ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಂದಾಗಿ ಬಾಳೋಣ ಸಿನಿಮಾ ರಿಲೀಸ್ !!!!???? ಸಿನಿಮಾ ಹಿಟ್ ಆಗುತ್ತೋ??? ಪ್ಲಾಪ್ ಆಗುತ್ತೋ ????
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಂದಾಗಿ ಬಾಳೋಣ ಸಿನಿಮಾ ರಿಲೀಸ್ ಆಗಿದ್ದು ಇದು ಹಿಟ್ ಆಗುತ್ತೋ???? ಪ್ಲಾಪ್ ಆಗುತ್ತೋ ??? ಎಂಬುವುದನ್ನು ಕಾದುನೋಡಬೇಕಾಗಿದೆ. ಹೌದು…. ಕಾಂಗ್ರೆಸ್ ನಾಯಕರು ಒಂದಾದ್ರ ? ಹೀಗೊಂದು ಪ್ರೆಶ್ನೆ ಈಗ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ತೀರ್ಥಹಳ್ಳಿಯ ಕಾಂಗ್ರೆಸ್ ನಾಯಕರು ಎಂದರೆ ಅದು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್. ಇದು ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವ ವಿಷಯ. ಆದರೆ ಇತ್ತೀಚಿನ ಕೆಲವು ತಿಂಗಳುಗಳ ಹಿಂದೆ ಡಿಸಿಸಿ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ ಗೌಡರು…