ಹೊಸನಗರದ ನೂತನ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಸಾಗರದ ಖಡಕ್ ಹಾಗೂ ಜನಸ್ನೇಹಿ ಸರ್ಕಲ್ ಇನ್ಸ್ ಪೆಕ್ಟರ್ ಬಿ ಸಿ ಗಿರೀಶ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.ಗಿರೀಶ್ ರವರು ಪ್ರಸ್ತುತ ಸಾಗರ ಗ್ರಾಮಾಂತರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಇತ್ತೀಚೆಗೆ ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಮಧುಸೂದನ್ ಸೇರಿದಂತೆ ಜಿಲ್ಲೆಯ ಮೂವರು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿತ್ತು. ಪಿಐ ಮಧುಸೂಧನ್ ಜಿ.ಕೆ ರವರು ಬೆಂಗಳೂರಿನ ಸದಾಶಿವ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಬಿ ಸಿ ಗಿರೀಶ್ ರವರು ಸಾಗರ ಪಟ್ಟಣದಲ್ಲಿ ಉತ್ತಮ ಆಡಳಿತ ನೀಡಿ ಜನಸ್ನೇಹಿ, ಸಮಾಜಮುಖಿ ಕಾರ್ಯಗಳಲ್ಲಿ ಗುರುತಿಸಿಕೊಂಡು ಸಾರ್ವಜನಿಕ ವಾಗಿ ಉತ್ತಮ ಬಾಂದವ್ಯ ಹೊಂದಿದ್ದರು.
ಹೊಸನಗರಕ್ಕೆ ಖಡಕ್ ಸರ್ಕಲ್ ಗಿರೀಶ್ ಬಿ ಸಿ ವರ್ಗಾವಣೆ ಮಾಹಿತಿ ತಿಳಿಯುತ್ತಿದ್ದಂತೆ ಹೊಸನಗರ ತಾಲೂಕಿನ ಪ್ರಮುಖ ಪಟ್ಟಣಗಳಾದ ನಗರ ಮತ್ತು ರಿಪ್ಪನ್ ಪೇಟೆ ಯಲ್ಲಿ ಹಗಲಿರುಳು ನಡೆಯುತ್ತಿರುವ ಮರಳು ಮಾಫಿಯಾ. ಅಕ್ರಮ ಮದ್ಯ ಮಾರಾಟ. ಮತ್ತು ಗಾಂಜಾದ ಮಾಫಿಯಾ ನಡೆಸುವ ಕಳ್ಳಕಾಕರ ಎದೆಯಲ್ಲಿ ನಡುಕ ಹುಟ್ಟಿದೆ.
ಜನ ಸ್ನೇಹಿ ಹಾಗೂ ಖಡಕ್ ಪಿಐ ಎಸ್ ವಿ ಗಿರೀಶ್ ರವರು ಸಾಗರದಲ್ಲಿ ಕಾರ್ಯನಿರ್ವಹಿಸಿರುವ ಹಾಗೇಯೇ ಹೊಸನಗರದಲ್ಲೂ ಕಾರ್ಯ ನಿರ್ವಹಿಸಿ ಕಳ್ಳಕಾಕರಿಗೆ ಹಾಗೂ ಸಮಾಜಘಾತುಕ ಶಕ್ತಿಗಳಿಗೆ ಕಡಿವಾಣ ಹಾಕುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಹೊಸನಗರ ತಾಲೂಕಿನ ಜನತೆ…