊಗ್ಗ  : ‘ಭದ್ರಾವತಿಯಲ್ಲಿ ಅರಣ್ಯ ಕಬಳಿಕೆ, ಮರಳು, ಇಸ್ಪೀಟ್ ಹಾಗೂ ಗಾಂಜಾ ಮಾಫಿಯಾಗಳಿವೆ. ಶಾಸಕರ ಬೆಂಬಲಿತರೇ ಈ ಮಾಫಿಯಾಗಳಲ್ಲಿದ್ದಾರೆ. ಅಧಿಕಾರಿಗಳು ಶಾಸಕರ ಚೇಲಾಗಳಾಗಿದ್ದಾರೆ’ ಎಂದು ಭದ್ರಾವತಿ ಜೆಡಿಎಸ್ ಪಕ್ಷದ ನಾಯಕಿ ಶಾರದಾ ಅಪ್ಪಾಜಿಗೌಡ  ಆರೋಪಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು,  ಶಾಸಕರು ನಾಮಕಾವಸ್ತೆಯಾಗಿದ್ದಾರೆ. ಅವರ ಇಬ್ಬರು ಮಕ್ಕಳೇ ಆಳ್ವಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಏನಾದರೂ ದೂರು ಕೊಟ್ಟರೆ, ಎಂಎಲ್‌ಎ ಮನೆಗೆ ಹೋಗಿ ಬನ್ನಿ…

Read More

ಹುತಾತ್ಮ ಯೋಧ ಮಂಜುನಾಥ್ ಕುಟುಂಬಕ್ಕೆ ಸಚಿವರ ಸಾಂತ್ವನ

ಹುತಾತ್ಮ ಯೋಧ ಮಂಜುನಾಥ್ ಕುಟುಂಬಕ್ಕೆ ಸಚಿವರ ಸಾಂತ್ವನ ಸಂಕೂರು ಶಾಲೆ ಅಭಿವೃದ್ಧಿ: ಪುತ್ಥಳಿ ನಿರ್ಮಾಣ: ಮಧು ಬಂಗಾರಪ್ಪ ಶಿವಮೊಗ್ಗ : ಅಗ್ರಾದಲ್ಲಿ ತರಬೇತಿ ವೇಳೆ ನಿಧನರಾಗಿದ್ದ  ಭಾರತೀಯ ವಾಯುಸೇನೆಯ ಪ್ಯಾರಾಜೆಂಪ್ ಜ್ಯೂನಿಯರ್ ವಾರೆಂಟ್ ಅಧಿಕಾರಿ ಮಂಜುನಾಥ್ ಅವರ ಹೊಸನಗರ ತಾಲೂಕು ಸಂಕೂರಿನ ಮನೆಗೆ ಸಚಿವ ಮಧು ಬಂಗಾರಪ್ಪ ಅವರು ತೆರಳಿ ಯೋಧನ ಪತ್ನಿ, ಪೋಷಕರು ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಸಚಿವ ಎಸ್. ಮಧು ಬಂಗಾರಪ್ಪ ಅವರು ಮಾತನಾಡಿ, ಕುಟುಂಬದ ಪ್ರಮುಖ…

Read More

ಕೋಣಂದೂರು ಸುತ್ತಮುತ್ತ ಹಾಡಹಗಲೇ ದೇವಸ್ಥಾನ, ಮನೆಗಳಲ್ಲಿ ಕಳ್ಳತನ

ಕೋಣಂದೂರು ಸುತ್ತಮುತ್ತ ಹಾಡಹಗಲೇ ದೇವಸ್ಥಾನ, ಮನೆಗಳಲ್ಲಿ ಕಳ್ಳತನ ತೀರ್ಥಹಳ್ಳಿ :ತಾಲೂಕಿನ ಕೋಣಂದೂರು ಸುತ್ತಮುತ್ತ ಕಳ್ಳತನ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿದ್ದು, ಮಲೆನಾಡಿಗರಲ್ಲಿ ಆತಂಕ ಮನೆ ಮಾಡಿದೆ.ಕೋಣಂದೂರು ಸಮೀಪದ ಗುಡ್ಡೆಕೊಪ್ಪದಲ್ಲಿ ಶುಕ್ರವಾರ ಮಧ್ಯಾಹ್ನ ಮನೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು, ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಬೆಲೆಬಾಳುವ ವಸ್ತುಗಳು ಸಿಕ್ಕಿಲ್ಲದಿರುವುದರಿಂದ ವಸ್ತುಗಳನ್ನು ಪುಡಿ ಪುಡಿ ಮಾಡಿ ಹಿಂಭಾಗದ ಬಾಗಿಲಿನಿಂದ ಹೊರ ಹೋಗಿದ್ದಾರೆ. ಹಿರೇಸರದ ಮನೆಯೊಂದರಲ್ಲಿದ್ದ 75,000 ನಗದು ಹಾಗೂ ಬಂಗಾರ, ಬೆಳ್ಳಿಯನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಆಲೂರು ಹೊಸಕೊಪ್ಪದ ಉಮಾಮಹೇಶ್ವರ…

Read More

ಅಪ್ರಾಪ್ತನಿಂದ ತ್ರಿಬಲ್ ರೈಡಿಂಗ್ – ಬೈಕ್ ಮಾಲೀಕನಿಗೆ 25 ಸಾವಿರ ರೂ.ದಂಡ

ಅಪ್ರಾಪ್ತನಿಂದ ತ್ರಿಬಲ್ ರೈಡಿಂಗ್ – ಬೈಕ್ ಮಾಲೀಕನಿಗೆ 25 ಸಾವಿರ ರೂ.ದಂಡ ಶಿವಮೊಗ್ಗ : ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯ   ಹಳೇಮಂಡ್ಲಿ ಪಂಪ್ ಹೌಸ್ ಹತ್ತಿರ ಸಂಚಾರಿ ಎಸ್ ಯ  ಭಾರತಿ.ಬಿ.ಹೆಚ್,  ವಾಹನ ತಪಾಸಣೆ ಮಾಡುವ ಸಮಯದಲ್ಲಿ ಕೆಎ ೧೪-೧೪ ಇ ಡಬ್ಲು ೭೬೧೮ ನಂಬರಿನ ಹೀರೋ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಬೈಕ್ ಅನ್ನು ತಪಾಸಣೆ ಮಾಡಿದಾಗ ಅಪ್ರಾಪ್ತ ಮತ್ತು ಕಾನೂನು ಸಂಘರ್ಷಕ್ಕೊಳಗಾದ ಬಾಲಕ ಚಲಾಯಿಸುತ್ತಿರುವುದು ಪತ್ತೆಯಾಗಿದೆ. ಜೊತಗೆ  ಅಪ್ರಾಪ್ತ ಬಾಲಕನು ಹೆಲ್ಮೆಟ್ ಧರಿಸದೇ…

Read More

ಯುವ ಕಾಂಗ್ರೆಸ್ ಚುನಾವಣೆ – ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶಿವಮೊಗ್ಗದ ಸೋನಿಯಾ ಆಯ್ಕೆ

ಯುವ ಕಾಂಗ್ರೆಸ್ ಚುನಾವಣೆ – ಮಹಿಳಾ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಶಿವಮೊಗ್ಗದ ಸೋನಿಯಾ ಆಯ್ಕೆ ಶಿವಮೊಗ್ಗ:  ಇತ್ತೀಚಿಗೆ ನಡೆದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನ ಆಂತರಿಕ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಏಕೈಕ ಮಹಿಳಾ ಅಭ್ಯರ್ಥಿಯಾಗಿ 15 ಸಾವಿರಕ್ಕೂ ಹೆಚ್ಚು ಮತಗಳಿಂದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೋನಿಯಾ .ಎಂ ಆಯ್ಕೆಯಾಗಿದ್ದಾರೆ. ಯುವ ಕಾಂಗ್ರೆಸ್ ಬೂತ್ ಅಧ್ಯಕ್ಷರಾಗಿ, ವಾರ್ಡ್ ಅಧ್ಯಕ್ಷರಾಗಿ, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿ,  ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್…

Read More

ಶಾಸಕರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಂದ ನೆರೆ ಹಾವಳಿಗೆ ತುತ್ತಾಗಿದ್ದ ಬಡ ಕುಟುಂಬದ ಮನೆ ದುರಸ್ತಿ

ಶಾಸಕರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಂದ ನೆರೆ ಹಾವಳಿಗೆ ತುತ್ತಾಗಿದ್ದ ಬಡ ಕುಟುಂಬದ ಮನೆ ದುರಸ್ತಿ ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ರವರ ಹುಟ್ಟುಹಬ್ಬ ಫೆಬ್ರವರಿ 22 ರಂದು ಆಚರಿಸುತಿದ್ದು ಈ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು  ಮಾನವೀಯ ಕೆಲಸವೊಂದನ್ನು ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಹೌದು ಹೊಸನಗರ ತಾಲೂಕಿನ ನಿಟ್ಟೂರು ಭಾಗದ ಬಡ ಬ್ರಾಹ್ಮಣ ಜನಾಂಗದ ದಂಪತಿಗಳಿಬ್ಬರು ನೆರೆ ಹಾವಳಿಯಿಂದ ತಮ್ಮ ಮನೆ ಶಿಥಿಲಾವಸ್ಥೆಗೆ ತಲುಪಿತ್ತು ಸರ್ಕಾರದ…

Read More

ರಕ್ತದಾನ ಮಾಡಿ ಆದರ್ಶ ಮೆರೆದ ನವ ದಂಪತಿಗಳು

ತಾಳಿ ಕಟ್ಟಿ ರಕ್ತದಾನ ಮಾಡಿ ಆದರ್ಶ ಮೆರೆದ ನವ ದಂಪತಿ ಶಿವಮೊಗ್ಗ : ಮದುವೆಗೆಂದು ನೆರೆದಿದ್ದ ಅಪಾರ ಜನ ಸಮುದಾಯದ ನಡುವೆ ತಾಳಿ ಕಟ್ಟುವ ಕಾರ್ಯ ಮುಗಿಯುತ್ತಿದ್ದಂತೆ ನವ ದಂಪತಿಗಳು ಮಂಟಪದಲ್ಲಿಯೇ ಬಹಳ ಖುಷಿಯಿಂದ ರಕ್ತದಾನ ಮಾಡಿ ಜೀವನ ಸಾರ್ಥಕವೆನಿಸಿಕೊಂಡ ಕ್ಷಣ ಇಲ್ಲಿನ ಗುಡ್ಡೇಕಲ್ ಗುಡ್ಡೇಕಲ್ ಸಮುದಾಯ ಭವನದಲ್ಲಿ ಸೋಮವರ ನಡೆಯಿತು. ಬೊಮ್ಮನಕಟ್ಟೆ ವಾಸಿ  ಯಶವಂತ್ ಅವರ ವಿವಾಹವು  ತನುಜಾ ಜೊತೆ ಶಿವಮೊಗ್ಗದ ಈ ಸಂದರ್ಭದಲ್ಲಿ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಭದ್ರಾವತಿ ಟ್ರಾಫಿಕ್  ಹೆಡ್ಕಾನ್ಸ್‌ಟೇಬಲ್ ಹಾಲೇಶಪ್ಪ ರಕ್ತದಾನ…

Read More

ಕಾಲೇಜಿನ‌ ಲ್ಯಾಬ್ ನಲ್ಲೇ ನೇಣು ಬಿಗಿದುಕೊಂಡು ಲ್ಯಾಬ್ ಬೋಧಕ ಸಾವು

ಕಾಲೇಜಿನ‌ ಲ್ಯಾಬ್ ನಲ್ಲೇ ನೇಣು ಬಿಗಿದುಕೊಂಡು ಲ್ಯಾಬ್ ಬೋಧಕ ಸಾವು ಶಿವಮೊಗ್ಗ: ನಗರದ ಖಾಸಗಿ ಕಾಲೇಜಿನ ಸಿಬ್ಬಂದಿಯೊಬ್ಬರು ಕಾಲೇಜಿನ ಪ್ರಯೋಗ ಶಾಲೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶಿವಮೊಗ್ಗದ ಸಾಗರ ರಸ್ತೆಯ ಲ್ಲಿರುವ ಈ  ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಧೃವಕುಮಾರ್ (೪೭) ಸೋಮವಾರ  ಮಧ್ಯಾಹ್ನ ಲ್ಯಾಬೊರೇಟರಿಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಇವರು ಲ್ಯಾಬ್ ಇನ್‌ಸ್ಟ್ರಕ್ಟರ್ ಆಗಿ ವರ್ಕ್ ಮಾಡುತ್ತಿದ್ದರು. ಮೂಲತಃ ಚನ್ನಗಿರಿ ತಾಲೂಕಿನ ಬೊಮ್ಮೇನಹಳ್ಳಿಯವರಾಗಿದ್ದ ಇವರು ಆಯನೂರಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಎರಡು ತಿಂಗಳ ಹಿಂದೆ…

Read More

RIPPONPETE | ಸಾವಿರಾರು ರೂ ಮೌಲ್ಯದ ಮೊಬೈಲ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಡ ಮಹಿಳೆ

RIPPONPETE | ಸಾವಿರಾರು ರೂ ಮೌಲ್ಯದ ಮೊಬೈಲ್ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಡ ಮಹಿಳೆ ರಿಪ್ಪನ್‌ಪೇಟೆ : ಪಟ್ಟಣಕ್ಕೆ ತರಕಾರಿ ತರಲು ಬಂದ ಬಡ ಕಾರ್ಮಿಕ ಮಹಿಳೆಯೊಬ್ಬಳು ರಸ್ತೆಯಲ್ಲಿ ತನಗೆ ಸಿಕ್ಕ ₹ 20 ಸಾವಿರ ಮೌಲ್ಯದ ಮೊಬೈಲ್‌ ಅನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ. ರಿಪ್ಪನ್‌ಪೇಟೆ ಪಟ್ಟಣದಲ್ಲಿ ದಿನಗೂಲಿ ನೌಕರಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೋಹಿಣಿ‌ ಮರಿಯಾ ಎಂಬುವವರಿಗೆ ಶಿವಮೊಗ್ಗ ರಸ್ತೆಯ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ಸಾವಿರಾರು ರೂ ಮೌಲ್ಯದ ಮೊಬೈಲ್ ಸಿಕ್ಕಿದೆ…

Read More

ನಿಯಂತ್ರಣ ತಪ್ಪಿ ಧರೆಗೆ ಗುದ್ದಿದ KSRTC ಬಸ್

ನಿಯಂತ್ರಣ ತಪ್ಪಿ ಧರೆಗೆ ಗುದ್ದಿದ ಕೆ ಎಸ್ಸಾರ್ಟಿಸಿ ಬಸ್ ಶಿವಮೊಗ್ಗ : ಸಾಗರದಿಂದ ಹೊನ್ನಾವರಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತವಾಗಿದ್ದು, ಹಲವರಿಗೆ ಸಣ್ಣಪುಟ್ಟ ಪೆಟ್ಟಾಗಿರುವ ಬಗ್ಗೆ ವರದಿಯಾಗಿದೆ. ಬೆಂಗಳೂರು ಹೊನ್ನಾವರ ಹೈವೆಯಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಸೂಳೆಮುರ್ಕಿ ಕ್ರಾಸ್‌‌ನಲ್ಲಿ ಆಕ್ಸಿಡೆಂಟ್‌ ಆಗಿದೆ.  ಬಸ್‌ನಲ್ಲಿ 49 ಪ್ರಯಾಣಿಕರಿದ್ದರು. ಬಸ್‌ ಸಾಗರದಿಂದ ಹೊರಟು, ಮಾವಿನಗುಂಡಿಯಿಂದ ಇಳಿದು ಗೇರುಸೊಪ್ಪ ಬಳಿ ಸಿಗುವ ಕ್ರಾಸ್‌ನಲ್ಲಿ ಕಂಟ್ರೋಲ್‌ ತಪ್ಪಿ ರಸ್ತೆಗೆ ಹೊಂದಿಕೊಂಡಿದ್ದ ಧರೆಗೆ ಬಸ್‌ ಡಿಕ್ಕಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ…

Read More