Headlines

ಮಂಗಳಮುಖಿಯರ ಹಕ್ಕುಗಳನ್ನು ಗೌರವಿಸಿ : ಪದ್ಮಶ್ರೀ ಮಂಜಮ್ಮ ಜೋಗತಿ

ಸ್ವಾತಂತ್ರ್ಯ ಭಾರತದಲ್ಲಿ ಎಲ್ಲರಿಗೂ ತಮ್ಮ ಆಯ್ಕೆಯಂತೆ ಬದುಕುವ ಹಕ್ಕಿದೆ. ವರ್ಣ, ವರ್ಗ, ಲಿಂಗಭೇದಗಳನ್ನು ಮಾಡದೇ ಎಲ್ಲರನ್ನು ಸಮಾನತೆಯಿಂದ ಕಾಣುವುದರ ಜೊತೆಗೆ ಮಂಗಳಮುಖೀಯರ ಮತ್ತು ಅಲಕ್ಷಿತ ಸಮುದಾಯಗಳ ಹಕ್ಕುಗಳನ್ನು ಗೌರವಿಸಿ, ಅವಕಾಶ ನೀಡಿ ಎಂದು ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರು ಮತ್ತು ಪದ್ಮಶ್ರೀ ಪ್ರಶಸ್ತಿ ವಿಜೇತರಾದ ಬಿ. ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು. ಕುವೆಂಪು ವಿಶ್ವವಿದ್ಯಾಲಯದ ಪ್ರೊ| ಎಸ್‌.ಪಿ. ಹೀರೆಮಠ ಸಭಾಂಗಣದಲ್ಲಿ ಡಾ| ಬಾಬು ಜಗಜೀವನರಾಮ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಡಾ| ಬಾಬು ಜಗಜೀವನರಾಮ್‌ ಅವರ…

Read More

ಗೃಹ ಸಚಿವ ಆರಗ ಜ್ಞಾನೇಂದ್ರ ರವರ ಕೈ ತಪ್ಪಬಹುದಾ ಸಚಿವ ಸ್ಥಾನ ??????:

ರಾಜ್ಯ ಸಚಿವ ಸಂಪುಟದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತಲೆದಂಡವಾಗುವ ಸಾಧ್ಯತೆ ಕಾಣುತ್ತಿದೆ. ರಾಜ್ಯದಲ್ಲಿ ಕೆಲವು ದಿನಗಳಿಂದ ನಡೆಯುತ್ತಿರುವ ಹಿಜಾಬ್, ಹಲಾಲ್, ಮಸೀದಿಗಳಲ್ಲಿ ಧ್ವನಿವರ್ಧಕ ಒಂದಲ್ಲಾ ಒಂದು ಕೋಮು ವಿಚಾರಗಳು ಸರ್ಕಾರಕ್ಕೆ ತಲೆನೋವಾಗುತ್ತಿವೆ. ವಿರೋಧ ಪಕ್ಷಗಳು ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಅಸಮರ್ಥರಾಗಿದ್ದಾರೆ. ಕೂಡಲೇ ರಾಜೀನಾಮೆ ನೀಡಬೇಕು ಎಂದು ನಿತ್ಯವೂ ಒತ್ತಾಯಿಸುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತಲೆದಂಡವಾಗುತ್ತದೆ ಎಂಬ ಸುದ್ದಿ ಬುಧವಾರ ಸಂಜೆಯಿಂದ…

Read More

ಕರ್ತವ್ಯನಿರತ ಉಪ ತಹಶೀಲ್ದಾರ್ ಹೃದಯಾಘಾತದಿಂದ ಸಾವು :

ಶಿವಮೊಗ್ಗ ಜಿಲ್ಲೆ  ಸೊರಬ ತಾಲೂಕಿನ ಆನವಟ್ಟಿ ನಾಡಕಚೇರಿಯ ಕರ್ತವ್ಯ ನಿರತ ಉಪತಹಶೀಲ್ದಾರ್ ಚನ್ನಕೇಶವ (46) ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ. ಬುಧವಾರ ಮಧ್ಯಾಹ್ನ ಕರ್ತವ್ಯ ನಿರತ ವೇಳೆಯಲ್ಲಿ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಆನವಟ್ಟಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ. ಸಾಗರದ ಶ್ರೀಧರ ನಗರ ನಿವಾಸಿಯಾಗಿದ್ದ ಅವರಿಗೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. 1998ರಲ್ಲಿ ಗ್ರಾಮ ಲೆಕ್ಕಿಗರಾಗಿ ಕಂದಾಯ ಇಲಾಖೆಗೆ ಸೇರ್ಪಡೆಯಾಗಿದ್ದ ಅವರು ವಿವಿಧ ಹಂತದ ಪದೋನ್ನತಿ ಹೊಂದಿ ಉಪತಹಶೀಲ್ದಾರರಾಗಿದ್ದರು. ಸೊರಬ…

Read More

ಅಂತರ್ ಜಿಲ್ಲಾ ಬೈಕ್ ಕಳ್ಳರ ಹೆಡೆಮುರಿ ಕಟ್ಟಿದ ಸಾಗರದ ಪೊಲೀಸರು : ಮೂವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ಬೈಕ್ ಗಳು ವಶ

ಶಿವಮೊಗ್ಗ ಜಿಲ್ಲೆ ಸಾಗರ ಪೋಲಿಸರ ಚಾಣಾಕ್ಷತನದಿಂದ ಅಂತರ್ ಜಿಲ್ಲೆಗಳಲ್ಲಿ ಬೈಕ್  ಕಳ್ಳತನ ಮಾಡುತ್ತಿದ್ದ 3 ಜನ ಆರೋಪಿಗಳನ್ನು ಬಂಧಿಸಿ ಮೂವತ್ತು ಲಕ್ಷಕ್ಕೂ ಅಧಿಕ ಮೌಲ್ಯದ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡಿದ ಬೈಕ್ ಗಳನ್ನು ಸಾಗರದ ಚಾಣಾಕ್ಷ  ಪೊಲೀಸರು ವಶಪಡಿಸಿಕೊಂಡು ಕಳ್ಳರನ್ನು ಬಂಧಿಸಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ಬೈಕ್ ಕಳ್ಳತನ ಆಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಯವರ ಸೂಚನೆ ಮೇರೆಗೆ ಸಾಗರ ಎಎಸ್ಪಿ ರೋಹನ್ ಜಗದೀಶ್ ರವರ ಮಾರ್ಗದರ್ಶನದಲ್ಲಿ ಸಾಗರ ಪೊಲೀಸರು  ಕಾರ್ಯಾಚರಣೆ…

Read More

ರಿಪ್ಪನ್ ಪೇಟೆ : ಪರೀಕ್ಷಾ ಶುಲ್ಕ ಹೆಚ್ಚಳ ವಿರೋಧಿಸಿ ಪದವಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ರಿಪ್ಪನ್ ಪೇಟೆ : 2021-22 ನೇ ಸಾಲಿನಲ್ಲಿ ನೂತನ  ರಾಷ್ಟ್ರೀಯ ಶಿಕ್ಷಣ ನೀತಿ 2022 ರ ಅಡಿಯಲ್ಲಿ ಪ್ರಥಮ ಬಿಎ, ಬಿಬಿಎ ಮತ್ತು ಬಿಎಸ್ಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕವನ್ನು ದಿಢೀರ್  ಏರಿಕೆ ಮಾಡಿರುವುದನ್ನು ಖಂಡಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಪದವಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ಹಿಂದಿನ ವರ್ಷಗಳಲ್ಲಿ 700 ರೂ ಇದ್ದ ಪರೀಕ್ಷಾ ಶುಲ್ಕವನ್ನು 2020 ರೂ ಗೆ ಏರಿಸಿರುವುದು ಖಂಡನಾರ್ಹ ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಕುಟುಂಬಕ್ಕೆ…

Read More

ಯಡಿಯೂರಪ್ಪ ಅವರ ಕಣ್ಣಲ್ಲಿ ನೀರು ಹಾಕಿಸಿದ್ದು ಈಶ್ವರಪ್ಪ: ಡಿಕೆಶಿ

ಶಿವಮೊಗ್ಗ: ಸಂಗಮೇಶ್ವರ್ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಹೀಗಾಗಿ ಸದಸ್ಯತ್ವ ಅಭಿಯಾನಕ್ಕೆ ಹಿನ್ನೆಡೆಯಾಗಿತ್ತು. ಹೀಗಾಗಿ ನಾನೇ ಭದ್ರಾವತಿಗೆ ಬಂದು ಸದಸ್ಯತ್ವ ಅಭಿಯಾನಕ್ಕೆ ಚುರುಕು ಮುಟ್ಟಿಸಿದ್ದೇನೆ. ನಾಯಕರ ಬಳಿ ಚರ್ಚೆ ಮಾಡುವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ‌ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಭದ್ರಾವತಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಎಂದರೆ‌ ನನಗೆ ಪ್ರೀತಿ ಹಾಗೂ ಶಿವಮೊಗ್ಗ ಬರಬೇಕು ಎಂಬುದು ನನ್ನ ಆಸೆ. ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭ ಸದಸ್ಯರು. ಕಾಂಗ್ರೆಸ್ ಸದಸ್ಯರ ಸಂಖ್ಯೆಯನ್ನು ಹೆಚ್ಚಿನ‌ ಸಂಖ್ಯೆಯಲ್ಲಿ ಮಾಡಬೇಕಿದೆ. ಶಿವಮೊಗ್ಗದಿಂದ‌…

Read More

ಕಾಮಗಾರಿಗೆ ಮುನ್ನವೇ ಬಿಲ್ ಪಾವತಿ : ಇಂಜಿನಿಯರ್ ಶಿವಮೂರ್ತಿ ಅಮಾನತ್ತಿಗೆ ಮಾನವ ಹಕ್ಕುಗಳ ರಾಜ್ಯಾಧ್ಯಕ್ಷ ಒತ್ತಾಯ

 ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹುಂಚಾ ಗ್ರಾಮ ಪಂಚಾಯಿತಿ ಮಠದ (ಜಿಗಳ) ಕೆರೆ ದುರಸ್ತಿ ಕಾಮಗಾರಿ ಮಾಡದೆ ಗುತ್ತಿಗೆದಾರನಿಗೆ ಬಿಲ್ಲು ನೀಡಿ ಕರ್ತವ್ಯಲೋಪ ಮಾಡಿರುವ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ ಯ ರಾಜ್ಯಾಧ್ಯಕ್ಷ ಯುವರಾಜ್ ಕೆ ಸಿ ಒತ್ತಾಯಿಸಿದ್ದಾರೆ.  ಹುಂಚಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದ (ಜಿಗಳೆ) ಕೆರೆಗೆ 2021-2022 ನೇ ಸಾಲಿನ 2702 ಸಣ್ಣ ನೀರಾವರಿ ಕೆರೆಗಳ ವಾರ್ಷಿಕ ನಿರ್ವಹಣೆ ಮತ್ತು ದುರಸ್ತಿ ಯೋಜನೆಯಲ್ಲಿ ಕಾಮಗಾರಿಯನ್ನು ಗುತ್ತಿಗೆದಾರರ…

Read More

“ಹಳ್ಳಿ ಮಕ್ಕಳ ರಂಗ ಹಬ್ಬ” ಶಿಬಿರಕ್ಕೆ ಆಸಕ್ತ ಮಕ್ಕಳಿಂದ ಅರ್ಜಿ ಆಹ್ವಾನ :

ರಿಪ್ಪನ್‌ಪೇಟೆ: ದಿ || ಎಂ.ಕೆ.ರೇಣುಕಪ್ಪಗೌಡ ಪ್ರತಿಷ್ಠಾನ ಮಸರೂರು ಮತ್ತು ಮಲೆನಾಡು ಕಲಾ ತಂಡ ರಿಪ್ಪನ್‌ಪೇಟೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 13ರಿಂದ 15ದಿನಗಳ ಕಾಲ ರಿಪ್ಪನ್‌ಪೇಟೆಯ ಸರ್ಕಾರಿ ಮಾದರಿ ಹಿರಿಯ ಬಾಲಕರ ಪಾಠ ಶಾಲೆಯಲ್ಲಿ “ಹಳ್ಳಿ ಮಕ್ಕಳ ರಂಗ ಹಬ್ಬ” ರಂಗ ಹಬ್ಬವನ್ನು ಆಯೋಜಿಸಲಾಗಿದೆ ಎಂದು ಮಲೆನಾಡು ಕಲಾ ತಂಡದ ಸಂಚಾಲಕ ಗಣೇಶ ಮಸರೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಿಪ್ಪನ್‌ಪೇಟೆಯ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಈ ರಂಗ ಹಬ್ಬದಲ್ಲಿ 9 ವರ್ಷದಿಂದ…

Read More

ಕೆಂಚನಾಲ ಗ್ರಾಮದಲ್ಲಿ ಮತಾಂತರಗೊಳ್ಳುವಂತೆ ಮಹಿಳೆಗೆ ಜೀವ ಬೆದರಿಕೆ : ದೂರು ದಾಖಲು

ರಿಪ್ಪನ್‌ಪೇಟೆ : ಇಲ್ಲಿನ ಕೆಂಚನಾಲ ಗ್ರಾಮದಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಬಲವಂತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆಂಚನಾಳ ಗ್ರಾಮದಲ್ಲಿ ಸರ್ವೆ ನಂಬರ್ 38/1 ರಲ್ಲಿ ಜಯಲಕ್ಷ್ಮೀ ಎಂಬುವರು ತಮ್ಮ ಸ್ವಂತ ತೋಟದಲ್ಲಿ ಕೆಲಸ ಮಾಡುವ ವೇಳೆ ಸಂಬಂಧಿಕರಾದ ಮಂಜಪ್ಪ ಮತ್ತು ಸಂಗೀತ ಎಂಬುವರು ಏಕಾಏಕಿ ತೋಟಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಮಹಿಳೆಯನ್ನ ಅವ್ಯಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾರೆ. ನಿನಗೆ ಯಾರೂ ಇಲ್ಲ ನಿನಗೆ ಜಮೀನು ಏನಕ್ಕಾಗಿ…..

Read More

ರೈತನ ಹೊಟ್ಟೆಗೆ ತಿವಿದ ಕಾಡುಕೋಣ..!!! ಚಿಂತಾಜನಕ ಸ್ಥಿತಿಯಲ್ಲಿರುವ ರೈತ ಮಣಿಪಾಲ್ ಆಸ್ಪತ್ರೆಗೆ ದಾಖಲು

ತೀರ್ಥಹಳ್ಳಿ ತಾಲ್ಲೂಕಿನ ಮೇಗರವಳ್ಳಿ ಅರಣ್ಯ ವಲಯದ  ಆಗುಂಬೆ ಗ್ರಾಮ ಪಂಚಾಯಿತಿಯ ಹೊಸೂರು ಬಳಿಯ ಅಸಿಮನೆಯಲ್ಲಿ ಕಾಡುಕೋಣವೊಂದು ರೈತರೊಬ್ಬರಿಗೆ ತಿವಿದ ಘಟನೆ ಸೋಮವಾರ ಸಂಜೆ ನಡೆದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಕ್ಕೆ ಕಳುಹಿಸಲಾಗಿದೆ. ಅಸಿಮನೆ ರಾಘವೇಂದ್ರ ಭಟ್ ಎಂಬುವರ ತೋಟಕ್ಕೆ ಬಂದಿದ್ದ ಕಾಡು ಕೋಣಗಳನ್ನು ರಾಘವೇಂದ್ರ ಭಟ್ ಮತ್ತು ಅವರ ಪತ್ನಿ ತೋಟದಿಂದ ಬೆರೆಸಲು ಹೋಗಿದ್ದಾಗ ಏಕಾಏಕಿ ಹೊಟ್ಟೆಗೆ ಇರಿದಿದೆ. ಗಂಭೀರ ಗಾಯಗೊಂಡ ರಾಘವೇಂದ್ರ ಭಟ್ ಅವರನ್ನು ಆಗುಂಬೆ ಭಾಗದ ಪ್ರಮುಖ ನಾಯಕ ಹಸಿರುಮನೆ ನಂದನ್ ಮತ್ತು ಸ್ನೇಹಿತರು ತಮ್ಮ…

Read More