Headlines

ಹಣಗೆರೆಕಟ್ಟೆಯಲ್ಲಿ ಅರಣ್ಯ ಸಿಬ್ಬಂದಿಯ ಮೇಲೆ ಹಲ್ಲೆ !!!! ದೂರು ದಾಖಲು

ತೀರ್ಥಹಳ್ಳಿ : ಹಣಗೆರೆಕಟ್ಟೆ ದರ್ಗಾ ಮತ್ತು ದೇವಸ್ಥಾನಕ್ಕೆ ಬಂದಿದ್ದ ಚನ್ನಗಿರಿ ತಾಲೂಕಿನ ಮೂವರು ಪ್ರವಾಸಿಗರು.ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ ಸಿಬ್ಬಂದಿಯ ಮೊಬೈಲ್ ನ್ನ ನೆಲಕ್ಕೆ ಕುಟ್ಟಿ ಹಾಳು ಮಾಡಿರುವ ಘಟನೆ ಭಾನುವಾರ ನಡೆದಿದೆ. ಹಣಗೆರೆಕಟ್ಟೆಯಲ್ಲಿನ ಹಜರತ್ ಸೈಯ್ಯದ್ ಸಾದತ್ ದರ್ಗಾ ಹಾಗೂ  ಶ್ರೀ ಭೂತರಾಯ ಚೌಡೇಶ್ವರಿ ದೇಗುಲಕ್ಕೆ ಬಂದ ಚನ್ನಗಿರಿ ತಾಲೂಕು ಬೆಂಕಿಕೆರೆ ನಿವಾಸಿಗಳಾದ ಹರೀಶ್, ಸೋಮಣ್ಣ, ಚಂದ್ರಪ್ಪ ಸೇರಿಕೊಂಡು ಅರಣ್ಯ ಜಾಗದಲ್ಲಿ ಮದ್ಯ ಸೇವನೆಗೆ ಮುಂದಾಗಿದ್ದಾರೆ. ಈ ವೇಳೆ ಪ್ಲಾಸ್ಟಿಕ್…

Read More

ನಿಟ್ಟೂರಿನ ಶ್ರೀ ರೇಣುಕಾನಂದ ಸ್ವಾಮೀಜಿಯವರಿಗೆ ಮುಖ್ಯ ಮಂತ್ರಿಗಳಿಂದ ಸನ್ಮಾನ :

ರಿಪ್ಪನ್ ಪೇಟೆ : ನಿಟ್ಟೂರು ಶ್ರೀನಾರಾಯಣಗುರು ಮಹಾಸಂಸ್ಥಾನದ ಶ್ರೀ ರೇಣುಕಾನಂದ ಸ್ವಾಮೀಜಿಗಳಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶನಿವಾರ ಸನ್ಮಾನಿಸಿ ಗೌರವಿಸಿದರು. ಬೆಂಗಳೂರಿನ ರಾಮಾನುಜ ಮಠದಲ್ಲಿ ನಡೆದ ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದ ವತಿಯಿಂದ ಸಮ ಸಮಾಜ ನಿರ್ಮಾಣಕ್ಕೆ ಮಠಗಳ ಸೇವೆಯನ್ನು ಗುರುತಿಸಿ ವಿವಿಧ ದಾಸೋಹಕ್ಕೆ ಸಹಕಾರಿಯಾದ  ಮುಖ್ಯಮಂತ್ರಿಗಳಿಗೆ ಆಯೋಜಿಸಿದ್ದ  ಕೃತಜ್ಞತಾ ಸಮಾರಂಭದಲ್ಲಿ ಸಮಾರಂಭದ ಯಶಸ್ಸಿಗೆ ಶ್ರಮಿಸಿದ ಹಾಗೂ ಸನ್ಯಾಸ ದೀಕ್ಷೆಯನ್ನು ತೆಗೆದುಕೊಂಡು 20 ವರ್ಷಗಳು ಆದ ನಿಮಿತ್ತ ನಿಟ್ಟೂರಿನ ಶ್ರೀನಾರಾಯಣಗುರು ಮಹಾಸಂಸ್ಥಾನದ ಪರಮಪೂಜ್ಯ ಶ್ರೀ…

Read More

ಚಂದ್ರ ದರ್ಶನವಾಗದ ಹಿನ್ನಲೆ ರಾಜ್ಯಾದ್ಯಂತ ಮಂಗಳವಾರ ರಂಜಾನ್ ಹಬ್ಬ ಆಚರಣೆ :

ರಾಜ್ಯಾದ್ಯಂತ ಈದುಲ್ ಫಿತ್ರ್(ರಂಜಾನ್) ಹಬ್ಬವನ್ನು ಮಂಗಳವಾರ (ಮೇ.3) ಆಚರಣೆ ಮಾಡಲಾಗುವುದು ಎಂದು ಚಂದ್ರ ದರ್ಶನ ಸಮಿತಿ ಪ್ರಕಟಿಸಿದೆ. ರಂಜಾನ್ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ಭಾನುವಾರ ಸಂಜೆ ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ಅಮೀರೆ ಶರೀಯತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ನೇತೃತ್ವದಲ್ಲಿ ನಡೆದ ಚಂದ್ರ ದರ್ಶನ ಸಮಿತಿಯ ಸಭೆಯಲ್ಲಿ ಮಂಗಳವಾರ ಹಬ್ಬ ಆಚರಣೆ ಮಾಡಲಾಗುವುದೆಂದು ಘೋಷಿಸಲಾಯಿತು. ಮಳೆ ಹಾಗೂ ಮೋಡ ಕವಿದ ವಾತಾವರಣ ಹಿನ್ನೆಲೆ ದೇಶದ ಯಾವುದೇ ಭಾಗದಲ್ಲಿ ಚಂದ್ರ…

Read More

ವಿಶ್ವ ಪಶುವೈದ್ಯಕೀಯ ದಿನಾಚರಣೆ :

ಮನುಷ್ಯನ ಅಗತ್ಯಗಳಿಗೆ ಎಲ್ಲವನ್ನೂ ನೀಡುವ, ಅವರ ಆರೋಗ್ಯವನ್ನು ವೃದ್ಧಿಸುವ ಹಾಗೂ ರೈತರ ಆರ್ಥಿಕತೆಯನ್ನು ಅಭಿವೃದ್ಧಿಗೊಳಿಸುವ ಗೋಮಾತೆ ಧನ್ಯಳು, ಮಾನ್ಯಳು ಎಂದು ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ಶಾಸಕ ಬಿ.ಎಸ್‌.ಯಡಿಯೂರಪ್ಪ ಹೇಳಿದರು. ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಶನಿವಾರ ಸರ್ಕಾರಿ ನೌಕರರ ಸಭಾ ಭವನದಲ್ಲಿ ರಾಷ್ಟ್ರೀಯ ಜಾನುವಾರು ಮಿಷನ್‌ ಯೋಜನೆ ಹಾಗೂ ಡಾ| ಗೊಯಲ್ ವೆಟ್ ಫಾರ್ಮ ವೆಟರ್ನರಿ ಇನ್ ಹೋಮಿಯೋಪತಿ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪಶುವೈದ್ಯಕೀಯ ದಿನಾಚರಣೆಯನ್ನು  ಹಾಗೂ ಜಿಲ್ಲೆಯ ಪಶುವೈದ್ಯರಿಗೆ ಜಿಲ್ಲಾ ಮಟ್ಟದ ತಾಂತ್ರಿಕ…

Read More

ಹೊಸನಗರಕ್ಕೆ ಖಡಕ್ ಸರ್ಕಲ್ ಇನ್ಸ್ ಪೆಕ್ಟರ್ ಬಿ ಸಿ ಗಿರೀಶ್ ನೇಮಕ : ಮರಳು ಮಾಫಿಯಾ,ಕಳ್ಳಕಾಕರ ಎದೆಯಲ್ಲಿ ಶುರುವಾಯಿತು ನಡುಕ

ಹೊಸನಗರದ ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಸಾಗರದ ಖಡಕ್ ಹಾಗೂ ಜನಸ್ನೇಹಿ ಸರ್ಕಲ್ ಇನ್ಸ್ ಪೆಕ್ಟರ್ ಬಿ ಸಿ ಗಿರೀಶ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.ಗಿರೀಶ್ ರವರು ಪ್ರಸ್ತುತ ಸಾಗರ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್  ಮಧುಸೂದನ್ ಸೇರಿದಂತೆ ಜಿಲ್ಲೆಯ ಮೂವರು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿತ್ತು. ಪಿಐ ಮಧುಸೂಧನ್ ಜಿ.ಕೆ ರವರು ಬೆಂಗಳೂರಿನ‌ ಸದಾಶಿವ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಬಿ ಸಿ ಗಿರೀಶ್ ರವರು…

Read More

ಪಿಂಚಣಿ ಹಣದಲ್ಲಿ ಗಂಜಿ ಕುಡಿದು ಬದುಕುತ್ತೇನೆಯೇ ವಿನಃ ಭ್ರಷ್ಟಾಚಾರ ಮಾಡಲ್ಲ : ಹಾಲಿ ಶಾಸಕರಿಗೆ ಮಾಜಿ ಶಾಸಕರ ಟಾಂಗ್

ಸಾಗರ: ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಪಿಂಚಣಿಯಲ್ಲಿ ಬದುಕುತ್ತಿದ್ದಾರೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರು ನನ್ನನ್ನು ಟೀಕಿಸಿದ್ದಾರೆ. ಅವರು ಹೇಳಿದಂತೆ ನಾನು ಪಿಂಚಣಿಯಲ್ಲಿ ಗಂಜಿ ಕುಡಿದು ಬದುಕುತ್ತೇನೆಯೇ ವಿನಃ ಭ್ರಷ್ಟಾಚಾರ ಮಾಡಿಲ್ಲ. ಭ್ರಷ್ಟಾಚಾರದ ಹಣದಲ್ಲಿ ಬದುಕುತ್ತಿಲ್ಲ. ಇವತ್ತಿಗೂ ಜನರಿಗೆ ಸಹಾಯ ಮಾಡುತ್ತ ಬದುಕುತ್ತಿದ್ದೇನೆ ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಶಾಸಕ ಹಾಲಪ್ಪ ಅವರ ಮಾತಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಶಾಸಕ…

Read More

ಸಾಲಬಾಧೆಗೆ ಹೆದರಿ ಬ್ಲೇಡ್ ನಿಂದ ಕೈ ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕ :

ಶಿವಮೊಗ್ಗ : ಬ್ಲೇಡ್ ನಿಂದ ಕೈಕೊಯ್ದುಕೊಂಡು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಗರದ ನೆಹರೂ ರಸ್ತೆಯ ಖಾಸಗಿ ಲಾಡ್ಜ್ ನಲ್ಲಿ  ಈ ಘಟನೆ ನಡೆದಿದೆ.  ಈ ಯುವಕನ ಸಾವಿನ ಆಯ್ಕೆ ಬಹುತೇಕ ಅಚ್ಚರಿ ಮೂಡಿಸಿದೆ. ಕೈಯ್ಯನ ಬ್ಲೇಡ್ ನಿಂದ ಕೊಯ್ದುಕೊಂಡ ಕಾರಣ ಟಾಯ್ಲೆಟ್ ಎಲ್ಲಾ ರಕ್ತಸಿಕ್ತವಾಗಿದೆ. ಸಾಲಬಾಧೆಯೇ ಆತನ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಮೃತ ವ್ಯಕ್ತಿಯು ಬೆಂಗಳೂರು ನಿವಾಸಿ ನಾಗೇಂದ್ರ ಎಂದು ತಿಳಿದುಬಂದಿದೆ.  ಏ. 28 ರ ಬೆಳಿಗ್ಗೆ 5-30 ಕ್ಕೆ ಲಾಡ್ಜ್ ನಲ್ಲಿ ಚೆಕ್ ಇನ್ ಆದ ನಾಗೇಂದ್ರ…

Read More

ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಸಭ್ಯ ವರ್ತನೆ: ಯುವಕ ಸುಜಿತ್ ಶೆಟ್ಟಿ ಬಂಧನ

ಮಂಗಳೂರು: ತೊಕ್ಕೊಟ್ಟು ಮಸೀದಿಯಲ್ಲಿ ಮಹಿಳೆಯರು ನಮಾಝ್ ಮಾಡುವ ಕೊಠಡಿಗೆ ನುಗ್ಗಿ ಅಸಭ್ಯವಾಗಿ ವರ್ತಿಸಿದ ಆರೋಪದಲ್ಲಿ ಯುವಕನೋರ್ವನನ್ನು ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ.. ಬಂಧಿತ ಆರೋಪಿಯನ್ನು ಕಾರ್ಕಳ ತಾಲೂಕಿನ ನಿಟ್ಟೆ ನಿವಾಸಿ ಸುಜಿತ್ ಶೆಟ್ಟಿ(26) ಎಂದು‌ ಗುರುತಿಸಲಾಗಿದೆ. ತೊಕ್ಕೊಟ್ಟಿನ ಹುದಾ ಜುಮ್ಮಾ ಮಸೀದಿಯಲ್ಲಿ ಲೈಲಾತುಲ ಖದರ್ ನ ರಾತ್ರಿ ವಿಶೇಷ ಕಾರ್ಯಕ್ರಮವನ್ನು ಕಳೆದ 28 ರಂದು ಏರ್ಪಡಿಸಲಾಗಿದ್ದು, ಈ ವೇಳೆ ಆರೋಪಿ ಸುಜಿತ್ ಶೆಟ್ಟಿಯು ಮಸೀದಿಯಲ್ಲಿ ಮಹಿಳೆಯರು ನಮಾಜ್ ಮಾಡುವ ಕೊಠಡಿಗೆ‌ ನುಗ್ಗಿ ಮಹಿಳೆಯರ ಕೈಹಿಡಿದು ಎಳೆದು, ಅಶ್ಲೀಲವಾಗಿ…

Read More

ವಿದ್ಯುತ್ ತಂತಿ ತಗುಲಿ ಮೂರು ವರ್ಷದ ಮಗು ಸಾವು :

ವಿದ್ಯುತ್  ತಂತಿ ಬೇಲಿಯ ಮೇಲೆ ಕೇಬಲ್ ಬಿದ್ದಿದ್ದು  ಕೇಬಲ್ ನ್ನು ಮೂರು ವರ್ಷದ ಹೆಣ್ಣು ಮಗು ಮುಟ್ಟಿದ್ದರ ಪರಿಣಾಮ  ಮಗು ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಭದ್ರಾವತಿ ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಮನೆ ಬಳಿ ಹಾಕಿರುವ ವಿದ್ಯುತ್ ತಂತಿ ಬೇಲಿಯ ಮೇಲೆ ಟಿವಿ ಕೇಬಲ್ ಹರಿದು ಬಿದ್ದಿದೆ. ಈ ಕೇಬಲ್ ನ್ನ ಆಟಾಡುವ ವೇಳೆ ಮಗು  ಮುಟ್ಟಿದ ಹಿನ್ನಲೆಯಲ್ಲಿ ವಿದ್ಯುತ್ ಶಾಕ್ ಹೊಡೆದು ಸ್ಥಳದಲ್ಲೇ ಸಾವುಕಂಡಿದೆ. ತಂತಿ ಬೇಲಿ ಮೇಲೆ ಕೇಬಲ್ ತುಂಡಾಗಿ ಬಿದ್ದಿದ್ದರಿಂದ ಕೇಬಲ್…

Read More

ಮಾನವೀಯತೆ ಮೆರೆದ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು :

ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯನ್ನು ಉಪಚರಿಸಿ ಆಸ್ಪತ್ರೆಗೆ ತನ್ನದೇ ಕಾರಿನಲ್ಲಿ  ಕಳುಹಿಸಿಕೊಡುವ ಮೂಲಕ ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಮಾನವೀಯತೆ ಮೆರೆದ ಘಟನೆ ಇಂದು ನಡೆದಿದೆ. ಅಪಘಾತದಲ್ಲಿ ಗಾಯಗೊಂಡು ರಸ್ತೆಯಲ್ಲಿ ನರಳಾಡುತ್ತಿದ್ದರೂ ಮೊಬೈಲ್​ನಲ್ಲಿ ಪೋಟೋ ತೆಗೆಯುವಲ್ಲಿ ತಲ್ಲೀನರಾಗಿರುವವರೇ ಹೆಚ್ಚಾಗಿ ಇರುತ್ತಾರೆ. ಈ ಮಧ್ಯೆ ಅಪಘಾತದಲ್ಲಿ ಗಾಯಗೊಂಡವರನ್ನು ತನ್ನದೇ ಕಾರಿನಲ್ಲಿ ಕರೆತಂದು ಆಸ್ಪತ್ರೆಗೆ ದಾಖಲಿಸಿ ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾನವೀಯತೆ ಮೆರೆದಿದ್ದಾರೆ. ಸಾಗರದಿಂದ ಹೊಸನಗರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಹುಲಿದೇವರ ಬನ ಗ್ರಾಮದ…

Read More