ಮಾ.25ಕ್ಕೆ ಮತ್ತೊಮ್ಮೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ ಪ್ರಧಾನಿ‌ ಮೋದಿ!!! ಯಾಕೆ ಗೊತ್ತಾ..?? ಈ ಸುದ್ದಿ ನೋಡಿ


ಶಿವಮೊಗ್ಗ ನಗರದ ವಿಮಾನ ನಿಲ್ದಾಣಕ್ಕೆ ಮತ್ತೊಮ್ಮೆ ಬರಲಿದ್ದಾರೆ ಪ್ರಧಾನಿ ಮೋದಿ. ಇದರಿಂದ ನಗರಕ್ಕೆ ಅವರ ಭೇಟಿ ಸರಿಸುಮಾರು ಒಂದು ತಿಂಗಳ ಅವಧಿಯ ಒಳಗೆ ಎರಡು ಬಾರಿ ಭೇಟಿಯಾಗಲಿದೆ.



ಚುನಾವಣಾ ಪ್ರಚಾರಕ್ಕಾಗಿ ಬರುತ್ತಿರುವ ಪ್ರಧಾನಿ ಮೋದಿ ಮಾ.25 ರಂದು ದಾವಣಗೆರೆಯಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಈ ಹಿನ್ನಲೆಯಲ್ಲಿ ಬಿಜೆಪಿ ಮಾ.25 ರಂದು ಪ್ರಧಾನಿ ಮೋದಿ ದಾವಣಗೆರೆಗೆ ಆಗಮಿಸುತ್ತಿದ್ದು, ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಬೆಂಗಳೂರಿನಿಂದ ನೇರವಾಗಿ ದಾವಣಗೆರೆಗೆ ಹೆಲಿಕಾಪ್ಟರ್ ನಲ್ಲಿ ಆಗಮಿಸಲಿದ್ದಾರೆ. ದಾವಣಗೆರೆಯಲ್ಲಿ ಸಮಾರೋಪ ಸಮಾರಂಭದಲ್ಲಿ ಭಾಗಿಯಾದ ಪ್ರಧಾನಿ ಹೆಲಿಕಾಫ್ಟರ್ ಮೂಲಕ ಶಿವಮೊಗ್ಗಕ್ಕೆ ಬರಲಿದ್ದಾರೆ.



ಶಿವಮೊಗ್ಗದ ಏರ್ ಪೋರ್ಟ್ ಗೆ ಹೆಲಿಕಾಪ್ಟರ್ ನಿಂದ ಬರುವ ಪ್ರಧಾನಿ ಮೋದಿ ನಂತರ ದೆಹಲಿಗೆ ವಿಮಾನದಲ್ಲಿ ಪ್ರಯಾಣ ಬೆಳಸಲಿದ್ದಾರೆ.

ಹುಬ್ಬಳ್ಳಿ ಏರ್​ಪೋರ್ಟ್​ ಬಿಟ್ಟು ಶಿವಮೊಗ್ಗ ಏರ್​ಪೋರ್ಟ್ ಆಯ್ಕೆ ಮಾಡಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿಯವರು ದಾವಣಗೆರೆಯಿಂದ ಹುಬ್ಬಳ್ಳಿ ವಿಮಾನ ನಿಲ್ಧಾಣಕ್ಕೆ ತೆರಳಿ ಅಲ್ಲಿಂದ ದೆಹಲಿಗೆ ಹೋಗುವ ಅವಕಾಶವಿತ್ತು. ಆದಾಗ್ಯು ಅವರು, ಶಿವಮೊಗ್ಗ ಏರ್​ಫೋರ್ಟ್​ನ ಮೂಲಕ ದೆಹಲಿಗೆ ತೆರಳುತ್ತಿದ್ದಾರೆ. ಏರ್​ಪೋರ್ಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯುವರು ಯಾರನ್ನು ಭೇಟಿಯಾಗುವುದಿಲ್ಲ ಎನ್ನಲಾಗುತ್ತಿದೆ. ಇದರ ಹೊರತಾಗಿ ನರೇಂದ್ರ ಮೋದಿಯವರು ಶಿವಮೊಗ್ಗ ಏರ್​ಫೋರ್ಟ್​ಗೆ ಮತ್ತೊಮ್ಮೆ ಭೇಟಿಕೊಟ್ಟು ಅಲ್ಲಿಂದಲೇ ದೆಹಲಿಗೆ ಸಾಗುತ್ತಿರುವುದು ವಿಶೇಷ ಸಂದೇಶ ರವಾನೆ ಮಾಡಲಿದೆ. 



ಇದೇ ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಖುದ್ದು ವಿಮಾನದಲ್ಲಿ  ಶಿವಮೊಗ್ಗ ಏರ್​ಫೋರ್ಟ್​ನಲ್ಲಿ ಲ್ಯಾಂಡ್ ಆಗಿ, ಉದ್ಘಾಟಿಸಿದ್ದರು. ಆ ಬಳಿಕ ಇದೀಗ ಮತ್ತೊಮ್ಮೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಹಾಗು ಶಿವಮೊಗ್ಗದ ಜನರಿಗೆ ಏರ್​ಪೋರ್ಟ್​ನ ವಿಶೇಷತೆಯನ್ನು ಪರೋಕ್ಷವಾಗಿ ಸಾರಲಿದ್ದಾರೆ.  

Leave a Reply

Your email address will not be published. Required fields are marked *