ಶಾಸಕರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳಿಂದ ನೆರೆ ಹಾವಳಿಗೆ ತುತ್ತಾಗಿದ್ದ ಬಡ ಕುಟುಂಬದ ಮನೆ ದುರಸ್ತಿ
ಸಾಗರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕ ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ರವರ ಹುಟ್ಟುಹಬ್ಬ ಫೆಬ್ರವರಿ 22 ರಂದು ಆಚರಿಸುತಿದ್ದು ಈ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಮಾನವೀಯ ಕೆಲಸವೊಂದನ್ನು ಮಾಡಿ ಭೇಷ್ ಎನಿಸಿಕೊಂಡಿದ್ದಾರೆ.
ಹೌದು ಹೊಸನಗರ ತಾಲೂಕಿನ ನಿಟ್ಟೂರು ಭಾಗದ ಬಡ ಬ್ರಾಹ್ಮಣ ಜನಾಂಗದ ದಂಪತಿಗಳಿಬ್ಬರು ನೆರೆ ಹಾವಳಿಯಿಂದ ತಮ್ಮ ಮನೆ ಶಿಥಿಲಾವಸ್ಥೆಗೆ ತಲುಪಿತ್ತು ಸರ್ಕಾರದ ಅನುದಾನ ತರಿಸಲು ಈ ಬಗ್ಗೆ ವಿಶೇಷ ಕಾಳಜಿ ವಹಿಸಿದರು ಕೆಲವು ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ…ಕಳೆದ ವರ್ಷ ಇದೇ ತಂಡದವರು ಬಡ ದಲಿತ ಕುಟುಂಬದ ಮನೆ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದನ್ನು ಸ್ಮರಿಸಿಕೊಳ್ಳಬಹುದು.
ಈ ಹಿನ್ನಲೆಯಲ್ಲಿ ನಿಟ್ಟೂರು ಕಾಂಗ್ರೆಸ್ ಘಟಕದ ವತಿಯಿಂದ ಮುಖಂಡ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಮಾರ್ಗದರ್ಶನದಲ್ಲಿ 2 ಲಕ್ಷ ರೂ ವೆಚ್ಚದಲ್ಲಿ ಇಂದು ನಿಟ್ಟೂರು ಗ್ರಾಮದ ಕಲ್ಸಂಕ ರಾಮಚಂದ್ರ ಭಟ್ ಹಾಗೂ ಗಾಯತ್ರಿ ದಂಪತಿಗಳ ಮನೆ ದುರಸ್ತಿ ಹಾಗೂ ಕಾರ್ಯಕರ್ತರಿಂದ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂಧರ್ಭದಲ್ಲಿ ಮಾತನಾಡಿದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಬಡವರ ಪಾಲಿನ ಆಶಾಕಿರಣರಾದ ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ರವರ ಹುಟ್ಟುಹಬ್ಬದ ಅಂಗವಾಗಿ ಬಡ ಕುಟುಂಬಕ್ಕೆ ಅವರ ಅಭಿಮಾನಿಗಳು ನೆರವಾಗುತ್ತಿರುವುದು ಅರ್ಥಪೂರ್ಣವಾಗಿದೆ.ಕೆಲವು ತಾಂತ್ರಿಕ ಕಾರಣಗಳಿಂದ ಆ ಕುಟುಂಬಕ್ಕೆ ಸರ್ಕಾರದ ನೆರವು ಕೊಡಿಸಲು ಸಾಧ್ಯವಾಗಿರಲಿಲ್ಲ ಆ ಹಿನ್ನಲೆಯಲ್ಲಿ ನಿಟ್ಟೂರು ಕಾಂಗ್ರೆಸ್ ಘಟಕದ ವತಿಯಿಂದ ಇಂತಹ ಮಹತ್ಕಾರ್ಯಕ್ಕೆ ಕೈ ಹಾಕಿದ್ದೇವೆ ಎಂದರು.
ನಿಟ್ಟೂರು ಕಾಂಗ್ರೆಸ್ ಘಟಕ ಹಾಗೂ ಬೇಳೂರು ಗೋಪಾಲಕೃಷ್ಣ ಅಭಿಮಾನಿಗಳಿಂದ ಸತತ 2 ನೇ ವರ್ಷ ಮನೆ ದುರಸ್ತಿ ಹಾಗೂ ಕಾರ್ಯಕರ್ತರಿಂದ ಶ್ರಮದಾನ ಹಮ್ಮಿಕೊಳ್ಳಲಾಗಿದೆ.
ಈ ಸಂಧರ್ಭದಲ್ಲಿ ನಾಗೇಂದ್ರ ಜೋಗಿ , ವಿಶ್ವನಾಥ್ ನಾಗೋಡಿ , ಶೋಭಾ , ರವೀಂದ್ರ ಚನ್ನಪ್ಪ ,ಶಾಸಕರ ಆಪ್ತ ಕಾರ್ಯದರ್ಶಿ ಮಂಜು ಸಣ್ಣಕ್ಕಿ , ಅಶೋಕ್ ಕುಂಬ್ಳೆ , ಸಂತೋಷ್ ಹಾಗೂ ಇನ್ನಿತರರಿದ್ದರು.


