ಲಾರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆ..!!|deadbody

ತೀರ್ಥಹಳ್ಳಿ : ಪಟ್ಟಣದ ಹೊಸ ಕೋರ್ಟ್ ಬಳಿ  ಲಾರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾಗಿದೆ. 4 ದಿನಗಳ ಹಿಂದೆಯೇ ಲಾರಿಯಲ್ಲೇ ಹೃದಯಾಘಾತದಿಂದ  ಸಾವನಪ್ಪಿರಬಹುದು ಎಂದು ಹೇಳಲಾಗುತ್ತಿದೆ. ನಾಲ್ಕು ದಿನಗಳ ಹಿಂದೆ ಹುಬ್ಬಳ್ಳಿಯಿಂದ ಲಾರಿಯಲ್ಲಿ ಲೋಡ್ ತುಂಬಿಸಿಕೊಂಡು ಬಂದು ತೀರ್ಥಹಳ್ಳಿಯಲ್ಲಿ ಇಳಿಸಿ ರಾತ್ರಿ ಊಟ ಮಾಡಿ ಲಾರಿಯಲ್ಲಿ ಮಲಗಿದ್ದಾಗ ಹೃದಯಘಾತವಾಗಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಅಂದಾಜು 50 ವರ್ಷದ ವ್ಯಕ್ತಿ ಎನ್ನಲಾಗುತಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜೆಸಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.  ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಅಶಾ,ಅಂಗನವಾಡಿ ಕಾರ್ಯಕರ್ತೆಯರ ಸೇವೆ ಪರಮ ಶ್ರೇಷ್ಟ ಸೇವೆ – ಹರತಾಳು ಹಾಲಪ್ಪ|haratalu

ರಿಪ್ಪನ್‌ಪೇಟೆ : ಜಗತ್ತನ್ನೆ ತಲ್ಲಣಗೊಳಿಸಿದ ಕೋರೋನಾ ಮಹಾಮಾರಿಯ ಸಂದರ್ಭದಲ್ಲಿ ಹಗಲಿರುಳು ತಾಯಿಯಂತೆ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಸಮಾಜದ ರಕ್ಷಣೆಗಾಗಿ ಅಶಾ ಅಂಗನವಾಡಿ ಕಾರ್ಯಕರ್ತೆಯರು ಸೇವೆ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆಂದು ಕ್ಷೇತ್ರದ ಶಾಸಕ ಹಾಗೂ ಎಂ.ಎಸ್.ಐ.ಎಲ್.ಅಧ್ಯಕ್ಷ ಹರತಾಳು ಹಾಲಪ್ಪ ಪ್ರಶಂಶೆ ವ್ಯಕ್ತಪಡಿಸಿದರು. ರಿಪ್ಪನ್‌ಪೇಟೆ ಸಮೀಪದ ಹರತಾಳು ಗ್ರಾಮದ ಶ್ರೀರಾಘವೇಂದ್ರ ಸ್ವಾಮಿ ಮಠದ ಸಭಾ ವನದಲ್ಲಿ ಅಯೋಜಿಸಲಾದ ಅಂಗನವಾಡಿ ಹಾಗೂ ಅಶಾ ಕಾರ್ಯಕರ್ತೆಯರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಮಾಡಿ ಮಾತನಾಡಿದ ಅವರು ಸರ್ಕಾರದ ಕನಿಷ್ಟ ವೇತನದ ನೌಕರರಾಗಿದ್ದರು ಸಹ…

Read More

ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು|accident

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ದೇವಂಗಿ ಸಮೀಪದ ಬಾಣಂಕಿ ಬಳಿ ಶುಕ್ರವಾರ ರಾತ್ರಿ ಭೀಕರ ಕಾರು ಅಪಘಾತ ನಡೆದಿದೆ. ಶುಕ್ರವಾರ ತಡರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಕೂದಲೆಳೆ ಅಂತರದಲ್ಲಿ 5 ಮಹಿಳೆಯರು ಜೀವಾಪಾಯದಿಂದ ಪಾರಾಗಿದ್ದಾರೆ. ಕುಪ್ಪಳಿಯಿಂದ ತೀರ್ಥಹಳ್ಳಿ ಕಡೆಗೆ ಹೋಗುತ್ತಿದ್ದ ಟಾಟಾ ಹ್ಯಾರಿಯರ್ ಕಾರು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. 5 ಮಂದಿ ಮಹಿಳೆಯರಿದ್ದ ಕಾರಲ್ಲಿ ಒಬ್ಬರಿಗೆ ಗಂಭೀರ ಗಾಯಗೊಂಡಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯ ಆಗಿದೆ. ಎಲ್ಲರನ್ನು ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ….

Read More

ಹುಂಚ ಸಮೀಪದ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರ ವಿರುದ್ದ ಪೋಕ್ಸೋ ಪ್ರಕರಣ ದಾಖಲು|pocso

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಇಬ್ಬರು ಶಿಕ್ಷಕರ ವಿರುದ್ಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.  ಕಳೆದೊಂದು ತಿಂಗಳ ಹಿಂದೆ 5ನೇ ತರಗತಿ ವಿದ್ಯಾರ್ಥಿನಿಯೊಂದಿಗೆ ಶಿಕ್ಷಕ ಅಸಭ್ಯವರ್ತನೆ ತೋರಿದ್ದು ನೊಂದ ಬಾಲಕಿ ತಾಯಿಯ ಬಳಿ ಘಟನೆಯ ವಿವರವನ್ನು ತಿಳಿಸಿದ್ದಾಳೆ. ಆಗ ಬಾಲಕಿಯ ತಾಯಿ ಶಾಲೆಯ ಶಿಕ್ಷಕಿಯಲ್ಲಿ ಶಿಕ್ಷಕನಿಗೆ ಬುದ್ದಿ ಹೇಳಲು ಹೇಳಿದ್ದಾರೆ. ಆದರೆ ಆದರೆ ಶಿಕ್ಷಕಿ ಘಟನೆಯ ಬಗ್ಗೆ ಪಾಲಕರಿಗೆ ಯಾವುದೇ ಮಾಹಿತಿ ನೀಡಿಲ್ಲ.  ಬಾಲಕಿಯ…

Read More

VISIL ಕಾಮಿಕರ ಪರವಾಗಿ ಜೈಲಿಗೆ ಹೋಗಲು ಸಿದ್ದ – ಹೆಚ್ ಡಿ ಕುಮಾರಸ್ವಾಮಿ

ಭದ್ರಾವತಿ : ವಿಐಎಸ್‌ಎಲ್ ವಿಷಯದಲ್ಲಿ ಕನ್ನಡಿಗರು ಇನ್ನೂ ಬದುಕಿದ್ದಾರೆ ಎಂದು ಕೇಂದ್ರಕ್ಕೆ ತಿಳಿಸುವ ಅಗತ್ಯ ಇದೆ.ಕಾರ್ಮಿಕರ ಪರವಾಗಿ ಜೈಲಿಗೆ ಹೋಗಲು ಸಿದ್ದ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಭದ್ರಾವತಿಯಲ್ಲಿ ಪ್ರತಿಭಟನಾ ನಿರತ ಗುತ್ತಿಗೆ ಕಾರ್ಮಿಕರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ್ದ ಕುಮಾರಸ್ವಾಮಿಯವರು, ಅಂದು 650 ಕೋಟಿ ವೆಚ್ಚ ಮಾಡಿ ಕಾರ್ಖಾನೆ ಅಭಿವೃದ್ಧಿಪಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.  ದೇವೇಗೌಡರು ಪ್ರಧಾನಿ ಆಗಿದ್ದಾಗ ವಿಐಎಸ್‌ಎಲ್ ಅನ್ನು ಸೈಲ್​ಗೆ ಹಸ್ತಾಂತರಿಸುವ ತೀರ್ಮಾನ ತೆಗೆದುಕೊಂಡರು. ಈ ವಿಷಯದಲ್ಲಿ ಮಾಜಿ ಶಾಸಕ ದಿವಂಗತ ಅಪ್ಪಾಜಿ ಗೌಡರ ಶ್ರಮ ಇದೆ  ನಿರ್ಗಮಿಸಿದ…

Read More

ಹುಲಿಕಲ್ ಘಾಟಿ ಎರಡು ತಿಂಗಳು ಬಂದ್ – ಪರ್ಯಾಯ ಮಾರ್ಗ ಇಲ್ಲಿದೆ ನೋಡಿ|hulikal ghat

ಶಿವಮೊಗ್ಗ – ಕುಂದಾಪುರ ರಾಜ್ಯ ಹೆದ್ದಾರಿಯ ಬಾಳೆಬರೆ(ಹುಲಿಕಲ್) ಘಾಟ್ ನಲ್ಲಿ ಕಾಂಕ್ರಿಟ್ ಪೇವ್ ಮೆಂಟ್ ನಿರ್ಮಿಸಲಾಗುತ್ತಿದೆ. ಈ ಹಿನ್ನೆಲೆ ಫೆಬ್ರವರಿ 5 ರಿಂದ ಏಪ್ರಿಲ್ 5ರವರೆಗೆ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ. ಯಾವೆಲ್ಲ ಬದಲಿ ಮಾರ್ಗ? ರಾಜ್ಯ ಹೆದ್ದಾರಿ 52ರಲ್ಲಿ ತೀರ್ಥಹಳ್ಳಿಯಿಂದ ಕುಂದಾಪುರ ಕಡೆಗೆ ಹೋಗುವ ಲಘು ವಾಹನಗಳು ತೀರ್ಥಹಳ್ಳಿ – ಹಾಲಾಡಿ – ಬಸ್ರೂರು – ಕುಂದಾಪುರ ರಸ್ತೆಗೆ ತಲುಪಬಹುದು….

Read More

ರಿಪ್ಪನ್‌ಪೇಟೆ : ಕಾರ್ಯಕರ್ತರನ್ನು ಭೇಟಿ ಮಾಡಿದ ಸಂಸದ ಬಿ ವೈ ರಾಘವೇಂದ್ರ – ಹೈಮಾಸ್ಕ್ ವಿದ್ಯುತ್ ದೀಪ ಅಳವಡಿಕೆಗೆ ವೀರೇಶ್ ಆಲುವಳ್ಳಿ ಮನವಿ|BYR

ರಿಪ್ಪನ್‌ಪೇಟೆ : ಪಟ್ಟಣದ ವಿನಾಯಕ ವೃತ್ತದಲ್ಲಿ ಇರುವ ಹೈಮಾಸ್ಕ್ ವಿದ್ಯುತ್ ದೀಪವನ್ನು ಉನ್ನತೀಕರಣಗೊಳಿಸುವಂತೆ ಸಂಸದ ಬಿ ವೈ ರಾಘವೇಂದ್ರ ರವರಿಗೆ ಹೊಸನಗರ ತಾಲೂಕ್ ಪಂಚಾಯತ್ ಮಾಜಿ ಅಧ್ಯಕ್ಷ ವೀರೇಶ್ ಆಲುವಳ್ಳಿ ಮನವಿ ಮಾಡಿದರು. ಕಾರ್ಯನಿಮಿತ್ತ ಬೈಂದೂರಿಗೆ ತೆರಳುತಿದ್ದ ಸಂಸದರು ವಿನಾಯಕ ವೃತ್ತದಲ್ಲಿ ಕಾರ್ಯಕರ್ತರು ಹಾಗೂ ಅಭಿಮಾನಿಗಳನ್ನು ಭೇಟಿ ಮಾಡಿದರು. ಈ ಸಂಧರ್ಭದಲ್ಲಿ ಸಂಸದರನ್ನು ಅಭಿನಂದಿಸಿದ ವೀರೇಶ್ ಆಲುವಳ್ಳಿ ಪಟ್ಟಣದ ವಿನಾಯಕ ವೃತ್ತದಲ್ಲಿ ಹೈಮಾಸ್ಕ್ ವಿದ್ಯುತ್ ದೀಪದ ಉನ್ನತೀಕರಣ ಹಾಗೂ ನಾಲ್ಕು ರಸ್ತೆಗಳಲ್ಲಿನ ಪ್ರಮುಖ ವೃತ್ತಗಳಾದ ಆಸ್ಪತ್ರೆ ವೃತ್ತ…

Read More

ರಿಪ್ಪನ್‌ಪೇಟೆ : ಬಾಳೂರು ಗ್ರಾಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶಿವಮ್ಮ ಪದ್ಮನಾಭ ಆಯ್ಕೆ|baluru

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಬಾಳೂರು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಶಿವಮ್ಮ ಪಧ್ಮನಾಭ ರವರು ಆಯ್ಕೆಯಾಗಿದ್ದಾರೆ. ಕಳೆದ ಡಿ.14 ರಂದು ಬಿಜೆಪಿ ಬೆಂಬಲಿತರಾಗಿದ್ದ ಬಾಳೂರು ಗ್ರಾಪಂ ಅಧ್ಯಕ್ಷೆ ಲೀಲಾವತಿ ದೊಡ್ಡಯ್ಯ ವೈಯಕ್ತಿಕ ಕಾರಣಗಳಿಂದ ರಾಜೀನಾಮೆ ನೀಡಿದ್ದರು.ಈ ಹಿನ್ನಲೆಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಶಿವಮ್ಮ ಪದ್ಮನಾಭ ಜಯಭೇರಿ ಬಾರಿಸುವ ಮೂಲಕ ಬಿಜೆಪಿಗೆ ಭಾರಿ‌ ಮುಖಭಂಗವಾಗಿದೆ. 9 ಜನ ಸದಸ್ಯರಲ್ಲಿ ಕಾಂಗ್ರೆಸ್ ಬೆಂಬಲಿತ ಶಿವಮ್ಮ ಪದ್ಮನಾಭ ರವರು…

Read More

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶ – ಈ ಸುಳ್ಳು ಜಾಹಿರಾತನ್ನು ನಂಬಿ ಅರ್ಜಿ ಸಲ್ಲಿಸಬೇಡಿ|FAKE

 ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಉದ್ಯೋಗಿಗಳು ಬೇಕಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಓಡಾಡುತ್ತಿದೆ. ಇದನ್ನು ನಂಬಿ ಯಾರಾದರೂ ಅರ್ಜಿ ಸಲ್ಲಿಸಿದ್ದರೆ, ಸಲ್ಲಿಸಬೇಕು ಎಂದಿದ್ದರೆ ಹುಷಾರಾಗಿರಿ. ಏಕೆಂದರೆ ಇದು ನಕಲಿ ಪ್ರಕಟಣೆ ಎಂಬ ಸಂಗತಿ ಗೊತ್ತಾಗಿದೆ. ಈ ಬಗ್ಗೆ ಸಾರ್ವಜನಿಕರು ಎಚ್ಚರವಹಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದ್ದು, ವಿಮಾನ ನಿಲ್ದಾಣದಲ್ಲಿ ಏರ್ ಹೋಸ್ಟೆಸ್, ಬಿಸಿನೆಸ್ ಡೆವಲೆಪ್‍ಮೆಂಟ್ ಮ್ಯಾನೇಜರ್, ಏರ್‌ಲೈನ್ ಎಕ್ಸಿಕ್ಯೂಟಿವ್, ಸೆಕ್ಯೂರಿಟಿ ಗಾರ್ಡ್, ಹೆಲ್ಪರ್ಸ್, ಕ್ಲೀನರ್ಸ್, ಟೀಂ ಮೆಂಬರ್ಸ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ….

Read More

ಆಗುಂಬೆ ಘಾಟಿಯಲ್ಲಿ ಕ್ಯಾಂಟರ್ ಲಾರಿ ಅಪಘಾತ – ಟ್ರಾಫಿಕ್ ಜಾಮ್ ನಿಂದ ಪರದಾಡಿದ ಪ್ರಯಾಣಿಕರು|agumbe

ಆಗುಂಬೆ ಘಾಟಿಯಲ್ಲಿ ಕ್ಯಾಂಟರ್ ಅಪಘಾತ –  ಟ್ರಾಫಿಕ್ ಜಾಮ್ ತೀರ್ಥಹಳ್ಳಿ: ತಾಲೂಕಿನ ಆಗುಂಬೆ ಘಾಟಿಯಲ್ಲಿ ಕ್ಯಾಂಟರ್ ಲಾರಿ ಅಪಘಾತಕ್ಕಿಡಾಗಿದ್ದು ಘಾಟಿ ಸಂಚಾರದಲ್ಲಿ ಕಿ.ಮಿ.ಗಟ್ಟಲೇ ವಾಹನಗಳು ಗಂಟೆಗಟ್ಟಲೇ ನಿಂತು ಭಾರೀ ಸಮಸ್ಯೆಗೆ ಕಾರಣವಾಯಿತು. ಘಾಟಿಯ 9ನೇ ತಿರುವಿನಲ್ಲಿ ಘಾಟಿ ಇಳಿಯುತ್ತಿದ್ದ ವೇಳೆ ಕ್ಯಾಂಟರ್ ಚಾಲಕನ ನಿಯಂತ್ರಣ ತಪ್ಪಿ ತಡೆಗೋಡೆಗೆ ಲಾರಿ ಡಿಕ್ಕಿ ಹೊಡೆದಿದೆ. ಯಾವುದೇ ಅನಾಹುತ ಸಂಭವಿಸಿಲ್ಲ.  ಆದರೆ ಉಡುಪಿ ಭಾಗದಿಂದ ಹಾಗೂ ತೀರ್ಥಹಳ್ಳಿ ಮಾರ್ಗದಿಂದ ಹೋಗಿ ಬರುತಿದ್ದ ವಾಹನ ಸವಾರರು ಮತ್ತು ಪ್ರಯಾಣಿಕರು ಗಂಟೆಗಟ್ಟಲೆ ಪರದಾಟ ನಡೆಸಿದರು.

Read More