ಶಿಗ್ಗಾಂವ ಪಟ್ಟಣದ ಹೊರವಲಯದಲ್ಲಿ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಕಾರು
ಶಿಗ್ಗಾಂವ ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ಅಂಕಲಕೋಟಿ ಕಾಲೇಜು ಹತ್ತಿರದ ಸರ್ವಿಸ್ ರಸ್ತೆಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಕಾರೊಂದು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಘಟನೆ ಶುಕ್ರವಾರ ನಡೆದಿದೆ.
ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ ಸ್ಥಳಕ್ಕೆ ಶಿಗ್ಗಾವಿ ಅಗ್ನಿಶಾಮಕ ದಳದ ಅಧಿಕಾರಿಗಳು ಬಂದು ಬೆಂಕಿ ನಂದಿಸಿದ್ದಾರೆ ಆದರೆ ಘಟನೆಯಲ್ಲಿ ಶರ್ವಲೇಟ್ ಅಟ್ರಾ ಮ್ಯಾಗ್ನೆಟ್ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.
ರಾಮದುರ್ಗ ತಾಲೂಕಿನ ತೋರಣಗಲ್ ಗ್ರಾಮದ ರೆಹಮಾನಸಾಬ್ ನಿಪ್ಪಾಣಿ ಎಂಬುವವರಿಗೆ ಸೇರಿದ ಕಾರು ಇದಾಗಿದೆ ಪೊಲೀಸ್ ತನಿಖೆಯಿಂದ ನಿಖರವಾದ ಮಾಹಿತಿ ತಿಳಿದು ಬರಬೇಕಿದೆ.
ವರದಿ: ನಿಂಗರಾಜ್ ಕುಡಲ್ (ಬಂಕಾಪುರ್ )