Headlines

ರಾಜ್ಯಾದ್ಯಂತ ವೀಕೆಂಡ್ ಕರ್ಫ಼್ಯೂ ಜಾರಿ : ಮುಖ್ಯಮಂತ್ರಿಗಳ ಸಭೆಯಲ್ಲಿ ತೀರ್ಮಾನ

ಕೋವಿಡ್ -19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಹಲವು ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿದೆ.ಇದೇ ಶುಕ್ರವಾರ ರಾತ್ರಿಯಿಂದಲೇ ವೀಕೆಂಡ್ ಕಫ್ಯೂ೯ ಜಾರಿಗೊಳಿಸಲಾಗಿದೆ. ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಮುಂಜಾನೆ 5 ಗಂಟೆಯವರೆಗೆ ರಾಜ್ಯದಲ್ಲಿ ಕಫ್ಯೂ೯ ಜಾರಿ ಇರಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ಸಂಜೆ ನಡೆದ ಸಚಿವರು ಮತ್ತು ಅಧಿಕಾರಿಗಳ ಸಭೆಯಲ್ಲಿ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸುಗಳ ಬಗ್ಗೆ ವಿಸ್ತೃತವಾಗಿ…

Read More

ರಿಪ್ಪನ್ ಪೇಟೆಯಲ್ಲಿ ನೂತನವಾಗಿ ಪ್ರಾರಂಭವಾದ ನಂದಿ ಡೆಂಟಲ್ ಕ್ಲಿನಿಕ್ ಮತ್ತು ಇಂಪ್ಲಾಂಟ್ ಸೆಂಟರ್ :

ರಿಪ್ಪನ್ ಪೇಟೆ : ಪಟ್ಟಣದ ವಿನಾಯಕ ವೃತ್ತದ ಜೋಹರ ಪ್ಲಾಜಾದಲ್ಲಿ ನೂತನವಾಗಿ ಶ್ರೀ ನಂದಿ ಡೆಂಟಲ್ ಕ್ಲಿನಿಕ್ ಮತ್ತು ಇಂಪ್ಲಾಂಟ್ ಸೆಂಟರ್ ಆರಂಭವಾಗಿದೆ. ರಿಪ್ಪನ್ ಪೇಟೆಯ ಸುತ್ತಮುತ್ತಲಿನ ಜನತೆಗೆ ಅಗತ್ಯವಾಗಿ ಬೇಕಾಗಿದ್ದ ಸುಸಜ್ಜಿತ ಆಧುನಿಕ ಡೆಂಟಲ್ ಕ್ಲಿನಿಕ್ ಪ್ರಾರಂಭವಾಗಿದ್ದು ಜನತೆಯಲ್ಲಿ ಸಂತಸ ತಂದಿದೆ. ಟೇಪ್ ಕತ್ತರಿಸುವ ಮೂಲಕ ಕ್ಲಿನಿಕ್ ನ್ನು ಉಧ್ಘಾಟಿಸಿದ ಜೋಹರ ಪ್ಲಾಜಾ ಮಾಲೀಕರು ಹಾಗೂ ಉದ್ಯಮಿಗಳಾದ ಎ ಕೆ ಮಹಮ್ಮದ್ ಸಾಬ್ ಮಾತನಾಡಿ ಹಲ್ಲುಗಳ ಆರೋಗ್ಯ ಕಾಪಾಡಿಕೊಂಡಾಗ ವ್ಯಕ್ತಿಗಳ ಸೌಂದರ್ಯವೂ ವೃದ್ಧಿಸುತ್ತದೆ. ನಮ್ಮಲ್ಲಿ ಪಾಶ್ಚಿಮಾತ್ಯ…

Read More

ಅರಣ್ಯ ಇಲಾಖೆಯ ಭರ್ಜರಿ ಕಾರ್ಯಾಚರಣೆ : ಇಬ್ಬರು ಶ್ರೀಗಂಧ ಕಳ್ಳರ ಬಂಧನ

ಸಾಗರ : ಇಲ್ಲಿನ ಅರಣ್ಯ ವಲಯ ವ್ಯಾಪ್ತಿಯ ಮಂಕೋಡು ಗ್ರಾಮ ಜೆ.ಪಿ ನಗರದಲ್ಲಿ ಅಕ್ರಮವಾಗಿ ಶ್ರೀಗಂಧದ ಚಕ್ಕೆಗಳನ್ನು ಕೆತ್ತುತ್ತಿದ್ದ ಇಬ್ಬರು ಆರೋಪಿಗಳನ್ನು ಸಾಗರ ಅರಣ್ಯ ಇಲಾಖೆ ಸಿಬ್ಬಂದಿಗಳು ಸೋಮವಾರ ಬಂಧಿಸಿದ್ದಾರೆ.   ಆರೋಪಿಗಳಾದ ಅಬ್ದುಲ್ ರಜಾಕ್ ಮತ್ತು ವೆಂಕಟರಮಣ ಇವರನ್ನು ಬಂಧಿಸಿ ಅವರಿಂದ  ಐದೂ ಕಾಲು ಕೆಜಿ ಶ್ರೀಗಂಧದ ಚಕ್ಕೆ, ಒಂದು ಹೀರೋ ಸ್ಪ್ಲೆಂಡರ್ ಬೈಕ್ ಅನ್ನು ವಶಪಡಿಸಿಕೊಂಡು ಅರಣ್ಯ ಮೊಕದ್ದಮೆ ದಾಖಲು ಮಾಡಿದ್ದಾರೆ. ವಲಯ ಅರಣ್ಯಾಧಿಕಾರಿ ಡಿ ಆರ್ ಪ್ರಮೋದ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ…

Read More

ಡಿ.ಕೆ. ಸುರೇಶ್ ವಿರುದ್ಧ ಸಾಗರ ಬಿಜೆಪಿ ಕಾರ್ಯಕರ್ತರ ಆಕ್ರೋಶದ ಪ್ರತಿಭಟನೆ…! ಡಿ.ಕೆ. ಸುರೇಶ್ ಪ್ರತಿಕೃತಿ ದಹನ…!

ಸಾಗರ: ರಾಮನಗರದಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಎಂಎಲ್ಸಿ ರವಿ ಅವರು ಸಚಿವ ಅಶ್ವಥ್ ನಾರಾಯಣ್ ಅವರ ಭಾಷಣಕ್ಕೆ ಅಡ್ಡಿ ಪಡಿಸಿ, ಗೂಂಡಾ ವರ್ತನೆ ತೋರಿದ್ದಾರೆಂದು ಆರೋಪಿಸಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಮಂಗಳವಾರ ನಗರ ಸಾಗರ್ ಹೋಟೆಲ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ  ಡಿ.ಕೆ.ಸುರೇಶ್ ಅವರ ಭಾವಚಿತ್ರವನ್ನು ಧಹಿಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಡಿ.ಕೆ.ಸುರೇಶ್ ಹಾಗೂ ಎಂಎಲ್ಸಿ ರವಿ ಇಬ್ಬರಿಗೂ ಕಾಂಗ್ರೆಸ್ ಪಕ್ಷ ಶಿಸ್ತು ಕ್ರಮ ಜರುಗಿಸಬೇಕು.ಹಾಗೂ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು…

Read More

ಶಿವಮೊಗ್ಗದ ನಗರ ಮತ್ತು ಗ್ರಾಮಾಂತರ ಯೋಜನೆ ಕಚೇರಿಯಲ್ಲಿ ಭೂಪರಿವರ್ತನೆಗೆ ಉದ್ದೇಶ ಪೂರಕ ವಿಳಂಭ : ರಿಪ್ಪನ್ ಪೇಟೆ ಗ್ರಾಪಂ ಸದಸ್ಯನಿಂದ ಏಕಾಂಗಿ ಧರಣಿ

ರಿಪ್ಪನ್ ಪೇಟೆ : ಭೂ ಪರಿಪರ್ವತನೆಗಾಗಿ ಒತ್ತಾಯಿಸಿ ಇಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯತಿ ಸದಸ್ಯ ನಿರೂಪ್ ಕುಮಾರ್ ಆರ್.ವಿ. ಶಿವಮೊಗ್ಗದ ಕೆಎಸ್ ಆರ್ ಟಿ ಸಿ ಬಸ್ ಡಿಪೋ ಹಿಂಭಾಗದ ಆನಂದರಾವ್ ಬಡಾವಣೆಯಲ್ಲಿರುವ ನಗರ ಮತ್ತು ಗ್ರಾಮಾಂತರ ಯೋಜನೆ ಕಚೇರಿಯಲ್ಲಿ ಏಕಾಂಗಿ ಹೋರಾಟ ನಡೆಸಿದ್ದಾರೆ. ಹೊಸನಗರ ತಾ. ಬೆನವಳ್ಳಿ ಸರ್ವೆ ನಂಬರ್158 2 ಎಕರೆ ಜಮೀನಿಗೆ ಸೈಟ್ ನಿರ್ಮಿಸಲು ಭೂಪರಿವರ್ತನೆಗೆ ನಿರೂಪ್ ಕುಮಾರ್ ಅಕ್ಟೋಬರ್ ತಿಂಗಳಲ್ಲಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಭೂ ಪರಿವರ್ತನೆಯನ್ನು…

Read More

ರಿಪ್ಪನ್ ಪೇಟೆ ಹೊಸನಗರ ರಸ್ತೆ ನಿವಾಸಿ ಶಫ಼ಿ ಅಹಮದ್ ಬ್ಯಾರಿ ನಿಧನ :

ರಿಪ್ಪನ್ ಪೇಟೆ : ಪಟ್ಟಣದ ಹೊಸನಗರ ರಸ್ತೆಯ ನಿವಾಸಿ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರಾಗಿದ್ದ ದಿವಂಗತ ಅಹಮ್ಮದ್ ಬ್ಯಾರಿಯವರ ತೃತೀಯ ಪುತ್ರ ಶಫಿ ಅಹಮದ್ ಬ್ಯಾರಿ (48) ಇಂದು ಮಧ್ಯಾಹ್ನ ಚೆನ್ನೈ ನಗರದಲ್ಲಿ ನಿಧನ ಹೊಂದಿದ್ದಾರೆ. ಅಲ್ಪಕಾಲದ ಖಾಯಿಲೆಯಿಂದ ಬಳಲುತಿದ್ದ ಶಫ಼ಿ ಅಹಮದ್ ಬ್ಯಾರಿ ರವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ನಂತರ ಇತ್ತಿಚೆಗೆ ಹೆಚ್ಚಿನ ಚಿಕಿತ್ಸೆಗೆ ಚೆನೈ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಚಿಕಿತ್ಸೆ ಫಲಕಾರಿಯಾಗದೇ ಇಂದು ಮಧ್ಯಾಹ್ನ ಕೊನೆಯುಸಿರೆಳೆದರು….

Read More

ರಿಪ್ಪನ್ ಪೇಟೆ ಪಟ್ಟಣದಲ್ಲಿ ರಸ್ತೆ ಅಗಲೀಕರಣ : ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಶಾಸಕ ಹರತಾಳು ಹಾಲಪ್ಪ ಚರ್ಚೆ

ರಿಪ್ಪನ್ ಪೇಟೆ : ಪಟ್ಟಣದ ರಸ್ತೆಗಳ  ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಇಂದು ಶಾಸಕರು ಹಾಗೂ ಎಂಎಸ್ಐಎಲ್ ಅಧ್ಯಕ್ಷರಾದ ಹರತಾಳು ಹಾಲಪ್ಪರವರು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈಗಾಗಲೇ ಪಟ್ಟಣದ ರಸ್ತೆಗಳ ಅಗಲೀಕರಣಕ್ಕೆ 6ಕೋಟಿ ಹಣ ಬಿಡುಗಡೆಯಾಗಿದ್ದು ಇನ್ನೂ ಹೆಚ್ಚಿನ 2ಕೋಟಿ ಅನುದಾನ ನೀಡುವಂತೆ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು. ಹಾಗೆಯೇ ಸಾಗರದ ಮಾರ್ಕೆಟ್ ರಸ್ತೆ ಅಗಲೀಕರಣಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳೊಂದಿಗೆ ಶಾಸಕರು ಇದೇ ಸಂದರ್ಭದಲ್ಲಿ ಚರ್ಚೆ ನಡೆಸಿದರು.

Read More

ಕಾರಿನ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೆ ಸಾವು :

ಶಿರಾಡಿ ಗ್ರಾಮದ ಅಡ್ಡಹೊಳೆ ಸಮೀಪ ಭಾನುವಾರ ಮುಂಜಾನೆ ಸಂಚರಿಸುತ್ತಿದ್ದ ಕಾರನ್ನು ಅದರ ಚಾಲಕ ಬೆಂಗಳೂರು ನಿವಾಸಿ ಸುರೇಶ್ ನಾವಡ (43) ಅವರು ಯಾವುದೋ ಶಬ್ದ ಕೇಳಿದ್ದಕ್ಕಾಗಿ ರಸ್ತೆಯಲ್ಲಿ ನಿಲ್ಲಿಸಿ ನೋಡುತ್ತಿದ್ದ ವೇಳೆ ಮರವೊಂದು ಕಾರಿನ ಮೇಲೆ ಹಠಾತ್ ಆಗಿ ಬಿದ್ದ ಪರಿಣಾಮ ಚಾಲಕ ಸುರೇಶ್ ನಾವಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.  ಮೃತ ಸುರೇಶ್ ನಾವಡ ಅವರು ಬೆಂಗಳೂರು ಐಬಿಎಂ ಸಾಫ್ಟ್ ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದು ಡಿಸೆಂಬರ್ 23 ರಂದು ಪತ್ನಿ ಮಕ್ಕಳೊಂದಿಗೆ ತಾಯಿ ಮನೆಯಾದ ಪಾವಂಜೆಗೆ…

Read More

ಗವಟೂರು ಹೊಳೆಸಿದ್ದೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆದ ಎಳ್ಳಮವಾಸ್ಯೆ ಜಾತ್ರಾ ಮಹೋತ್ಸವ:

ರಿಪ್ಪನ್‌ಪೇಟೆ : ಇಲ್ಲಿನ ಗವಟೂರು ಹೊಳೆಸಿದ್ದೇಶ್ವರ ಸ್ವಾಮಿಯ ಎಳ್ಳಮವಾಸ್ಯೆ ಜಾತ್ರಾಮಹೋತ್ಸವ ಕಾರ್ಯಕ್ರಮ ಮತ್ತು ಧರ್ಮಸಮಾರಂಭ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಜಾತ್ರಾಮಹೋತ್ಸವ ಕಾರ್ಯಕ್ರಮ ಮತ್ತು ಧರ್ಮಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅಶೀರ್ವಚನ ನೀಡಿದ ಮಳಲಿಮಠದ ಷ.ಬ್ರ.ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿಗಳು ಸಂಘಟನೆ ಸದ್ಭಾವನೆಯೊಂದಿಗೆ ಯುವಜನಾಂಗ ಧಾರ್ಮಿಕ ಅಚರಣೆಗಳಲ್ಲಿ ತೊಡಗಿಸಿಕೊಂಡು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು,  ದುಡಿಮೆಯಿಂದ ಗಳಿಸಿದ ಹಣವನ್ನು ದಾನ, ಧರ್ಮಕ್ಕಾಯಕ್ಕೆ ವಿನಿಯೋಗಿಸಿದರೆ ಪುಣ್ಯನಾದರು ಬರುತ್ತದೆ ಅದೇ ಬಚ್ಚಿಟ್ಟರೆ ಪರರ ಪಾಲಾಗುತ್ತದೆ ಈಗಲಾದರೂ ಗಳಿಸಿದ ಸಂಪತ್ತು ಇನ್ನೊಬ್ಬರಿಗೆ ದಾನ…

Read More

ಎಳ್ಳಮವಾಸ್ಯೆ ನಿಮಿತ್ತ ಶ್ರೀ ಕ್ಷೇತ್ರ ರಾಮತೀರ್ಥದಲ್ಲಿ ಮಿಂದೆದ್ದ ಭಕ್ತ ಸಮೂಹ

ರಿಪ್ಪನ್‌ಪೇಟೆ: ಇಲ್ಲಿಗೆ ಸಮೀಪದ  ಕೋಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿಂಡ್ಲೆಮನೆಯ ಶರ್ಮೀಣ್ಯಾವತಿ ನದಿ ತೀರದಲ್ಲಿ ನೆಲೆಸಿರುವ ಶ್ರೀ ಕ್ಷೇತ್ರ ರಾಮತೀರ್ಥದ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಎಳ್ಳಮಾವಾಸ್ಯೆ ನಿಮಿತ್ತ ಸಾವಿರಾರು ಭಕ್ತರು ತೀರ್ಥಸ್ನಾನ ಮಾಡಿದರು. ಸುತ್ತಮುತ್ತಲ ಗ್ರಾಮಗಳಿಂದ ತಂಡೋಪತಂಡವಾಗಿ ಬಂದ ಭಕ್ತರು ನದಿಯಲ್ಲಿ ಮಿಂದೆದ್ದು, ನದಿ ತೀರದಲ್ಲಿ ನೆಲೆಸಿರುವ ರಾಮೇಶ್ವರನ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.  ಕೆಂಜಿಗಾಪುರದ ಶ್ರೀಧರ್ ಭಟ್ ಹಾಗೂ ದೇವಸ್ಥಾನದ ಅರ್ಚಕ ಎ.ವಿ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹೋಮ…

Read More