ಫಲವತ್ತಾದ ಮಣ್ಣು ರೈತರ ನಿಜವಾದ ಅಸ್ತಿ – ಡಾ.ಗಣಪತಿ
ಫಲವತ್ತಾದ ಮಣ್ಣಿನಿಂದ ಉತ್ತಮ ಮತ್ತು ಆರೋಗ್ಯಕರ ಬೆಳೆ ಬೆಳೆಯಲು ಸಾಧ್ಯ , ಮಣ್ಣಿನ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರು ಡಾ. ಗಣಪತಿ ಹೇಳಿದರು.
ರಿಪ್ಪನ್ ಪೇಟೆ ಸಮೀಪದ ಗವಟೂರಿನ ರಾಮಚಂದ್ರರವರ ತೋಟದಲ್ಲಿ ರೋಟರಿ ಕ್ಲಬ್ ರಿಪನ್ ಪೇಟೆ ಹಾಗೂ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಇವರ ಸಹಯೋಗದೊಂದಿಗೆ ಆಯೋಜಿಸಲಾದ “ಮಣ್ಣೆ ಹೊನ್ನು” ಎಂಬ ವಿಶೇಷ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಅವರು ಮಣ್ಣಿನ ಫಲವತ್ತತೆ ನೈಸರ್ಗಿಕವಾದುದು , ಇತ್ತೀಚಿಗೆ ಅಧಿಕ ರಾಸಾಯನಿಕಗಳ ಬಳಕೆಯಿಂದ ಮಣ್ಣು ತನ್ನ ಆರೋಗ್ಯವನ್ನು ಕಳೆದುಕೊಳ್ಳುತ್ತಿದೆ , ನಾವು ಸತ್ತರೆ ಮಣ್ಣು ಸೇರುತ್ತೇವೆ , ಮಣ್ಣು ಸತ್ತರೆ ಮಾಡುವುದೇನು ಎಂದು ಹೇಳಿ , ನಾವೆಲ್ಲರೂ ಮಣ್ಣಿನ ಫಲವತ್ತತೆ ಕುರಿತು ಯೋಚಿಸುವಂತೆ ಮಾಡಿದರು.ಇತ್ತೀಚೆಗೆ ಮಣ್ಣಿನಲ್ಲಿ ಕಂಡುಬರುತ್ತಿರುವ ಸಮಸ್ಯೆಗಳು ಹಾಗೂ ಅದರ ನಿವಾರಣೆಗೆ ನಾವು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು.
ಡಾ. ಕೆ.ಎಸ್. ನಿರಂಜನ್ ಮಾತನಾಡಿ , ಮಣ್ಣು ಪರೀಕ್ಷೆ ಯಾಕಾಗಿ ಮಾಡಬೇಕು , ಮಣ್ಣು ಮಾದರಿಯನ್ನು ವೈಜ್ಞಾನಿಕ ರೀತಿಯಲ್ಲಿ ಹೇಗೆ ತೆಗೆಯುವುದು ,ಮಣ್ಣಿನಲ್ಲಿರುವ ಪೋಷಕಾಂಶಗಳ ಬಗ್ಗೆ ತಿಳಿಯುವ ಬಗೆಯನ್ನು ಸವಿವರವಾಗಿ ತಿಳಿಸಿಕೊಟ್ಟರು.ಹಾಗೆಯೇ ಅಡಿಕೆ ಸಿಪ್ಪೆಯಿಂದ ಗೊಬ್ಬರ ಮಾಡುವ ವಿಧಾನದ ಮಾಹಿತಿ ನೀಡಿದರು.
ಕೃಷಿ ಮತ್ತು ತೋಟಾರಿಕೆಗೆ ಸಂಭಂದಪಟ್ಟ ಯಾವುದೇ ಸಮಸ್ಯಯಿದ್ದಲ್ಲಿ ರೈತರು ನೇರವಾಗಿ ವಿಶ್ವವಿದ್ಯಾಲಯವನ್ನು ಸಂಪರ್ಕಿಸಬಹುದು ಆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದರ ಜೊತೆಗೆ ವೈಜ್ಞಾನಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬಹುದು .
ಇತ್ತೀಚಿನ ದಿನಗಳಲ್ಲಿ ಅಧಿಕ ಬೆಳೆ ಮತ್ತು ಲಾಭದ ಉದ್ದೇಶದಿಂದ ಕೃಷಿಕರು ಹಾನಿಕಾರಕ ಕಳೆನಾಶಕ ಬಳಸುತ್ತಿದ್ದಾರೆ , ಇದು ಮಾನವ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವುದು ಹಾಗೆಯೇ ಮಣ್ಣನ್ನೆ ನಿರ್ಜೀವಾಗೊಳಿಸುವುದು .ಈ ಕಾರ್ಯಕ್ರಮದಲ್ಲಿ ರೈತರಿಗೆ ಮಣ್ಣಿನ ಮಾದರಿ ತೆಗೆಯುವ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರ ಎಂ. ಎಂ.ಪರಮೇಶ್ ಮಾತನಾಡಿ ರೈತರುಗಳ ಕೃಷಿ ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಯೋಜನೆ ಅನುಷ್ಠಾನಗೊಳಿಸಿ ಹಾಗೆ ರೈತರಿಗೆ ಬಡ್ಡಿರಹಿತ ಸಾಲನಿಡುತ್ತಿದೆ , ಇದರ ಸದುಪಯೋಗ ಪಡೆಯುವ ಮೂಲಕ ರೈತರು ಆರ್ಥಿಕ ಅಭಿವೃದ್ಧಿ ಹೊಂದಿ ಸ್ವಾವಲಂಬಿಯಾಗಿ ಬದುಕಲು ಸಹಕಾರಿಯಾಗಿದೆ ಎಂದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಅಧ್ಯಕ್ಷ ದೇವದಾಸ್ ಆರ್.ಎಚ್. ವಹಿಸಿದರು .
ಕಾರ್ಯಕ್ರಮದಲ್ಲಿ ಗ್ರಾಮಪಂಚಾಯತಿ ಸದಸ್ಯ ಗಣಪತಿ ಹೆಚ್.ಎಸ್. ,ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಾಂತಮೂರ್ತಿ ಎನ್., ಡಾ ಎಸ್. ಜಿ .ಶಶಿಕಲಾ ರೋ ಎಂ ಬಿ ಲಕ್ಷ್ಮಣಗೌಡ, ಡಾ. ಬಿ.ಕೆ.ಶಿವಣ್ಣ ಉಪಸ್ಥಿತರಿದ್ದರು .
ಕೃಷಿ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ನವ್ಯ ನಿರೂಪಣೆಯನ್ನು ನಡೆಸಿದರು.ಹಾಗೂ ರೋಟರಿ ಸಂಸ್ತೆಯ ಕಾರ್ಯದರ್ಶಿ ಶ್ರೀ ರೋ . ಎಂ ರಾಮಚಂದ್ರ ವಂದನಾರ್ಪಣೆಯನ್ನು ನಡೆಸಿಕೊಟ್ಟರು.