ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ ತೀ ನಾ ಶ್ರೀನಿವಾಸ್| ನೀರಿನಲ್ಲಿ ಆಟ ಆಡಲು ಹೋದ 12 ವರ್ಷದ ಬಾಲಕಿ ನೀರುಪಾಲು..!!

ನೀರಿನಲ್ಲಿ ಆಟ ಆಡಲು ಹೋದ 12 ವರ್ಷದ ಬಾಲಕಿ ನೀರುಪಾಲು !

ಭದ್ರಾವತಿ : ಕಾಳನಕಟ್ಟೆಯಲ್ಲಿ ಭದ್ರಾ ನದಿಯ ಚಾನೆಲ್  ನೀರಿನಲ್ಲಿ ಆಡಲು ಹೋದ ಬಾಲಕಿ ನೀರು ಪಾಲಾಗಿದ್ದು ಆಕೆಗಾಗಿ ಹುಡುಕಾಟ ಆರಂಭವಾಗಿದೆ.

ಕಾಳನಕಟ್ಟೆಯಲ್ಲಿ ಭದ್ರ ನದಿಯ ಚಾನೆಲ್ ನೀರಿನಲ್ಲಿ ಇದೇ ಗ್ರಾಮದ ಮಹಿಳೆಯೊಬ್ಬರು ಬಟ್ಟೆ ತೊಳೆಯಲು ಮುಂದಾಗಿದ್ದರು. ಈ ವೇಳೆ ನೀರಿನಲ್ಲಿ ಆಟವಾಡಲು ಬಯಸಿದ ಮಹಿಳೆಯ 12 ವರ್ಷದ ಮಗಳು ಚಾನೆಲ್ ನೀರು ಪಾಲಾಗಿದ್ದಾಳೆ.

ತಾಯಿ ಸುಂದರಮ್ಮ ಈಜು ಕಲಿಯತಿದ್ದರಿಂದ ನೀರಿಗಿಳಿದು ಹುಡುಕಾಡಿದ್ದಾರೆ. ಮಗಳು ಸಿಗದ ಕಾರಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದವರು ಭೇಟಿ ನೀಡಿದ್ದಾರೆ. ಶೋಧ ಕಾರ್ಯ ಆರಂಭವಾಗಿದೆ. ಘಟನೆ ಇಂದು ಸಂಜೆ ನಡೆದಿದೆ.


ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಘೋಷಿಸಿದ ತೀ ನಾ ಶ್ರೀನಿವಾಸ್

ಶಿವಮೊಗ್ಗ : ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಜಿಲ್ಲಾಧ್ಯಕ್ಷ ಮತ್ತು ಪ್ರಭಾವಿ‌ ಮುಖಂಡ ತೀನಾ ಶ್ರೀನಿವಾಸ್ ಗುಡ್ ಬೈ ಹೇಳಿದ್ದಾರೆ. ರೈತರ ಪರ ನಿಲ್ಲುತ್ತಿದ್ದ ತೀ.ನಾ.ಶ್ರೀನಿವಾಸ್ ಕಾಂಗ್ರೆಸ್ ನ ಮೇಲೆ ಗುರುತರ ಆರೋಪ ಮಾಡಿ ರಾಜೀನಾಮೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ತೀ.ನಾ.ಶ್ರೀನಿವಾಸ್ ರೈತರ ಪರ ಹೋರಾಟ ಮಾಡಿಕೊಂಡು ಬಂದಿದ್ದೇನೆ 38 ವರ್ಷ ಈ ಪಕ್ಷಕ್ಕೆ ಜೀವ ಸವಿಸಿದ್ದೇನೆ. ನಾಲ್ಕು ವರ್ಷ ಮಾತ್ರ ಅಧ್ಯಕ್ಷನಾಗಿದ್ದೆ. ಉಳಿದ 34 ವರ್ಷನೂ ಪಕ್ಷಕ್ಕಾಗಿ ದುಡಿದಿದ್ದೇನೆ. ಆದರೆ ಈಗ ರೈತರ ಪರವಾಗಿ ಧ್ವನಿಯಾಗಿ ನಿಲ್ಲಲು ನನಗೆ ಸಾಗರ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೇಟ್ ಕೇಳಿದ್ರೆ ತಿರಸ್ಕರಿಸುತ್ತಾರೆ ಹಾಗಾಗಿ ಕೆಪಿಸಿಸಿ ಅಧ್ಯಕ್ಷರಿಗೆ ನನ್ನ ರಾಜೀನಾಮೆ ಪತ್ರ ಕಳುಹಿಸಿರುವುದಾಗಿ ಹೇಳಿದರು.

ನಿನ್ನೆ ಮೊನ್ನೆ ಬಂದ ಮಧು ಬಂಗಾರಪ್ಪನವರಿಗೆ ಪಕ್ಷದಲ್ಲಿ ಮೂರು ನಾಲ್ಕು ಸ್ಥಾನ ನೀಡಲಾಗುತ್ತಿದೆ. ನಿಜವಾದ ಹೋರಾಟಗಾರ ಕಾಗೋಡು ತಿಮ್ಮಪ್ಪನವರಿಗೆ ಸಾಗರದಲ್ಲಿ ಟಿಕೆಟ್ ನೀಡಿದ್ರೆ ಒಪ್ಪಿಕೊಳ್ಳುತ್ತೇನೆ.ಆದರೆ ಅವರಿಗೆ ಈ ಬಾರಿ ಟಿಕೇಟ್ ನೀಡುವ ಸಾಧ್ಯತೆ ಕಡಿಮೆಯಾಗಿದೆ ಎಂದು ಗುಡುಗಿದರು.

 ಸಾಗರದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದು ಸೊರಬದಲ್ಲೂ ಸ್ವತಂತ್ರ ಅಭ್ಯರ್ಥಿಗಳನ್ನ ಕಣಕ್ಕಿಳಿಸುತ್ತಿದ್ದೇವೆ. ಮುಂದೆ ನಡೆಯುವ ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಚುನಾವಣೆಯಲ್ಲೂ ಅಭ್ಯರ್ಥಿಗಳನ್ನ ಕಣಕ್ಕಿಳಿಸಲಿದ್ದೇವೆ ಎಂದು ಟಕ್ಕರ್ ನೀಡಿದರು. 

Leave a Reply

Your email address will not be published. Required fields are marked *