70 ಸಾವಿರ ರೂ. ಲಂಚ ಪಡೆಯುತ್ತಿದ್ದ ಪಿಡಿಒ ಮೇಲೆ ಎಸಿಬಿ ದಾಳಿ
ಬಿಳಕಿ ಗ್ರಾಮಪಂಚಾಯಿತಿ ಪಿಡಿಒ ಭ್ರಷ್ಟಾಚಾರ ನಿಗ್ರಹದಳದ (ACB) ಬಲೆಗೆ ಬಿದ್ದಿದ್ದಾನೆ. ಪಿಡಿಒ ಕೇಶವ ಮೂರ್ತಿ 70 ಸಾವಿರ ರೂ. ಲಂಚ ಪಡೆಯುವ ವೇಳೆ ಎಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಾನೆ. ಇ-ಸ್ವತ್ತಿನಲ್ಲಿ ರಿಲೀಸಿಂಗ್ ಡೀಡ್ ಮಾಡಿಕೊಡಲು ಹರೀಶ್ ಎಂಬುವರ ಬಳಿ ಪಿಡಿಒ ಕೇಶವ ಮೂರ್ತಿ 1 ಲಕ್ಷ ರೂ ಹಣದ ಬೇಡಿಕೆ ಇಟ್ಟಿದ್ದನು. ಈ ಕುರಿತು 5 ಸಾವಿರ ರೂ ಮುಂಗಡವಾಗಿ ಹಣ ಪಡೆದು ಉಳಿದ ಹಣ ಕೆಲಸ ಮುಗಿದ ಮೇಲೆ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇಂದು ಶಿವಮೊಗ್ಗ…