ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಹಿನ್ನಲೆ ವೈಯಕ್ತಿಕ ದ್ವೇಷ, ಹಳೆಯ ಗಲಾಟೆ ವಿಚಾರ ಅಲ್ಲ : NIA ದಾಖಲು ಮಾಡಿರುವ ಪ್ರಥಮ ವರದಿಯಲ್ಲಿ ಅಘಾತಕಾರಿ ಅಂಶ!!!!
ಶಿವಮೊಗ್ಗದಲ್ಲಿ ಇತ್ತೀಚೆಗೆ ಬಜರಂಗದಳ ಕಾರ್ಯಕರ್ತ ಹರ್ಷ ಎಂಬ ಯುವಕನ ಕೊಲೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳವು ತನ್ನ ಪ್ರಾಥಮಿಕ ವರದಿಯಲ್ಲಿ ಹರ್ಷ ಕೊಲೆ ಹಿಂದೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಹುನ್ನಾರ ಅಡಗಿತ್ತು. ತನ್ಮೂಲಕ ಕೋಮುಗಲಭೆ ಎಬ್ಬಿಸುವ ಉದ್ದೇಶವಿತ್ತು ಎಂಬ ಆತಂಕಕಾರಿ ಅಂಶ ಬಹಿರಂಗಪಡಿಸಿದೆ. NIA ದಾಖಲು ಮಾಡಿರುವ ಎಫ್‌ಐಆರ್‌ನಲ್ಲಿ ಏನೇನು ಉಲ್ಲೇಖವಾಗಿದೆ ಎಂಬುದರ ವಿವರ ಟಿವಿ9 ಗೆ ಲಭ್ಯವಾಗಿದೆ. ಹರ್ಷ ಕೊಲೆ ಪ್ರಕರಣದಲ್ಲಿ 10 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಸಮಾಜಯದಲ್ಲಿ ಭಯ ಹುಟ್ಟಿಸುವ…