Headlines

Ripponpete | ಶ್ರದ್ದಾಭಕ್ತಿಯ ನಾಮಸ್ಮರಣೆ ಶಾಂತಿ ನೆಮ್ಮದಿ ಕರುಣಿಸುತ್ತದೆ – ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ

ಶ್ರದ್ದಾಭಕ್ತಿಯ ನಾಮಸ್ಮರಣೆ ಶಾಂತಿ ನೆಮ್ಮದಿ ಕರುಣಿಸುತ್ತದೆ – ಡಾ. ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮೀಜಿ

ರಿಪ್ಪನ್‌ಪೇಟೆ ಸಿದ್ದಿವಿನಾಯಕ ದೇವಸ್ಥಾನ ಮುಂದೊಂದು ದಿನ ಪುಣ್ಯ ಕ್ಷೇತ್ರವಾಗಲಿದೆ – ಹೊಂಬುಜ ಶ್ರೀಗಳು



ರಿಪ್ಪನ್‌ಪೇಟೆ : ಭಕ್ತರು ಭಕ್ತಿಯಿಂದ ಪ್ರಾರ್ಥಿಸಿದರೆ ದೇವರು ನಮ್ಮ ಹೃದಯಗಳಲ್ಲಿ ನೆಲೆಸುತ್ತಾನೆ.ಶ್ರದ್ದಾಭಕ್ತಿಯಿಂದ ಭಗವಂತನ ನಾಮಸ್ಮರಣೆ ಮಾಡಿದರೆ ಶಾಂತಿ ನೆಮ್ಮದಿ ಕರುಣಿಸುತ್ತಾನೆಂದು ಅನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಸ್ವಾಮಿಜಿ ಹೇಳಿದರು.

ರಿಪ್ಪನ್‌ಪೇಟೆಯ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಇಂದು ಆಯೋಜಿಸಲಾದ ಧಾರ್ಮಿಕ ಧರ್ಮಜಾಗೃತಿ ಸಮಾರಂಭದ ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನೀಡಿ ಜಾತಿ ಬೇದ ಭಾವನೆಯಿಲ್ಲದ ದೇವರು ಎಂದರೆ ಗಣಪತಿ.ಮೊದಲು ಗಣಪತಿಯನ್ನು ಮನೆ ಮಂದಿರದಲ್ಲಿ ಪೂಜೆಸಲಾಗುತ್ತಿದ್ದು ಪೂರ್ವಜರು ಕೇವಲ ಮನೆಯಲ್ಲಿ ಪೂಜಿಸುತ್ತಿದ್ದ  ಗಣಪತಿಗೆ ಲೋಕಮಾನ್ಯ ತಿಲಕರು ಪರಕೀಯರನ್ನು ದೇಶಬಿಟ್ಟು ತೊಲಗಿಸಲು ಹಿಂದುತ್ವದ  ಸಂಘಟನೆಗಾಗಿ ಸಾರ್ವಜನಿಕವಾಗಿ ಪೂಜಿಸಲ್ಪಟ್ಟಿತು. ಇಂದು ಸರ್ವಜನಾಂಗದವರು ಸಹ ತಮ್ಮ ಕಾರ್ಯಸಿದ್ದಿಗಾಗಿ ಈ ದೇವರಲ್ಲಿ ಅರಿಕೆ ಮಾಡಿಕೊಳ್ಳುವುದು ವಾಡಿಕೆಯಾಗಿದೆ.ಇತ್ತೀಚಿನ ದಿನಗಳಲ್ಲಿ ಗ್ರಾಮಗ್ರಾಮಗಳಲ್ಲಿಯೂ ಸಣ್ಣಪುಟ್ಟ ದೇವಸ್ಥಾನಗಳನ್ನು  ಪ್ರತಿಷ್ಟಾಪಿಸಿ ಎಲ್ಲರೂ ಜಾತಿ ಬೇದ ಭಾವ ಬಿಟ್ಟಿ ಸಮಾನ ಮನಸ್ಸಿನಿಂದ  ಸಂಘಟಿತರಾಗಿ ಸಮಾನತೆಯಿಂದ ಶಾಂತಿ ನೆಮ್ಮದಿಯ ಬದುಕು ಕಂಡುಕೊಂಡಿರುವುದು ಶ್ಲಾಘನೀಯ ಎಂದರು.

ಹೊಂಬುಜ ಜೈನ ಮಠದ ಪೀಠಾಧಿಕಾರಿ  ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮಿಜಿಯವರು ದೇವಸ್ಥಾನಕ್ಕೆ ಭೇಟಿ ನೀಡಿ ದಿನೇ ದಿನೇ ಆಭಿವೃದ್ದಿ ಹೊಂದುತ್ತಿರುವ ಈ ದೇವಸ್ಥಾನ ಮುಂದೊಂದು ದಿನ ಪುಣ್ಯಕ್ಷೇತ್ರವಾಗಿ ಹೊರಹೊಮ್ಮಲಿದೆ ಎಂದರು.

ಸಮಷ್ಟಿ ಭಾವದಿಂದ ದೇವರಲ್ಲಿ ಪ್ರತಿಯೊಬ್ಬರು ಪ್ರಾರ್ಥಿಸಿದಲ್ಲಿ  ಗ್ರಾಮದ ಸರ್ವೋನ್ನತಿ ಹೊಂದಲು ಸಾಧ್ಯ.ಇಲ್ಲಿ ತಾಂತ್ರಿಕ ಕಾರಣಗಳಿಗೆ ನೆನೆಗುಂದಿಗೆ ಬಿದ್ದಿರುವ ಸಮುದಾಯವನ್ನು ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಹಕಾರ ಹಾಗೂ 
ಸರ್ಕಾರದ ಅನುದಾನದಲ್ಲಿ ಪುನರ್ ನಿರ್ಮಿಸುವ ಸಂಕಲ್ಪ ಕೈಗೊಳ್ಳಬೇಕು.ಬಡ ಮದ್ಯಮ ವರ್ಗದವರ ಕಲ್ಯಾಣ ಕಾರ್ಯಕ್ರಮದ ಸದ್ಬಳಕೆಗೆ ಬಳಸಿಕೊಳ್ಳುವಂತೆ ಸಮಿತಿಯವರಿಗೆ ಸಲಹೆ ನೀಡಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರಶೆಟ್ಟಿ ಅಧ್ಯಕ್ಷತೆ ವಹಿಸಿದರು.ಧಾರ್ಮಿಕ ಸಭೆಯಲ್ಲಿ ಉಪತಹಶೀಲ್ದಾರ್ ಹುಚ್ಚರಾಯಪ್ಪ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರಥ ನಿರ್ಮಾಣದ ಶಿಲ್ಪಿ ನಾಗರಾಜ್‌ಹರಿಹರಪುರ ಇವರನ್ನು ಸನ್ಮಾನಿಸಿ ಆಶೀರ್ವದಿಸಿದರು.

ಪ್ರಣತಿ ಅಣ್ಣಪ್ಪ  ಪ್ರಾರ್ಥಿಸಿದರು.ದೇವದಾಸ ಅಚಾರ್ ಸ್ವಾಗತಿಸಿದರು.ಎಂ.ಡಿ.ಇಂದ್ರಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.ಚಂದ್ರಬಾಬು ನಿರೂಪಿಸಿದರು, ಹೆಚ್.ಎಂ.ವರ್ತೇಶಗೌಡ ವಂದಿಸಿದರು.

Leave a Reply

Your email address will not be published. Required fields are marked *