ರಿಪ್ಪನ್ ಪೇಟೆ : ತಾಯಿಯೊಂದಿಗೆ ಇಬ್ಬರು ಮಕ್ಕಳು ಸೆಪ್ಟೆಂಬರ್12 ರಿಂದ ನಾಪತ್ತೆಯಾಗಿದ್ದಾರೆಂದು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾನಗರದ ನಿವಾಸಿ ಸೌಂದರ್ಯ(26) ಅನ್ವಿತಾ(8) ಶ್ರೀಜಿತ್( 6) ಎನ್ನಲಾಗಿದೆ.
ಕಳೆದ ಹತ್ತು ವರ್ಷದ ಹಿಂದೆ ಶಶಿ ಕುಮಾರ್ ಎಂಬಾತನೊಂದಿಗೆ ಸೌಂದರ್ಯಳ ವಿವಾಹವಾಗಿತ್ತು. ಶಶಿಕುಮಾರ್ ಪತ್ನಿಗೆ ಮಾನಸಿಕ ಕಿರುಕುಳ ದೈಹಿಕ ಹಲ್ಲೆ ನಡೆಸುತ್ತಿದ್ದ ಕಾರಣ ಪತಿಯ ನಡೆಗೆ ಬೇಸತ್ತು ತನ್ನ ಇಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾಳೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಕುರಿತು ನಾಪತ್ತೆಯಾದ ಮಹಿಳೆ ತಾಯಿ ನೀಡಿದ ದೂರಿನ ಅನ್ವಯ ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.