Ripponpete | ಶ್ವೇತಾ ಆಚಾರ್ಯರವರಿಗೆ ಬ್ರಿಟಿಷ್ ಎಮರ್ಜೆನ್ ಟ್ಯಾಲೆಂಟ್ ಮತ್ತು ಯುವ ಚೈತನ್ಯ ಪ್ರಶಸ್ತಿ
ರಿಪ್ಪನ್‌ಪೇಟೆ: ಏಶಿಯನ್ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ ಬೆಂಗಳೂರು ಇವರು ರಿಪ್ಪನ್‌ಪೇಟೆಯ ಡಾ. ಶ್ವೇತಾ ಜಿ ಎನ್ ಆಚಾರ್ಯ ಅವರು ಹೊಲಿಗೆ ತರಬೇತಿ, ಮೇಕಪ್ ಆರ್ಟಿಸ್ಟ್ ಮತ್ತು ನೂತನ ವಸ್ತ್ರ ವಿನ್ಯಾಸದಲ್ಲಿ. ಇವರು ಮಾಡಿರುವ ಸಾಧನೆಯನ್ನು ಗುರುತಿಸಿ ” ಬ್ರಿಟಿಷ್ ಎಮರ್ಜೆನ್ ಟ್ಯಾಲೆಂಟ್ ( ಮಹಿಳಾ ವಿಭಾಗ ) ಎಂಬ ಗೌರವ ಪ್ರಶಸ್ತಿಯನ್ನು ನೀಡಿ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೌರವಿಸಿದ್ದಾರೆ.
ಹಲವು ವರ್ಷಗಳಿಂದ ಇವರು ಮಾಡಿರುವ ಸಮಾಜಮುಖಿ ಕೆಲಸಗಳನ್ನು ಮತ್ತು ರಿಪ್ಪನ್‌ಪೇಟೆಯಲ್ಲಿ ವಿಶೇಷವಾಗಿ ನೊಂದ ಮಹಿಳೆಯರಿಗಾಗಿ ಉಚಿತ ಹೊಲಿಗೆ ತರಬೇತಿಯನ್ನು ಹೇಳಿಕೊಡುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಕಾರಣಕರ್ತರಾಗಿದ್ದಾರೆ. ವಿದ್ಯಾರ್ಥಿನಿಯರಿಗೂ ಕೂಡ ಅವರ ಬಿಡುವಿನ ವೇಳೆಯಲ್ಲಿ ಹೊಲಿಗೆ ತರಬೇತಿ ಕಲಿತು ಸ್ವಂತ ಬದುಕನ್ನು ಹೇಗೆ ಕಟ್ಟಿಕೊಳ್ಳಲು ನೆರವಾಗಿದ್ದಾರೆ. ಇವರ ಸಮಾಜಮುಖಿ ಕೆಲಸವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಮೇಕಪ್ ಡಿಸೈನ್ ಟೆಕ್ನಾಲಜಿ ಸಂಸ್ಥೆಯು “ಯುವ ಚೈತನ್ಯ” ಗೌರವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದ್ದಾರೆ.