ರಿಪ್ಪನ್‌ಪೇಟೆ ಪದವಿ ಕಾಲೇಜಿನ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ರಿಪ್ಪನ್‌ಪೇಟೆ : ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿ ಪ್ರಜ್ವಲ್ ಎನ್ ಎಮ್ ಉತ್ತರಾಖಂಡ ರಾಜ್ಯದ ರುದ್ರಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ 23ನೇ ಯುವ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಾಷ್ಟೀಯ ಮಟ್ಟದ ವಾಲಿಬಾಲ್ (21ವರ್ಷದೊಳಗಿನ ವಯೋಮಿತಿ) ಪಂದ್ಯವು ಇದೇ ತಿಂಗಳ 11 ರಿಂದ 16 ರವರೆಗೆ ಉತ್ತರಾಖಂಡ ರಾಜ್ಯದ ರುದ್ರಪುರದಲ್ಲಿ ನಡೆಯಲಿದೆ. ರಿಪ್ಪನ್ ಪೇಟೆಯ ವಿದ್ಯಾ ನಗರ ನಿವಾಸಿಗಳಾದ ಶಿಕ್ಷಕರಾದ ಮಹೇಶ್ವರ ಆಚಾರಿ ಹಾಗೂ ಮೀನಾಕ್ಷಿ ದಂಪತಿಗಳ…