ನಿಯಂತ್ರಣ ತಪ್ಪಿ ಧರೆಗೆ ಗುದ್ದಿದ KSRTC ಬಸ್

ನಿಯಂತ್ರಣ ತಪ್ಪಿ ಧರೆಗೆ ಗುದ್ದಿದ ಕೆ ಎಸ್ಸಾರ್ಟಿಸಿ ಬಸ್

ಶಿವಮೊಗ್ಗ : ಸಾಗರದಿಂದ ಹೊನ್ನಾವರಕ್ಕೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ ಅಪಘಾತವಾಗಿದ್ದು, ಹಲವರಿಗೆ ಸಣ್ಣಪುಟ್ಟ ಪೆಟ್ಟಾಗಿರುವ ಬಗ್ಗೆ ವರದಿಯಾಗಿದೆ.

ಬೆಂಗಳೂರು ಹೊನ್ನಾವರ ಹೈವೆಯಲ್ಲಿ ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಸೂಳೆಮುರ್ಕಿ ಕ್ರಾಸ್‌‌ನಲ್ಲಿ ಆಕ್ಸಿಡೆಂಟ್‌ ಆಗಿದೆ.  ಬಸ್‌ನಲ್ಲಿ 49 ಪ್ರಯಾಣಿಕರಿದ್ದರು.

ಬಸ್‌ ಸಾಗರದಿಂದ ಹೊರಟು, ಮಾವಿನಗುಂಡಿಯಿಂದ ಇಳಿದು ಗೇರುಸೊಪ್ಪ ಬಳಿ ಸಿಗುವ ಕ್ರಾಸ್‌ನಲ್ಲಿ ಕಂಟ್ರೋಲ್‌ ತಪ್ಪಿ ರಸ್ತೆಗೆ ಹೊಂದಿಕೊಂಡಿದ್ದ ಧರೆಗೆ ಬಸ್‌ ಡಿಕ್ಕಿಯಾಗಿದೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್‌ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಪ್ರಯಾಣಿಕರಿಗೆ ಹೆಚ್ಚು ಪೆಟ್ಟಾಗಿಲ್ಲ. ಸಣ್ಣಪುಟ್ಟ ಗಾಯಗಳೊಂದಿಗೆ ಎಲ್ಲರೂ ಬಚಾವ್‌ ಆಗಿದ್ದಾರೆ.