Headlines

ಹರತಾಳು ಹಾಲಪ್ಪ ಓರ್ವ ಗೂಂಡಾ ಹಾಗೂ ದುಷ್ಟ ಶಾಸಕ : ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು

ಸಾಗರ ; ಹಲ್ಲೆ ಎನ್ನುವುದು ನಡೆಯಬಾರದು. ಅದು ಸಹ ಶಾಸಕರ‌ ಸಮ್ಮುಖದಲ್ಲಿ ನಡೆದಂತಹ ಹಲ್ಲೆಗಳು ಖಂಡಿಸಬೇಕಾಗಿದೆ. ಇತ್ತಿಚೆಗೆ ಸಾಗರದ ಪ್ರತಿಷ್ಟಿತ ವಿದ್ಯಾ ಸಂಸ್ಥೆಗಳ ಜನಕವಾಗಿರುವ ಮಲೆನಾಡು ಅಭಿವೃದ್ಧಿ ಪ್ರತಿಷ್ಟಾನದ  ಸರ್ವ ಸದಸ್ಯರ ಸಭೆಯಲ್ಲಿ ನಡೆದ ಶಾಸಕರು ಮತ್ತು ಬೆಂಬಲಿಗರು ಮಾಡಿದ ಹಲ್ಲೆ ಮಾನವ ಸಮಾಜ ತಲೆ ತಗ್ಗಿಸುವಂತದ್ದು ಎಂದು ಮಾಜಿ ಸಾಗರ ಕ್ಷೇತ್ರ ಶಾಸಕ ಮತ್ತು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹೇಳಿದರು. ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಸಕರನ್ನು ಆಹ್ವಾನ ಮಾಡಿದ್ದರು‌ ಅದಕ್ಕೆ ಅವರು ಅರ್ಹರಾದರೂ…

Read More

ರಿಪ್ಪನ್ ಪೇಟೆ ಯಲ್ಲಿ ಶುಕ್ರವಾರ ಡಾ. ಶಿವಕುಮಾರ ಮಹಾಸ್ವಾಮಿಗಳವರ 115ನೇ ವರ್ಷದ ಜನ್ಮದಿನಾಚರಣೆ:

ರಿಪ್ಪನ್ ಪೇಟೆ : ನಡೆದಾಡುವ ದೇವರು ತ್ರಿವಿಧ ದಾಸೋಹಿ,ಶತಾಯುಷಿ,ಕಾಯಕಯೋಗಿ ಲಿಂಗೈಕ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು 115ನೇ ವರ್ಷದ ಜನ್ಮದಿನಾಚರಣೆಯನ್ನು  ಏಪ್ರಿಲ್ 1 ಶುಕ್ರವಾರದಂದು  ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಡಾ. ಶಿವಕುಮಾರ ಮಹಾಸ್ವಾಮಿ ಗಳವರ ಭಕ್ತ ವೃಂದದವರು ತಿಳಿಸಿದ್ದಾರೆ.  ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕ ಕಗ್ಗಲಿ ಲಿಂಗಪ್ಪ ಮಾತನಾಡಿ ಶುಕ್ರವಾರದಂದು ರಿಪ್ಪನ್ ಪೇಟೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಸಿದ್ದಗಂಗಾ ಮಠದ ಶ್ರೀ ಶ್ರೀ ಶ್ರೀ ಡಾಕ್ಟರ್ ಶಿವಕುಮಾರ…

Read More

ಹಾರಂಬಳ್ಳಿ ಗ್ರಾಮದಲ್ಲಿ ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕದ ವಾರ್ಷಿಕ ಶಿಬಿರ :

ರಿಪ್ಪನ್ ಪೇಟೆ : ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಬೆಳೆಯುತ್ತಿರುವ ಯುವಸಮೂಹ  ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಮಾನಸಿಕ ನೆಮ್ಮದಿ ಪಡೆದು ಕೊಳ್ಳುವುದರ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಅಂತಾಗುತ್ತದೆ ಎಂದು ರಿಪ್ಪನ್ ಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರೊ. ಚಂದ್ರಶೇಖರ್ ಹೇಳಿದರು.  ರಿಪ್ಪನ್ ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ಎನ್ಎಸ್ಎಸ್ ಘಟಕದಿಂದ ಹಾರಂಬಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಒಂದು ವಾರದ ವಾರ್ಷಿಕ ಶಿಬಿರದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಜಾತಿ…

Read More

ಸಾಗರದ ಹೆಸರಾಂತ ವೈದ್ಯೆಯ ಶವ ಗಣಪತಿ ಕೆರೆಯಲ್ಲಿ ಪತ್ತೆ :

ಸೋಮವಾರ ರಾತ್ರಿ ಶಿವಮೊಗ್ಗ ಜಿಲ್ಲೆ ಸಾಗರ ನಗರದ ಗಣಪತಿ ಕೆರೆಯಲ್ಲಿ ವೈದ್ಯರ ಶವ ಪತ್ತೆಯಾಗಿದ್ದು, ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಜಂಬಗಾರಿನ ನಿವಾಸಿ ಡಾ. ಶರ್ಮದಾ(36) ಮೃತಪಟ್ಟ ವೈದ್ಯೆಯಾಗಿದ್ದು, ಇವರು ಸೋಮವಾರ ರಾತ್ರಿ ತಮ್ಮ ಕ್ಲಿನಿಕ್ ಬಂದ್ ಮಾಡಿಕೊಂಡು ಬೈಕಿನಲ್ಲಿ ಹೊರಟವರು ರಾತ್ರಿಯಾದರೂ ಮನೆ ತಲುಪಿರಲಿಲ್ಲ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಆಕೆಯ ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಗಣಪತಿ ಕೆರೆ ಬಳಿ ಶರ್ಮದಾ ಅವರ ಬೈಕ್ ವಾಹನ ಪತ್ತೆಯಾಗಿತ್ತು. ತಕ್ಷಣ ಕೆರೆಯಲ್ಲಿ ಶೋಧಕಾರ್ಯ…

Read More

ಚೆನ್ನೈನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದ ಆಸ್ಟ್ರೇಲಿಯ ಕ್ರಿಕೆಟಿಗ ಮ್ಯಾಕ್ಸ್ ವೆಲ್

ಆಸ್ಪ್ರೇಲಿಯಾದ ತಾರಾ ಆಲ್ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಚೆನ್ನೈ ಮೂಲದ ಹುಡುಗಿ ವಿನಿ ರಾಮನ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಚೆನ್ನೈನಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಮ್ಯಾಕ್ಸ್‌ವೆಲ್ ಭಾರತೀಯ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. 2 ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮ್ಯಾಕ್ಸ್‌ವೆಲ್ ಕಳೆದ ವಾರ ಆಸ್ಟ್ರೇಲಿಯಾದಲ್ಲಿ ಮುದುವೆಯಾಗಿದ್ದರು. ಇದೀಗ ವಿನಿ ರಾಮನ್ ಕುಟುಂಬ ಸದಸ್ಯರು ಚೆನ್ನೈನಲ್ಲಿ ಭಾರತೀಯ ಸಂಪ್ರದಾಯದ ಪ್ರಕಾರ ಮದುವೆ ಆಯೋಜಿಸಿದ್ದರು.  ತಮಿಳುನಾಡಿನ ವರನ ರೀತಿ ಕಾಣಿಸಿಕೊಂಡ ಮ್ಯಾಕ್ಸ್‌ವೆಲ್ ಭಾರತೀಯ ಅಭಿಮಾನಿಗಳಿಗೆ ಮತ್ತಷ್ಚು ಹತ್ತಿರವಾಗಿದ್ದಾರೆ. ಶೇರ್ವಾನಿ, ಮದುವೆ ಹಾರ…

Read More

ಶಾಸಕರ ಸರ್ಕಾರಿ ಮಾದರಿ ಶಾಲೆಯಲ್ಲಿ ಹಿಂದಿ ಶಿಕ್ಷಕಕನ ಬೇಜವಬ್ದಾರಿ ನಡೆ : ಸ್ಥಳೀಯರ ಹಾಗೂ ಪೋಷಕರ ಆಕ್ರೋಶ

ಶಿಕ್ಷಣ ಎಂದರೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಓದು ಬರಹ ಹಾಗೂ ಶಿಸ್ತುಬದ್ಧವಾಗಿರುವಂತೆ ಮಾಡುವುದಕ್ಕೆ ಶಿಕ್ಷಣ ಎಂದು ಹೇಳಲಾಗುವುದು. ಗುರುಗಳಾದವರು ತಮ್ಮ ತಮ್ಮ ವಿದ್ಯಾರ್ಥಿಗಳು ಸರಿಯಾಗಿ ಶಿಕ್ಷಣ ಪಡೆಯದಿದ್ದಲ್ಲಿ, ಏನಾದರು ತಪ್ಪು ಮಾಡಿದಲ್ಲಿ ಅವರನ್ನು ತಿದ್ದಿ ತೀಡಿ ಸರಿದಾರಿಯಲ್ಲಿ ನಡೆಸುವ ಅಥವಾ ಅವರಿಗೆ ಶೈಕ್ಷಣಿಕವಾಗಿ ತಮ್ಮನ್ನು ತಾವು ಬೆಳೆಸಿಕೊಳ್ಳುವ ದಾರಿ ತೋರುವುದಲ್ಲದೇ, ವಿದ್ಯಾರ್ಥಿಗಳಿಗೆ ದೇಶದ ಸದ್ಪ್ರಜೆಯಾಗಿಸುವುದು ಶಿಕ್ಷಕರ ಹೊಣೆಯಾಗಿದೆ. ಇಂತಹ ಮಹತ್ವದ ಶಿಕ್ಷಣ ನೀಡುವ ಶಿಕ್ಷಕರೇ ಶಾಲೆಯ ಶಿಸ್ತನ್ನು ಪ್ರತಿಪಾದಿಸಿದ್ದರೆ ಆ ಶಾಲೆಯ ವಿದ್ಯಾರ್ಥಿಗಳು ಶಿಸ್ತನ್ನು ಹಾಗೂ ಶಿಕ್ಷಣ…

Read More

ತೀರ್ಥಹಳ್ಳಿಯಲ್ಲಿ ಪ್ರತಿದಿನ ನೆಡೆಯುತ್ತಿದ್ದ ಪ್ರಸಿದ್ಧ ತುಂಗಾ ಆರತಿ ನಿಂತಿದ್ದು ಹೇಗೆ…? ಯಾರಿಂದ….?

ತೀರ್ಥಹಳ್ಳಿ : ಪ್ರಧಾನಿ ನರೇಂದ್ರ ಮೋದಿ ಕಾಶಿಯ ವಿಶ್ವನಾಥ ದೇವಸ್ಥಾನದಲ್ಲಿ ಗಂಗಾ ಆರತಿ ಮಾಡಿದ್ದ ಹಾಗೆ ಕರ್ನಾಟಕ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಮಲೆನಾಡಿನ ತೀರ್ಥಹಳ್ಳಿಯಲ್ಲಿ ಕುರುವಳ್ಳಿಯ ಕಾಶಿ ದೀಕ್ಷಿತ್ ಇವರ ನೇತೃತ್ವದಲ್ಲಿ ತುಂಗಾ ಆರತಿಯನ್ನು ಮಾಡಲಾಯಿತು. ಇದಕ್ಕೆ ತೀರ್ಥಹಳ್ಳಿಯ ಜನಪ್ರತಿನಿಧಿಗಳಿಂದ ಹಾಗೂ ಸಾರ್ವಜನಿಕರಿಂದ ಪ್ರಶಂಸೆ ಕೂಡ ವ್ಯಕ್ತವಾಯಿತು.  ನಂತರ ತೀರ್ಥಹಳ್ಳಿಯ ತಹಸೀಲ್ದಾರ್ ಡಾ. ಶ್ರೀಪಾದ್ ಇವರ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿಯಲ್ಲಿ ಪ್ರತಿದಿನ ಸಂಜೆ ಮುಜರಾಯಿ ಇಲಾಖೆಗೆ ಒಳಪಡುವ ದೇವಸ್ಥಾನಗಳ ಅರ್ಚಕರು ಒಂದೊಂದು ತಿಂಗಳು ತುಂಗೆಗೆ ಆರತಿ ನೆಡೆಸಲಿ…

Read More

ಕಲ್ಲೂರು ಗ್ರಾಮದಲ್ಲಿ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ:

ಲಕ್ಷಾಂತರ ಜನರ ಬದುಕಿಗೆ ಭರವಸೆ  ತುಂಬಿದ, ಭೂಮಿ ಹಕ್ಕು ಕೊಡಿಸಲು ಮಲೆನಾಡಿನಲ್ಲಿ ಹೊತ್ತಿಸಿದ ಕಿಡಿ ರಾಜ್ಯಾದ್ಯಂತ ಹರಡಿ ಸಮ ಸಮಾಜದ ಬದುಕಿಗೆ ಕಟ್ಟಿದ ಹೊಸ ಕನಸನ್ನು ನನಸು ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟ ಕರ್ನಾಟಕ ರಾಜಕಾರಣದಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿರುವ ಶಾಂತವೇರಿ ಗೋಪಾಲಗೌಡರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.  ಭಾನುವಾರ ಸಂಜೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ನಡೆದ ಶಾಂತವೇರಿ…

Read More

ಮೊದಲ ದಿನದ ಪರೀಕ್ಷೆಯನ್ನು ಯಶಸ್ವಿಯಾಗಿ ಬರೆದ SSLC ವಿದ್ಯಾರ್ಥಿಗಳು.

ರಿಪ್ಪನ್ ಪೇಟೆ :  ಈ ಬಾರಿಯ SSLC ಮೊದಲ ದಿನದ ಪರೀಕ್ಷೆಯನ್ನು ವಿದ್ಯಾರ್ಥಿಗಳು ಯಶಸ್ವಿಯಾಗಿ ಬರೆದಿದ್ದಾರೆ. ಪಟ್ಟಣದ ಸರ್ಕಾರಿ ಪ್ರೌಢಶಾಲೆ ಹಾಗೂ‌ ಮೇರಿ ಮಾತಾ ಶಾಲೆಯಲ್ಲಿ ಪರೀಕ್ಷೆಗೆ ಸಕಲ ಸಿದ್ದತೆಗಳನ್ನು ಮಾಡಲಾಗಿತ್ತು.ಮೊದಲ ದಿನದ ಪರೀಕ್ಷೆಗೆ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಹಾಜರಾಗಿದ್ದರು. ಪೋಷಕರು ಪರೀಕ್ಷೆ ಮುಗಿಯುವವರೆಗೂ ಶಾಲಾ ಆವರಣದಲ್ಲಿ ಕಾಯುತ್ತಿದ್ದ ಸನ್ನಿವೇಶ ಕಂಡುಬಂತು.  ಹೊಸನಗರ ತಾಲೂಕಿನಲ್ಲಿ ಒಟ್ಟಿ 1620 ವಿದ್ಯಾರ್ಥಿಗಳಲ್ಲಿ 1615 ವಿದ್ಯಾರ್ಥಿಗಳು ಈ ಬಾರಿಯ SSLC ಪರೀಕ್ಷೆಗೆ ಹಾಜರಾಗಿದ್ದಾರೆ. ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 9ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು…

Read More

ಶಿವಮೊಗ್ಗದಲ್ಲಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ!

ಶಿವಮೊಗ್ಗ: ಎಸ್ಎಸ್ಎಲ್​ಸಿ ಪರೀಕ್ಷೆ  ಬರೆಯಲು ಬಂದ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು  ದಾಳಿ ಮಾಡಿದ್ದು, ಈ ಘಟನೆ ಶಿವಮೊಗ್ಗದ ಮೇರಿ ಇಮ್ಯಾಕ್ಯುಲೇಟ್ ಬಾಲಿಕಾ ಶಾಲೆಯಲ್ಲಿ ನಡೆದಿದೆ. ಸದ್ಯ ವಿದ್ಯಾರ್ಥಿಗಳು ಪ್ರಾಥಮಿಕ ಚಿಕಿತ್ಸೆ ಪಡೆದು ಪರೀಕ್ಷೆಗೆ ಹಾಜರಾಗಿದ್ದಾರೆ. ಹೆಜ್ಜೇನು ದಾಳಿಗೊಳಗಾದ ಪೋಷಕರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶಿವಮೊಗ್ಗ ಡಿಡಿಪಿಐ ರಮೇಶ್, ಪರೀಕ್ಷೆಗೆ ಬರೆಯಲು ಬಂದ ಐದು ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ ನಡೆದಿದೆ. ಪರೀಕ್ಷೆ ಕೇಂದ್ರದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಹೆಜ್ಜೇನು ದಾಳಿಗೊಳಗಾದ…

Read More