“ಖೇಲೋ ಇಂಡಿಯಾ” ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ರಿಪ್ಪನ್‌ಪೇಟೆ ಮೂಲದ ಯುವ ಪ್ರತಿಭೆ ಭೂಮಿಕಾ|khelo india
ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಜೀರಿಗೆಮನೆ ಗ್ರಾಮದ ಯುವ ಪ್ರತಿಭೆಯೊಂದು 2023 ನೇ ಸಾಲಿನ “ಖೇಲೋ ಇಂಡಿಯಾ ” ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದ್ದಾಳೆ. ಹೌದು ಮಧ್ಯಪ್ರದೇಶ ರಾಜ್ಯದ ಭೋಫಾಲ್ ನಲ್ಲಿ ಜನವರಿ 30 ರಿಂದ ಫೆ 11 ರವರೆಗೆ ನಡೆಯುತ್ತಿರುವ ಖೇಲೋ ಇಂಡಿಯಾ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗರ್ತಿಕೆರೆ ಗ್ರಾಪಂ ವ್ಯಾಪ್ತಿಯ ಜೀರಿಗೆಮನೆ ಗ್ರಾಮದ ನಾಗರಾಜ್ ಮತ್ತು ಜಯಮ್ಮ ದಂಪತಿಗಳ ಪುತ್ರಿ ಭೂಮಿಕಾ…