ಶಿವಮೊಗ್ಗದ ಗೋಪಿ ವೃತ್ತದಲ್ಲಿ ಹೋಳಿ ಸಂಭ್ರಮ – ಕುಣಿದು ಕುಪ್ಪಳಿಸಿದ ಯುವಕ ಯುವತಿಯರು | ರಿಪ್ಪನ್‌ಪೇಟೆ : ಹೋಳಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಯುವಕರು|Holi


ಶಿವಮೊಗ್ಗ : ನಿರಂತರ ಹಾಡು, ಹಾಡಿಗೆತಕ್ಕಂತೆ ಸ್ಟೆಪ್ಸು ಹೀಗೆ ಶಿವಮೊಗ್ಗ ಗೋಪಿ ವೃತ್ತದ ಬಳಿ ಹೋಳಿ ಹಬ್ಬವನ್ನ ಭರ್ಜರಿಯಾಗಿ ಆಚರಿಸಲಾಯಿತು. ಈ ಬಾರಿ ವಿನೂತನವಾಗಿ ಹೋಳಿ ಹಬ್ಬವನ್ನ‌ಆಚರಿಸಲಾಗಿದೆ.



ಎರಡು ವರ್ಷಗಳಿಂದ ಕೊರೋನ ಹಿನ್ನಲೆಯಲ್ಲಿ ಈ ಹಬ್ಬಗಳು ಕಳೆಗುಂದಿದ್ದವು. ಆದರೆ ಈ ಬಾರಿ ಗೋಪಿ ವೃತ್ತದ ಬಳಿ ಡಿಜೆ ಹಾಡು ಎಂತಹವರನ್ನೂ ಹಬ್ವ ಆಚರಣೆಗೆ ಕೈಬೀಸಿ ಕರೆಯಲಿದೆ.  ಗೀತಾಂತಲೀ…., ಕಾಣದಂತೆ ಮಾಯವಾದನು ನಮ್ಮ ಶಿವ…, ನಮ್ಮೂರ ಜಾತ್ರೆಯಲ್ಲಿ ಮುಸ್ಸಂಜೆ ಹೊತ್ತಲ್ಲಿ, ಹೀಗೆ ನಿರಂತರ ಡಿಜೆ ಹಾಡುಗಳಿಗೆ ಯುವಕ ಯುವತಿಯರು ನಿರಂತರ ಸ್ಟೆಪ್ಸುಹಾಕಿ ಕುಣಿದರು.

ಈ ಬಾರಿ ಶಿವಮೊಗ್ಗದಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ಗೋಪಿ ವೃತ್ತದಲ್ಲಿ ಹೋಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಹೋಳಿ ಹಬ್ಬವನ್ನ ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಈ ಜಾಗದಲ್ಲಿ ಹೋಳಿ ಹಬ್ಬ ಆಚರಿಸಲಾಗಿದೆ.

ಮಧ್ಯದಲ್ಲಿ ಜೈ ಶ್ರೀರಾಮ್, ಜೈ ಭಜರಂಗಿ ಹೀಗೆ ಘೋಷಣೆಗಳು ಮೊಳಗಿದವು. ಬಣ್ಣವನ್ನ ಎರಚಿ ಯುವಕ ಯುವತಿಯರು ಸಂಭ್ರಮ ಪಟ್ಟರೆ ಸ್ಪ್ರಿಕ್ಲಿಂಗ್ ಮೂಲಕ ನೀರು ಹಾರಿಸಲಾಯಿತು.

ರಿಪ್ಪನ್‌ಪೇಟೆ : ಹೋಳಿ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಯುವಕರು


ರಂಗಿನ ಹಬ್ಬ ಹೋಳಿಯನ್ನು ಬುಧವಾರ ರಿಪ್ಪನ್‌ಪೇಟೆಯಲ್ಲಿ ಬಣ್ಣವನ್ನು ಪರಸ್ಪರ ಎರಚುವುದರೊಂದಿಗೆ ಯುವಕರು ಸಂಭ್ರಮಿಸಿದರು.

ಇಲ್ಲಿನ ವಿನಾಯಕ ವೃತ್ತದಲ್ಲಿ ಇಂದು ಬೆಳಗ್ಗೆಯಿಂದಲೇ ಯುವಕರ ತಂಡ ಹೋಳಿ ಬಣ್ಣವನ್ನು ಪರಸ್ಪರ ಎರಚಿಕೊಳ್ಳುವುದರೊಂದಿಗೆ ಓಕುಳಿ ಆಡಿದರು.

ಮಂಗಳವಾರ ರಾತ್ರಿ ವಿನಾಯಕ ವೃತ್ತದಲ್ಲಿ ಕಾಮನನನ್ನು ದಹಿಸಿದರು.




Leave a Reply

Your email address will not be published. Required fields are marked *