Headlines

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಂದಾಗಿ ಬಾಳೋಣ ಸಿನಿಮಾ ರಿಲೀಸ್ !!!!???? ಸಿನಿಮಾ ಹಿಟ್ ಆಗುತ್ತೋ??? ಪ್ಲಾಪ್ ಆಗುತ್ತೋ ????

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಂದಾಗಿ ಬಾಳೋಣ ಸಿನಿಮಾ ರಿಲೀಸ್ ಆಗಿದ್ದು ಇದು ಹಿಟ್ ಆಗುತ್ತೋ???? ಪ್ಲಾಪ್ ಆಗುತ್ತೋ ??? ಎಂಬುವುದನ್ನು ಕಾದುನೋಡಬೇಕಾಗಿದೆ. ಹೌದು…. ಕಾಂಗ್ರೆಸ್ ನಾಯಕರು ಒಂದಾದ್ರ ?  ಹೀಗೊಂದು ಪ್ರೆಶ್ನೆ ಈಗ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ತೀರ್ಥಹಳ್ಳಿಯ ಕಾಂಗ್ರೆಸ್ ನಾಯಕರು ಎಂದರೆ ಅದು ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್. ಇದು ಎಲ್ಲರಿಗೂ ಸಾಮಾನ್ಯವಾಗಿ ಗೊತ್ತಿರುವ ವಿಷಯ. ಆದರೆ ಇತ್ತೀಚಿನ ಕೆಲವು  ತಿಂಗಳುಗಳ  ಹಿಂದೆ ಡಿಸಿಸಿ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ ಗೌಡರು…

Read More

ಚಾನೆಲ್ ಗೆ ಹಾರಿದ ವ್ಯಕ್ತಿಯನ್ನು ರಕ್ಷಿಸಲು ಹೋದ ರಿಪ್ಪನ್‌ಪೇಟೆ ಯುವಕನೊಬ್ಬ ನಾಪತ್ತೆ : ಮುಂದುವರೆದಿರುವ ಶೋಧ ಕಾರ್ಯಾಚರಣೆ

ಚಾನೆಲ್ ಗೆ ಹಾರಿದ ವ್ಯಕ್ತಿಯೊಬ್ಬರನ್ನು ರಕ್ಷಿಸಲು ಹೋಗಿ ರಿಪ್ಪನ್‌ಪೇಟೆಯ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಸಿದ್ದಾಪುರ ಚಾನೆಲ್ ಬಳಿ ನಡೆದಿದೆ.  ರಿಪ್ಪನ್ ಪೇಟೆ ನೆಹರು ನಗರ ನಿವಾಸಿ ಅನೀದ್ (22) ವರ್ಷ ನಾಪತ್ತೆಯಾಗಿರುವ ಯುವಕನಾಗಿದ್ದಾನೆ. ಅನೀದ್ ಲಾರಿಯೊಂದರಲ್ಲಿ ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದು, ದಾವಣಗೆರೆಯಿಂದ ಲಾರಿಯೊಂದರಲ್ಲಿ ಶಿವಮೊಗ್ಗಕ್ಕೆ ತೆರಳುತ್ತಿದ್ದಾಗ ಸಿದ್ದಾಪುರ ರಸ್ತೆ ಬದಿಯ ಚಾನೆಲೊಂದರ ಬಳಿ ಸೇರಿದ ಜನಸ್ತೋಮವನ್ನು ನೋಡಿ ಪ್ರಶ್ನಿಸಿದ್ದಾನೆ. ಆ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಚಾನೆಲ್ ಗೆ ಹಾರಿರುವ ವಿಚಾರ ಗಮನಕ್ಕೆ ಬಂದಿದ್ದು,ತಕ್ಷಣವೇ ಅವರನ್ನು…

Read More

ಮಳೆಯಿಂದ ಹಾನಿಯಾದ ಕುಟುಂಬಗಳನ್ನು ಭೇಟಿ ಮಾಡಿದ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು.

    ಸಾಗರ : ತಾಲೂಕಿನ ಹೊಸೂರು ಗ್ರಾಮ ಪಂಚಾಯತಿಯ ನೆದರವಳ್ಳಿ ಗ್ರಾಮದ ವೀರೇಂದ್ರ ಗೌಡ್ರು ಹಾಗೂ ಚಿದಾನಂದ ಗೌಡರ ಕೊಟ್ಟಿಗೆ ಮನೆ  ನಿನ್ನೆ ಬಂದ ಗಾಳಿ ಮಳೆಯ ಆರ್ಭಟಕ್ಕೆ ಹಾನಿಗೊಳಗಾಗಿತ್ತು. ಇಂದು ಸ್ಥಳಕ್ಕೆ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣರವರು ಭೇಟಿ ನೀಡಿದರು ಸ್ಥಳ ಪರಿಶೀಲಿಸಿದ  ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.  ಈ ಸಂದರ್ಭದಲ್ಲಿ ಸಾಗರ ನಗರಸಭೆಯ ವಿರೋಧ ಪಕ್ಷದ ನಾಯಕರಾದ ಗಣಪತಿ ಮಂಡಗಳಲೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಆನಂದ…

Read More

ತೀರ್ಥಹಳ್ಳಿ ಹೊಸ ಸೇತುವೆ ಕಾಮಗಾರಿಯ ವೀಕ್ಷಣೆ ಮಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ

ತೀರ್ಥಹಳ್ಳಿ : ಪಟ್ಟಣದಲ್ಲಿ ಬಾಳೇಬೈಲಿನಿಂದ ಕುರುವಳ್ಳಿಯ ವಿಠಲನಗರದ ಮೂಲಕ ಕೊಪ್ಪಕ್ಕೆ ಹೋಗುವ ದಾರಿಗೆ ಹೊಸ ಸೇತುವೆ ಕಾರ್ಯ ಅತ್ಯಂತ ಭರದಿಂದ ಸಾಗುತ್ತಿದ್ದು ಈ ಸ್ಥಳಕ್ಕೆ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಕಾಮಗಾರಿ  ಕಾರ್ಯಗಳನ್ನು ವೀಕ್ಷಿಸಿದರು.  ಕಾಮಗಾರಿ ವೀಕ್ಷಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರ ಇದೊಂದು  ತೀರ್ಥಹಳ್ಳಿಯಲ್ಲೇ ಐತಿಹಾಸಿಕ ಸೇತುವೆಯಾಗಲಿದೆ. ಈ ಸೇತುವೆಗೆ 56 ಕೋಟಿ ರೂ ಮೊತ್ತದಲ್ಲಿ ಹಣ ಮಂಜೂರಾಗಿದೆ. ತೀರ್ಥಹಳ್ಳಿಯ ಪ್ರಸಿದ್ಧ ಸೇತುವೆಯಾದ ಜಯಚಾಮರಾಜೇಂದ್ರ ಸೇತುವೆಯ ವರ್ಷ…

Read More

ಸಿಡಿಲು ಬಡಿದು ಯುವ ರೈತ ಸಾವು

ಕೃಷಿ ಚಟುವಟಿಕೆಯಲ್ಲಿ ನಿರತನಾಗಿದ್ದ ಯುವ ರೈತನೊಬ್ಬ ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ಸೊರಬ ತಾಲೂಕಿನ ಇಂಡುವಳ್ಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.  ಇಂಡುವಳ್ಳಿ ಗ್ರಾಮದ ಗೌತಮ್ ನಾಗರಾಜ (23) ಮೃತ ದುರ್ಧೈವಿ.  ಗ್ರಾಮದ ಸರ್ವೆ ನಂ 121/2 ರಲ್ಲಿ ಕೃಷಿ ಚಟುವಟಿಕೆಯಲ್ಲಿ ನಿರತಾಗಿದ್ದ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಗೌತಮ್ ಮೃತ ಪಟ್ಟಿದ್ದಾರೆ.  ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

Read More

ರಿಪ್ಪನ್ ಪೇಟೆ : ಸಿಡಿಲಿನ ಆರ್ಭಟಕ್ಕೆ ಜಾನುವಾರುಗಳು ಸಾವು

ರಿಪ್ಪನ್ ಪೇಟೆ : ಪಟ್ಟಣದ  ಸುತ್ತಮುತ್ತ ಇಂದು ಗುಡುಗು ಸಹಿತ ಭಾರೀ ಗಾಳಿ ಮಳೆಯಾಗಿದ್ದು ಹಲವು ಅನಾಹುತಗಳಿಗೆ ಎಡೆ ಮಾಡಿಕೊಟ್ಟಿದೆ. ಇಂದು ಸಂಜೆ ಸುರಿದ ಭಾರೀ ಮಳೆಗೆ ಹಾಲುಗುಡ್ಡೆ ಗ್ರಾಮದ ಚಂದ್ರಶೇಖರ್ ಎಂಬುವರಿಗೆ ಸೇರಿದ 2 ಹಸುಗಳು ಸಿಡಿಲಿನ ಆರ್ಭಟಕ್ಕೆ ಬಲಿಯಾಗಿವೆ. ಚಂದ್ರಶೇಖರ್ ರವರ ಮನೆಯ ಮುಂದೆ ಮರದ ಆಸರೆಯಲ್ಲಿ ನಿಂತಿದ್ದ ಹಸುಗಳು ಏಕಾಏಕಿ ಸಿಡಿಲು ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿವೆ.ಹಸುಗಳ ಸಾವಿನಿಂದ ಇದರಿಂದಲೇ ಜೀವನ ಸಾಗಿಸುತ್ತಿದ್ದ ಬಡ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.  ಘಟನಾ ಸ್ಥಳಕ್ಕೆ ಕಂದಾಯ…

Read More

ರಿಪ್ಪನ್ ಪೇಟೆ ಮೆಸ್ಕಾಂ ಕಛೇರಿ ಎದುರು ಧರೆಗುರುಳಿದ ಮರ : ವಿದ್ಯುತ್ ಕಂಬ, ಟ್ರಾನ್ಸ್ ಫಾರಂ ಪುಡಿಪುಡಿ : ಪ್ರಾಣಾಪಾಯದಿಂದ ಪಾರಾದ ವಾಹನ ಚಾಲಕ

ಇಂದು ಸಂಜೆ ಸುರಿದ ಧಾರಾಕಾರ ಮಳೆ ಗಾಳಿಗೆ ಇಲ್ಲಿನ ಸಾಗರ ರಸ್ತೆಯ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಬೃಹದಾಕಾರದ ಮರವೊಂದು  ರಸ್ತೆ ಮೇಲೆ ಬಿದ್ದು ವಿದ್ಯುತ್ ಟ್ರಾನ್ಸ್ ಫಾರಂ ವಿದ್ಯುತ್ ಕಂಬ ತುಂಡಾಗಿ ಧರೆಗೆ ಉರುಳಿದ ಘಟನೆ ನಡೆದಿದೆ. ಈ ಘಟನೆ ನಡೆಯುವ ಸಂದರ್ಭದಲ್ಲಿ ಸಾಗರ ಕಡೆಯಿಂದ ಬರುತ್ತಿದ್ದ ಸರಕು ಸಾಗಾಣಿಕೆ ವಾಹನದ ಮೇಲೆ ವಿದ್ಯುತ್ ತಂತಿ ಬಿದ್ದಿದ್ದು , ಗಾಳಿ ಮಳೆಗೆ ಹೆದರಿ ವಾಹನ ನಿಲ್ಲಿಸಿ ಇಳಿದು ಹೊರ ಹೋದಾಗ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಯಾವುದೇ…

Read More

ವಿಜ್ರಂಭಣೆಯಿಂದ ಜರುಗಿದ ಶ್ರೀ ಸಿದ್ಧಿವಿನಾಯಕಸ್ವಾಮಿ ಪ್ರತಿಷ್ಠವರ್ಧಂತ್ಯೋತ್ಸವ : ವಿನಯ್ ಗುರೂಜಿಯವರಿಂದ ಆಶೀರ್ವಚನ

ರಿಪ್ಪನ್‌ಪೇಟೆ: ಪಟ್ಟಣದ ಆರಾಧ್ಯ ದೈವ ಶ್ರೀಸಿದ್ಧಿವಿನಾಯಕ ಸ್ವಾಮಿ ಹಾಗೂ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ೫ನೇ ವರ್ಷದ ಪ್ರತಿಷ್ಠಾವರ್ಧಂತ್ಯೋತ್ಸವವು ವಿಜ್ರಂಭಣೆಯಿಂದ ಜರುಗಿತು. ಶನಿವಾರ ಮುಂಜಾನೆ ಆರಂಭಗೊಂಡ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಸ್ವಸ್ತಿಪುಣ್ಯಾಃ ವಾಚನ, ನಾಂದಿ ಸಮಾರಾಧನೆ, ಮಹಾಸಂಕಲ್ಪ, ಋತ್ವಿಗ್ವರಣ, ಸಮೂಹಿಕ ಷಣ್‌ನಾರಿಕೇಳ ಗಣಹೋಮ, ನವಗ್ರಹ ಹೋಮದೊಂದಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು.  ಸ್ವಾಮಿಯ ಸನ್ನಿಧಿಯಲ್ಲಿ ಮಂಡಲ ರಚನೆ, ಬ್ರಹ್ಮಕಲಶ ಸ್ಥಾಪನೆ, ಮತ್ತು ಕಲಶಾಧಿವಾಸ ಹೋಮ, ದೇವಿ ಸನ್ನಿಧಿಯಲ್ಲಿ ಪಂಚವಿಂಶತಿ ದ್ರವ್ಯ ಕಲಶ ಸಹಿತ ಬ್ರಹ್ಮಕಲಶ ಸ್ಥಾಪನೆ…

Read More

ಬಜರಂಗದಳ ಕಾರ್ಯಕರ್ತನಿಗೆ ಕೊಲೆ ಬೆದರಿಕೆ : ಮೂವರ ಬಂಧನ

ಬಜರಂಗದಳದ ಕಾರ್ಯಕರ್ತನ ಹತ್ಯೆಗೆ ಸಂಚು ಮಾಡಿ ಮೂವರು ಅನ್ಯ ಕೋಮಿನ ಯುವಕರು ಬಂಧನಕ್ಕೊಳಗಾಗಿದ್ದಾರೆ. ಇಲ್ಲೂ ಸಹ ದೊಡ್ಡಪೇಟೆ ಠಾಣೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಸಂಚು ಹಾಕಿದ  ಮೂವರನ್ನ ಬಂಧಿಸಿ ಹೆಡೆಮುರಿಕಟ್ಟಿದ್ದಾರೆ. ಬಜರಂಗದಳ ಕಾರ್ಯಕರ್ತನನ್ನ ಅನೇಕ ದಿನಗಳಿಂದ ಹಿಂಬಾಲಿಸಿದ ಮೂವರು ಯುವಕರು ಮೊನ್ನೆ ನ್ಯೂ ಮಂಡ್ಲಿಯ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ಕಾರ್ಯಕರ್ತನ ಸಹೋದರನನ್ನ ಮೂವರು ಯುವಕರು ಅಡ್ಡಹಾಕಿ ಅವ್ಯಾಚ್ಯ ಶಬ್ದಗಳಿಂದ ಬೈದಿದ್ದಾರೆ. ನಿನ್ನ ಜೊತೆ ಬೈಕ್ ನಲ್ಲಿ ಓಡಾಡುತ್ತಿದ್ದ ಕಾರ್ಯಕರ್ತ ಎಲ್ಲಿ ಹೇಳು ಎಂದು ಮಾರಕಾಸ್ತ್ರಗಳನ್ನು…

Read More

ಸಾಗರದಲ್ಲಿ ಬಸ್ ಇಳಿಯುವಾಗ ಬಿದ್ದು ಮತ್ತೊಬ್ಬ ವ್ಯಕ್ತಿ ಸಾವು : ಒಂದೇ ದಿನ ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆಯಲ್ಲಿ ಇಬ್ಬರ ಸಾವು

ಬಸ್ ಇಳಿಯಲು ಹೊರಟಿದ್ದ ಪ್ರಯಾಣಿಕರೊಬ್ಬರು ಕೆಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಸಾಗರ ಪಟ್ಟಣದ ಸಂಜೀವಿನಿ ಆಯುರ್ವೇದಿಕ್ ಆಸ್ಪತ್ರೆಯ ಬಳಿ ಸಂಭವಿಸಿದೆ. ಹೋಟೆಲ್ ಕೆಲಸಕ್ಕೆಂದು ಕಾರ್ಗಲ್ ಗೆ ತೆರಳಿದ್ದ ಮಹಾದೇವ ನಾಯ್ಕ್ ವಾಪಾಸ್ ಸಾಗರಕ್ಕೆ ಕುಮಧ್ವತಿ ಖಾಸಗಿ ಬಸ್ ನಲ್ಲಿ ಬಂದಿದ್ದಾರೆ. ಸಾಗರದ ಅಗಡಿಮಠ ಹತ್ತಿರ ಮನೆ ಮಾಡಿಕೊಂಡಿರುವ ಮಹದೇವ ನಾಯ್ಕ್ ಬಸ್ ಸಾಗರ ಕೆಎಸ್ ಆರ್ ಟಿ ಬಸ್ ನಿಲ್ದಾಣದ ಮುಂದೆ ಬರುತ್ತಿದ್ದಂತೆ ಸೀಟ್ ನಿಂದ ಎದ್ದು ಹಿಂಬದಿ ಡೋರ್ ಬಳಿ ಬಂದು ನಿಂತಿದ್ದಾರೆ. ಸಂಜೀವಿನಿ ಆಯುರ್ವೇದಿಕ್…

Read More
Exit mobile version