ನಿಟ್ಟೂರು ಶ್ರೀ ನಾರಾಯಣ ಗುರು ಮಹಾಸಂಸ್ಥಾನದ ಶ್ರೀಗಳಿಂದ ಮುಖ್ಯಮಂತ್ರಿಗಳ ಭೇಟಿ – ಆರ್ಯ ಈಡಿಗ ನಿಗಮ ಸ್ಥಾಪನೆಗೆ ಒತ್ತಾಯ|CM

ರಿಪ್ಪನ್ ಪೇಟೆ : ಆರ್ಯ ಈಡಿಗ ನಿಗಮ  ಸ್ಥಾಪಿಸುವಂತೆ ಒತ್ತಾಯಿಸಿ  ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ರವರನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ  ಶ್ರೀ ನಾರಾಯಣ ಗುರು ಮಹಾಸಂಸ್ಥಾನ ಮಠದ ಶ್ರೀ ರೇಣುಕಾನಂದ ಸ್ವಾಮೀಜಿಗಳು   ಭೇಟಿ ಮಾಡಿ ಮನವಿ  ಸಲ್ಲಿಸಿದರು. ರಾಜ್ಯದಲ್ಲಿರುವ ಆರ್ಯ ಈಡಿಗ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಆರ್ಯ ಈಡಿಗ ನಿಗಮ ಸ್ಥಾಪಿಸುವಂತೆ ಮನವಿ ಸಲ್ಲಿಸಲಾಯಿತು. ಶ್ರೀ ನಾರಾಯಣ ಗುರು ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ರೇಣುಕಾನಂದ ಸ್ವಾಮೀಜಿ,  ಸೋಲೂರು ಮಠದ ಪೀಠಾಧ್ಯಕ್ಷರಾದ ವಿಕ್ಯಾತನಂದ ಸ್ವಾಮೀಜಿ …

Read More

ಆನಂದಪುರ ಸಮೀಪದಲ್ಲಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ – ಇಬ್ಬರು ಯುವಕರು ಸ್ಥಳದಲ್ಲೇ ಸಾವು|accident

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಕಣ್ಣೂರು ಬಳಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆ. ಗೌತಮಪುರ ನಿವಾಸಿಗಳಾದ ಪ್ರದೀಪ್ (25) ಹಾಗೂ ದಯಾನಂದ್ (30) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆನಂದಪುರದಿಂದ ಸಂತೆ ಮುಗಿಸಿಕೊಂಡು ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ  ಕಣ್ಣೂರು ಸಮೀಪ ನಿಂತಿದ್ದ ಲಾರಿಗೆ ಹಿಂಬದಿಯಿಂದಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದುಸೂಕ್ತ ಸೂಚನಾ ಫಲಕವಿಲ್ಲದೆ ಲಾರಿ ನಿಲ್ಲಿಸಿರುವುದಕ್ಕೆ ಆಕ್ರೋಶ…

Read More

ಕಾರು ಅಪಘಾತ – ಸಹಾಯ ಮಾಡುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದ ಗೃಹ ಸಚಿವ ಆರಗ|accident

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಸಮೀಪ ಅಪರಿಚಿತ ಕಾರೊಂದು ಅಪಘಾತಕ್ಕೀಡಾಗಿತ್ತು. ಕಾರಿನಲ್ಲಿದ್ದ ಶಿವಮೊಗ್ಗದ ನಿವಾಸಿಗಳು ಕಾರ್ಕಳಕ್ಕೆ ಹೋಗುತ್ತಿದ್ದರು‌. ಮಕ್ಕಳ ಪರೀಕ್ಷೆ ಬರೆಸುವ ಕಾರಣಕ್ಕೆ ಶಿವಮೊಗ್ಗದ ಕುಟುಂಬ ಹೋಗುತ್ತಿತ್ತು. ಈ ವೇಳೆ ಅಚಾನಕ್ಕಾಗಿ ರಸ್ತೆ ಪಕ್ಕದ ಚರಂಡಿಗೆ ಅವರ ಕಾರು ಇಳಿದು, ಅದನ್ನು ಮೇಲೆ ತರಲಾಗದೇ ಒದ್ದಾಡುತ್ತಿದ್ದರು. ಈ ಸಂದರ್ಭದಲ್ಲಿ, ಇದೇ ಮಾರ್ಗವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದರು. ದಾರಿಯಲ್ಲಿ ಕಾರು ಅಪಘಾತವಾಗಿದ್ದ ದೃಶ್ಯ ಕಂಡ ತಕ್ಷಣ ತಮ್ಮ ಕಾರು ನಿಲ್ಲಿಸಲು ಡ್ರೈವರ್…

Read More

ಹೊಸನಗರದ ಪ್ರಸನ್ನ ಭಟ್ ಮನೆಗೆ ಸಂಸದ ಬಿ ವೈ ರಾಘವೇಂದ್ರ ಭೇಟಿ – ಸಾಂತ್ವಾನ : ಪ್ರಸನ್ನ ಭಟ್ ಹೆಸರಲ್ಲಿ ಯೂತ್ ಐಕಾನ್ ಸ್ಮರಣಿಕೆ ಮಾಡುವ ಚಿಂತನೆ|byr

ಭಾನುವಾರ ರಾಮನಗರದಲ್ಲಿ ಆಕಸ್ಮಿಕ ನೀರಿಗೆ ಬಿದ್ದು ನಿಧನರಾಗಿದ್ದ ಪ್ರಸನ್ನ ಆರ್ ಭತ್ ರವರ ಮನೆಗೆ ಶಿವಮೊಗ್ಗ ಜಿಲ್ಲೆಯ ಸಂಸದರಾದ ಬಿ.ವೈ ರಾಘವೇಂದ್ರರವರು ಭೇಟಿ ನೀಡಿ ಅವರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದರು. ಪ್ರಸನ್ನ ಆರ್ ಭಟ್‌ರವರು ತುಂಬಾ ಸ್ವಾಭಿಮಾನಿ. ನನ್ನ ಜೊತೆಗೆ 3 ವರ್ಷಗಳಿಂದ ಛಾಯ ಗ್ರಾಹಕನಾಗಿದ್ದುಕೊಂಡು ನನಗೆ ಅರ್ಧದಷ್ಟು ಕೆಲಸವನ್ನು ಕಡಿಮೆ ಮಾಡುತಿದ್ದ ಅವರ ಅಗಲಿಕೆಯಿಂದ ತುಂಬಾ ದುಃಖವಾಗಿದೆ. ನಮ್ಮ ಕುಟುಂಬಕ್ಕೆ ಮನೆ ಮಗನಾಗಿ ಎಲ್ಲರೊಂದಿಗೂ ತಮ್ಮ ಸಂತೋಷದಿಂದ ಕೆಲಸ ನಿರ್ವಹಿಸುತ್ತಿದ್ದವರು ಏಕಾಏಕಿ ಈ ರೀತಿ…

Read More

ಯಡೂರು ಅಬ್ಬಿ ಫಾಲ್ಸ್ ನಲ್ಲಿ ಈಜಲು ತೆರಳಿದ್ದ ತೀರ್ಥಹಳ್ಳಿಯ ಯುವಕ ನೀರಲ್ಲಿ ಮುಳುಗಿ ಸಾವು|death

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಯಡೂರು ಗ್ರಾಮದ ಅಬ್ಬಿ‌ಫಾಲ್ಸ್ ನಲ್ಲಿ ಈಜಲು ಹೋದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ. ತೀರ್ಥಹಳ್ಳಿ ಪಟ್ಟಣದ ಶಬರಿ ಹೋಟೆಲ್ ಮಾಲೀಕರ ಮಗ ರಿಷಬ್ (20) ಮೃತಪಟ್ಟ ಯುವಕನೆಂದು ತಿಳಿದುಬಂದಿದೆ. ಸಹ್ಯಾದ್ರಿ ಪಾಲಿಟೇಕ್ನಿಕ್ ನಲ್ಲಿ ಓದುತ್ತಿದ್ದ ರಿಷಬ್ ಇಂದು ಪರೀಕ್ಷೆ ಮುಗಿಸಿಕೊಂಡು ತನ್ನ ಇಬ್ಬರು ಸ್ನೇಹಿತರೊಂದಿಗೆ ಅಬ್ಬಿ ಫಾಲ್ಸ್ ಗೆ ಈಜಲು ತೆರಳಿದ್ದಾರೆ. ಬಂಡೆಗಳ ನಡುವೆ ಸಿಲುಕಿಕೊಂಡಿದ್ದ ಮೃತದೇಹವನ್ನು ಶೋಧ ಕಾರ್ಯಾಚರಣೆ ನಡೆಸಿ ಹೊರತೆಗೆಯಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹ…

Read More

ಬಿದರಹಳ್ಳಿ ಶಾಲೆಯ ಶಿಕ್ಷಕನ ದಿಡೀರ್ ವರ್ಗಾವಣೆ – ಶಾಲೆಯ ಗೇಟ್ ಗೆ ಬೀಗ ಜಡಿದು ಗ್ರಾಮಸ್ಥರು ಹಾಗೂ ಪೋಷಕರ ಪ್ರತಿಭಟನೆ|bidarahalli

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿದರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ದಿನೇಶ್ ರವರನ್ನು ದಿಡೀರ್ ವರ್ಗಾವಣೆ ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಶಾಲೆಯ ಗೇಟ್ ಗೆ ಬೀಗ ಜಡಿದು ಪ್ರತಿಭಟನೆ ನಡೆಸುತಿದ್ದಾರೆ. ಮಲೆನಾಡ ಗಾಂಧಿ ಎಚ್‌.ಜಿ. ಗೋವಿಂದೇಗೌಡ ಹೆಸರಿನ ರಾಜ್ಯಮಟ್ಟದ ಅತ್ಯುತ್ತಮ ಸರ್ಕಾರಿ ಶಾಲೆ ಪ್ರಶಸ್ತಿ ಹಾಗೂ ಇನ್ನಿತರ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆಯುವ ಮೂಲಕ ಮಲೆನಾಡಿನ ಹಳ್ಳಿಯೊಂದು ರಾಜ್ಯದಲ್ಲಿ ಗುರುತಿಸಿಕೊಂಡು ಇತ್ತೀಚಿಗೆ ಈ ಶಾಲೆಗೆ ರಾಜ್ಯ ಶಿಕ್ಷಣ ಸಚಿವ ಬಿ ಸಿ ನಾಗೇಶ್…

Read More

ವೀರಶೈವ ಲಿಂಗಾಯತ ಮಹಾಸಭಾದಿಂದ ಬ್ರಹ್ಮೇಶ್ವರದಲ್ಲಿ ಜ.08 ರಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರಿಗೆ ಸನ್ಮಾನ ಕಾರ್ಯಕ್ರಮ|bsy

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕ್ ಘಟಕ ಹಾಗೂ ಬ್ರಹ್ಮೇಶ್ವರ ವೀರಭದ್ರೇಶ್ವರ ಸೇವಾ ಸಮಿತಿಯವರು ಜನವರಿ 8 ರಂದು ಬೆಳಗ್ಗೆ 10 ಗಂಟೆಗೆ ಬ್ರಹ್ಮೇಶ್ವರದ ವೀರಶೈವ ಸಭಾಭವನದಲ್ಲಿ ದಣಿವರಿಯದ ಜನನಾಯಕ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಅಖಿಲಾ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕಾರ್ಯದರ್ಶಿ ಬಿ.ಯುವರಾಜ್ ತಿಳಿಸಿದರು. ರಿಪ್ಪನ್‌ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈ ಸನ್ಮಾನ ಸಮಾರಂಭದ ದಿವ್ಯಸಾನಿಧ್ಯವನ್ನು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ವಹಿಸುವರು. ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ…

Read More

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ – ರಿಪ್ಪನ್ ಪೇಟೆ ಪಿಯು ಕಾಲೇಜಿಗೆ ಪ್ರಥಮ ಸ್ಥಾನ|volleyball

ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ – ರಿಪ್ಪನ್ ಪೇಟೆ ಪಿಯು ಕಾಲೇಜಿಗೆ ಪ್ರಥಮ ಸ್ಥಾನ ರಿಪ್ಪನ್ ಪೇಟೆ : ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜ್   ವಾಲಿಬಾಲ್ ತಂಡ ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು ರೋಲಿಂಗ್ ಕಪ್ ಪಡೆದಿರುತ್ತಾರೆ. ಶಿವಮೊಗ್ಗದ ಪ್ರಖ್ಯಾತ ಯುನೈಟೆಡ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್(ರಿ.) ಸಂಸ್ಥೆಯು ಖ್ಯಾತ ರಾಷ್ಟ್ರೀಯ ವಾಲಿಬಾಲ್ ಆಟಗಾರ ದಿ. “ಸರ್ದಾರ್ ಜಾಫರ್” ಅವರ ಸ್ಮರಣಾರ್ಥ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಎರಡು ದಿನಗಳ…

Read More

ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಇನ್ಮುಂದೆ ಬೇಕಾಬಿಟ್ಟಿ ವಾಹನ ನಿಲ್ಲಿಸಿದರೆ ಬೀಳುತ್ತೆ ಭಾರಿ ದಂಡ – ಪೊಲೀಸ್ ಇಲಾಖೆಯಿಂದ ನೂತನ ಪಾರ್ಕಿಂಗ್ ವ್ಯವಸ್ಥೆ ಜಾರಿ|parking

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಸುಗಮ ವಾಹನಗಳ ಸಂಚಾರ ಹಾಗೂ ಜನದಟ್ಟಣೆ ನಿಯಂತ್ರಣಕ್ಕಾಗಿ ಹೊಸನಗರ ಸಿಪಿಐ ಗಿರೀಶ್ ಬಿ ಸಿ ಹಾಗೂ ಪಿಎಸ್ ಐ ಶಿವಾನಂದ ಕೆ ನೇತ್ರತ್ವದಲ್ಲಿ ನೂತನ ಪಾರ್ಕಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.  ಪಟ್ಟಣದಲ್ಲಿ ದಿನೇ ದಿನೇ ವಾಹನ ಸಂಚಾರ ಹೆಚ್ಚಾಗುತ್ತಿದ್ದು, ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಸಂಚಾರ ಸುವ್ಯವಸ್ತೆ ಕೈಗೊಳ್ಳಲು ಸಾರ್ವಜನಿಕರ ಹಿತ ದಷ್ಠಿಯಿಂದ ವಾಹನ ನಿಲುಗಡೆಗಾಗಿ ಪೊಲೀಸ್ ಇಲಾಖೆ ನೂತನ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತಂದಿದ್ದಾರೆ. ಪಟ್ಟಣದ ನಾಲ್ಕು ರಸ್ತೆಯ…

Read More

ಎಕ್ಸಾಸ್ಟ್ ಫ್ಯಾನ್ ಮುರಿದು ಮನೆ ಕಳ್ಳತನ ಮಾಡಿದ್ದ ಆರೋಪಿಯ ಬಂಧನ – ಲಕ್ಷಗಟ್ಟಲೆ ವಸ್ತು ಸಮೇತ ಸಿಕ್ಕಿಬಿದ್ದ ಕಳ್ಳ|theft

ಮನೆಯಲ್ಲಿ ಯಾರೂ ಇಲ್ಲದ ವೇಳೆ ಎಗ್ಸಾಸ್ಟ್ ಫ್ಯಾನ್ ಮುರಿದು ಒಳ ನುಗ್ಗಿ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಒಟ್ಟು 8 ಮನೆ ಕಳ್ಳತನ ಮಾಡಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಚಿನ್ನಾಭರಣ ಸೇರಿ 7.77 ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದ ಅಣ್ಣಾನಗರ 1ನೇ ಅಡ್ಡರಸ್ತೆಯ ನಿವಾಸಿ ಸದ್ದಾಂ (31) ಬಂಧಿತ.  ನ.28ರಂದು ಬಸವರಾಜಪ್ಪ ಅವರು ಪತ್ನಿಯೊಂದಿಗೆ ತಮ್ಮ ತೋಟಕ್ಕೆ ತೆರಳಿದ್ದರು. ಡಿ.2ರಂದು ಮರಳಿ ಬಂದಾಗ ಮನೆ ಬಾಗಿಲು ಹಾಕಿದಂತೆಯೆ ಇತ್ತು. ಬೆಡ್ ರೂಂಗೆ ಹೊದಾಗ ವಸ್ತುಗಳೆಲ್ಲ…

Read More