ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರೋಧ ಪ್ರತಿಭಟನೆ | Protest
ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನಲ್ಲಿ, ಸಚಿವ ಸಂತೋಷ ಲಾಡ್ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಹೇಳಿಕೆಯನ್ನ ಖಂಡಿಸುತ್ತೇವೆ ಎಂದು ಶಿಗ್ಗಾವಿ ಸವಣೂರ ಕ್ಷೇತ್ರದ ಮಾಜಿ ಶಾಸಕ ಸೈಯದ ಅಜ್ಜಂಪೀರ್ ಖಾದ್ರಿ ಅವರು ಆಕ್ರೋಷ ವ್ಯಕ್ತಪಡಿಸಿದರು.
ಶಿಗ್ಗಾವಿ ಪಟ್ಟಣದ ಚನ್ನಮ್ಮನ ವೃತ್ತದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಹಾಗೂ ಅಭಿಮಾನಿಗಳೊಂದಿಗೆ ಪ್ರತಿಭಟನೆ ನಡೆಸಿ ನಂತರ ಅವರು ಮಾತನಾಡಿ ಜವಾಬ್ದಾರಿ ಸ್ಥಾನದಲ್ಲಿ ಇದ್ದ ಅವರು ಇಂತಹ ಪದಗಳನ್ನು ಬಳಸಬಾರದು ಅವರ ಈ ನಡೆಯನ್ನು ನಾವು ತಿರ್ವವಾಗಿ ಖಂಡಿಸುತ್ತೆವೆ ಕೂಡಲೇ ಅವರು ರಾಜ್ಯದ ಜನತೆಗೆ ಹಾಗೂ ಸಂತೋಷ ಲಾಡ್ ಅವರ ಅಭಿಮಾನಿ ಬಳಗಕ್ಕೆ ಕ್ಷಮೆ ಕೋರಬೇಕು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಮುಸ್ತಾಕ ಮುಲ್ಲಾ. ಸಲಿಂ ಪಾರೂಖಿ. ಪಯಾಜ ಬೇಂಡಿಗೆರಿ. ಸುರೇಶ ಹರಿಜನ. ಆಂಜನೇಯ ಗುಡಗೇರಿ. ರುದ್ರೇಶ ಗುಡಗೇರಿ. ಶಂಬು ನೆರ್ತಿ.ಮಲ್ಲಿಕಾರ್ಜುನ ಇಳಗೇರಿ. ಅಶೋಕ ಮ್ಯಾಗೇರಿ. ಸಲಿಂ ಯಳವಟ್ಟಿ. ಇಬ್ರಾಹಿಂ ಮುಲ್ಲಾ. ರವಿ ಗೋಣೆಪ್ಪನವರ. ಮಾಂತೇಶ ಗುಡಮ್ಮನವರ. ಜಿಲಾನಿ ಮುಲ್ಲಾ.
ಬಿರೆಶ ಜಟ್ಟೆಪ್ಪನವರ.ಎಂ ಸುಬಾನಿ ಮಾಜಿ ಶಾಸಕ ಖಾದ್ರಿಯವರ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.
ವರದಿಗಾರರು : ನಿಂಗರಾಜ್ ಕೂಡಲ್ (ಬಂಕಾಪುರ )