ಹೊಸನಗರ : ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಆದರ್ಶ್ ನಿಧನ|accident

ಹೊಸನಗರ: ಸೊನಲೆ ಜಂಕ್ಷನ್ ಬಳಿ  ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಟ್ಟಣದ ಯುವಕ ಆದರ್ಶ್ ನಿಧನ.





ಹೊಸನಗರದ ದಿವಂಗತ ಪ್ರಕಾಶ್ ಹಾಗು ಆಶಾ ದಂಪತಿಗಳ ಪುತ್ರ ಆದರ್ಶ್ (23)ಕಳೆದ ಭಾನುವಾರದಂದು ಹೊಸನಗರ- ತೀರ್ಥಹಳ್ಳಿ ರಸ್ತೆಯ ಸೊನಲೆ ಜಂಕ್ಷನ್ ಬಳಿ ಬೈಕ್ ಅಪಘಾತದಲ್ಲಿ ಮೆದುಳಿಗೆ ಗಂಭೀರ ಗಾಯಗೊಂಡಿದ್ದರು,

ಇವರನ್ನು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿತ್ತು.
ಚಿಕಿತ್ಸೆ ಗೆ ಸ್ಪಂದಿಸದ ಹಿನ್ನಲೆಯಲ್ಲಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಮರಳಿ ಕರೆದುಕೊಂಡು ಬಂದು ಚಿಕಿತ್ಸೆ  ನೀಡಲಾಗುತ್ತಿತ್ತು,




ವಿಧಿವಶಾತ್ ಇಂದು ಬೆಳಿಗ್ಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯಗೊಂಡು ಆದರ್ಶ್ ಮೃತಪಟ್ಟಿದ್ದಾನೆ.

ಮೃತ ಯುವಕನ ಅಂತ್ಯಕ್ರಿಯೆ ಹೊಸನಗರದಲ್ಲಿ ಇಂದು ಮಧ್ಯಾಹ್ನ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.





Leave a Reply

Your email address will not be published. Required fields are marked *