ಬಂಧಿತರಾಗಿರುವ ಶಂಕಿತ ಉಗ್ರರದ್ದು ತೀರ್ಥಹಳ್ಳಿಯ ಮೂಲ ಹೌದು ಆದರೆ ಸಹವಾಸ ಮಂಗಳೂರಿನ ಕರಾವಳಿಯದ್ದು : ಆರಗ ಜ್ಞಾನೇಂದ್ರ
ಶಿವಮೊಗ್ಗದಲ್ಲಿ ಮೂವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಮುಂದೆ ನಡೆಯಲಿದ್ದ ಅನಾಹುತವನ್ನು ಶಿವಮೊಗ್ಗ ಪೊಲೀಸರು ತಪ್ಪಿಸಿದ್ದಾರೆ ಎಂದು ತಿಳಿಸಿದರು. ತೀರ್ಥಹಳ್ಳಿಯಲ್ಲಿ ಮಾತನಾಡಿದ ಗೃಹ ಸಚಿವರು, ಮತಾಂಧರ ಪರಿಚಯದಿಂದ ಈ ರೀತಿಯಾಗಿದೆ.ಬಂಧಿತ ಶಂಕಿತ ಉಗ್ರರಿಗೆ ಕರಾವಳಿ, ಕೇರಳ ಲಿಂಕ್ ಇದೆ. ಹೀಗಾಗಿಯೇ ಇಂತಹ ಕೃತ್ಯ ನಡೆಯುತ್ತಿದೆ. ಈ ಹಿಂದೆ ತೀರ್ಥಹಳ್ಳಿಯಲ್ಲಿ ಸ್ಯಾಟಲೈಟ್ ಪೋನ್ ಬಳಕೆ ಸಹ ಆಗಿದೆ. ನಮ್ಮ ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಿದರು. ಈ ಹಿಂದೆ…