Headlines

ತರಕಾರಿ ಸಾಗಾಣಿಕೆ ವಾಹನ ಬೈಕ್ ಗೆ ಢಿಕ್ಕಿ: ಇಬ್ಬರು ಸಾವು

ಸೊರಬ: ತರಕಾರಿ ಸಾಗಾಣಿಕೆ ವಾಹನ ಬೈಕಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಕರ್ಜಿಕೊಪ್ಪ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಶಿಕಾರಿಪುರ ತಾಲೂಕಿನ ಕರ್ನಲ್ಲಿ ಗ್ರಾಮದ ರುದ್ರಗೌಡ ಮಲ್ಲೇಶಗೌಡ(50) ಹಾಗೂ ಭರಮಗೌಡ ಚಂದ್ರಪ್ಪ ( 35) ಮೃತ ದುರ್ದೈವಿಗಳು. ಶಿರಾಳಕೊಪ್ಪ ಮಾರ್ಗವಾಗಿ ಸಾಗರದೆಡೆಗೆ ತೆರಳಿತ್ತಿದ್ದ ತರಕಾರಿ ಸಾಗಾಣಿಕೆ ವಾಹನ ಎದುರಿಗೆ ಬರದುತ್ತಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ…

Read More

ಜನಮನ್ನಣೆ ಗಳಿಸಿರುವ ತೀರ್ಥಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಸುಧಾಕರ್ ರವರಿಗೆ ಎರಡನೆ ಬಾರಿ ಒಲಿದ ಮುಖ್ಯಮಂತ್ರಿ ಪದಕ

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ಟೇಬಲ್  ಸೇವೆ ಸಲ್ಲಿಸುತ್ತಿರುವ ಸುಧಾಕರ್ ಅವರಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಮುಖ್ಯಮಂತ್ರಿಗಳ ಪದಕದ ಗೌರವ ಲಭಿಸಿದೆ .ಈ ಪದಕ ಅವರಿಗೆ ಎರಡನೇ ಬಾರಿ ಲಭಿಸುತ್ತಿರುವುದು  ಹೆಮ್ಮೆಯ ವಿಚಾರವಾಗಿದೆ . ಸುಧಾಕರ್ ರವರು ತೀರ್ಥಹಳ್ಳಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಅನೇಕ ಪ್ರಕರಣಗಳಲ್ಲಿ ಕ್ರಿಮಿನಲ್  ಆರೋಪಿಗಳನ್ನು ಪತ್ತೆ ಹಚ್ಚಲು  ಹೆಚ್ಚಿನ ಶ್ರಮವಹಿಸಿದವರಾಗಿದ್ದಾರೆ .ತೀರ್ಥಹಳ್ಳಿಯ  ವ್ಯಾಪ್ತಿಯ ಹತ್ತಾರು ಗಂಭೀರವಾದ ಕ್ರೈಮ್  ಪ್ರಕರಣಗಳಲ್ಲಿ ಕ್ಷಣಮಾತ್ರದಲ್ಲಿ ವಿಷಯವನ್ನು ಸಂಗ್ರಹಿಸಿ ತನಿಖೆಗೆ ಸಹಕರಿಸುವ ವಂತಾಗಲು ,ಆರೋಪಿಗಳನ್ನು…

Read More

ಸಾಮಾನ್ಯ ಸಭೆಯಲ್ಲಿ ಹೆಲ್ಮೆಟ್ ಧರಿಸಿ ಪ್ರತಿಭಟಿಸಿದ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು

ಸಾಗರ : ಸಾಗರದ ನಗರಸಭೆಯಲ್ಲಿ ಬುಧವಾರ 2022-23 ನೇ ಸಾಲಿನ ಆಯವ್ಯಯ ಸಾಮಾನ್ಯ ಸಭೆಯನ್ನು ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಈ ವೇಳೆ ಸಭೆಗೆ ಬಂದ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ಸಭೆ ಆರಂಭವಾಗುತ್ತಿದ್ದಂತೆ ತಲೆಗೆ ಹೆಲ್ಮೆಟ್ ಧರಿಸಿಕೊಂಡು ಪ್ರತಿಭಟಿಸಿದರು. ಇತ್ತೀಚೆಗೆ ಸಾಗರದ ಪ್ರತಿಷ್ಟಿತ ಎಲ್ ಬಿ ಕಾಲೇಜಿನ ಸರ್ವ ಸದಸ್ಯರ ಸಭೆಯಲ್ಲಿ ಶಾಸಕ ಹಾಲಪ್ಪ ಅವರ ಎದುರಲ್ಲೇ ಹಲ್ಲೆ ನಡೆದಿತ್ತು. ಈ ಘಟನೆಯನ್ನು ಈ ರೀತಿಯಾಗಿ ಖಂಡಿಸಲಾಯಿತು. ಆಡಳಿತ ಪಕ್ಷದವರಿಂದ ನಮಗೆ…

Read More

ರಸ್ತೆ ಕಾಮಗಾರಿ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ : ದರ್ಪ ತೋರಿದ ಗುತ್ತಿಗೆದಾರನ ಬೆವರಿಳಿಸಿದ ಗ್ರಾಮಸ್ಥರು

ರಿಪ್ಪನ್‌ಪೇಟೆ: ಹುಂಚ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಡ್ಲಿ, ಆನೆಗದ್ದೆ ಸಂಪರ್ಕ ರಸ್ತೆಯ 125ಮೀ. ಉದ್ದದ ಕಾಂಕ್ರೀಟ್ ರಸ್ತೆ ಮತ್ತು ಡಾಂಬರೀಕರಣ ರಸ್ತೆಯ ಕಾಮಗಾರಿಗೆ ಸರ್ಕಾರ ಮಂಜುರಾತಿ ಆದೇಶ ನೀಡಿದ್ದು ಆದರೆ ಕಾಮಗಾರಿಯ ಗುತ್ತಿಗೆದಾರರು ಮೂಡ್ಲಿ ರಸ್ತೆಯನ್ನು ಮಾಡದೆ ಬೇರೆ ಕಡೆ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆಂದು ಆರೋಪಿಸಿ ಕಾಮಗಾರಿ ತಡೆದು ಇಂದು ಮೂಡ್ಲಿ ಗ್ರಾಮದ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಇಂದು ಮೂಡ್ಲಿ ಗ್ರಾಮಕ್ಕೆ ಮಂಜೂರಾದ ರಸ್ತೆಯನ್ನು ಬೇರೆಡೆ ಮಾಡುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಕೆಲಸ ನಿಲ್ಲಿಸುವಂತೆ ಹೇಳಿದಾಗ ಗುತ್ತಿಗೆದಾರನು…

Read More

ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಪಿಡಿಒ :

ಹೊಸನಗರ ತಾಲೂಕಿನ ಎಂ.ಗುಡ್ಡೇಕೊಪ್ಪದ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1 ಹೆಚ್ಚುವರಿ ಪ್ರಭಾರ ಪಿಡಿಒ ಮುರುಗೇಶ್ ಎಸಿಬಿ ಬಲೆಗೆ ಬಿದ್ದಿದ್ದಾನೆ. ಇಂದು ಬೆಳಿಗ್ಗೆ ತಾಲೂಕಿನ ಕೋಡೂರಿನ ಕುಸಗುಂಡಿಯ ಸಿದ್ದಗಿರಿ ನಿವಾಸಿ ಸತೀಶ್ ರವರ ಬಳಿ ಪಿಡಿಒ ಮುರುಗೇಶ್ 30 ಸಾವಿರ ರೂ ಲಂಚ ಪಡೆಯುವಾಗ ಎಸಿಬಿ ಬಲೆಗೆ‌ಬಿದ್ದಿದ್ದಾನೆ. ಸತೀಶ್ ರವರು ತಮ್ಮ ಭೂ ಪರಿವರ್ತನೆಗೊಂಡ 10 ಗುಂಟೆ ಜಾಗಕ್ಕೆ ಪ್ಲಾನ್ ಅಪ್ರೂವಲ್, ಮುಟೇಷನ್ ಮತ್ತು‌ 9  ಮತ್ತು 11 ಅರ್ಜಿ ಅನುಮತಿ ಮಾಡಿಕೊಡಲು ಎಂ.ಗುಡ್ಡೇಕೊಪ್ಪಕ್ಕೆ ಅರ್ಜಿ ಸಲ್ಲಿಸಿದ್ದರು. ಸತೀಶ್…

Read More

2023 ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡ್ತಾರಾ ಕಿಮ್ಮನೆ ರತ್ನಾಕರ್ !?

ತೀರ್ಥಹಳ್ಳಿ : ವಿಧಾನಸಭಾ ಚುನಾವಣೆ 2023 ರಲ್ಲಿ ನೆಡೆಯಲಿದ್ದು ಈ ಬಾರಿ ಕರ್ನಾಟಕ ರಾಜ್ಯದಲ್ಲಿ ಮತ್ತೊಂದು ಪಕ್ಷ ಸ್ಪರ್ಧೆ ಮಾಡಲಿದೆ. ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲಿದ್ದು ಅದರಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಮಾಜಿ ಶಿಕ್ಷಣ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಸ್ಪರ್ಧೆ ಮಾಡಲಿದ್ದಾರ ಎಂಬ ಪ್ರೆಶ್ನೆ ಮೂಡಿದೆ..!?  ಕಾರಣ ತೀರ್ಥಹಳ್ಳಿಯ ಕಾಂಗ್ರೆಸ್ ಪಕ್ಷದಲ್ಲಿ ಈಗ ಆರ್ ಎಂ ಮಂಜುನಾಥ ಗೌಡರು ಸಹ ಇದ್ದು ಕಿಮ್ಮನೆ…

Read More

ರಿಪ್ಪನ್ ಪೇಟೆ ಮೆಸ್ಕಾಂ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಗೋವುಗಳ ಬಲಿ : ನರ ಬಲಿಯಾಗುವವರೆಗೂ ಕಾಯುತ್ತಿದೆಯೋ ಮೆಸ್ಕಾಂ ಇಲಾಖೆ

ರಿಪ್ಪನ್ ಪೇಟೆ : ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಕೆದಲುಗುಡ್ಡೆ ಗ್ರಾಮದಲ್ಲಿ ಜಾನುವಾರುಗಳು ಸಾವನ್ನಪ್ಪುತ್ತಿದ್ದು ಮೆಸ್ಕಾಂ ಇಲಾಖೆ ಅಧಿಕಾರಿಗಳು ಜಾಣ ಕುರುಡುತನ ತೋರಿಸುತ್ತಿದ್ದಾರೆ ಎಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ರವೀಂದ್ರ ಕೆರೆಹಳ್ಳಿ ಆರೋಪಿಸಿದ್ದಾರೆ  ಕೆದಲು ಗುಡ್ಡೆಯ ಗಣೇಶ್ ಎಂಬುವವರಿಗೆ ಸೇರಿದ ಹಸುವೊಂದು ಮೊನ್ನೆ ಕೆದಲು ಗುಡ್ಡೆ ಗ್ರಾಮದಲ್ಲಿ ಅಳವಡಿಸಿರುವ ಟ್ರಾನ್ಸ್ ಫರ್ಮ್ ಶಾರ್ಟ್ ಸರ್ಕ್ಯೂಟ್ ಆಗಿ ಅರ್ಥಿಂಗ್ ಆಗಿರುವುದರಿಂದ ಮೃತಪಟ್ಟಿದೆ.ಈ ಬಗ್ಗೆ ಮೆಸ್ಕಾಂ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ರೈತರು ಕಷ್ಟಪಟ್ಟು ಸಾಕಿ…

Read More

ಶಿವಮೊಗ್ಗದ ಮಾರಿ ಜಾತ್ರೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ಬೇಡ ಎಂದ ಬಿಜೆಪಿ ಯವರು ನಗರದ ಸಿಟಿ ಮಾಲ್​ನಲ್ಲಿ ಮುಸ್ಲಿಂ ಉದ್ಯಮಿಯ ಫನ್​-ಗೇಮ್​ ಉದ್ಘಾಟಿಸುತ್ತಾರೆ : ಯಮುನಾ ರಂಗೇಗೌಡ

ಶಿವಮೊಗ್ಗ : ನಾಗರಿಕರಿಗೆ ಉತ್ತಮ ಆಡಳಿತ ಕೊಡಲು ಸಾಧ್ಯವಿಲ್ಲದಿದ್ದರೂ ನಾಗರಿಕರ ಹಿತಕಾಯುವಲ್ಲಿ ವಿಫಲರಾದರೂ ನಕಲಿ ಹಿಂದುತ್ವದ ಘೋಷಣೆ ಕೂಗುತ್ತಾ ಬಡ ಮುಸ್ಲಿಂ ವ್ಯಾಪಾರಿಗಳನ್ನು ದ್ವೇಷ ಮಾಡಿ, ಅವರ ದಿನನಿತ್ಯದ ಕೂಲಿಯನ್ನು ಕಿತ್ತುಕೊಂಡು ಕಾರ್ಪೊರೇಟ್ ಬಂಡವಾಳಶಾಹಿ ಮುಸ್ಲಿಮರೊಂದಿಗೆ ಕೈಜೋಡಿಸುತ್ತಿರುವ ನಕಲಿ ಹಿಂದುತ್ವವಾದಿಗಳು ಈ ಬಿಜೆಪಿ ಯವರು ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿಯಾದ ಯಮುನಾ ರಂಗೇಗೌಡ ವಾಗ್ದಾಳಿ ನಡೆಸಿದ್ದಾರೆ. ಕಳೆದವಾರ ನಡೆದ ಕೋಟೆ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವದಲ್ಲಿ ಯಾವುದೇ ಮುಸ್ಲಿಮರಿಗೆ ವ್ಯಾಪಾರ ಕೊಡಬಾರದೆಂದು ರೋಷಾವೇಷ ತೋರಿದ್ದ…

Read More

ಪರೀಕ್ಷೆಯಲ್ಲಿ ನಕಲು ಮಾಡಿದ್ದಕ್ಕೆ ವಿದ್ಯಾರ್ಥಿಯ ಕೈಯನ್ನು ಕಚ್ಚಿದ ಉಪನ್ಯಾಸಕ;

ಹೊಸನಗರ :  ಪರೀಕ್ಷೆಯಲ್ಲಿ ನಕಲು ಮಾಡಿದ ಎನ್ನುವ ಕಾರಣಕ್ಕೆ ವಿದ್ಯಾರ್ಥಿಯೊಬ್ಬನ ಕೈಯನ್ನು ಉಪನ್ಯಾಸಕನೊಬ್ಬರು ಕಚ್ಚಿರುವ ಘಟನೆ ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ  ಕಾಲೇಜಿನಲ್ಲಿ ನಡೆದಿದೆ. ಅಂತಿಮ ಬಿಎ ಪದವಿ ಓದುತ್ತಿರುವ ಕೀರ್ತೇಶ್ ಎಂಬ ವಿದ್ಯಾರ್ಥಿ  ಇಂದು ಪರೀಕ್ಷೆಯಲ್ಲಿ ನಕಲು ಮಾಡುತ್ತಿದ್ದಾಗ ಪರೀಕ್ಷಾ ಮೇಲ್ವಿಚಾರಕರಾದ ಅಂಜನ್ ಕುಮಾರ್ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದಾರೆ.ಈ ಸಂದರ್ಭದಲ್ಲಿ ವಿದ್ಯಾರ್ಥಿ ಬಳಿ ಇದ್ದ ಮೊಬೈಲ್ ನ್ನು ಕಿತ್ತುಕೊಳ್ಳಲು ಅಂಜನ್ ಕುಮಾರ್ ಪ್ರಯತ್ನಿಸಿದ್ದಾರೆ.ಈ ಸಂದರ್ಭದಲ್ಲಿ ವಿದ್ಯಾರ್ಥಿ ಕೀರ್ತೆಶ್ ಪರೀಕ್ಷಾ ಮೇಲ್ವಿಚಾರಕ  ಅಂಜನ್ ಕುಮಾರ್ ರವರಿಗೆ ಉಡಾಫೆ…

Read More

25 ವರ್ಷದ ಯುವತಿಯನ್ನು ಮದುವೆಯಾಗಿ ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ 45 ವರ್ಷದ ಶಂಕರಣ್ಣ ಆತ್ಯಹತ್ಯೆಗೆ ಶರಣು!

 25 ವರ್ಷದ ಯುವತಿಯನ್ನು ಮದುವೆಯಾಗಿದ್ದ 45 ವರ್ಷದ ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿಯ ಅಕ್ಕಿಮರಿ ಪಾಳ್ಯದಲ್ಲಿ ಸಂಭವಿಸಿದೆ. ಸುಮಾರು 5 ತಿಂಗಳ ಹಿಂದೆ ಈ ಜೋಡಿ ರಾಜ್ಯಾದ್ಯಂತ ಬಾರಿ ಸಂಚಲನ ಮೂಡಿಸಿತ್ತು. 25 ವರ್ಷದ ಯುವತಿಯನ್ನು 45 ವರ್ಷದ ಶಂಕರಣ್ಣ ಮದುವೆಯಾಗಿದ್ದರು. ವಯಸ್ಸಿನ ಅಂತರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು. ಶಂಕರಣ್ಣ ಜೊತೆ ಮೇಘಾನ ಮದುವೆಯಾಗಿದ್ದರು. ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದಲ್ಲಿ ಕಳೆದ 5…

Read More