ಶಿವಮೊಗ್ಗ : ಜ.08 ರಂದು ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅನಾಮಧೇಯ ವೃದ್ದರೋರ್ವರು ಮರಣ ಹೊಂದಿದ್ದಾರೆ.
ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಲಾಗಿದ್ದ ಸುಮಾರು 60 ರಿಂದ 65 ವರ್ಷದ ಅನಾಮಧೇಯ ವೃದ್ದರು ಮೃತಪಟ್ಟಿದ್ದು ಶವವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಮೃತರು ಸುಮಾರು 5.6 ಅಡಿ ಎತ್ತರ ಇದ್ದು ಕಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾರೆ. ತಲೆಯಲ್ಲಿ ಸುಮಾರು 02 ಇಂಚು ಉದ್ದದ ಕಪ್ಪು ಕೂದಲು, 01 ಇಂಚು ಉದ್ದದ ಬಿಳಿ ಗಡ್ಡ ಮೀಸೆ ಇರುತ್ತದೆ. ಮುಂಭಾಗದ ಹಲ್ಲುಗಳು ಉದುರಿರುತ್ತವೆ. ಮೃತನು ಖಾಕಿ ಬಣ್ಣದ ತುಂಬು ತೋಳಿನ ಶರ್ಟು, ಕಪ್ಪು ಮಾಸಲು ಬಣ್ಣದ ಶರ್ಟ್ ಧರಿಸಿರುತ್ತಾನೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.