SORABA | ನರ್ಸ್ ಮಾಂಗಲ್ಯ ಸರ ಕಿತ್ತು ಪರಾರಿಯಾದ ಕಳ್ಳರು

SORABA | ನರ್ಸ್ ಮಾಂಗಲ್ಯ ಸರ ಕಿತ್ತು ಪರಾರಿಯಾದ ಕಳ್ಳರು ಸೊರಬ: ಮಹಿಳೆಯೊಬ್ಬರ ಗಮನವನ್ನು ಬೇರೆಡೆ ಸೆಳೆದು ಮಾಂಗಲ್ಯ ಸರವನ್ನು ಕಳ್ಳರು ಕಿತ್ತು ಪರಾರಿಯಾದ ಘಟನೆ ಶನಿವಾರ ರಾತ್ರಿ 10.30ರ ಸುಮಾರಿಗೆ ಪಟ್ಟಣದ ಚಾಮರಾಜ ಪೇಟೆಯಲ್ಲಿ ನಡೆದಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ದಾದಿಯಾಗಿ ಆಗಿ ಕಾರ್ಯ ನಿರ್ವಹಿಸುತ್ತಿರುವ ಕಾನುಕೇರಿ ಬಡಾವಣೆ ನಿವಾಸಿ ಲಕ್ಷ್ಮೀ ಬಾಯಿ  ಮಾಂಗಲ್ಯ ಸರ ಕಳೆದುಕೊಂಡವರು. ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನೆಗೆ ಮರಳುವಾಗ ಬೈಕ್ ನಲ್ಲಿ ಆಗಮಿಸಿದ ಇಬ್ಬರು ಅಪರಿಚಿತರು ಮಹಿಳೆಯ ಗಮನವನ್ನು ಬೇರೆಡೆ…

Read More

ಬೈಕ್ ಸವಾರನ ಮೇಲೆರಗಿದ ಹುಲಿ – ಗಾಯಾಳು ಆಸ್ಪತ್ರೆಗೆ ದಾಖಲು

ಬೈಕ್ ಸವಾರನ ಮೇಲೆರಗಿದ ಹುಲಿ – ಗಾಯಾಳು ಆಸ್ಪತ್ರೆಗೆ ದಾಖಲು ಶಿವಮೊಗ್ಗ: ಭದ್ರಾ ಅಭಯಾರಣ್ಯ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಹುಲಿ ದಾಳಿ ನಡೆಸಿರುವ ಬಗ್ಗೆ ಮಾಹಿತಿಯೊಂದು ಲಭ್ಯವಾಗಿದೆ. ಈ ಘಟನೆ ಮುತ್ತಿನಕೊಪ್ಪದ ಮುಂದೆ ಸಿಗುವ ತೋಟದ ಕೆರೆ ಬಳಿ ನಿನ್ನೆ ರಾತ್ರಿ ಏಳು ಮೂವತ್ತರ ಹೊತ್ತಿಗೆ ನಡೆದಿದೆ. ಘಟನೆಯಲ್ಲಿ ಶಶಿಧರ್‌ ಎಂಬವರು ಗಾಯಗೊಂಡಿದ್ದು, ಅವರನ್ನ ಸ್ಥಳೀಯ ಹಳ್ಳಿಯವರು ಉಪಚರಿಸಿದ್ದಾರೆ. ಆ ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಶಶಿಧರ್‌ ಎಂಬವರು ನಿನ್ನೆ ದಾವಣಗೆರೆಗೆ ಹೋಗಿ ಕೆಲಸ…

Read More

RIPPONPETE | ಲಕ್ಷಾಂತರ ರೂ ಮೌಲ್ಯದ ಸಾಗುವಾನಿ ಮರಗಳ ಅಕ್ರಮ ಕಡಿತಲೆ – ನಾಟ ವಶಕ್ಕೆ

RIPPONPETE | ಲಕ್ಷಾಂತರ ರೂ ಮೌಲ್ಯದ ಸಾಗುವಾನಿ ಮರಗಳ ಅಕ್ರಮ ಕಡಿತಲೆ – ನಾಟ ವಶಕ್ಕೆ ರಿಪ್ಪನ್‌ಪೇಟೆ: ಅರಸಾಳು ವಲಯ ಅರಣ್ಯ ವ್ಯಾಪ್ತಿಯ ಅರಸಾಳು ಗ್ರಾಮದ ಸರ್ವೆ ನಂ.94 ರ ಅರಣ್ಯ ಪ್ರದೇಶದಲ್ಲಿ ಅಪರಿಚಿತ ಮರಗಳ್ಳರು ಅಕ್ರಮವಾಗಿ ಲಕ್ಷಾಂತರ ರೂ ಮೌಲ್ಯದ ಸಾಗುವಾನಿ ಮರಗಳನ್ನು ಕಡಿತಲೆ ಮಾಡಿರುವ ಘಟನೆ ನಡೆದಿದೆ. ಅರಸಾಳು ವ್ಯಾಪ್ತಿಯ ಮಾಣಿಕೆರೆ ಗ್ರಾಮದಲ್ಲಿ ಆನೆಗಳ ನಿಗ್ರಹಕ್ಕಾಗಿ ತೆಗೆದಿರುವ ಬೃಹದಾಕಾರದ ಟ್ರಂಚ್ ದಾಟಿ ದಟ್ಟಾರಣ್ಯದಲ್ಲಿ 70 ರಿಂದ 80 ವರ್ಷದ ಬೃಹದಾಕಾರದ 5 ಮರಗಳನ್ನು ಮರಗಳ್ಳರು…

Read More

ಪಿಡಿಓ ವರ್ಗಾವಣೆಗೆ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರಿಂದ ಆಗ್ರಹ – ಹೋರಾಟದ ಎಚ್ಚರಿಕೆ

ಪಿಡಿಓ ವರ್ಗಾವಣೆಗೆ ಗ್ರಾಪಂ ಅಧ್ಯಕ್ಷ ಹಾಗೂ ಸದಸ್ಯರಿಂದ ಆಗ್ರಹ – ಹೋರಾಟದ ಎಚ್ಚರಿಕೆ HOSANAGARA | ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಪಿಡಿಒ ರವಿ ಎಸ್ ಅವರನ್ನು ಶೀಘ್ರವಾಗಿ ಬೇರೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ಎಂ ಗುಡ್ಡೆಕೊಪ್ಪ ಗ್ರಾಪಂ ಅಧ್ಯಕ್ಷ  ಪ್ರವೀಣ್ ಜಿ ಎನ್ ತಾಪಂ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಕಾರ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಪಿಡಿಓ ರವಿ ಎಸ್ ರವರನ್ನು ಕೂಡಲೆ ವರ್ಗಾವಣೆಗೊಳಿಸಿ ಇಲ್ಲವಾದಲ್ಲಿ ದಿನಾಂಕ 7-1-2025 ರಂದು ತಾಲೂಕು ಪಂಚಾಯತ್ ಕಚೇರಿ ಮುಂಭಾಗ ಪ್ರತಿಭಟನೆಯನ್ನು…

Read More

ಮನೆ ಕಳವು ಮಾಡಿದ್ದ ಮೂವರ ಬಂಧನ – 26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಮನೆ ಕಳವು ಮಾಡಿದ್ದ ಮೂವರ ಬಂಧನ – 26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ ಭದ್ರಾವತಿ , ಜ. 4: ಮನೆಗಳ್ಳನ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೊಳೆಹೊನ್ನೂರು ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಘಟನೆ ನಡೆದಿದೆ. ಭದ್ರಾವತಿ ತಾಲೂಕು ತಿಮ್ಲಾಪುರದ ಕೊರಚರಹಟ್ಟಿ ಗ್ರಾಮದ ನಿವಾಸಿಗಳಾದ ದರ್ಶನ್ (21), ಧನಂಜಯ (24) ಹಾಗೂ ರವಿ (23) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. 28-12-2024 ರಂದು ಸದರಿ ಆರೋಪಿಗಳನ್ನು…

Read More

ಕಾಡುಹಂದಿ ಬೇಟೆಯಾಡಿದ ಇಬ್ಬರ ಬಂಧನ

ಕಾಡುಹಂದಿ ಬೇಟೆಯಾಡಿದ ಇಬ್ಬರ ಬಂಧನ ಶಿಕಾರಿಪುರ: ಕಾಡು ಹಂದಿಯನ್ನು ಬೇಟೆಯಾಡಿದ ಅಪರಾಧ ಸಂಬಂಧ ಇಬ್ಬರನ್ನ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕುನಲ್ಲಿ ಬಂಧಿಸಲಾಗಿದೆ.  ಶಿಕಾರಿಪುರ ತಾಲ್ಲೂಕಿನ ಹಾರೋಗೊಪ್ಪ ಬಳಿಯ ಗಂಗಹೊನಸರ ಅರಣ್ಯ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳು ದಾವಣಗೆರೆ ಜಿಲ್ಲೆ ನ್ಯಾಮತಿ ತಾಲ್ಲೂಕಿನ ಹಳೇಜೋಗದ ಲೋಕೇಶ್ ಹಾಗೂ ಮೈಲಾರಿ ಎನ್ನುವವರನ್ನು  ಬಂಧಿಸಿದ್ದಾರೆ. ಬೇಟೆಯಾಡಿದ ಕಾಡು ಹಂದಿಯ ಮಾಂಸವನ್ನು ಪಾಲು ಮಾಡಿಕೊಳ್ಳುವಾಗ ಅರಣ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇನ್ನೂ ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಕೆಲವರು ಪರಾರಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸಾಗರ ವಿಭಾಗದ…

Read More

ಬಿರಿಯಾನಿ ತಿನ್ನಲು ಹೋಗಿದ್ದ ವ್ಯಕ್ತಿ ಮೇಲೆ ಬಿಯರ್ ಬಾಟಲ್ , ಮಚ್ಚಿನಿಂದ ಹಲ್ಲೆ – ದೂರು ದಾಖಲು

ಬಿರಿಯಾನಿ ತಿನ್ನಲು ಹೋಗಿದ್ದ ವ್ಯಕ್ತಿ ಮೇಲೆ ಬಿಯರ್ ಬಾಟಲ್ , ಮಚ್ಚಿನಿಂದ ಹಲ್ಲೆ – ದೂರು ದಾಖಲು ಬಿರಿಯಾನಿ ತಿನ್ನಲು ಹೊಟೇಲ್ ಗೆ ಹೋಗಿದ್ದ ವ್ಯಕ್ತಿಯೊಬ್ಬರ ಮೇಲೆ ಮಚ್ಚು ಮತ್ತು ಬಿಯರ್‌ ಬಾಟಲಿಯಿಂದ ಹಲ್ಲೆ ನಡೆಸಿರುವ ಘಟನೆ ಹೊಳೆಹೊನ್ನೂರಿನ ಕನಸಿನಕಟ್ಟೆ ರಸ್ತೆಯ ಬಾರ್ ನಲ್ಲಿ ನಡೆದಿದೆ. ಹೊಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ವ್ಯಕ್ತಿ, ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೊಳೆಹೊನ್ನೂರಿನ ಉಪ್ಪಾರರ ಬೀದಿಯ ರವಿ ಹಲ್ಲೆಗೊಳಗಾದವರು. ಕನಸಿನಕಟ್ಟೆ ರಸ್ತೆಯಲ್ಲಿರುವ ಬಾರ್‌ನಲ್ಲಿ ಘಟನೆ ಸಂಭವಿಸಿದೆ. ರವಿ…

Read More

ಗಾಂಧಿ ಬಜಾರ್ ನಲ್ಲಿ ಎರಡು ಚೀಲ ಗೋಮಾಂಸ ಪತ್ತೆ

ಗಾಂಧಿ ಬಜಾರ್ ನಲ್ಲಿ ಎರಡು ಚೀಲ ಗೋಮಾಂಸ ಪತ್ತೆ SHIVAMOGGA | ಗಾಂಧಿ ಬಜಾರ್ ನ ಮಸೀದಿಯ ರಸ್ತೆಯಲ್ಲಿ ಮಾಂಸ ಸಾಗಾಣಿಕೆ ವೇಳೆ ಮೂವರ ನಡುವೆ ಗಲಾಟೆಯಾಗಿದ್ದು ಎರಡು ಮೂಟೆ ಮಾಂಸ ಮತ್ತು ಚರ್ಮ, ಗೋಮೂಳೆಗಳು ಪತ್ತೆಯಾಗಿದೆ.  ಗಾಂಧಿ ಬಜಾರ್ ನ ಮಸೀದಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರು ಗೋಮಾಂಸ ಇದೆ ಎನ್ನಲಾದ ಎರಡು ಮೂಟೆಗಳನ್ನ ಹೊತ್ತು ಬರುವಾಗ ಈರ್ವರು ತಡೆದಿದ್ದಾರೆ. ಚೀಲವನ್ನ ಬಿಸಾಕಿ ತಡೆದ ವ್ಯಕ್ತಿಗೆ ಹೊಡೆದು ದ್ವಿಚಕ್ರ ವಾಹನ ಸವಾರಿಬ್ವರು ಪರಾರಿಯಾಗಿದ್ದಾರೆ.  ಈ ವೇಳೆ…

Read More

Ripponpete | ಶ್ವೇತಾ ಆಚಾರ್ಯರವರಿಗೆ ಬ್ರಿಟಿಷ್ ಎಮರ್ಜೆನ್ ಟ್ಯಾಲೆಂಟ್ ಮತ್ತು ಯುವ ಚೈತನ್ಯ ಪ್ರಶಸ್ತಿ

Ripponpete | ಶ್ವೇತಾ ಆಚಾರ್ಯರವರಿಗೆ ಬ್ರಿಟಿಷ್ ಎಮರ್ಜೆನ್ ಟ್ಯಾಲೆಂಟ್ ಮತ್ತು ಯುವ ಚೈತನ್ಯ ಪ್ರಶಸ್ತಿ ರಿಪ್ಪನ್‌ಪೇಟೆ: ಏಶಿಯನ್ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ ಬೆಂಗಳೂರು ಇವರು ರಿಪ್ಪನ್‌ಪೇಟೆಯ  ಡಾ. ಶ್ವೇತಾ ಜಿ ಎನ್ ಆಚಾರ್ಯ ಅವರು ಹೊಲಿಗೆ ತರಬೇತಿ, ಮೇಕಪ್ ಆರ್ಟಿಸ್ಟ್ ಮತ್ತು ನೂತನ ವಸ್ತ್ರ ವಿನ್ಯಾಸದಲ್ಲಿ. ಇವರು ಮಾಡಿರುವ ಸಾಧನೆಯನ್ನು ಗುರುತಿಸಿ ” ಬ್ರಿಟಿಷ್ ಎಮರ್ಜೆನ್ ಟ್ಯಾಲೆಂಟ್ ( ಮಹಿಳಾ ವಿಭಾಗ ) ಎಂಬ ಗೌರವ ಪ್ರಶಸ್ತಿಯನ್ನು ನೀಡಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೌರವಿಸಿದ್ದಾರೆ. ಹಲವು…

Read More

10 ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮಾಲೆ ಧರಿಸುತ್ತಿರುವ ಮುಸ್ಲಿಂ ವ್ಯಕ್ತಿ

10 ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮಾಲೆ ಧರಿಸುತ್ತಿರುವ ಮುಸ್ಲಿಂ ವ್ಯಕ್ತಿ ರಾಯಚೂರು: ಜಿಲ್ಲೆಯ ದೇವದುರ್ಗ ಪಟ್ಟಣದ ಗೌರಂಪೇಟೆ ನಿವಾಸಿ ಬಾಬು ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆಯ ದರ್ಶನ ಪಡೆದಿದ್ದಾರೆ. 10 ವರ್ಷಗಳಿಂದಲೂ ಇವರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸುತ್ತಿದ್ದಾರೆ. ಈ ವರ್ಷ ಡಿ.28ರಂದು ಶಬರಿಮಲೆ ಹತ್ತಿರದ ಪಂಪ ಸರೋವರದ ಬಳಿ ಸಂಪ್ರದಾಯದಂತೆ ಮಾಲೆ ಧರಿಸಿ, ಇರುಮುಡಿ ಕಟ್ಟಿಕೊಂಡು ಡಿ.31ರಂದು ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದಿದ್ದಾರೆ. 2014ರಿಂದ ಇಲ್ಲಿಯವರೆಗೆ ಪ್ರತಿವರ್ಷ ತಮ್ಮ…

Read More