ನನಗೆ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಮೇಲೆ ದ್ವೇಷ ಇಲ್ಲ – ಕೆ ಎಸ್ ಈಶ್ವರಪ್ಪ | KSE

ನನಗೆ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಮೇಲೆ ದ್ವೇಷ ಇಲ್ಲ – ಕೆ ಎಸ್ ಈಶ್ವರಪ್ಪ | KSE

ದೇಶಕ್ಕೆ ಬಿಜೆಪಿ ಒಂದೇ ಆಶಾಕಿರಣ. ನನಗೆ ಯಡಿಯೂರಪ್ಪ ಬಗ್ಗೆ, ಅವರ ಕುಟುಂಬದ ಬಗ್ಗೆ ದ್ವೇಷ ಇಲ್ಲ, ಬಿಜೆಪಿ ಆಳಾಗುತ್ತಿರೋದು ನೋಡಲು ನನ್ನಿಂದ ಆಗುತ್ತಿಲ್ಲ. ನರೇಂದ್ರ ಮೋದಿ ಅವರ ಅಲೆ ಇಲ್ಲದಿದ್ದರೆ ರಾಜ್ಯದಲ್ಲಿ ಏನಾಗ್ತಿತ್ತೋ ಗೊತ್ತಿಲ್ಲ ಎಂದು ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ ಅವರು ಹೇಳಿದರು.

ಈ ಕುರಿತು ಗುರುವಾರ ಮಾಧ್ಯಮಗಳ ಜೊತೆಗೆ ಕೆ ಎಸ್‌ ಈಶ್ವರಪ್ಪ ಅವರು ಮಾತನಾಡಿ, ಹಿಂದುಳಿದವರಿಗೆ, ದಲಿತರಿಗೆ ಪಕ್ಷ ನಿಷ್ಠೆ ಇದೆ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬರುವ ದಿನಗಳಲ್ಲಿ ಬಿಜೆಪಿ ಪೂರ್ಣ ಬಹುಮತದ ಮೂಲಕ‌ ಅಧಿಕಾರಕ್ಕೆ ಬರಬೇಕು. ಬಿಜೆಪಿ ಜೆಡಿಎಸ್ ಮೈತ್ರಿ‌ ಇಬ್ಬರಿಗು ಅನುಕೂಲ ಆಗಿದೆ, ನನಗೆ ಬಿಜೆಪಿ ಏನು ಅನ್ಯಾಯ ಮಾಡಿಲ್ಲ. ಎಲ್ಲಾ ಹುದ್ದೆ ಕೊಟ್ಟಿದೆ. ಹಿಂದುಳಿದವರನ್ನು ತಾತ್ಸಾರ ಮಾಡಬಾರದು.

ಹಿಂದುತ್ವವಾದಿ ನಾಯಕ ಸಿ.ಟಿ.ರವಿ ಎಂಎಲ್ ಸಿ ಮಾಡಿದ್ದಾರೆ. ಪ್ರತಿಪಕ್ಷದ ನಾಯಕ ಮಾಡಲಿ ನನಗೆ ಸಂತೋಷ, ನನಗೆ ಈಗ ಇನ್ನು 76 ವರ್ಷ, 76 ವರ್ಷ ಆದವರಿಗೆ ಯಾರಿಗೂ ಟಿಕೆಟ್ ಕೊಟ್ಟಿಲ್ವ. ಹಿಂದುತ್ವವಾದ, ರಾಷ್ಟ್ರೀಯವಾದವನ್ನು ಕೊನೆಯವರೆಗೆ ಬಿಡಲ್ಲ ಎಂದು ಕೆ ಎಸ್‌ ಈಶ್ವರಪ್ಪ ಅವರು ಹೇಳಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನನಗೆ ಹಗಲು ರಾತ್ರಿ ಶ್ರಮ ಹಾಕಿದ ಕಾರ್ಯಕರ್ತರಿಗೆ ಮತದಾರರಿಗೆ ಸಾಷ್ಟಾಂಗ ನಮಸ್ಕಾರ. ಚುನಾವಣೆಗೆ ಸ್ಪರ್ಧೆ ಮಾಡಿದ ಉದ್ದೇಶ ರಾಜ್ಯದಲ್ಲಿ ಪೂರ್ಣ ಚರ್ಚೆ ಆಗುತ್ತದೆ. ಬಿಜೆಪಿ ಅನೇಕ ನ್ಯೂನ್ಯತೆ ಇರುವ ಸಂದರ್ಭದಲ್ಲಿ ಸರಿ ಹೋಗಬೇಕು, ಶುದ್ದೀಕರಣ ಆಗಬೇಕು. ಒಂದು ಕುಟುಂಬದ ಕೈಯಲ್ಲಿ ಬಿಜೆಪಿ ಇದೆ. ಒಂದು ಕುಟುಂಬದ ಕೈಯಿಂದ ಮುಕ್ತ ಮಾಡಬೇಕು. ಹಿಂದುತ್ವವಾದಿಗಳ ಶಕ್ತಿ ಕುಂದಿಸುವ ಪ್ರಯತ್ನ ಎಂದು ಹೇಳಿದರು.

ರಾಜ್ಯದ ಬಿಜೆಪಿ ಕಾರ್ಯಕರ್ತರು ತಮ್ಮ ಕಷ್ಟ ಎಲ್ಲಿ ಹೇಳಿಕೊಳ್ಳಬೇಕು ಎಂಬ ಗೊಂದಲದಲ್ಲಿದ್ದಾರೆ. ಈ ಹಿಂದೆ ಹಿರಿಯರು ಕುಳಿತು ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತಿದ್ದರು, ಈಗ ತಂದೆ ಮಕ್ಕಳು ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಪರಿಷತ್ತಿನಲ್ಲಿ ತಂದೆ ಮಕ್ಕಳು ಇಬ್ಬರೇ ಕುಳಿತು ಸರ್ಜಿಗೆ ಟಿಕೆಟ್ ಕೊಟ್ಟಿದ್ದಾರೆ. ಲಿಂಗಾಯತ ಸಮಾಜ ಯಡಿಯೂರಪ್ಪ ಜೊತೆಗಿದೆ ಎಂಬ ತೀರ್ಮಾನ ಇದೆ, ಒಂದೇ ಸಮಾಜ ಸಾಕಾ? ಬಿಜೆಪಿ ಹಿಂದುಳಿದ ಸಮಾಜವನ್ನು ತಾತ್ಸಾರ ಮಾಡುತ್ತಿದೆ.

ರಾಜ್ಯದಲ್ಲಿ ಕುರುಬರಿಗೆ ಒಂದು ಸ್ಥಾನ ಕೊಡಿ ಅಂದ್ರು. ಎಲ್ಲಿಯೂ ಟಿಕೆಟ್ ಕೊಡಲಿಲ್ಲ, ನಾನು ಗೆದ್ದು ಬಿಡ್ತೀನಿ ಎಂಬ ನಂಬಿಕೆ ಇರಲಿಲ್ಲ. ಎಲ್ಲರೂ ಚುನಾವಣೆಗೆ ಸ್ಪರ್ಧೆ ಮಾಡೋದು ಸೂಕ್ತ ಎಂದಾಗ ಸ್ಪರ್ಧೆ ‌ಮಾಡಿದೆ, ಆರಂಭದಲ್ಲಿ ‌ನಿರೀಕ್ಷೆಗೆ ಮೀರಿ ಬೆಂಬಲ ಸಿಕ್ತು. ರಾಜ್ಯದ ಜನ ಮೋದಿ ಅವರನ್ನು ಮರೆಯಲಿಲ್ಲ, ಶಿವಮೊಗ್ಗ ಲೋಕಸಭಾ ಕ್ಷೇತ್ರ ಮೋದಿ ಅವರ ಪ್ರಭಾವದಿಂದ ಗೆಲುವು ಸಾಧಿಸಿತ್ತು. ರಾಜ್ಯದಲ್ಲಿ ಬಿಜೆಪಿ ಕಳೆದ ಬಾರಿ 25 ಸ್ಥಾನ ಗೆದ್ದಿದ್ದೇವು. ಈ ಬಾರಿಯೂ ಮೋದಿ ಇದ್ದರೂ 17 ಸ್ಥಾನ ಗೆಲುವು ಸಾಧಿಸಿದೆ ಎಂದು ಹೇಳಿದರು.

ಹಿಂದುಳಿವರಿಗೆ ಶಕ್ತಿ ತುಂಬಲು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಆರಂಭಿಸಿದೆ. ಇದೊಂದು ದೊಡ್ಡ ಶಕ್ತಿ ರಾಜ್ಯದಲ್ಲಿ ಬೆಳೆಯುತಿತ್ತು, ಈ ವೇಳೆ ರಾಜ್ಯದ ನಾಯಕರು ಖುಷಿ ಪಡಬೇಕಾಗಿತ್ತು. ಆದರೆ ರಾಜ್ಯದ ನಾಯಕರು ಅಮಿತ್ ಶಾ ಬಳಿ ಹೇಳಿ ನಿಲ್ಲಿಸಿದರು. ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ನನ್ನ ಮೇಲೆ ಆಪಾದನೆ ಬಂತು, ಕೇಂದ್ರದ ನಾಯಕರಿಗೆ ಹೇಳಿ ರಾಜೀನಾಮೆ ಕೊಟ್ಟೆ ನಿರ್ದೋಷಿ ಅಂತಾ ತೀರ್ಪು ಬಂತು. ಕ್ಯಾಬಿನೆಟ್ ಗೆ ತೆಗೆದುಕೊಳ್ಳುತ್ತೇವೆ ಅಂದ್ರು, ಕೊನೆಯವರೆಗೆ ಕ್ಯಾಬಿನೆಟ್ ಗೆ ತೆಗೆದುಕೊಳ್ಳಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು.

ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಒತ್ತಡ ಹಾಕಿದರು. ಯಡಿಯೂರಪ್ಪ ವಿಧಾನಸೌಧದಲ್ಲಿ ಇರಲ್ಲ, ನೀವು ನಿಲ್ಲಬೇಕು ಎಂಬ ಒತ್ತಡ ಬಂತು. ಶಿವಮೊಗ್ಗ ನಗರ ಕ್ಷೇತ್ರದಿಂದ ನನ್ನ ಒಂದೇ ಹೆಸರು ಹೋಯ್ತು ಚುನಾವಣೆಗೆ ನಾಮಪತ್ರ ಸಲ್ಲಿಸಲು ಎರಡು ದಿನ ಇರುವಾಗ ನೀವು ಚುನಾವಣೆಗೆ ಸ್ಪರ್ಧೆ ಮಾಡಬಾರದು ಅಂತಾ ಪೋನ್ ಬಂತು, ಪೋನ್ ಬಂದ ಎರಡೇ ನಿಮಿಷಕ್ಕೆ ಪತ್ರ ಬರೆದೆ. ನಿಮಗೆ ನಿಮ್ಮ ಮಗನಿಗೆ ಏನಾದರೂ ಮಾಡ್ತೀವಿ ಅಂತಾ ಹಿರಿಯರು ಹೇಳಿದ್ದರು. ನಾನು ನನಗೆ ಯಾವುದೇ ಸ್ಥಾನ ಬೇಡ ಸಂಘಟನೆಯಲ್ಲಿ ಅವಕಾಶ ಕೊಡಿ ಅಂದು ಹೇಳಿದ್ದೆ ಎಂದು ಮಾಧ್ಯಮಗಳ ಮುಂದೆ ಈಶ್ವರಪ್ಪ ತಿಳಿಸಿದರು.

Leave a Reply

Your email address will not be published. Required fields are marked *